Saturday, June 06, 2015

Daily Crimes Reported as On 06/06/2015 at 17:00 Hrs



ಅಪಘಾತ ಪ್ರಕರಣ

  • ಕುಂದಾಪುರ: ದಿನಾಂಕ 06/06/2015 ರಂದು ಸಮಯ ಸುಮಾರು  ಬೆಳಿಗ್ಗೆ 09:00 ಗಂಟೆಗೆ ಕುಂದಾಪುರ  ತಾಲೂಕು ಕಸಬಾ ಗ್ರಾಮದ ಚಿಕ್ಕನ್ಸಾಲ್ರಸ್ತೆಯ ಶ್ರೀ ಗಣೇಶ್ಇಲೆಕ್ಟ್ರಾನಿಕ್ಸ್   ಅಂಗಡಿಯ ಎದುರುಗಡೆ ರಸ್ತೆಯಲ್ಲಿ  ಆಪಾದಿತ ಸುನಿಲ್ಎಂಬುವರು KA41-P-2143ನೇ  ಕಾರನ್ನು ಸಂಗಂ ಕಡೆಯಿಂದ ಹಳೆ  ಬಸ್ನಿಲ್ದಾಣದ ಕಡೆಗೆ ಅತೀವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು, ಹಳೆ  ಬಸ್ನಿಲ್ದಾಣದ ಕಡೆಯಿಂದ ಸಂಗಂ  ಕಡೆಗೆ ಮಣ್ಣಿನ ರಸ್ತೆಯಲ್ಲಿ  ನಡೆದುಕೊಂಡು ಹೋಗುತ್ತಿದ್ದ  ಸದಾನಂದ ಶೇರಿಗಾರ  ಎಂಬವರಿಗೆ   ಎದುರುಗಡೆಯಿಂದ ಡಿಕ್ಕಿ ಹೊಡೆದ ಪರಿಣಾಮ ಸದಾನಂದ ಶೇರಿಗಾರ ರವರು ರಸ್ತೆಯಲ್ಲಿ ಬಿದ್ದು ಅವರ ಎಡಕಾಲಿನ ಮುಂಗಾಲು ಗಂಟಿನ ಕೆಳಗೆ ಕೋಲು ಕಾಲಿಗೆ ಮೂಳೆ  ಮುರಿತದ ಗಾಯ  ಹಾಗೂ ಮೇಲ್‌‌ ತುಟಿಗೆ  ರಕ್ತಗಾಯವಾಗಿ  ಕುಂದಾಪುರ ಚಿನ್ಮಯಿ  ಆಸ್ಪತ್ರೆಯಲ್ಲಿ   ಚಿಕಿತ್ಸೆ ಬಗ್ಗೆ  ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 66/15 ಕಲಂ : 279, 338 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಕಾರ್ಕಳ: ದಿನಾಂಕ 3.6.2015 ರಂದು 16:50 ಗಂಟೆಗೆ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಅಯ್ಯಪ್ಪ ನಗರ ಎಂಬಲ್ಲಿರುವ ಶೇಷಾದ್ರಿ ಗೇರು ಬೀಜ ಕಾರ್ಖಾನೆಯ ಬಳಿ ಹಾದು ಹೋಗಿರುವ ಉಡುಪಿ-ಕಾರ್ಕಳ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಮೋಟಾರು ಸೈಕಲ್ ನಂಬ್ರ KA20U8759 ನೇಯದರ ಸವಾರ ಧರ್ಮೇದ್ರ ಸಿಂಗ್ ಎಂಬಾತನು ಉಡುಪಿ ಕಡೆಯಿಂದ ಕಾರ್ಕಳ ಕಡೆಗೆ ಮೋಟಾರು ಸೈಕಲನ್ನು ಅತಿವೇಗ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು, ರಸ್ತೆ ದಾಟುತ್ತಿದ್ದ 7 ವರ್ಷ ಪ್ರಾಯದ ಅನುಷಾ ಎಂಬವಳಿಗೆ ಢಿಕ್ಕಿ ಹೊಡೆದ ಪರಿಣಾಮ ತಲೆಗೆ, ಗದ್ದಕ್ಕೆ ಹಾಗೂ ನಾಲಿಗೆಗೆ ರಕ್ತ ಗಾಯವಾಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 85/2015 ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಪಡುಬಿದ್ರಿ: ದಿನಾಂಕ. 06/06/2015 ರಂದು 6:00 ಗಂಟೆಗೆ ಹೆಜಮಾಡಿ ಗ್ರಾಮದ ಹೆಜಮಾಡಿ ಚೆಕ್ ಪೋಸ್ಟ್ ಬಳಿ ರಾ.ಹೆ 66 ರಲ್ಲಿ ಕೆಎ-19-ಎಫ್-3034 ನೇ ಕೆ.ಎಸ್.ಆರ್.ಟಿ.ಸಿ ಬಸ್ಸಿನ ಚಾಲಕರಾದ ಪಿರ್ಯಾದಿ ಕೃಷ್ಣ ನಾಯರಿ ಇವರು ಬೆಂಗಳೂರಿನಿಂದ ಕುಂದಾಪುರದ ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದಾಗ ಹಿಂದಿನಿಂದ ಬಂದ ಕೆಎ-19-ಡಿ-4709 ನೇ ರಾಜ್ ಕುಮಾರ್ ಬಸ್ಸಿನ ಚಾಲಕನಾದ ಬಸ್ಸನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಕೆ.ಎಸ್.ಆರ್.ಟಿ.ಸಿ. ಬಸ್ಸಿನ ಎಡ ಬದಿಯಿಂದ  ಓವರ್ ಟೆಕ್ ಮಾಡಿ ಬಲಬದಿಗೆ ಬಂದು ಕೆ.ಎಸ್.ಆರ್.ಟಿ.ಸಿ.ಬಸ್ಸಿನ ಎಡ ಬದಿಗೆ ಡಿಕ್ಕಿ ಹೊಡೆದ ಪರಿಣಾಮ ಕೆ.ಎಸ್.ಆರ್.ಟಿ.ಸಿ. ಬಸ್ಸಿನ ಎಡ ಬದಿಯ ಸೈಡ್ ಮೀರರ್ ಹಾಗೂ ಮುಂಭಾಗದ ಗ್ಲಾಸು ಸಂಪೂರ್ಣವಾಗಿ ಒಡೆದು ಹೋಗಿರುತ್ತದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 81/2015 ಕಲಂ 279 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

 ಬೆದರಿಕೆ ಪ್ರಕರಣ

  • ಕೊಲ್ಲೂರು: ಪಿರ್ಯಾದಿ ಶ್ರೀಮತಿ ಸವಿತಾ ಇವರು ಗ್ರಾಮ ಪಂಚಾಯತ್ ಚುನಾವಣೆಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದು ಈ ಬಗ್ಗೆ ಆಪಾದಿತ 1.ಸತೀಶ ಶೆಟ್ಟಿ  ಬೆಳ್ಳಾಲ   2. ಸಂತೋಷ ವಂಡಬೇರು, 3. ತೇಜರಾಜ, 4. ಸುಕೇಶ ಪುಟ್ನಮಕ್ಕಿ  5.ಸುರೇಶ ವಂಡಬೇರು ಇವರುಗಳು ಸಮಾನ ಉದ್ದೇಶದಿಂದ ದಿನಾಂಕ 05.06.15 ರಂದು ಮದ್ಯಾಹ್ನ 03.30 ಗಂಟೆಗೆ ಪಿರ್ಯಾದಿದಾರರ ಮನೆಯ  ಅಂಗಳಕ್ಕೆ ಬಂದು ಪಟಾಕಿ ಸಿಡಿಸಿ ಅವಾಚ್ಯವಾಗಿ ಬೈದು ಕೊಲೆ ಬೆದರಿಕೆ ಹಾಕಿರುವುದಾಗಿದೆ.  ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 79/15 ಕಲಂ; 143, 147, 447, 504, 506 ಜೊತೆಗೆ 149  ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಕಾರ್ಕಳ: ದಿನಾಂಕ 05/06/2015 ರಂದು ಪಿರ್ಯಾದಿ ಉಮೇಶ್ ಆಚಾರ್ಯ  ಇವರು ರೆಂಜಾಳ ಗ್ರಾಮ ರೆಂಜಾಳ ಎಂಬಲ್ಲಿ ಇರುವ ಸಂದೇಶ್ ಜೈನ್ ಎಂಬವರ ಬಾಬ್ತು ಅಂಗಡಿಯಲ್ಲಿ ಸಂದೇಶ ಜೈನ್ ಮತ್ತು ಜಯ ಶೆಟ್ಟಿ ರವರ ಜೊತೆ ಮಾತನಾಡುತ್ತಿರುವ ಸಮಯ ಸುಮಾರು 20:00 ಗಂಟೆಗೆ ಆರೋಪಿತ 1.ಪ್ರವೀಣ್ ಶೆಟ್ಟಿ ನಾಜಾಲು ದರ್ಖಾಸು ಮನೆ,2. ಪ್ರವೀಣ್ ಪೂಜಾರಿ ಪಾಡ್ಯಾರು  ಹೌಸ್, 3.ಸಂದೇಶ್ ಶೆಟ್ಟಿ ಮಾಳಿಗೆ ಮನೆ 4. ಅಶ್ರಫ್ ಮಸೀದಿ ಬಳಿ 5. ಅನಿಲ್ ಸೋಂಬೆಬೈಲು6. ಉಮೇಶ ಪೆಜತ್ರಬೆಟ್ಟು 7. ನಿತ್ಯಾನಂದ ಆಚಾರ್ಯ  ಇವರುಗಳು ಅಕ್ರಮಕೂಟ ಸೇರಿಕೊಂಡು ಅಲ್ಲಿಗೆ ಬಂದಿದ್ದು ಆರೋಪಿತರ ಪೈಕಿ ಅನಿಲ್ ಎಂಬಾತನು ಪಿರ್ಯಾದಿದಾರರ ಬಳಿ ಬಂದು ಏಕಾಏಕಿ ಪಿರ್ಯಾದಿದಾರರ ಕೆನ್ನೆಗೆ ಕೈಯಿಂದ ಹೊಡೆದಿದ್ದು ಈ ಬಗ್ಗೆ ಪಿರ್ಯಾದಿದಾರರು ಅವನಲ್ಲಿ ಏಕೆ ಹೊಡೆದದ್ದು ಎಂದು ಕೇಳಿದ್ದಕ್ಕೆ  ಆರೋಪಿತರೆಲ್ಲಾ ಸೇರಿ ಪಿರ್ಯಾದಿದಾರರನ್ನು ಉದ್ದೇಶಿಸಿ  ಬೆದರಿಕೆ ಹಾಕಿ ಹೊರಟು ಹೋಗಿರುತ್ತಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 98/2015  ಕಲಂ : 143, 147, 323, 506 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: