Thursday, June 11, 2015

Daily Crimes Reported as On 11/06/2015 at 17:00 Hrs


ಅಸ್ವಾಭಾವಿಕ ಮರಣ ಪ್ರಕರಣಗಳು
  • ಅಜೆಕಾರು:ಪಿರ್ಯಾದಿದಾರರಾದ ನವೀನ್ ನಾಯ್ಕ ತಂದೆ:ಮಾಧವ ನಾಯ್ಕ ವಾಸ:ಬಾಬಯ್ಯ ಬೆಟ್ಟು ಮನೆ, ದರ್ಖಾಸು, ಎಳ್ಳಾರೆ ಗ್ರಾಮ, ಕಾರ್ಕಳ ತಾಲೂಕುರವರ ತಂದೆ ಮಾಧವ ನಾಯ್ಕ (60) ರವರು ಹಲವು ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು ಈ ಬಗ್ಗೆ ಉಡುಪಿ ಬಾಳಿಗ ಆಸ್ಪತ್ರೆಯ ವೈದ್ಯಾಧಿಕಾರಿಯವರಿಂದ ಚಿಕಿತ್ಸೆ ಮಾಡಿಸಿ ದಿನ ಔಷಧಿ ನೀಡುತ್ತಿದ್ದು ದಿನಾಂಕ:10/06/15 ರಂದು ನವೀನ್ ನಾಯ್ಕರವರು ಕೆಲಸ ಮುಗಿಸಿ ಸಂಜೆ 05:00 ಗಂಟೆಗೆ ಮನೆಗೆ ಬಂದಾಗ ತನ್ನ ತಂದೆ ಮನೆಯಲ್ಲಿ ಕಾಣದೇ ಇದ್ದು ಪತ್ತೆಯ ಬಗ್ಗೆ  ಮನೆಯವರೊಂದಿಗೆ ಹುಡುಕಾಡಿದಲ್ಲಿ ದಿನಾಂಕ 11-06-2015 ರಂದು ಬೆಳಿಗ್ಗೆ 09:00 ಗಂಟೆಗೆ ಮನೆಯ ಸಮೀಪದ ಸರ್ಕಾರಿ ಕಾಡಿನಲ್ಲಿ ಹೋಗಿ ನೋಡಿದಲ್ಲಿ ಗೇರುಮರದ ಕೊಂಬೆಯೊಂದರಲ್ಲಿ ನವೀನ್ ನಾಯ್ಕರ ತಂದೆ ಕುತ್ತಿಗೆಗೆ ಬೈರಾಸು ಬಟ್ಟೆಯಿಂದ ನೇಣು ಬಿಗಿದು ನೇತಾಡಿಕೊಂಡಿರುವ ಸ್ಥಿತಿಯಲ್ಲಿ ಕಂಡುಬಂದಿದ್ದು ನಂತರ ನವೀನ್ ನಾಯ್ಕರವರು ಮನೆಯವರಿಗೆ ತಿಳಿಸಿದ್ದು, ಮಾಧವ ನಾಯ್ಕರವರು ಹಲವು ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಬಳುಲುತ್ತಿದ್ದು, ಯಾರೂ ಮನೆಯಲ್ಲಿ ಇಲ್ಲದ ಸಮಯ ಮನೆಯ ಸಮೀಪದ ಸರ್ಕಾರಿ ಕಾಡಿನ  ಗೇರು ಮರದ ಕೊಂಬೆಗೆ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಅಜೆಕಾರು ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 09/2015 ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಪಡುಬಿದ್ರಿ:ದಿನಾಂಕ:10/06/2015 ರಂದು 20:00 ಗಂಟೆಗೆ ಸಾಂತೂರು ಗ್ರಾಮದ ಸಾಂತೂರು ಕೊಪ್ಲದ ಐವನ್ ಡಿಸೋಜ ಎಂಬ ಕಾಂಪ್ಲೆಕ್ಸ್‌ನಲ್ಲಿ  ಗಂಡನೊಂದಿಗೆ ಬಾಡಿಗೆ ಮನೆಯಲ್ಲಿ ವಾಸ ಮಾಡಿಕೊಂಡಿದ್ದ ಪಿರ್ಯಾದಿದಾರರಾದ ಶ್ರೀಧರ್ ಪೂಜಾರಿ (65), ತಂದೆ:ದಿವಂಗತ ಕಿಟ್ಟು ಪೂಜಾರಿ, ನಾತೋಡಿ ಮೇಲ್ಮಾನೆ, ಸಾಂತೂರು, ಮುದರಂಗಡಿ ಗ್ರಾಮ, ಉಡುಪಿ ತಾಲೂಕು, ಉಡುಪಿ ಜಿಲ್ಲೆರ ಮಗಳಾದ ವನೀತ (24) ಎಂಬವರು ಗಂಡ ಹೊರಗಡೆ ಮೊಬೈಲ್ ಫೋನ್‌ನಲ್ಲಿ ಮಾತಾನಾಡುತ್ತಿದ್ದಾಗ ತನ್ನ ಮಗುವನ್ನು ಹೊರಗೆ ಕಳುಹಿಸಿ ಮನೆಯ  ಎದುರಿನ ಬಾಗಿಲಿನ ಚಿಲಕವನ್ನು ಹಾಕಿ, ಜೀವನದಲ್ಲಿ ಯಾವುದೋ ಘಟನೆಯಿಂದ ಬೇಸರಗೊಂಡು ಜೋಕಾಲಿಗೆ ಕಟ್ಟಿದ ಸೀರೆಯಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.ಈ ಬಗ್ಗೆ ಶ್ರೀಧರ್ ಪೂಜಾರಿರವರು ನೀಡಿದ ದೂರಿನಂತೆ ಪಡುಬಿದ್ರಿ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 17/15 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮಟ್ಕಾ ಜುಗಾರಿ ಪ್ರಕರಣ 
  • ಮಣಿಪಾಲ:ಪಿರ್ಯಾದಿದಾರರಾದ ಶೀನ ನಾಯ್ಕ್‌, ಎಎಸ್‌ಐ, ಮಣಿಪಾಲ ಪೊಲೀಸ್‌ ಠಾಣೆರವರು ಹೆಚ್‌.ಸಿ ನಾಗೇಶ ನಾಯಕ್‌ ರವರೊಂದಿಗೆ ಇಲಾಖಾ ಜೀಪಿನಲ್ಲಿ ಮಣಿಪಾಲ ಪೊಲೀಸ್‌ ಠಾಣಾ ಸರಹದ್ದಿನಲ್ಲಿ ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಸಂಜೆ 19:00 ಗಂಟೆಗೆ ಈಶ್ವರ ನಗರ ಎಂಬಲ್ಲಿ ತಲುಪುವಾಗ ಓರ್ವ ವ್ಯಕ್ತಿಯು ಮರದ ಕೆಳಗೆ ರಸ್ತೆಯ ಬದಿಯಲ್ಲಿ ಕುಳಿತುಕೊಂಡಿದ್ದವನು, ಪೊಲೀಸ್‌ ಜೀಪು ನೋಡಿ ಪರಾರಿಯಾಗಲು ಪ್ರಯತ್ನಿಸುತ್ತಿದ್ದು, ಜೀಪನ್ನು ನಿಲ್ಲಿಸಿ ಆತನನ್ನು ಸುತ್ತುವರಿದು ವಶಕ್ಕೆ ಪಡೆದು ವಿಚಾರಿಸಿದಾಗ ಆತನ ಹೆಸರು ಬಾಬು (58) ತಂದೆ:ಶೇಷ ಶೆಟ್ಟಿ, ವಾಸ:ಬಜೆ, ಹೊಸಂಗಡಿ, ಪೆರ್ಡೂರು ಗ್ರಾಮ, ಉಡುಪಿ ತಾಲೂಕು ಎಂದು ತಿಳಿಸಿದ್ದು, ಆತನು ಸಾರ್ವಜನಿಕರಿಂದ ಮಟ್ಕಾ ಜುಗಾರಿ ಆಟದ ಬಗ್ಗೆ ಹಣವನ್ನು ಸಂಗ್ರಹಿಸಿ ಮಟ್ಕಾ ನಂಬರನ್ನು ಬರೆದು ಕೊಡುತ್ತಿದ್ದು, ಮಟ್ಕಾ ಹಣವನ್ನು ಅಲೆವೂರಿನ ನಾಗೇಶ ದೇವಾಡಿಗ ಎಂಬವರಿಗೆ ನೀಡುತ್ತಿದ್ದು, ನಂಬರ್‌ ವಿಜೇತರಿಗೆ ಹಣವನ್ನು ನೀಡಿ ಉಳಿದ ಹಣವನ್ನು ತಾನು ಮತ್ತು ನಾಗೇಶ ದೇವಾಡಿಗರು ಸ್ವಂತಕ್ಕೆ ಉಪಯೋಗಿಸುತ್ತಿರುವುದಾಗಿ ತಿಳಿಸಿದ್ದು, ಆತನನ್ನು ದಸ್ತಗಿರಿ ಮಾಡಿ ಸಾರ್ವಜನಿಕರಿಂದ ಮಟ್ಕಾ ಆಟದ ಬಗ್ಗೆ ಸಂಗ್ರಹಿಸಿದ ರೂಪಾಯಿ 1,200/-, ಮಟ್ಕಾ ನಂಬರ್‌ ಬರೆದ ಚೀಟಿ ಹಾಗೂ ಬಾಲ್‌ ಪೆನ್ನನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಮಣಿಪಾಲ ಠಾಣಾ ಅಪರಾಧ ಕ್ರಮಾಂಕ 108/15 ಕಲಂ 78(i)(iii) ಕರ್ನಾಟಕ ಪೊಲೀಸ್ ಕಾಯಿದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಹಲ್ಲೆ ಪ್ರಕರಣ
  • ಮಣಿಪಾಲ:ಪಿರ್ಯಾದಿದಾರರಾದ ಶ್ರೀನಿವಾಸ ರಾಜ್‌, ತಂದೆ:ಜಯವೇಲು, ಬೊಮ್ಮನಹಳ್ಳಿ, ಭದ್ರಾವತಿ, ಶಿವಮೊಗ್ಗ ಜಿಲ್ಲೆರವರು ಪರೆಂಪಳ್ಳಿಯ ಸಿಸಿಸಿಎಲ್ ಕಂಪನಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಅಡುಗೆ ಮಾಡಿ ಕೊಡುವ ಕೆಲಸ ಮಾಡಿ ಕೊಂಡಿದ್ದು,  ಶ್ರೀನಿವಾಸ ರಾಜ್‌ರವರು ದಿನಾಂಕ:10/06/2015 ರಂದು 17:00 ಗಂಟೆಗೆ ಪರಂಪಳ್ಳಿ ಲೇಬರ್ ಕಾಲೊನಿಯ ಮೆಸ್‌ನಲ್ಲಿರುವಾಗ ಆರೋಪಿ ಬಸವರಾಜ ಸಿಸಿಸಿಎಲ್ ಕಂಪನಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಕೋಳಿ ಸಾಂಬಾರು ಮಾಡುವ ಬಗ್ಗೆ ಕೋಳಿ ಮಾಂಸವನ್ನು ತಂದು ಶ್ರೀನಿವಾಸ ರಾಜ್‌ರವರಿಗೆ ನೀಡಿ, ಇದರಲ್ಲಿ 5 ಕೆ.ಜಿ ಬದಲು 6 ಕೆ.ಜಿ ಕೋಳಿ ಮಾಂಸ ಇರುವುದಾಗಿ ಶ್ರೀನಿವಾಸ ರಾಜ್‌ರವರಿಗೆ ಹೇಳಿದಾಗ, ಶ್ರೀನಿವಾಸ ರಾಜ್‌ರವರು ಆರೋಪಿಯಲ್ಲಿ ನಿನ್ನಲ್ಲಿ ಸೂಪರ್‌ ವೈಸರ್ ದೇವರಾಜ್ 5 ಕೆ.ಜಿ ಕೋಳಿ ಮಾಂಸ ತರಲು ಹೇಳಿದ್ದು, ನೀನು ಯಾಕೆ 6 ಕೆ.ಜಿ ಕೋಳಿ ಮಾಂಸ ತಂದಿರುವುದು ಎಂದು ಕೇಳಿದಾಗ, ಆರೋಪಿಯು ಕೋಪಗೊಂಡು ನೀನು ಯಾರು ಕೇಳಲಿಕ್ಕೆ, ನಿನ್ನನ್ನು ಕೊಲ್ಲುತ್ತೇನೆ ಎಂದು ಅವಾಚ್ಯ ಶಬ್ದಗಳಿಂದ ಬೈದು, ರಾಡಿನಿಂದ ಶ್ರೀನಿವಾಸ ರಾಜ್‌ರವರ ತಲೆಗೆ, ಎಡ ಕೈಗೆ, ಕಾಲಿನ ಮಂಡಿಗೆ ಹೊಡೆದಿದ್ದು, ಪರಿಣಾಮ ಶ್ರೀನಿವಾಸ ರಾಜ್‌ರವರ ತಲೆಗೆ ರಕ್ತ ಗಾಯವಾಗಿದ್ದು, ಎಡಕೈ ಊದಿಕೊಂಡಿದ್ದು, ಎರಡೂ ಕಾಲಿನ ಮಂಡಿಗೆ ಒಳ ನೋವು ಆಗಿರುತ್ತದೆ ಅಲ್ಲದೇ ಶ್ರೀನಿವಾಸ ರಾಜ್‌ರವರಿಗೆ  ಹೊಡೆಯಲು ತಪ್ಪಿಸಲು ಬಂದ ಸಿದ್ದು ಎಂಬವರಿಗೆ ರಾಡಿನಿಂದ ಹೊಡೆದಿದ್ದು, ಸಿದ್ದುರವರಿಗೆ ಹಣೆಗೆ ಮತ್ತು ತಲೆಯ ಬಲ ಬದಿಯಲ್ಲಿ ರಕ್ತ ಗಾಯವಾಗಿರುತ್ತದೆ. ಗಾಯಾಳುಗಳು ಉಡುಪಿ ಗಾಂಧಿ ಆಸ್ಪತ್ರೆಯಲ್ಲಿ  ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದು, ಈ ಹಲ್ಲೆಗೆ ಕಾರಣ ಶ್ರೀನಿವಾಸ ರಾಜ್‌ರವರು ಆರೋಪಿಯಲ್ಲಿ ಕೋಳಿ ಮಾಂಸ ಜಾಸ್ತಿ ಯಾಕೆ ತಂದಿದ್ದು ಎಂದು ಹೇಳಿದಕ್ಕೆ ಈ ಹಲ್ಲೆ ನಡೆಸಿದ್ದಾಗಿರುತ್ತದೆ. ಈ ಬಗ್ಗೆ ಮಣಿಪಾಲ ಠಾಣಾ ಅಪರಾಧ ಕ್ರಮಾಂಕ 109/15 ಕಲಂ 504,506, 324 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಗಂಡಸು ಕಾಣೆ ಪ್ರಕರಣ
  • ಕಾರ್ಕಳ ನಗರ:ಕಾರ್ಕಳ ತಾಲೂಕಿನ ಪಳ್ಳಿ ಗ್ರಾಮದ ಮದ್ಮಲ್ ಪಾದೆ ನಿವಾಸಿ ಪಿರ್ಯಾದಿದಾರರಾದ ಶ್ರೀಮತಿ ಗೀತಾ (30), ಗಂಡ: ಸುರೇಶ, ವಾಸ:ಮದ್ಮಲ್ ಪಾದೆ, ಪಳ್ಳಿ ಗ್ರಾಮ, ಕಾರ್ಕಳ ತಾಲೂಕುರವರ ಗಂಡ ಸುರೇಶ (34) ಎಂಬವರು ದಿನಾಂಕ:10/05/2015 ರಂದು ಬೆಳಿಗ್ಗೆ ಪಳ್ಳಿಯ ರಘುನಾಥ ಶೆಟ್ಟಿಯವರ ಕಲ್ಲು ಕೋರೆಗೆ ಕೂಲಿ ಕೆಲಸಕ್ಕೆ ಹೋದವರು,  ಸಂಬಂಧಿಕರ ಮನೆಗೂ ಹೋಗದೇ, ವಾಪಾಸು ಮನೆಗೂ ಬಾರದೇ ಕಾಣೆಯಾಗಿರುತ್ತಾರೆ. ಈ ಬಗ್ಗೆ ಶ್ರೀಮತಿ ಗೀತಾರವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣಾ ಅಪರಾಧ ಕ್ರಮಾಂಕ 87/2015 ಕಲಂ ಗಂಡಸು ಕಾಣೆ ಎಂಬುದಾಗಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

No comments: