Saturday, June 13, 2015

Daily Crimes Reported as On 13/06/2015 at 07:00 Hrsಕಳವು ಪ್ರಕರಣ

  • ಕುಂದಾಪುರ:ಪಿರ್ಯಾದಿದಾರರಾದ ಸೆಲ್ವಂ. ಪಿ (44) ತಂದೆ:ಪಲನಿ ಸ್ವಾಮಿ  ವಾಸ:ಸ್ವಾಗತ್‌ ರಸ್ತೆ, ಕೋಟೇಶ್ವರ, ಕುಂದಾಪುರ ತಾಲೂಕುರವರ ಹೀರೋ ಹೊಂಡಾ ಸ್ಪ್ಲೆಂಡರ್‌ ಮೋಟಾರ್‌ ಸೈಕಲ್‌ ನಂಬ್ರ:ಕೆಎ 19 ಆರ್‌ 1767 ನೇದನ್ನು ದಿನಾಂಕ:24/05/2015 ರಂದು 18:30 ಗಂಟೆಗೆ ಕುಂದಾಪುರ ತಾಲೂಕು ಹಂಗಳೂರು ಗ್ರಾಮದ ವಿನಾಯಕ ಥಿಯೇಟರ್‌ ಬಳಿ ನಿಲ್ಲಿಸಿ, ದಿನಸಿ ಸಾಮಾನು ತರಲೆಂದು  ಹೋಗಿದ್ದು, ಸ್ವಲ್ಪ ಸಮಯದ ಬಳಿಕ ಬಂದು ನೋಡಲಾಗಿ ಮೋಟಾರ್ ಸೈಕಲ್‌ ಸ್ಥಳದಲ್ಲಿ ಇಲ್ಲದೆ ಇದ್ದು, ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಮೋಟಾರ್‌ ಸೈಕಲ್‌ನ ಮೌಲ್ಯ ರೂಪಾಯಿ 15,000/- ಆಗಬಹುದು ಎಂಬುದಾಗಿ ಸೆಲ್ವಂ. ಪಿ.ರವರು ನೀಡಿದ ದೂರಿನಂತೆ ಕುಂದಾಪುರ ಠಾಣಾ ಅಪರಾಧ ಕ್ರಮಾಂಕ 231/2015 ಕಲಂ:379 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅಪಘಾತ ಪ್ರಕರಣ

  • ಬ್ರಹ್ಮಾವರ:ದಿನಾಂಕ:12/06/2015 ರಂದು 16:30 ಗಂಟೆಗೆ ಉಡುಪಿ ತಾಲೂಕು 52 ನೇ ಹೇರೂರು ಗ್ರಾಮದ ಸುಪ್ರೀಮ್ ಪೀಡ್ಸ್ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಆರೋಪಿ ತನ್ನ ಲಾರಿ ನಂಬ್ರ ಹೆಚ್.ಆರ್ 55 ಎಮ್ 2278 ನೇದನ್ನು ಬ್ರಹ್ಮಾವರ ಕಡೆಯಿಂದ ಉಡುಪಿ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಒಂದು ವಾಹನವನ್ನು ಹಿಂದಿಕ್ಕುವ ಭರದಲ್ಲಿ  ಎದುರುಗಡೆಯಿಂದ ಹೋಗುತ್ತಿದ್ದ ಮೋಟಾರು ಸೈಕಲ್ ನಂಬ್ರ ಕೆಎ 20 ಇಹೆಚ್ 5915 ನೇ ಯದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ಸವಾರ ಸದಾನಂದ ಕುಮಾರ (24) ಎಂಬವರು  ರಸ್ತೆಗೆ ಬಿದ್ದ ಪರಿಣಾಮ ತಲೆಗೆ ಗಂಭಿರ ಗಾಯಗೊಂಡು ಮೃತಪಟ್ಟಿರುವುದಾಗಿದೆ.ಈ ಬಗ್ಗೆ ಉದಯ ಕಾಮತ್ (52) ತಂದೆ:ಮಾಧವ ಕಾಮತ್ ವಾಸ:ಅಂಗಡಿಬೆಟ್ಟು, ಹೇರೂರು ಗ್ರಾಮ, ಉಡುಪಿ ತಾಲೂಕುರವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣಾ ಅಪರಾಧ ಕ್ರಮಾಂಕ 113/15 ಕಲಂ:279, 304(ಎ) ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಬ್ರಹ್ಮಾವರ:ದಿನಾಂಕ:10/06/2015 ರಂದು 20:30 ಗಂಟೆಯಿಂದ ದಿನಾಂಕ:12/06/2015 ರ ಮದ್ಯದ ಅವಧಿಯಲ್ಲಿ ಉಡುಪಿ ತಾಲೂಕು ಯಡ್ತಾಡಿ ಗ್ರಾಮದ ಧೋಳಿಮನೆ ಅಲ್ತಾರು ಎಂಬಲ್ಲಿ ಪಿರ್ಯಾದಿದಾರರಾದ ಜಯರಾಮ ನಾಯ್ಕ (26) ತಂದೆ: ಬಾಬಣ್ಣ ನಾಯ್ಕ ವಾಸ:ಅಲ್ತಾರು ಧೋಳಿಮನೆ, ಯಡ್ತಾಡಿ ಗ್ರಾಮ ಉಡುಪಿ ತಾಲೂಕುರವರ ಅಣ್ಣನಾದ ದಿವಾಕರ (28) ಎಂಬವನು ಜಯರಾಮ ನಾಯ್ಕರವರ ಪರಿಚಯದ ಪಡುಬಾರಳಿ ಹೆಗ್ಗುಂಜೆ ಗ್ರಾಮದ ಚೈತ್ರಾ (15) ಎಂಬವಳೊಂದಿಗೆ ಮದುವೆಯಾಗಲು ಅಸಾಧ್ಯವಾಗದೇ ಇದ್ದುದರಿಂದ ಅಂಡಾರು ಮರದ ಕೊಂಬೆಗೆ ಒಟ್ಟಿಗೆ ಹಗ್ಗವನ್ನು ಕಟ್ಟಿಕೊಂಡು ಕುತ್ತಿಗೆಗೆ ಇಬ್ಬರೂ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಎಂಬುದಾಗಿ ಜಯರಾಮ ನಾಯ್ಕರವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣಾ ಅಸ್ವಾಭಾವಿಕ ಮರಣ ಪ್ರಕರಣ  ಕ್ರಮಾಂಕ 30/2015 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮಟ್ಕಾ ಜುಗಾರಿ ಪ್ರಕರಣ 
  • ಬ್ರಹ್ಮಾವರ:ದಿನಾಂಕ:26/06/2015 ರಂದು 11:00 ಗಂಟೆಗೆ  ಅನಂತ ಪದ್ಮನಾಭ ಕೆ.ವಿ, ಪೊಲೀಸ್ ಉಪ ನಿರೀಕ್ಷಕರು, ಬ್ರಹ್ಮಾವರ ಪೊಲೀಸ್ ಠಾಣೆರವರು ಸಿಬ್ಬಂದಿಯವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ದೊರೆತ ಖಚಿತ  ವರ್ತಮಾದ ಮೇರೆಗೆ ಚಾಂತಾರು ಗ್ರಾಮದ ಕುಂಜಾಲು ಜಂಕ್ಷನ್ ಬಳಿ ಇರುವ ಮೇದಿನಿ ಕಾಂಪ್ಲೆಕ್ಸ್ ಎದುರು  ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಚೀಟಿ ಬರೆದು ಮೊಬೈಲ್ ಪೋನ್ ಮೂಲಕ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ಆರೋಪಿಗಳಾದ 1)ಶರತ್ ಶೆಟ್ಟಿ(20) ತಂದೆ:ಶಂಕರ ಶೆಟ್ಟಿ ವಾಸ:ಮಿಲ್ಕ್ ಡೈರಿ ಬಳಿ ಹೇರೂರು ಗ್ರಾಮ ಉಡುಪಿ ತಾಲೂಕು, 2)ಶರತ್ ಶೆಟ್ಟಿ (34) ತಂದೆ:ಸೂಲಿಯಣ್ಣ ಶೆಟ್ಟಿ ವಾಸ:ಮದ್ಯಸ್ಥರಬೆಟ್ಟು ನೀಲಾವರ ಗ್ರಾಮ, 3)ಸುಧಾಕರ(51) ತಂದೆ:ಮಂಜ ವಾಸ:5 ಸೆಂಟ್ಸ್ ಇಂದಿರಾನಗರ ವಾರಂಬಳ್ಳಿ ಗ್ರಾಮ ಇವರುಗಳನ್ನು ವಶಕ್ಕೆ ತೆಗೆದುಕೊಂಡು ಮಟ್ಕಾ ಜುಗಾರಿ ಆಟಕ್ಕೆ ಬಳಸಿದ ರೂಪಾಯಿ 1950/-, ಮಟ್ಕಾನಂಬ್ರ ಬರೆದ ಚೀಟಿ-1, ಬಾಲ್ ಪೆನ್-1, ಸ್ಯಾಮ್‌ಸಂಗ್ ಮೊಬೈಲ್-1, ನೋಕಿಯಾ ಮೊಬೈಲ್-1 ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಬ್ರಹ್ಮಾವರ ಠಾಣಾ ಅಪರಾಧ ಕ್ರಮಾಂಕ 112/15 ಕಲಂ 78(i)(ಎ) (vi)  ಕೆ.ಪಿ ಕಾಯಿದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.  
ಅಪಹರಣ ಪ್ರಕರಣ 
  •  ಬೈಂದೂರು: ದಿನಾಂಕ 12-06-2015 ರಂದು ಬೆಳಿಗ್ಗೆ 08:00 ಗಂಟೆಯ ಸಮಯಕ್ಕೆ ಪಿರ್ಯಾದಿ ದೇವಿ ಇವರು ಅವರ ಮಗ ಗಿರೀಶನೊಂದಿಗೆ ಕುಂದಾಪುರ ತಾಲೂಕು ಬಿಜೂರು ಗ್ರಾಮದ ಸಾಲಿಮಕ್ಕಿ ಪಂಡುಮನೆ ಎಂಬಲ್ಲಿರುವ ಅವರ ಮನೆಯಲ್ಲಿ ಇರುವ ಸಮಯ ಬಿಳಿ ಬಣ್ಣದ ಟವೆರಾ ಕಾರೊಂದು ಅವರ ಮನೆಯ ಬಳಿ ಬಂದಿದ್ದು ಅದರಲ್ಲಿದ್ದವರು ಕುಡಿಯಲು ನೀರು ಕೇಳಿದ್ದು ನೀರು ಕೊಡಲೆಂದು  ಪಿರ್ಯಾಧಿದಾರರು ಹೊರಗೆ ಬಂದಿದ್ದು ಆ ಸಮಯ ಪಿರ್ಯಾಧಿದಾರರೊಂದಿಗೆ ಅವರ ಮಗ ಗಿರೀಶನು ಹೊರಗೆ ಬಂದಿದ್ದು ಆಗ  ಕಾರಿನಲ್ಲಿದ್ದ ಓರ್ವ ಮಹಿಳೆ ಹಾಗೂ ಮೂವರು ಗಂಡಸರ ಪೈಕಿ ಗಂಡಸರು ಕಾರಿನಿಂದ ಕೆಳಗೆ ಇಳಿದು ಗಿರೀಶನನ್ನು ನೋಡಿ ಗಿರೀಶ ಅಂದರೆ ನೀನೆನಾ ಎಂದು ಕೇಳಿ ಅವನನ್ನು ಬಲವಂತದಿಂದ ಕರೆತಂದು ಕಾರಿನಲ್ಲಿ ಕುಳ್ಳಿರಿಸಿದರು. ಪಿರ್ಯಾಧಿದಾರರು ಅವರಲ್ಲಿ ಗಿರೀಶನನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತೀರಿ ಎಂದು ಕೇಳಿದ್ದಕ್ಕೆ ಕಾರಿನಲ್ಲಿದ್ದ ಮಹಿಳೆ ಇವನನ್ನು ವಿಚಾರಣೆ ಮಾಡಿ ಬಿಡುತ್ತೇನೆ. ನೀವೇನು ಹೆದರಿಕೊಳ್ಳುವುದು ಬೇಡ ಎಂದು ಹೇಳಿ ಪಿರ್ಯಾಧಿದಾರರ ಮಗನನ್ನು ಬಲತ್ಕಾರವಾಗಿ ಕಾರಿನಲ್ಲಿ ಕರೆದುಕೊಂಡು ಹೋಗಿರುತ್ತಾರೆ ಕಾರಿನ ನಂಬ್ರ ಪಿರ್ಯಾಧಿದಾರರಿಗೆ ತಿಳಿದಿರುವುದಿಲ್ಲ.  ಈ ಬಗ್ಗೆ ಬೈಂದೂರು ಠಾಣಾ ಅಪರಾಧ ಕ್ರಮಾಂಕ 171/2015 ಕಲಂ 363 ಐಪಿಸಿಯಂತೆ  ಪ್ರಕರಣ ದಾಖಲಿಸಿಕೊಳ್ಳಲಾಗಿದೆ.  

No comments: