Saturday, June 06, 2015

Daily Crimes Reported as On 06/06/2015 at 07:00 Hrs



ಅಪಘಾತ ಪ್ರಕರಣ

  • ಕುಂದಾಪುರ: ದಿನಾಂಕ 05/06/2015 ರಂದು ಸಮಯ ಸುಮಾರು  ಬೆಳಿಗ್ಗೆ 11:30 ಗಂಟೆಗೆ ಕುಂದಾಪುರ  ತಾಲೂಕು ವಡೇರಹೋಬಳಿ ಗ್ರಾಮದ ಅರವಿಂದ ಮೋಟಾರ್ಸ್ ಗ್ಯಾರೇಜಿನ ಬಳಿ ರಾ.ಹೆ 66 ರಸ್ತೆಯಲ್ಲಿ,  ಆಪಾದಿತ ಶ್ರೀಕಾಂತ ಶೆಟ್ಟಿ ಎಂಬವರು KA20-N-3800ನೇ ಜೀಪನ್ನು  ಕೊಟೇಶ್ವರ  ಕಡೆಯಿಂದ  ಕುಂದಾಪುರ ಕಡೆಗೆ ಅತೀವೇಗ  ಹಾಗೂ  ಅಜಾಗರೂಕತೆಯಿಂದ  ಚಲಾಯಿಸಿಕೊಂಡು  ಬಂದು  ರಾ.ಹೆ ರಸ್ತೆಯ ಪಶ್ಚಿಮ ಬದಿಯಿಂದ ಪೂರ್ವ ಬದಿಗೆ  ಯಾವುದೇ ಸೂಚನೆ ನೀಡದೇ ಚಲಾಯಿಸಿ ಪಿರ್ಯಾದಿ ಜನಾರ್ಧನ್  ಆಚಾರಿ  ಎಂಬವರು  ಬಗ್ವಾಡಿ  ಕಡೆಯಿಂದ ಕೋಣಿ ಕಡೆಗೆ ಸವಾರಿ  ಮಾಡಿಕೊಂಡು  ಹೋಗುತ್ತಿದ್ದ  KA09-EX-9362ನೇ ಬೈಕಿಗೆ  ಡಿಕ್ಕಿ  ಹೊಡೆದ ಪರಿಣಾಮ  ಪಿರ್ಯಾದಿ ಹಾಗೂ ಬೈಕಿನ ಸಹ ಸವಾರ  ಸಂತೋಷ  ಆಚಾರಿ ಯವರು  ವಾಹನ ಸಮೇತ  ರಸ್ತೆಯಲ್ಲಿ ಬಿದ್ದು ಗಾಯಗೊಂಡು ಕುಂದಾಪುರ ಚಿನ್ಮಯಿ  ಆಸ್ಪತ್ರೆಯಲ್ಲಿ   ಚಿಕಿತ್ಸೆ ಬಗ್ಗೆ  ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 65/15 ಕಲಂ : 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಬೈಂದೂರು: ದಿನಾಂಕ 02-06-2015 ರಂದು ಸಂಜೆ 07:15 ಗಂಟೆಯ ಸಮಯಕ್ಕೆ ಪಿರ್ಯಾದಿ ಮಣಿಕಂಠ ಇವರು ಸುಬ್ರಹ್ಮಣ್ಯ ಎಂಬುವವರು ಸವಾರಿ ಮಾಡುತ್ತಿದ್ದ ಕೆ. 20 ಇಇ8447 ನೇ ಮೋಟಾರ್ಸೈಕಲ್ನಲ್ಲಿ ಸಹಸವಾರರಾಗಿ ಕುಳಿತುಕೊಂಡು ಹೊಸಬಸ್ನಿಲ್ದಾಣದಕಡೆಗೆ ಹೋಗುತ್ತಾ ಬೈಂದೂರಿನ ವಿಶೇಷ ತಹಶೀಲ್ದಾರ್ಕಚೇರಿಯ ಬಳಿ ತಲುಪುತ್ತಿರುವಾಗ  ಹೊಸಬಸ್ನಿಲ್ದಾಣದ ಕಡೆಯಿಂದ ಮಾಸ್ತಿಕಟ್ಟೆ ಕಡೆಗೆ ಕೆ. 20 8334 ನೇ ಟಾಟಾ ಏಸ್ವಾಹನವನ್ನು ಅದರ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಾಂಬಾರು ರಸ್ತೆಯ ತೀರಾ ಬಲಬಾಗಕ್ಕೆ ಚಲಾಯಿಸಿ ಪಿರ್ಯಾಧಿದಾರರು ಸಹಸವಾರರಾಗಿ ಸವಾರಿ ಮಾಡುತ್ತಿದ್ದ ಮೋಟಾರ್ಸೈಕಲ್ಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್ಸೈಕಲ್ಸವಾರರು ಮೋಟಾರ್ಸೈಕಲ್  ಸಮೇತ ರಸ್ತೆಗೆ ಬಿದ್ದು ಮೋಟಾರ್ಸೈಕಲ್ಸವಾರ ಸುಬ್ರಹ್ಮಣ್ಯನಿಗೆ   ಬಲಕೈ ಅಂಗೈಗೆ, ಬಲಕಾಲಿಗೆ, ಎಡಮೊಣಗಂಟಿಗೆ, ಮುಖಕ್ಕೆ ರಕ್ತಗಾಯವಾಗಿದ್ದು ಪಿರ್ಯಾಧಿದಾರರಿಗೆ ಸಣ್ಣಪುಟ್ಟ ಗಾಯವಾಗಿರುತ್ತದೆ. ಗಾಯಗೊಂಡ ಸುಬ್ರಹ್ಮಣ್ಯನನ್ನು ಚಿಕಿತ್ಸೆಯ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 162/15 ಕಲಂ : 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಕಾರ್ಕಳ: ದಿನಾಂಕ 05/06/2015 ರಂದು ಗ್ರಾಮ ಪಂಚಾಯತ್ ಚುನಾವಣಾ ಮತ ಎಣಿಕೆ ಕಾರ್ಯಕ್ರಮದ ಪ್ರಯುಕ್ತ ಮಾನ್ಯ ಉಡುಪಿ ಜಿಲ್ಲಾಧಿಕಾರಿಯವರು ದಿನಾಂಕ 04/06/2015 ರಂದು 24:00 ಗಂಟೆಯಿಂದ ದಿನಾಂಕ 05/06/2015 24:00 ಗಂಟೆಯ ವರೆಗೆ ಮಧ್ಯ ಮಾರಾಟವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದರೂ, ಕಾರ್ಕಳದ ಮಾರ್ಕೆಟ್ ರಸ್ತೆಯಲ್ಲಿರುವ ಅಪ್ಪು ವೈನ್ಸ್ ಕೆಲಸಗಾರ ರಾಜೇಶ್ ಎಂಬಾತನು ತನ್ನ ಸ್ವಂತ ಲಾಭಕ್ಕೋಸ್ಕರ ಸದರಿ ಆದೇಶವನ್ನು ಉಲ್ಲಂಘನೆ ಮಾಡಿ ತನ್ನ ವೈನ್ ಶಾಪಿನಿಂದ 180 ಎಂ.ಎಲ್. ಒರಿಜಿನಲ್ ಚಾಯ್ಸ್‌‌ ಡೀಲಕ್ಸ್ ವಿಸ್ಕಿಯ 48 ಸ್ಯಾಚೆಟ್ಗಳಿರುವ ಒಂದು ರಟ್ಟಿನ ಪೆಟ್ಟಿಗೆಯನ್ನು ಬಾಬು ಹರಿಜನ ಇವರಿಗೆ ಮಾರಾಟ ಮಾಡಲು ನೀಡಿದ್ದಲ್ಲದೇ ಬಾಬು ಹರಿಜನ ಈತನು ಅಕ್ರಮವಾಗಿ ತನ್ನ ಸ್ವಂತ ಲಾಭಕ್ಕೋಸ್ಕರ ಸದರಿ ಮದ್ಯವನ್ನು ತನ್ನ ವಶದಲ್ಲಿ ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವವನನ್ನು ಕಬ್ಬಾಳ್‌‌ರಾಜ್ ಹೆಚ್.ಡಿ. ಪಿ.ಎಸ್.. (ಕಾ.ಸು.) ಕಾರ್ಕಳ ನಗರ ಪೊಲೀಸ್ ಠಾಣೆ ಇವರು  ಖಚಿತ ವರ್ತಮಾನದಂತೆ ದಿನಾಂಕ 05/06/2015 ರಂದು 17:20 ಗಂಟೆಗೆ ಕಾರ್ಕಳ ತಾಲೂಕಿನ ಕಸಬ ಗ್ರಾಮದ ಮಾರ್ಕೆಟ್ ರಸ್ತೆಯಲ್ಲಿರುವ ಗಾಯತ್ರಿ ಕಾಂಪ್ಲೆಕ್ಸ್ ‌‌‌ ಕೋಣೆಗೆ ಸಿಬ್ಬಂದಿಯವರ ಜೊತೆಯಲ್ಲಿ ಧಾಳಿ ನಡೆಸಿ ಆಪಾದಿತ ಬಾಬು ಹರಿಜನ ಈತನ ವಶದಿಂದ ಸುಮಾರು 1,150/- ರೂಪಾಯಿ ಮೌಲ್ಯದ 180 ಎಂ.ಎಲ್. ಒರಿಜಿನಲ್ ಚಾಯ್ಸ್‌‌ ಡೀಲಕ್ಸ್ ವಿಸ್ಕಿಯ 23 ಸ್ಯಾಚೆಟ್‌‌ಗಳಿರುವ ರಟ್ಟಿನ ಬಾಕ್ಸ್ ಒಂದು ಹಾಗೂ ಮದ್ಯ ಮಾರಾಟ ಮಾಡಿ ಸಂಗ್ರಹವಾದ ರೂಪಾಯಿ 200/- ನ್ನು ವಶಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 84/2015 ಕಲಂ 188 .ಪಿ.ಸಿ. ಮತ್ತು 32, 34 36, ಕರ್ನಾಟಕ ಅಬಕಾರಿ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಇತರೇ ಪ್ರಕರಣ

  • ಉಡುಪಿ: ದಿನಾಂಕ: 05-06-2015ರಂದು  ಬೆಳಿಗ್ಗೆ  10:00 ಗಂಟೆಗೆ ಪಿರ್ಯಾದಿ ಜಯಲಕ್ಷ್ಮೀ ಜೋಗಿ ಇವರು ಉಡುಪಿ ನ್ಯಾಯಾಲಯಕ್ಕೆ ಹಾಜರಾಗುವರೇ ನ್ಯಾಯಾಲಯದ ಆವರಣದ ಮುಂಭಾಗ ಬರುತ್ತಿದ್ದಾಗ ಆರೋಪಿ ಪ್ರಭಾಕರ ಕಾಮತ್  ಫಿರ್ಯಾದಿದಾರರ ಬಳಿ ಬಂದು ನಿನ್ನ ಗಂಡನ ಮೇಲೆ ದಾಖಲಿಸಿದ ಪ್ರಕರಣವನ್ನು ಹಿಂದಕ್ಕೆ ಪಡೆಯಬೇಕು. ಇಲ್ಲದಿದ್ದರೆ ನಿನ್ನನ್ನು   ಜೀವ ಸಹಿತ ಬಿಡುವುದಿಲ್ಲ ಎಂದು ಕೊಲೆ ಬೆದರಿಕೆ ಹಾಕಿರುತ್ತಾನೆ. ಸದ್ರಿ ಪ್ರಭಾಕರ ಕಾಮತ್  ಪಿರ್ಯಾದಿದಾರರ  ಗಂಡ ಮಂಜುನಾಥ ಜೋಗಿಯ ಪ್ರೇರಣೆಯಿಂದ ಈ ಕೃತ್ಯ ಎಸಗಿರುತ್ತಾನೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 141/15 ಕಲಂ : 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಮಣಿಪಾಲ: ದಿನಾಂಕ: 05/06/2015 ರಂದು ಸಂಜೆ 6:30 ಗಂಟೆಗೆ 80 ಬಡಗುಬೆಟ್ಟು ಗ್ರಾಮದ ಕುಕ್ಕುದಕಟ್ಟೆ ಎಂಬಲ್ಲಿ ಪಿರ್ಯಾದಿ ವಸಂತ ಪಿ ಶೆಟ್ಟಿ ಇವರು ತಮ್ಮ ಅಂಗಡಿಯಲ್ಲಿರುವಾಗ ಉಪೇಂದ್ರ ನಾಯಕ್ ತಂದೆ: ಬಾಳು ನಾಯಕ್, ರವೀಂದ್ರ ಕಾಮತ್, ಸಂದೀಪ್, ಅನಿಲ್ ಶೆಟ್ಟಿ, ಉಮೇಶ್ ನಾಯಕ್, ಅರುಣ್, ಜಯಪ್ರಕಾಶ್, ರಾಘವೇಂದ್ರ , ರೋಹಿತ್, ಚೇತನ್, ರಾಜೇಶ್ ಶೆಟ್ಟಿ, ಲತಾ ಶೆಟ್ಟಿ ಮತ್ತಿತರ ಸುಮಾರು 50 ಜನರು ಸಮಾನ ಉದ್ದೇಶದಿಂದ ಆಕ್ರಮಕೂಟ ಸೇರಿ ಪಿರ್ಯಾದಿ ಅಂಗಡಿಯಲ್ಲಿರುವಾಗ ಎಲ್ಲರೂ ಅಂಗಡಿ ಮುಂದೆ ಸುತ್ತುವರಿದು ಬೈದು ಪಟಾಕಿ ಎಸೆದು ಪ್ರಾಣ ಭಯಭೀತರನ್ನಾಗಿಸಿರುತ್ತಾರೆ ಅಲ್ಲದೇ ನಿಷೇದಾಜ್ಞೆ ಜ್ಯಾರಿ ಇದ್ದರೂ ಕಾನೂನು ಉಲ್ಲಂಘಿಸಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 104/15 ಕಲಂ 143,147, 341, 504,506,188,ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: