Tuesday, June 30, 2015

Daily Crime Reports As On 30/06/2015 At 17:00 Hrs


ಮನುಷ್ಯ ಕಾಣೆ ಪ್ರಕರಣ

  • ಪ್ರಕಾಶ್‌ ಭಂಡಾರಿ(33)ರವರು ಅವರ ತಾಯಿ ಸುಮತಿ ಭಂಡಾರಿಯವರ ಜೊತೆ ಮನೆ ನಂ.1-32 ಹಿರೇಬೆಟ್ಟು, ಉಡುಪಿ ಇಲ್ಲಿ ವಾಸವಾಗಿದ್ದುಕೊಂಡು ಮಣಿಪಾಲ ಡೈರಿಯಲ್ಲಿ ಲೋಡಿಂಗ್‌ ಕಂಟ್ರಾಕ್ಟರ್‌ ಆಗಿ ಕೆಲಸ ಮಾಡಿಕೊಂಡಿದ್ದರು. ಪ್ರಕಾಶ್‌ ಭಂಡಾರಿಯವರು ದಿನಾಂಕ 26.10.09ರಂದು ಮನೆಯಿಂದ ಹೊರಗೆ ಹೋದವರು ಈತನಕ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಈ ಬಗ್ಗೆ  ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 129/15 ಕಲಂ ಗಂಡಸು ಕಾಣೆಯಂತೆ ಪ್ರಕರಣ  ದಾಖಲಿಸಿಕೊಳ್ಳಲಾಗಿದೆ.

ಜುಗಾರಿ ಪ್ರಕರಣಗಳು

  • ಕುಂದಾಪುರ: ದಿನಾಂಕ 29/06/2015 ರಂದು 17:50 ಗಂಟೆಗೆ  ಖಚಿತ ವರ್ತಮಾನದ ಮೇರೆಗೆ ನಾಸೀರ್‌ ಹುಸೇನ್‌, ಪಿ.ಎಸ್‌.ಐ, ಕುಂದಾಪುರ ಪೊಲೀಸ್‌ ಠಾಣೆ ಇವರು ಸಿಬ್ಬಂದಿಯವರೊಂದಿಗೆ  ತಕ್ಷೀರು ಸ್ಥಳವಾದ ಕುಂದಾಪುರ ತಾಲೂಕು ಕಸಬಾ ಗ್ರಾಮದ ಕೋಡಿ  ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ  ಗೂಡಂಗಡಿಯ ಹಿಂಬದಿಗೆ ದಾಳಿ ನಡೆಸಿ ಹಣವನ್ನೆ ಪಣವಾಗಿರಿಸಿಕೊಂಡು ಅಂದರ್‌ ಬಾಹರ್‌ ಎಂಬ ಜುಗಾರಿ ಆಟ ನಿರತ ಆರೋಪಿತ 1) ಅಶೋಕ ಮೊಗವೀರ (33), ತಂದೆ: ಗೋವಿಂದ ಮೊಗವೀರ, 2) ರಾಮ ಮೊಗವೀರ (43) ತಂದೆ: ಕಾಳ ಮೊಗವೀರ, 3) ಜಯರಾಜ ಪೂಜಾರಿ (37) ತಂದೆ: ದಿ. ಬಾಬು ಪೂಜಾರಿ, 4) ಪದ್ದ ಪೂಜಾರಿ (45) ತಂದೆ: ದಿ. ಕಾಮಾ ಪೂಜಾರಿ, 5) ಉದಯ ಮೊಗವೀರ (38) ತಂದೆ: ಪುತ್ತ ಮೊಗವೀರ, 6) ಸಂತೋಷ ಮೊಗವೀರ (30) ತಂದೆ: ಬಸವ ಮೊಗವೀರ, ಎಲ್ಲರೂ  ವಾಸ: ಕೋಡಿ, ಕುಂದಾಪುರ ತಾಲೂಕು ಇವರುಗಳನ್ನು ದಸ್ತಗಿರಿ ಮಾಡಿ ಆಟಕ್ಕೆ ಉಪಯೋಗಿಸಿದ 44 ಇಸ್ಪೀಟು ಕಾರ್ಡ ಮತ್ತು ನಗದು ರೂ 6,170/- ನ್ನು ಸ್ವಾಧೀನ ಪಡಿಸಿಕೊಂಡು ಈ ಬಗ್ಗೆ ಕುಂದಾಪುರ ಠಾಣಾ ಅಪರಾಧ ಕ್ರಮಾಂಕ 249/2015, ಕಲಂ: 87 ಕರ್ನಾಟಕ ಪೊಲೀಸ್  ಕಾಯ್ದೆ  ಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಬ್ರಹ್ಮಾವರ: ಉಡುಪಿ ತಾಲೂಕು ಹೆಗ್ಗುಂಜೆ ಗ್ರಾಮದ ಶಿರೂರು ಮೂರುಕೈಯ ಶುಭ ಲಕ್ಷೀ ಬಾರ್‌ ಬಳಿಯ ಬಸ್‌ ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟದ ಬಗ್ಗೆ ಸಾರ್ವಜನಿಕರಿಂದ ಅಕ್ರಮವಾಗಿ ಹಣವನ್ನು ಸಂಗ್ರಹಿಸಿ ಮಟ್ಕಾ ಚೀಟಿಯನ್ನು ಬರೆದು ಕೊಡುತ್ತಿದ್ದ ಆರೋಪಿ ಚಂದ್ರ ಮೊಗವೀರ, ವಾಸ: ಅನ್ನ ಪೂರ್ಣೆಶ್ವರಿ, ಜಾನುವಾರು  ಕಟ್ಟೆ, ಬಿಲ್ಲಾಡಿ ಗ್ರಾಮ, ಉಡುಪಿ ಈತನನ್ನು ಶ್ರೀ ಟಿ.ಆರ್‌ ಜೈಶಂಕರ ಪೊಲೀಸ್‌ ನಿರೀಕ್ಷಕರು ಡಿ.ಸಿ.ಐ.ಬಿ ಉಡುಪಿ ರವರು ಖಚಿತ ವರ್ತಮಾನದ ಮೇರೆಗೆ ದಿನಾಂಕ 29-06-2015 ರಂದು 14:45 ಗಂಟೆಗೆ ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿ ದಸ್ತಗಿರಿ ಮಾಡಿ ಆರೋಪಿಯಿಂದ ಮಟ್ಕಾ ಆಟಕ್ಕೆ ಉಪಯೋಗಿಸಿದ ಬಾಲ್‌ ಪೆನ್, ಮಟ್ಕಾ ಚೀಟಿ ಮತ್ತು ಮಟ್ಕಾ ಜುಗಾರಿ ಆಟದ ಬಗ್ಗೆ ಸಂಗ್ರಹಿಸಿದ ನಗದು 1860/-ರೂಪಾಯಿಯನ್ನು ಸ್ವಾಧೀನಪಡಿಸಿಕೊಂಡಿದ್ದು, ಈ ಬಗ್ಗೆ ಬ್ರಹ್ಮಾವರ ಠಾಣಾ ಅಪರಾಧ ಕ್ರಮಾಂಕ 129/2015 ಕಲಂ: 78(1)(a)(vi) ಕರ್ನಾಟಕ ಪೊಲೀಸ್  ಕಾಯ್ದೆ  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

  • ಗಂಗೊಳ್ಳಿ: ಪಿರ್ಯಾದಿ ಸುರೇಶ ಎಂಬವರು ತನ್ನ ಸ್ನೇಹಿತರಾದ  ಸುರೇಶ ಪಡುಕೋಣೆ, ಪ್ರಕಾಶ, ಗಿರೀಶ ಬಡಾಕೆರೆ ರವರೊಂದಿಗೆ  ದಿನಾಂಕ 29-06-2015 ರಂದು ರಾತ್ರಿ 8.00 ಗಂಟೆಗೆ ನಾಡ ಚಂದ್ರಿಕಾ ಬಾರಿನಲ್ಲಿ ಕುಳಿತು ಊಟಮಾಡುತ್ತಿರುವಾಗ ಪಕ್ಕದ ಕ್ಯಾಬಿನ್ ನಲ್ಲಿ ಕುಳಿತ ವಿನುತ, ಕೀರ್ತನ, ಯೋಗೀಶ ಪೂಜಾರಿ ಮತ್ತು ಮಿಥುನರವರು ಕುಳಿತ್ತಿದ್ದು ಅವರುಗಳು ಜೋರಾಗಿ ಗಲಾಟೆ ಮಾಡುತ್ತಿದ್ದರು. ಅದಕ್ಕೆ ಗಿರೀಶ ಅವರ ಬಳಿಗೆ ಹೋಗಿ ಜೋರಾಗಿ ಗಲಾಟೆ ಮಾಡದಂತೆ  ತಿಳಿಸಿದಾಗ ಗಿರೀಶನಿಗೆ  ನೀನು ಯಾಕೆ ನಮ್ಮ ಕ್ಯಾಬಿನಿಗೆ ಬಂದಿದ್ದು ಎಂದು  ಜೋರುಮಾಡಿ ಕಳುಹಿಸಿದ್ದರು. ತದನಂತರ ಪಿರ್ಯಾದಿದಾರರು ಸ್ನೇಹಿತರೊಂದಿಗೆ ಊಟ ಮುಗಿಸಿ ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ರಾತ್ರಿ ಸುಮಾರು 10-30 ಗಂಟೆಗೆ ಚಂದ್ರಿಕಾ ಬಾರಿನ ಪಕ್ಕದ ರಸ್ತೆಯಲ್ಲಿ   ವಿನುತ, ಕೀರ್ತನ, ಯೋಗೀಶ ಪೂಜಾರಿ, ಮಿಥುನ ಮತ್ತು ಇತರರು ಪಿರ್ಯಾದಿದಾರರು ಹಾಗೂ ಅವರ ಸ್ನೇಹಿತರನ್ನು ತಡೆದು ನಿಲ್ಲಿಸಿ ನೀವು ಊಟಮಾಡುತ್ತಿದ್ದಾಗ ಬಂದು ಗಲಾಟೆ ಮಾಡಿದ್ದಿರಲ್ಲಾ ಈಗ ನಿಮ್ಮಿಂದ ಏನುಮಾಡಲಿಕ್ಕೆ  ಆಗುತ್ತದೆ ಎಂದು ವಿನುತನು ಪಿರ್ಯಾದಿದಾರನ್ನು ಕೈ ಯಿಂದ ಹೊಡೆದು ದೂಡಿಹಾಕಿದ್ದು ಪರಿಣಾಮ ಪಿರ್ಯಾದಿದಾರರ ಕಾಲಿಗೆ  ತರಚಿದ ಸಾಮಾನ್ಯ ಸ್ವರೂಪದ ಗಾಯ ಉಂಟಾಗಿರುತ್ತದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 91/ 2015 ಕಲಂ  143.147.341.504.323 ಜೊತೆಗೆ 149 ಐಪಿಸಿಯಂತೆ ಪ್ರಕರಣ  ದಾಖಲಿಸಿಕೊಳ್ಳಲಾಗಿದೆ.

No comments: