Sunday, June 14, 2015

Daily Crime Reports As on 14/06/2015 at 17:00 Hrs

ಅಪಘಾತ ಪ್ರಕರಣಗಳು  
  • ಉಡುಪಿ: ದಿನಾಂಕ: 14/06/2015 ರಂದು ಪಿರ್ಯಾದಿದಾರರಾದ ಪ್ರಶಾಂತ್ ರಾಜ್ (47) ತಂದೆ: ದಿ: ಜೆಮ್ಸ್  ಸೋನ್ಸ್ ವಾಸ: ಗ್ರೇಸ್ ಪ್ಲಾಜ್ಹಾ, ಕ್ರಿಸ್ತ ಜ್ಯೋತಿ ಚರ್ಚ್ ಬಳಿ ಬೈಲೂರು 76 ಬಡಗುಬೆಟ್ಟು ಉಡುಪಿ ತಾಲೂಕು ರವರು ಬೆಳಿಗ್ಗೆ 7.00 ಗಂಟೆಗೆ ತನ್ನ ಕಾರು ನಂಬ್ರ  ಕೆಎ 03 ಝಡ್  4293 ನೇದನ್ನು  ತನ್ನ ಮನೆಯ ಶೆಡ್‌ ನಿಂದ ತೆಗೆದು ತೊಳೆಯುವ ಸಲುವಾಗಿ ಗ್ರೇಸ್ ಪ್ಲಾಜ್ಹಾ ಬಲಗಡೆಯ ಡಾಮರು ರಸ್ತೆಯ ಎಡಬದಿಯಲ್ಲಿ ನಿಲ್ಲಿಸಿ ಕ್ಲೀನ್ ಮಾಡುತ್ತಿದ್ದ ಸಮಯ ಸುಮಾರು 8.45 ಗಂಟೆಗೆ ಕೆಎ 20 ಪಿ 3341 ನೇದರ ಚಾಲಕ ದಯಾನಂದ ರಾಮೋಸ್‌ರವರು ತನ್ನ ಕಾರನ್ನು ಮಹಿಷ ಮರ್ದಿನಿ ದೇವಸ್ಥಾನದ ಕಡೆಯಿಂದ ಗ್ರೇಸ್ ಪ್ಲಾಜ್ಹಾದ ಬಲಗಡೆಯ ಡಾಮರು ರಸ್ತೆಯ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿನ ಬಲಬದಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಎದುರುಗಡೆ ಬಾಗಿಲು ಜಖಂಗೊಂಡಿರುತ್ತದೆ ಎಂಬುದಾಗಿ ಪ್ರಶಾಂತ್ ರಾಜ್ ರವರು ನೀಡಿದ ದೂರಿನಂತೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 66/2015 ಕಲಂ 279 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಲಾಗಿದೆ.
  • ಮಣಿಪಾಲ: ದಿನಾಂಕ 12.06.15ರಂದು ಸಂಜೆ 5:20 ಗಂಟೆಗೆ ಪಿರ್ಯಾದಿದಾರರಾದ ಸಚ್ಚಿನ್‌‌(27), ತಂದೆ: ಆನಂದ, ವಾಸ: ಮನೆ ನಂ. 3-24, ಮೇಲ್ಮಟ ಹತ್ತಿರ, ಆರೂರು ಪೋಸ್ಟ್‌, ಕುಂಜಾಲು, ಬ್ರಹ್ಮಾವರ, ಉಡುಪಿ ತಾಲೂಕು ರವರು ತನ್ನ ಅಣ್ಣ ಗುರುರಾಜ್‌ ಎಂಬವರೊಂದಿಗೆ ಸಂತೋಷ ಎಂಬವರ ಹೊಂಡಾ ಎಕ್ಟಿವಾ ನಂಬ್ರ ಕೆಎ 20 ಯು 4557ನೇದನ್ನು ಗುರುರಾಜ್‌ರವರು ಸವಾರಿ ಮಾಡಿಕೊಂಡು ಪಿರ್ಯಾದಿದಾರರು ಹಿಂಬದಿಯಲ್ಲಿ ಕುಳಿತುಕೊಂಡು ಬರುತ್ತಾ, ಮಣಿಪಾಲ ಯೂನಿಟ್‌‌-5 ಪ್ರಿಟಿಂಗ್‌ ಪ್ರೆಸ್‌ ಬಳಿ ತಲುಪುವಾಗ ಎದುರಿನಿಂದ ಬೊಲೆರೋ ಪಿಕ್‌ಆಪ್‌ ನಂಬ್ರ ಕೆಎ 20 ಸಿ 7690ನೇ ವಾಹನವನ್ನು ಅದರ ಚಾಲಕನು ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಗುರುರಾಜ್‌ರವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಹಾಗೂ ಗುರುರಾಜ್‌ರವರು ರಸ್ತೆಗೆ ಬಿದ್ದು, ಗುರುರಾಜ್‌ರವರಿಗೆ ಮುಖಕ್ಕೆ ಮತ್ತು ತಲೆಗೆ ಹಾಗೂ ಪಿರ್ಯಾದಿದಾರರಿಗೆ ಬಲಕಾಲಿನ ಮೊಣಗಂಟಿಗೆ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಮಣಿಪಾಲ ಕೆಎಮ್‌ಸಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿರುವುದಾಗಿದೆ ಎಂಬುದಾಗಿ ಸಚ್ಚಿನ್‌ ರವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 112/2015 ಕಲಂ 279, 337, 338  ಐ.ಪಿ.ಸಿಯಂತೆ ಪ್ರಕರಣ ದಾಖಲಿಸಲಾಗಿದೆ.

ಜೀವ ಬೆದರಿಕೆ ನೀಡಿದ ಪ್ರಕರಣ

  • ಶಂಕರನಾರಾಯಣ: ದಿನಾಂಕ 09/06/2015 ರಂದು ರಾತ್ರಿ 10.30 ಗಂಟೆಗೆ ಪಿರ್ಯಾದಿದಾರರಾದ ಶಿವರಾಮ ಶೆಟ್ಟಿ ತಂದೆ: ಗೋವಿಂದ ಶೆಟ್ಟಿ ವಾಸ: ಗುಬ್ಯಾಡಿ, ಅಂಪಾರು ಗ್ರಾಮ ಕುಂದಾಪುರ ತಾಲೂಕು  ರವರು ಸಂಬಂಧಿಕರ ಮನೆಯ ಕಾರ್ಯಕ್ರಮಕ್ಕೆ ಹೋಗಿ ಬರುವಾಗ ಕುಂದಾಪುರ ತಾಲೂಕು ಶಂಕರನಾರಾಯಣ ಗ್ರಾಮದ ಕೊಂಡಳ್ಳಿ ಎಂಬಲ್ಲಿ ಪಿರ್ಯಾಧಿದಾರರ ಟಿ.ವಿ.ಎಸ್ ಮೊಪೆಡ್ ವಾಹನವನ್ನು ಮಂಜುನಾಥ ಮೊಗವೀರ ಹಾಗೂ ಇತರರು ಅಟೋ ರಿಕ್ಷಾ ನಂಬ್ರ ಕೆಎ 20 6135 ರಿಂದ ಅಡ್ಡಗಟ್ಟಿ, ಮುಂದಕ್ಕೆ ಸಿಕ್ಕು ಎಂದು ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿ ಹೋಗಿರುವುದಾಗಿದೆ ಎಂಬುದಾಗಿ ಶಿವರಾಮ ಶೆಟ್ಟಿ ರವರು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 136/2015 ಕಲಂ 504, 506, 341 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.

No comments: