Saturday, June 13, 2015

Daily Crime Reports As on 13/06/2015 at 17:00 Hrsಅಪಘಾತ ಪ್ರಕರಣ

  • ಕಾಪು:ದಿನಾಂಕ:12/06/2015 ರಂದು ರಾತ್ರಿ 8:30 ಗಂಟೆಗೆ ಪಿರ್ಯಾದಿದಾರರಾದ ಮಿಲನ್ (28) ತಂದೆ:ಬಾಬು ಸುವರ್ಣ ವಾಸ:ಬೊಬ್ಬರ್ಯಗುಜ್ಜಿ ಅಂಗನವಾಡಿ ಶಾಲೆಯ ಬಳಿ, ಕೊರಂಗ್ರಪಾಡಿ ಉಡುಪಿರವರ ತಂದೆ ಸುಮಾರು 65 ವರ್ಷ ಪ್ರಾಯದ ಬಾಬು ಸುವರ್ಣ ಇವರು ಯೆಣಗುಡ್ಡೆ ಗ್ರಾಮದ ಫಾರೆಸ್ಟ್ ಗೇಟ್ ರಾಷ್ಟ್ರೀಯ ಹೆದ್ದಾರಿ-66 ರ ಪಶ್ವಿಮ ಬದಿಯಲ್ಲಿ ರಸ್ತೆ ದಾಟುವರೆ ನಿಂತುಕೊಂಡಿರುವಾಗ ಆರೋಪಿ ಕೆ.ಎ 20 ಎಮ್.ಜಿ 2000 ನೇ ಕಾರು ಚಾಲಕ ಮುತ್ತಯ್ಯ ಎಂಬವರು ಕಾರನ್ನು ಉಡುಪಿ ಕಡೆಯಿಂದ ಕಾಪು ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಂದ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ರಸ್ತೆಯ ಪಶ್ಚಿಮ ಬದಿಯಲ್ಲಿ ನಿಂತುಕೊಂಡಿದ್ದ ಮಿಲನ್‌ರವರ ತಂದೆ ಬಾಬು ಸುವರ್ಣ ಇವರಿಗೆ ಡಿಕ್ಕಿ ಹೊಡೆದ ಪರಿಣಾಮ ಬಾಬು ಸುವರ್ಣರವರು ಅಲ್ಲಿಯೆ ರಸ್ತೆಗೆ ಬಿದ್ದು, ತಲೆಗೆ ಮತ್ತು ಮುಖಕ್ಕೆ ಪೆಟ್ಟಾದವರನ್ನು ಚಿಕಿತ್ಸೆಯ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಿಸಿದಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಬಾಬು ಸುವರ್ಣರವರು ರಾತ್ರಿ 10:00 ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಮಿಲನ್‌ರವರು ನೀಡಿದ ದೂರಿನಂತೆ ಕಾಫು ಠಾಣಾ ಅಪರಾಧ ಕ್ರಮಾಂಕ 121/2015 ಕಲಂ 279, 304(ಎ) ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.  

No comments: