Friday, June 12, 2015

Daily Crimes Reported as On 12/06/2015 at 07:00 Hrsಅಪಘಾತ ಪ್ರಕರಣ

  • ಉಡುಪಿ: ದಿನಾಂಕ; 11/06/2015 ರಂದು ಪಿರ್ಯಾದಿ ಗೋವಿಂದ ರಾಜ್ ಇವರು ಅವರ ಚಿಕ್ಕಮ್ಮ ಲಕ್ಷ್ಮೀ (74) ರವರೊಂದಿಗೆ ಸಂತೆಕಟ್ಟೆ ಬಳಿ ಸಂಬಂಧಿಕರ ಮನೆಗೆ ಹೋಗಿದ್ದು ವಾಪಾಸು ಮನೆಗೆ ಹೋಗುವರೇ ಆಶೀರ್ವಾದ ಜಂಕ್ಷನ್ ಬಳಿ ರಸ್ತೆ ದಾಟುವರೇ ರಸ್ತೆ ಬದಿಯಲ್ಲಿ ನಿಂತುಕೊಂಡಿರುವಾಗ ಸಮಯ ಸುಮಾರು 14:00 ಗಂಟೆಗೆ ಉಡುಪಿ ಕಡೆಯಿಂದ ಕೆಎ-19 ಎಎ-8884 ನೇ ಕೆನರಾ ಪಿಂಟೊ ಬಸ್‌ನ ಚಾಲಕ ಅಶೋಕ ಎಂಬಾತನು ಬಸ್ಸನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಚಿಕ್ಕಮ್ಮ ಲಕ್ಷ್ಮೀ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ರಸ್ತೆಗೆ ಬಿದ್ದಿದ್ದು ಮೇಲಕ್ಕೆತ್ತಿ ಉಪಚರಿಸಿ ನೋಡಲಾಗಿ ಅವರ ತಲೆಗೆ ತೀವ್ರ ಸ್ವರೂಪದ ಗಾಯವಾಗಿದ್ದು, ಕಿವಿಯಿಂದ ರಕ್ತ ಬರುತ್ತಿದ್ದು ಕೂಡಲೇ ಒಂದು ಆಟೋರಿಕ್ಷಾದಲ್ಲಿ ಚಿಕಿತ್ಸೆ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಚಿಕಿತ್ಸೆ ಫಲಕಾರಿಯಾಗದೇ ಸಂಜೆ 17:30 ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 63/15 ಕಲಂ : 279, 304(ಎ) ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಕಾಪು: ದಿನಾಂಕ 11-06-2015 ರಂದು ಪಿರ್ಯಾದಿ ನಜೀರ್ ಇವರ ತಾಯಿ ಆಲಿಮಾಬಿ, ತಮ್ಮನ ಹೆಂಡತಿ ಜೋರಾಬಿ ಹಾಗೂ ಇನ್ನೊಬ್ಬ ತಮ್ಮನ ಹೆಂಡತಿ ಜಂಶೀರ್ ಇವರುಗಳು ಕೆ.ಎ 20 ಡಿ 3142 ನೇ ಆಟೋ ರಿಕ್ಷಾದಲ್ಲಿ ಮಣಿಪುರದಿಂದ ಕರಂಬಳ್ಳಿಗೆ ಹೋಗುತ್ತಾ ಮದ್ಯಾಹ್ನ 2:45 ಗಂಟೆಗೆ ಉದ್ಯಾವರ ಬ್ರಿಡ್ಜ್ ಬಳಿ ರಾ.ಹೆ. -66 ರ ಬಳಿ ತಲುಪಿ ರಸ್ತೆ ರಿಪೇರಿ ಪ್ರಯುಕ್ತ ರಿಕ್ಷಾವನ್ನು ಬಲಬದಿಗೆ ಕೊಂಡು ಹೋಗುವಾಗ ಆರೋಪಿ ಕೆ.ಎ 20ಬಿ 8796 ನೇ ಕಂಟೈನರ್ ಲಾರಿಯನ್ನು ಉಡುಪಿ ಕಡೆಯಿಂದ ಕಾಪು ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದು ರಿಕ್ಷಾಕ್ಕೆ ಡಿಕ್ಕಿ ಹೊಡೆದು, ರಿಕ್ಷಾದ ಹಿಂದುಗಡೆಯಿಂದ ಬರುತ್ತಿದ್ದ ಕೆ.ಎ.20 ಸಿ 7772 ನೇ ಟೆಂಪೋ ಗೂ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾದಲ್ಲಿದ್ದವರು ರಸ್ತೆಗೆ ಎಸೆಯಲ್ಪಟ್ಟು ಮೂವರಿಗೂ ರಕ್ತಗಾಯ ಉಂಟಾಗಿದ್ದು, ಅಲ್ಲದೇ ರಿಕ್ಷಾ ಚಾಲಕನಿಗೂ ಸಣ್ಣಪುಟ್ಟ ರಕ್ತಗಾಯ ಉಂಟಾಗಿದ್ದಾಗಿದೆ. ಸದ್ರಿ ಕಂಟೈನರ್ ಚಾಲಕ ಲಾರಿಯನ್ನು ಅಪಘಾತ ಸ್ಥಳದಲ್ಲಿ ಬಿಟ್ಟು ಪರಾರಿಯಾಗಿರುತ್ತಾನೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 120/2015 ಕಲಂ 279, 337 ಐಪಿಸಿ ಮತ್ತು ಕಲಂ 134(ಎ)(ಬಿ ಐ.ಎಮ್.ವಿ. ಆಕ್ಟ್ ನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಮಣಿಪಾಲ:  ದಿನಾಂಕ 11/06/15 ರಂದು ಸಂಜೆ ಸುಮಾರು 4:00 ಗಂಟೆಗೆ ಪಿರ್ಯಾದಿ ಸುರೇಶ್ ಶೆಟ್ಟಿ ಇವರು ತನ್ನ ಬಾಬ್ತು ಕಾರು ನಂ ಕೆಎ 20 ಝಡ್ 2492 ನೇಯದನ್ನು ದಶರಥ ನಗರದ ಮಂಗಳ ಕಾಲೋನಿಯ ಹತ್ತಿರ ರಸ್ತೆಯ ಎಡ ಬದಿಯಲ್ಲಿ ನಿಲ್ಲಿಸಿ ಅಂಗಡಿಗೆ ಹೋದಾಗ ಅಲೆವೂರು ಕಡೆಯಿಂದ ಶ್ರೀ ಗಣೇಶ ಬಸ್ಸು ನಂ ಕೆಎ 25 ಬಿ 8555 ನೇಯದನ್ನು ಅದರ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  ನಿಲ್ಲಿಸಿದ್ದ ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಹಿಂಭಾಗ ಸಂಪೂರ್ಣ ಜಖಂ ಆಗಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 111/15 ಕಲಂ : 279 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಕೋಟ: ಪಿರ್ಯಾದಿ ಕೆ.ಉಲ್ಲಾಸ ಶೆಟ್ಟಿ ಇವರು ದಿನಾಂಕ 11/06/2015 ರಂದು ಮಧ್ಯಾಹ್ನ ಸಮಯ 2.00 ಗಂಟೆಗೆ ಅವರ ಬಾಬ್ತು ಕಾರಿನಲ್ಲಿ ಕೋಟ ಹೈಸ್ಕೂಲ್ ಕಡೆಯಿಂದ ಅಚಲಾಡಿ ಕಡೆಗೆ ಹೋಗುತ್ತಿದ್ದಾಗ ಉಡುಪಿ ತಾಲೂಕು ವಡ್ಡರ್ಸೆ ಗ್ರಾಮದ ಶ್ರೀನಿವಾಸ ಶ್ಯಾನುಭಾಗ್ ರವರ ಅಂಗಡಿಯ ಎದುರುಗಡೆ ಡಾಮರು ರಸ್ತೆಯ ಎಡ ಬದಿಯ ಮಣ್ಣಿನ ಕಚ್ಚಾ ರಸ್ತೆಯಲ್ಲಿ  ಅಂತಯ್ಯ ಶೆಟ್ಟಿಯವರು ವಡ್ಡರ್ಸೆ ಕಡೆಯಿಂದ ಅಚಲಾಡಿಗೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಓಮಿನಿ ಕಾರು ನಂಬ್ರ ಕೆಎ20ಪಿ704 ನೇದನ್ನು ಅದರ ಚಾಲಕ ದಿನೇಶ ರವರು ಕಾರನ್ನು ಕೋಟ ಹೈಸ್ಕೂಲ್ ಕಡೆಯಿಂದ ಸಾಯಿಬ್ರಕಟ್ಟೆ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ  ಚಲಾಯಿಸಿಕೊಂಡು ಬಂದು ಅಂತಯ್ಯ ಶೆಟ್ಟಿರವರಿಗೆ ಢಿಕ್ಕಿ ಹೊಡೆಸಿದ ಪರಿಣಾಮ ಅಂತಯ್ಯ ಶೆಟ್ಟಿರವರ ಕಾಲುಗಳಿಗೆ, ಮುಖಕ್ಕೆ, ತಲೆಯ ಹಿಂಭಾಗಕ್ಕೆ ರಕ್ತಗಾಯ ಉಂಟಾಗಿದ್ದು ಚಿಕಿತ್ಸೆಯ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ.  ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 141/2015 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಕೋಟ: ಪಿರ್ಯಾದಿ ಪಿ.ಗುರುರಾಜ್ ರಾವ್ ಇವರು ದಿನಾಂಕ:11/06/2015 ರಂದು ರಾತ್ರಿ 8:00 ಗಂಟೆಗೆ  ಸಾಲಿಗ್ರಾಮದಿಂದ ಕೋಟ ಕಡೆಗೆ ಬರುವಾಗ ಅವರ ಎದುರಿನಿಂದ ಯಜ್ಞನಾರಾಯಣ ಹೊಳ್ಳ ಎಂಬುವರು ಕೆಎ20 ಆರ್1365ನೇ ನಂಬ್ರದ ಎಂ80 ಮೋಟಾರ್ ಸೈಕಲ್‌ನ್ನು ರಾ.ಹೆ 66ರಲ್ಲಿ ಸವಾರಿ ಮಾಡಿಕೊಂಡು ಹೋಗುವಾಗ ಉಡುಪಿ ತಾಲೂಕು ಚಿತ್ರಪಾಡಿ  ಗ್ರಾಮದ ಕೋಟ ಹೈಸ್ಕೂಲ್ ಬಳಿ  ಕೆಎ:47 3370 ನೇ ನಂಬ್ರದ ಮಿನಿ ಲಾರಿ ಚಾಲಕ ಸಂದೀಪ ಎಂಬುವರು ಆತನ ಬಾಬ್ತು ಲಾರಿಯನ್ನು ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ತೀರ ಎಡಭಾಗಕ್ಕೆ  ಚಲಾಯಿಸಿ ಕೆಎ20 ಆರ್1365ನೇ ನಂಬ್ರದ ಎಂ80 ಮೋಟಾರ್ ಸೈಕಲ್‌ಗೆ ಹಿಂದಿನಿಂದ   ಢಿಕ್ಕಿ ಹೊಡೆದ ಪರಿಣಾಮ ಸದ್ರಿ ಮೋಟಾರ್ ಸೈಕಲ್ ಸವಾರ ಯಜ್ಞನಾರಾಯಣ ಹೊಳ್ಳರವರು ಮೋಟಾರ್ ಸೈಕಲ್‌ ಸಮೇತ ರಸ್ತೆಗೆ  ಬಿದ್ದು  ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ.ಸಿ  ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 142/2015 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಹಲ್ಲೆ ಪ್ರಕರಣ

  • ಕೋಟ: ಉಡುಪಿ ತಾಲೂಕು ಅಚಲಾಡಿ ಗ್ರಾಮದಲ್ಲಿರುವ ಪಿರ್ಯಾದಿ ಪಾರ್ವತಿ ಶೆಡ್ತಿ ಹಾಗೂ ಅವರ ಮಗ ಮಂಜುನಾಥ ಶೆಟ್ಟಿಯವರ ಬಾಬ್ತು ಜಾಗದಲ್ಲಿ ಗುಲಾಬಿ ಶೆಟ್ಟಿ ಮತ್ತು ಅವರ ಮಗ ಜಗನ್ನಾಥ ಶೆಟ್ಟಿ ಎಂಬುವರಿಗೆ ಮನೆ ರಿಪೇರಿ ಬಗ್ಗೆ ಸಾಮಗ್ರಿಗಳನ್ನು ಸಾಗಿಸಲು ದಾರಿಯನ್ನು ಮಾಡಿಕೊಟ್ಟಿದ್ದು ಮನೆ ರಿಪೇರಿ ಕೆಲಸ ಮುಗಿದ ಬಳಿಕ ಪಿರ್ಯಾದಿದಾರರು ಸದ್ರಿ ದಾರಿಯನ್ನು ಬಂದ್ ಮಾಡುವುದಾಗಿ ಹೇಳಿದ್ದು ಅದಕ್ಕೆ ಜಗನ್ನಾಥ ಶೆಟ್ಟಿಯು ಸದ್ರಿ ದಾರಿಯನ್ನು ಬಂದ್ ಮಾಡಲು ಯಾವ ಕಾರಣಕ್ಕೂ ಬಿಡುವುದಿಲ್ಲವೆಂದು ಹೇಳಿದ ವಿಚಾರವನ್ನು ಪಿರ್ಯಾದಿದಾರರು  ಅವರ ಮಗ ಮಂಜುನಾಥ ಶೆಟ್ಟಿಯವರಿಗೆ ತಿಳಿಸಿ ಮಾನ್ಯ ಕುಂದಾಪುರ ನ್ಯಾಯಾಲಯದಿಂದ ಇಂಜೆಂಕ್ಷನ್ ಆದೇಶ ಪಡೆದುಕೊಂಡಿರುತ್ತಾರೆ.ಹೀಗಿರುತ್ತಾ ದಿನಾಂಕ:09/06/2015 ರಂದು ಸಂಜೆ ಸುಮಾರು 6:30 ಗಂಟೆಗೆ ಜಗನ್ನಾಥ ಶೆಟ್ಟಿ, ಗುಲಾಬಿ ಶೆಡ್ತಿ ಹಾಗೂ ಇತರ 4-5 ಜನ ಜಗನ್ನಾಥ ಶೆಟ್ಟಿಯವರ ಓಮ್ನಿ ಕಾರಿನಲ್ಲಿ ಬಂದು ಪಿರ್ಯಾದಿದಾರರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ದಾರಿಗೆ ಹಾಕಿದ ಕಲ್ಲುಗಳನ್ನು ತೆಗೆದು ಹಾಕುವುದನ್ನು ತಡೆಯಲು ಹೋದ ಪಿರ್ಯಾದಿದಾರರನ್ನು ಕೈಯಿಂದ ದೂಡಿ ಹಾಕಿ ಜಗನ್ನಾಥ ಶೆಟ್ಟಿಯು ಜೀವ ಬೆದರಿಕೆ  ಹಾಕಿರುವುದಾಗಿದೆ. ಈ ಬಗ್ಗೆ ಕೋಟ  ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 140/2015 ಕಲಂ:143, 147, 447, 323, 504, 506, 149  ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಇತರೇ ಪ್ರಕರಣ

  • ಬೈಂದೂರು:  ಪಿರ್ಯಾದಿ ಶ್ರೀಮತಿ ಲತಾ ಕುಲಕರ್ಣಿ ಇವರು  ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಡುಪಿ ಇಲ್ಲಿ ಭೂವಿಜ್ಞಾನಿ ಆಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು ಬೈಂದೂರು ವ್ಯಾಪ್ತಿಯ ಗಂಗನಾಡು ಗ್ರಾಮದಲ್ಲಿ ಅನಧಿಕೃತ ಕೆಂಪು ಕಲ್ಲುಗಾರಿಕೆ ನಡೆಯುತ್ತಿರುವ ಬಗ್ಗೆ ಮಾನ್ಯ ಜಿಲ್ಲಾಧಿಕಾರಿಯವರಿಂದ ದಿನಾಂಕ 08-06-2015 ರಂದು ಬಂದ ದೂರಿನಂತೆ ಪಿರ್ಯಾದಿದಾರರು ದಿನಾಂಕ 11-06-2015 ರಂದು ಕಚೇರಿಯ ಕಿರಿಯ ಅಭಿಯಂತರರು  ಹಾಗೂ ಬೈಂದೂರು ಠಾಣಾ ಪೊಲೀಸ್‌ ಸಿಬ್ಬಂದಿಯವರೊಂದಿಗೆ ಕುಂದಾಪುರ ತಾಲೂಕು ಬೈಂದೂರು ಗ್ರಾಮದ ಗಂಗನಾಡು ಪ್ರದೇಶದ ಸರ್ಕಾರಿ ಶಾಲೆಯ ಹತ್ತಿರ ಅಕ್ರಮವಾಗಿ ಕೆಂಪು ಕಲ್ಲುಗಾರಿಕೆ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದು ಸ್ಥಳದಲ್ಲಿ ಸುಮಾರು 10 ಎಕ್ರೆ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಈ ಪ್ರದೇಶದಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸಿರುವ ವ್ಯಕ್ತಿಗಳ ಬಗ್ಗೆ ಮಾಹಿತಿ ಕಲೆಹಾಕಲಾಗಿ ಗಣಪನಾಯ್ಕ, ಕುಮಾರ ಮರಾಠಿ, ಭೋಜ ನಾಯ್ಕ, ಅರುಣ್‌ ಶೆಟ್ಟಿ  ಎಂಬುವವರು ಗಣಿಗಾರಿಕೆ ನಡೆಯುತ್ತಿದೆ ಎಂದು ಮಾಹಿತಿ ಸಿಕ್ಕಿದ್ದು ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಪ್ರದೇಶಕ್ಕೆ ಗಣಪ ಮರಾಠಿ ಎಂಬುವವರ ಮನೆ ಇದ್ದು ಸದ್ರಿಯವರ ಹೇಳಿಕೆ ಪಡೆಯಲು ಅವರ ಮನೆಯ ಬಳಿ ಹೋದಾಗ ಮನೆಯ ಬಾಗಿಲಿಗೆ ಬೀಗ ಹಾಕಿದ್ದು ಮನೆಯ ಒಳಗಡೆ ಮಾತನಾಡುವುದು ಕೇಳುತ್ತಿದ್ದು ಕಿಟಕಿಯಲ್ಲಿ ನೋಡಲಾಗಿ ಮನೆಯ ಒಳಗಡೆ ಗಣಪ ಮರಾಠಿ, ಹೆಂಗಸರು, ಮಕ್ಕಳು ಹಾಗೂ ಕೂಲಿ ಕಾರ್ಮಿಕರು ಬಚ್ಚಿಟ್ಟುಕೊಂಡಿದ್ದು ಅವರಿಗೆ ವಿಷಯ ತಿಳಿಸಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದು ಹೊರಗೆ ಕರೆಯಲಾಗಿ ಯಾರೂ ಬಾಗಿಲು ತೆರೆದಿರುವುದಿಲ್ಲ. ಸದ್ರಿ ಸಮಯದಲ್ಲಿ ಮಳೆ ಬರುತ್ತಿದ್ದುದರಿಂದ ಮನೆಯ ಹಿಂಬದಿಯಲ್ಲಿ ನಿಂತಿದ್ದು ಆ ಸಮಯ ಗಣಪ ಮರಾಠಿ ಮನೆಯ ಹಿಂಬದಿ ಬಾಗಿಲು ಅರ್ಧ ತೆಗೆದಿದ್ದು ಆ ಸಮಯ ಪಿರ್ಯಾಧಿದಾರರು ಸಿಬ್ಬಂದಿಯವರೊಂದಿಗೆ ಅಲ್ಲಿಗೆ ಹೋದಾಗ ಗಣಿಗಾರಿಕೆಗೆ ಬಳಸಲಾದ ಆಯುಧಗಳನ್ನು ಪಿರ್ಯಾದಿದಾರರು ಹಾಗೂ ಸಿಬ್ಬಂದಿಯವರ ಮೇಲೆ ಎಸೆದು ನೀವು ಏಕೆ ನಮ್ಮ ಮನೆಯ ಬಾಗಿಲನ್ನು ಹೊಡೆದಿದ್ದಿರಿ ಎಂದು ಗಣಪ ಮರಾಠಿ ಹಾಗೂ ಜೊತೆಯಲ್ಲಿದ್ದ ಹೆಂಗಸರು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿರುತ್ತಾರೆ. ಹಾಗೂ ಪಿರ್ಯಾದಿದಾರರ ವಾಹನದ ಚಾಲಕನನ್ನು ಅವಾಚ್ಯ ಶಬ್ದಗಳಿಂದ ಬೈದು ಅವರ ಮೇಲು ಸಹ ಹಲ್ಲೆ ನಡೆಸಿರುತ್ತಾರೆ ಹಾಗೂ  ವಾಪಾಸ್ಸು ಬರಲು ಸಿದ್ದರಾದಾಗ ವಾಹನವನ್ನು ಅಡ್ಡ ಮಾಡಿ ಕಲ್ಲುಗಳನ್ನು ಇಟ್ಟು ಗಲಾಟೆ ಮಾಡಿ ಸರ್ಕಾರಿ ಕೆಲಸವನ್ನು ನಿರ್ವಹಿಸಲು ತೊಂದರೆ ಉಂಟು ಮಾಡಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 169/2015 ಕಲಂ 504, 341, 353, ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಮಟ್ಕಾ ಜುಗಾರಿ ಪ್ರಕರಣ

  • ಗಂಗೊಳ್ಳಿ: ದಿನಾಂಕ 11/06/2015 ರಂದು ಗಂಗೊಳ್ಳಿ ಪೊಲೀಸ್‌ ಠಾಣೆಯ ಪಿ.ಎಸ್‌.ಐ ಸುಬ್ಬಣ್ಣ ರವರು  ರೌಂಡ್ಸ್‌ ಕರ್ತವ್ಯದಲ್ಲಿ  ಇರುವಾಗ ಗಂಗೊಳ್ಳಿ ಗ್ರಾಮದ ಗಂಗೊಳ್ಳಿ ರಥ ಬೀದಿಯಲ್ಲಿ  ಶ್ರೀನಿವಾಸ ದೇವಾಡಿಗ ಎಂಬವರು ಮಟ್ಕಾ ಜುಗಾರಿ ನಡೆಸುತ್ತಿದ್ದ ಬಗ್ಗೆ  ಮಾಹಿತಿ ದೊರೆತ ಮೇರೆಗೆ 19:00 ಗಂಟೆಗೆ  ದಾಳಿ ಮಾಡಿ ಆಪಾದಿತ ಶ್ರೀನಿವಾಸ ದೇವಾಡಿಗ ಪ್ರಾಯ 55 ವರ್ಷ ತಂದೆ ದಿ. ಮಂಜ ದೇವಾಡಿಗ ವಾಸ ರಥಬೀದಿ ಗಂಗೊಳ್ಳಿ, ಗಂಗೊಳ್ಳಿ ಗ್ರಾಮ ಕುಂದಾಪುರ ತಾಲೂಕು ಎಂಬವರನ್ನು ದಸ್ತಗಿರಿ ಮಾಡಿ. ಜುಗಾರಿಗೆ ಉಪಯೋಗಿಸಿದ  1270/- ರೂ ನಗದು, ಮಟ್ಕಾ ಚೀಟಿ ಹಾಗೂ ಬಾಲ್‌ ಪೆನ್ ಅನ್ನು ಸ್ವಾಧೀನಪಡಿಸಿಕೊಂಡು ಠಾಣಾ ಅಪರಾಧ ಕ್ರಮಾಂಕ 86/2015 ಕಲಂ 78 (1) (111) ಕೆ.ಪಿ.ಆಕ್ಟ್ ನಂತೆ ಸೂಕ್ತ ಕಾನೂನು ಕ್ರಮ ಕೈಗೊಂಡಿರುವುದಾಗಿದೆ.


No comments: