Sunday, June 07, 2015

Daily Crimes Reported as On 06/06/2015 at 19:30 Hrsಅಪಘಾತ ಪ್ರಕರಣ

  • ಬ್ರಹ್ಮಾವರ:  ದಿನಾಂಕ: 06/06/2015 ರಂದು ಮಧ್ಯಾಹ್ನ 12:00 ಗಂಟೆಯ ಸಮಯಕ್ಕೆ ಉಡುಪಿ ತಾಲೂಕು, ಹೊಸೂರು ಗ್ರಾಮದ, ಕೆಳಕರ್ಜೆ ಜಂಕ್ಷನ್ ಬಳಿ ಪಿರ್ಯಾದಿ ಹಫೀಜ್ ಆಲಿ ಇವರು ತನ್ನ ಬಾಬ್ತು ಕೆಎ-19-ಇಹೆಚ್‌-7468 ನೇ ಮೋಟಾರ್ ಸೈಕಲ್‌ನಲ್ಲಿ ತನ್ನ ಹೆಂಡತಿ ಅಪ್ಸಾನ ರವರನ್ನು ಕುಳ್ಳಿರಿಸಿಕೊಂಡು ಹೊನ್ನಾಳ ದಿಂದ ಶೃಂಗೇರಿ ಕಡೆಗೆ ಹೋಗುತ್ತಿರುವಾಗ ಆರೋಪಿ ಕರುಣಾಕರ ಶೆಟ್ಟಿ ತನ್ನ ಬಾಬ್ತು ಕೆಎ-04-ಎಮ್ಇ-7980 ನೇ ಕಾರನ್ನು ಪೆರ್ಡೂರು ಕಡೆಯಿಂದ ಸೂರಾಲ್ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಕೊಂಡು ಬಂದು ಪಿರ್ಯಾದಿದಾರರ ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮತ್ತು ಅವರ ಹೆಂಡತಿ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರ ಎಡಕಾಲಿಗೆ, ಬಲಕಾಲಿಗೆ ಬಲ ಭುಜಕ್ಕೆ ಜಖಂ ಹಾಗೂ ತರುಚಿದ ಗಾಯವಾಗಿದ್ದು, ತಲೆಗೆ ರಕ್ತಗಾಯವಾಗಿರುತ್ತದೆ, ಹಾಗೂ ಪಿರ್ಯಾದಿದಾರರ ಹೆಂಡತಿ ಅಪ್ಸಾನ ರವರಿಗೆ ಬಲಕಾಲು  ಮೂಳೆ ಮುರಿತವಾಗಿರುತ್ತದೆ.  ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 109/15 ಕಲಂ : 279, 338  ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: