Saturday, June 13, 2015

Daily Crime Reports As on 13/06/2015 at 19:30 Hrs

ಕಳವು ಪ್ರಕರಣ
  • ಮಲ್ಪೆ: ಫಿರ್ಯಾದಿದಾರರಾದ ಗೋಡ್ವಿನ್ ಎಸ್ ಅಮ್ಮನ್ನ (62), ತಂದೆ: ದಿ| ಸಂಜೀವ ಅಮ್ಮನ್ನ, ವಾಸ: ಶಾಂತಿ ಸದನ”, ಕೊಪ್ಪಲತೋಟ, ಕೊಡವೂರು ಗ್ರಾಮ, ಮಲ್ಪೆ ರವರ ಸ್ವಂತ ಕಟ್ಟಡ ಕೊಡವೂರು ಗ್ರಾಮದ ವಡಭಾಂಡೇಶ್ವರ ರಸ್ತೆಯಲ್ಲಿರುವ ಅಮ್ಮಣ್ಣ ಪ್ರೋವಿಷನ್ ಸ್ಟೋರಿಗೆ ದಿನಾಂಕ 12/06/2015 ರಂದು ರಾತ್ರಿ 08:15 ಗಂಟೆಯಿಂದ ದಿನಾಂಕ 13/06/2015 ರ ಬೆಳಿಗ್ಗೆ 9:00 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಅಂಗಡಿಯ ಹಿಂಬದಿಯ ಬಾಗಿಲಿನ ಹಲಗೆಯನ್ನು ಒಡೆದು ಒಳ ಪ್ರವೇಶಿಸಿ ಅಂಗಡಿಯ ಒಳಗಿದ್ದ ಕಬ್ಬಿಣದ ಕಪಾಟನ್ನು ಜಖಂಗೊಳಿಸಿ ಅದರಲ್ಲಿದ್ದ ರೂಪಾಯಿ 24,000/- ಹಣವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ ಎಂಬುದಾಗಿ ಗೋಡ್ವಿನ್ ಎಸ್ ಅಮ್ಮನ್ನ ರವರು ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 104/2015 ಕಲಂ. 454, 457, 380 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಲಾಗಿದೆ.

ಮನುಷ್ಯ ಕಾಣೆ ಪ್ರಕರಣ
  • ಶಿರ್ವಾ: ಪಿರ್ಯಾದಿದಾರರಾದ ಕೆ.ರಾಮ (62) ತಂದೆ: ಕುಟ್ಟು ಮೂಲ್ಯ ,ವಾಸ: ಉಮ್ಮೋಟ್ಟು ಹೌಸ್ ,ಶಿರ್ವ ಗ್ರಾಮ ಉಡುಪಿ ಜಿಲ್ಲೆ ಎಂಬವರ ಮಗ ಜಯಂತ 34 ವರ್ಷ ಎಂಬಾತನು ಶಿರ್ವ ಸಿಂಡಿಕೇಟ್  ಬ್ಯಾಂಕ್ ಹಿಂಬದಿ ಬಾಡಿಗೆ ಮನೆಯಲ್ಲಿ ವಾಸ್ಥವ್ಯವಿದ್ದು  ಆತನ ಹೆಂಡತಿ ಹೆರಿಗೆಗಾಗಿ  ತವರು ಮನೆಗೆ ಹೋಗಿದ್ದು  ಪಿರ್ಯಾದಿದಾರರಿಗೆ  ಸೊಸೆ  ಶ್ರೀಮತಿ ಪ್ರಪೂಲ್ಲಾ ಇವರು ದೂರವಾಣಿ ಕರೆ ಮಾಡಿ ದಿನಾಂಕ 06/06/2015 ರಿಂದ ಜಯಂತನ ಮೊಬೈಲ್ ಸ್ವೀಚ್ ಆಫ್ ಆಗಿದ್ದು, ಕರೆಗಳನ್ನು ಸ್ವೀಕರಿಸುತ್ತಿಲ್ಲ. ತನ್ನ ಮನೆಗೂ ಬಂದಿಲ್ಲ, ಎಲ್ಲಿಗೆ ಹೋಗುತ್ತಾನೆಂದು ಕೂಡ ಹೇಳಿರುವುದಿಲ್ಲ. ಮನೆಗೆ ಬಂದಿದ್ದಾನೆಯೇ ಎಂದು ಕೇಳಿದ್ದು, ನಂತರ ಪಿರ್ಯಾದಿದಾರರು ಎಲ್ಲಾ ಕಡೆ ವಿಚವಾರಿಸಿದ್ದಲ್ಲಿ ಆತನ ಬಗ್ಗೆ  ಯಾವುದೇ ಮಾಹಿತಿ ಸಿಗಲಿಲ್ಲ. ಅಲ್ಲದೇ ಈತನ ಬಳಿ ಇದ್ದ ಕೆಎ-20 ಈಎ 6845ನೇ ನಂಬ್ರದ ಮೋಟಾರು ಸೈಕಲ್ ಇದ್ದು, ಅದು ಕೂಡ ಇರುವುದಿಲ್ಲ ಎಂಬುದಾಗಿ ಕೆ.ರಾಮ ರವರು ನೀಡಿದ ದೂರಿನಂತೆ ಶಿರ್ವಾ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 49/2015 ಕಲಂ ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಿಸಲಾಗಿದೆ.

No comments: