Friday, June 12, 2015

Daily Crime Reports As on 12/06/2015 at 19:30 Hrs


ಅಪಘಾತ ಪ್ರಕರಣ
  • ಉಡುಪಿ: ದಿನಾಂಕ 11/06/2015 ರಂದು ಪಿರ್ಯಾದಿದಾರರಾದ ಪವನ್ @ ಪವಡಪ್ಪ  ತಂದೆ ಭೀಮಪ್ಪ ವಾಸ: ಚಿಕ್ಕ ಹಡರಗಲ್ ರಾಂಪುರ ಬಾಗಲಕೋಟೆ ರವರು ಇಂದ್ರಾಳಿಯಿಂದ ತನ್ನ ಬಾಡಿಗೆ ಮನೆಗೆ ಹೋಗುವರೇ ಅಟೋರಿಕ್ಷಾ ನಂಬ್ರ ಕೆಎ 20 ಸಿ 6167 ನೇದರಲ್ಲಿ ಎಂಜಿಎಂ-ಡಯಾನ ರಸ್ತೆಯಲ್ಲಿ ಹೊಗುತ್ತಿರುವಾಗ ಬುಡ್ನಾರು ಜಂಕ್ಷನ್ ಎಂಬಲ್ಲಿ ಸಮಯ ಸುಮಾರು 03.00 ಗಂಟೆಗೆ ಆರೋಪಿ ರಿಕ್ಷಾ ಚಾಲಕ ಪ್ರಸಾದ್ ಎಂಬಾತನು ತನ್ನ ಅಟೋ ರಿಕ್ಷಾವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ತಿರುವಿನಲ್ಲಿ ಹೋಗುತ್ತಿರುವಾಗ ರಿಕ್ಷಾ ಚಾಲಕನ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ರಸ್ತೆಗೆ ಬಿದ್ದ ಪರಿಣಾಮ ಹಿಂಬದಿ ಪ್ರಯಾಣಿಕನಾಗಿ ಕುಳಿತಿದ್ದ ಪಿರ್ಯಾದಿದಾರರು ರಸ್ತೆಗೆ ಬಿದ್ದು ಅವರ ಮೈಮೇಲೆ ರಿಕ್ಷಾ ಬಿದ್ದು ಪಿರ್ಯಾದಿದಾರರ ಎದೆ ಹಾಗೂ ಸೊಂಟಕ್ಕೆ ಒಳಗಾಯವುಂಟಾಗಿರುತ್ತದೆ ಎಂಬುದಾಗಿ ಪವನ್ @ ಪವಡಪ್ಪ   ರವರು ನೀಡಿದ ದೂರಿನಂತೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 64/2015 ಕಲಂ 279, 337 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

No comments: