Thursday, June 11, 2015

Daily Crimes Reported as On 11/06/2015 at 19:30 Hrs


ಇತರ ಪ್ರಕರಣ
  • ಕುಂದಾಪುರ:ಪಿರ್ಯಾದಿದಾರರಾದ ಜನೆಟ್ ಅರೋರಾ (40) ತಂದೆ:ಬಸ್ತಿಯಾ ಡಿಸೋಜ ವಾಸ:ಗಲ್ಲಿ 3, ನೇಹರೂ ಮಾರ್ಕೇಟ್ ಎದುರು, ಮೋಡಿ ನಗರ, ಗಜಿಯಾಬಾದ್ ಜಿಲ್ಲೆರವರು ಕುಂದಾಪುರ ತಾಲೂಕು ಕುಂಬಾಶಿ ಗ್ರಾಮದ ಕೊರವಾಡಿ ಎಂಬಲ್ಲಿರುವ ಡೋರ್ ನಂಬ್ರ.173/2/ಎ3, III 188 ಮನೆಯ ಹಾಗೂ ಜಾಗದ ಹಕ್ಕು ಪತ್ರದಾರರಾಗಿದ್ದು, ಸದ್ರಿ ಮನೆ ಹಾಗೂ ಜಾಗದಲ್ಲಿರುವ ಕೃಷಿಯನ್ನು ನೋಡಿಕೊಳ್ಳುವರೇ ಶಂಕರ ಮೊಗವೀರ ಹಾಗೂ ಅವರ ಕುಟುಂಬದವರನ್ನು ಇರಿಸಿ ಜನೆಟ್ ಅರೋರಾರವರು ತನ್ನ ಮಕ್ಕಳೊಂದಿಗೆ ದೆಹಲಿಯಲ್ಲಿ ಇರುವುದಾಗಿದೆ. ಜನೆಟ್ ಅರೋರಾರವರ ಗಂಡ ಯೋಗೀಶ್ ಅರೋರ ವಿಚ್ಚೇದನಾ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿಯಿರುತ್ತದೆ. ದಿನಾಂಕ:01/05/2015 ರಂದು ಆಪಾದಿತ ಯೋಗೀಶ್ ಅರೋರರವರು 2 ಗಂಡಸು ಹಾಗೂ 1 ಹೆಂಗಸು ಸಹಪಾಠಿಯೊಂದಿಗೆ ಅಕ್ರಮವಾಗಿ ಮೇಲಿನ ತಿಳಿಸಿದ ಜನೆಟ್ ಅರೋರಾರವರ ಮನೆಗೆ ಬಂದು ದಿನಾಂಕ:03/05/2015 ರವರೆಗೆ ವಾಸ್ತವ್ಯವಿದ್ದು, ಈ ಬಗ್ಗೆ ಶಂಕರ ಮೊಗವೀರರವರ ಹೆಂಡತಿ ಪೂರ್ಣಿಮಾರವರು ಆಕ್ಷೇಪಿಸಿದ್ದಕ್ಕೆ, ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುತ್ತಾರೆ. ಅಲ್ಲದೇ ಮನೆಯಲ್ಲಿದ್ದ ಸಾಮಾಗ್ರಿಗಳನ್ನು, ಗೇಟ್ ಹಾಗೂ ಕೃಷಿಯನ್ನು ಹಾಳುಗೆಡವಿ ಜನೆಟ್ ಅರೋರಾರವರಿಗೆ ಸುಮಾರು ರೂಪಾಯಿ 15,000/- ನಷ್ಟವನ್ನುಂಟು ಮಾಡಿರುತ್ತಾರೆ.  ಈ ಬಗ್ಗೆ  ಜನೆಟ್ ಅರೋರಾರವರು ನೀಡಿದ ದೂರಿನಂತೆ ಕುಂದಾಪುರ ಠಾಣಾ ಅಪರಾಧ ಕ್ರಮಾಂಕ 230/2015 ಕಲಂ:448, 504, 427, 506 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

ವಂಚನೆ ಪ್ರಕರಣ
  • ಮಣಿಪಾಲ:ಪಿರ್ಯಾದಿದಾರರಾದ ಆರ್ತಿ ಪೂಜಾರಿ ತಂದೆ:ದಿವಂಗತ ಸೂರ ಮಂಜು ಪೂಜಾರಿ ವಾಸ:ಪಿ-530, ಬಿಲ್ಡಿಂಗ್ ನಂಬ್ರ-30, ಸ್ಟ್ರೀಟ್ -4 ಮೂರೂರು, ಅಬುದಾಬಿ, ಯುನೈಟೆಡ್ ಅರಬ್ ಎಮಿರೆಟ್ಸ್‌ರವರು ಐಸಿಐಸಿಐ ಬ್ಯಾಂಕ್ ಮಣಿಪಾಲ ಶಾಖೆಯಲ್ಲಿ ಖಾತೆಯನ್ನು ಹೊಂದಿದ್ದು,  ಸದ್ರಿ ಖಾತೆಯಿಂದ ದಿನಾಂಕ:30/04/2015 ಮತ್ತು ದಿನಾಂಕ:21/04/2015 ರ ನಡುವೆ ಸುಮಾರು 40,84,200/- ರೂಪಾಯಿಯನ್ನು ಯಾರೋ ದುಷ್ಕರ್ಮಿಗಳು ಬೇರೆ ಬೇರೆ ದಿನಗಳಲ್ಲಿ ಅಂತರ್ಜಾಲದಲ್ಲಿ ಯಾವುದೋ ತಂತ್ರಜ್ಞಾನವನ್ನು ಬಳಸಿ ಆರ್ತಿ ಪೂಜಾರಿರವಗೆರಿಗೆ ತಿಳಿಯದಂತೆ ಹಣವನ್ನು ನಗದೀಕರಿಸಿ ಮೋಸ ಮಾಡಿದ್ದಾಗಿರುತ್ತದೆ.ಈ ಬಗ್ಗೆ ಆರ್ತಿ ಪೂಜಾರಿರವರು ನೀಡಿದ ದೂರಿನಂತೆ ಮಣಿಪಾಲ ಠಾಣಾ ಅಪರಾಧ ಕ್ರಮಾಂಕ 110/15 ಕಲಂ 66(ಡಿ) INFORMATION TECHNOLOGY ACT 2008 & 420 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: