Tuesday, June 30, 2015

Daily Crime Reports As On 30/06/2015 At 07:00 Hrsಅಪಘಾತ ಪ್ರಕರಣಗಳು

  • ಉಡುಪಿ: ಪಿರ್ಯಾದುದಾರರಾದ ಅಹಮ್ಮದ್ (68) ತಂದೆ:ಇದಿನ್ ಬ್ಯಾರಿ ವಾಸ:ಜನತಾ ಕಾಲೊನಿ ಕರಂಬಳ್ಳಿ ಕುಂಜಿಬೆಟ್ಟು ಅಂಚೆ ಶಿವಳ್ಳಿ ಗ್ರಾಮ ಉಡುಪಿ ರವರು ದಿನಾಂಕ:29/06/2015 ರಂದು ಬೆಳಿಗ್ಗೆ 11:30 ಗಂಟೆಗೆ ಬೈಲೂರು ಬಳಿ ತಮ್ಮ ಸೈಕಲಿನಲ್ಲಿ ಹೋಗುತ್ತಿರುವಾಗ ಅವರ ಹಿಂದಿನಿಂದ ಕೆಎ 20 ಇಸಿ 4349 ನೇ ಸ್ಕೂಟರ್ ನ್ನು ಸುಜಾತಾ ಎಂಬವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಎಡಬದಿಗೆ ಬಂದು ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಅಹಮ್ಮದ್ ರವರು  ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು ಅವರ ಬಲಬದಿ ಸೊಂಟಕ್ಕೆ ಬಲಭುಜಕ್ಕೆ ಮತ್ತು ಕಾಲಿಗೆ ರಕ್ತಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಉಡುಪಿ ಲಲಿತ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ.ಈ ಬಗ್ಗೆ  ಉಡುಪಿ ಸಂಚಾರ ಠಾಣೆ ಅಪರಾಧ ಕ್ರಮಾಂಕ 71/2015 ಕಲಂ. 279, 337 ಐಪಿಸಿ ರಂತೆ ಪ್ರಕರಣ ದಾಖಲಾಗಿರುತ್ತದೆ.
  •  ಕುಂದಾಪುರ:ದಿನಾಂಕ 29/06/2015 ರಂದು ಸಂಜೆ 5:50 ಗಂಟೆಗೆ ಕುಂದಾಪುರ ತಾಲೂಕು ಕಸಬಾ ಗ್ರಾಮದ ಶಾಸ್ತ್ರಿಸರ್ಕಲ್ ನಲ್ಲಿ  ಪಿರ್ಯಾದಿದಾರರಾದ  ವಿಶ್ವನಾಥ(45) ತಂದೆ :ಮಂಜುನಾಥ  ಶೆಟ್ಟಿಗಾರ್  ವಾಸ:ದುರ್ಗಾಮ್ಮ ಅಂಬಾಗಿಲು ಗುಂಡ್ಮಿ  ಗ್ರಾಮ, ಉಡುಪಿ  ತಾಲೂಕು  ರವರೊಂದಿಗೆ  ಲಕ್ಷ್ಮಣ  ದೇವಾಡಿಗರವರು ಕುಂದಾಪುರ ಕಡೆಯಿಂದ ಉಡುಪಿ  ಕಡೆಗೆ ಹೋಗುವ  KA 20 D 3828 ನೇ ಭಾರತಿ  ಬಸ್‌  ನ ಮುಂದಿನ  ಡೋರ್  ಮುಖೇನ  ಬಸ್ಸಿಗೆ ಹತ್ತುತ್ತಿರುವ ಸಮಯ  ಬಸ್ಸಿನ ಚಾಲಕ ಗೋಪಾಲ ನಾಯಕ್‌  ಎಂಬವರು ಬಸ್‌‌ ನ್ನು ಏಕಾಎಕಿ ಅತೀವೇಗ ಹಾಗೂ ಅಜಾಗರೂಕತೆಯಿಂದ ಮುಂದಕ್ಕೆ ಚಲಾಯಿಸಿದ  ಪರಿಣಾಮ ಲಕ್ಷ್ಮಣ  ದೇವಾಡಿಗರವರು ಬಸ್ಸಿನ ಡೋರ್  ನಿಂದ  ಕೆಳಗೆ  ಕಾಂಕ್ರೀಟ್‌  ರಸ್ತೆಯಲ್ಲಿ  ಬಿದ್ದು  ಅವರ ತಲೆಗೆ, ಬಲ ಕಾಲಿಗೆ  ರಕ್ತಗಾಯ  ಹಾಗೂ ಒಳ ನೋವು  ಆಗಿ  ಗಾಯಗೊಂಡವರನ್ನು ಚಿಕಿತ್ಸೆ  ಬಗ್ಗೆ  ಕುಂದಾಪುರ  ಚಿನ್ಮಯಿ ಆಸ್ಪತ್ರೆಗೆ  ಕರೆದುಕೊಂಡು ಹೋದಾಗ  ಆಸ್ಪತ್ರೆಯ  ವೈದ್ಯರು  ಪರೀಕ್ಷಿಸಿ  ಲಕ್ಷ್ಮಣ ದೇವಾಡಿಗರವರು ಮೃತಪಟ್ಟಿರುವುದಾಗಿ  ತಿಳಿಸಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಠಾಣೆ ಅಪರಾಧ ಕ್ರಮಾಂಕ 76/2015 ಕಲಂ 279, 304 (ಎ)  ಐಪಿಸಿ ರಂತೆ ಪ್ರಕರಣ ದಾಖಲಾಗಿರುತ್ತದೆ.


ಮಟ್ಕಾ  ಜುಗಾರಿ ಪ್ರಕರಣಗಳು

  • ಕೋಟ: ದಿನಾಂಕ:29/06/2015 ರಂದು  ಬಸಪ್ಪ ಎ.ಇ ಪಿ.ಎಸ್.ಐ ಕೋಟ ಠಾಣೆ ರವರು ಸಿಬ್ಬಂದಿಯವರೊಂದಿಗೆ ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ  ತೆಕ್ಕಟ್ಟೆ ಗ್ರಾಮದ ಬಸ್ಸು ನಿಲ್ದಾಣದ ಬಳಿ ದುರ್ಗಾಪರಮೇಶ್ವರಿ ಕಲ್ಯಾಣ ಮಂಟಪದ ಸಮೀಪ ಸಾರ್ವಜನಿಕ ಸ್ಥಳದಲ್ಲಿ  ಮಟ್ಕಾ ಜುಗಾರಿ ಆಡುತ್ತಿರುವುದಾಗಿ ದೊರೆತ ಖಚಿತ ವರ್ತಮಾನದಂತೆ 17:35 ಗಂಟೆಗೆ ಸ್ಥಳಕ್ಕೆ ತೆರಳಿ  ಮಟ್ಕಾ ಜುಗಾರಿ  ಆಟ ನೆಡೆಸುತ್ತಿದುದ್ದನ್ನು ಖಚಿತ ಪಡಿಸಿ ಕೊಂಡು 17:45 ಗಂಟೆಗೆ ದಾಳಿ ನೆಡೆಸಿ ಮಟ್ಕಾ ಜುಗಾರಿ ಆಟ ನೆಡೆಸುತ್ತಿದ್ದ  ಗೋಪಾಲ ದೇವಾಡಿಗ(55).ತಂದೆ:ದಿ.ಶೇಷ ದೇವಾಡಿಗ ವಾಸ: ಹರಿಕಾರಬೆಟ್ಟು,ತೆಕ್ಕಟ್ಟೆ  ಗ್ರಾಮ, ಕುಂದಾಪುರ  ತಾಲೂಕು ಎಂಬವರನ್ನು  ದಸ್ತಗಿರಿ ಮಾಡಿ  ಮಟ್ಕಾ ಜುಗಾರಿ ಆಟಕ್ಕೆ ಬಳಸುತ್ತಿದ್ದ ಮಟ್ಕಾ ಚೀಟಿ -1,ಬಾಲ್ ಪೆನ್ನು -1 ,ನಗದು ರೂಪಾಯಿ 670/- ನ್ನು ಸ್ವಾಧೀನ ಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕೋಟ ಠಾಣೆ ಅಪರಾಧ ಕ್ರಮಾಂಕ 155/2015 ಕಲಂ:78(1),(3) ಕರ್ನಾಟಕ ಪೊಲೀಸ್  ಕಾಯ್ದೆ  ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ:ದಿನಾಂಕ:29/06/2015 ರಂದು 17:00 ಗಂಟೆಗೆ ಬಸಪ್ಪ ಎ.ಇ ಪಿ.ಎಸ್.ಐ ಕೋಟ ಠಾಣೆ ರವರು  ಸಿಬ್ಬಂದಿಯವರೊಂದಿಗೆ ಠಾಣಾ ಸರಹದ್ದಿನ ಹುಣ್ಸೆಮಕ್ಕಿ ಬಳಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಹೊಂಬಾಡಿ ಮಂಡಾಡಿ ಗ್ರಾಮದ ಹುಣ್ಸೆಮಕ್ಕಿ ಮೇಲ್ಪಟೆ  ಬಳಿ ಸೈಕಲ್ ಅಂಗಡಿಯಲ್ಲಿ ಓರ್ವ ವ್ಯಕ್ತಿಯು ಕಾನೂನು ಬಾಹಿರವಾಗಿ  ಸಾರ್ವಜನಿಕ ಸ್ಥಳದಲ್ಲಿ  ಮಟ್ಕಾ ಜುಗಾರಿ ಆಡುತ್ತಿರುವುದಾಗಿ ದೊರೆತ ಖಚಿತ ವರ್ತಮಾನದಂತೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ  ಮಟ್ಕಾ ಜುಗಾರಿ  ಆಟ ನೆಡೆಸುತ್ತಿದುದ್ದನ್ನು ಖಚಿತ ಪಡಿಸಿ ಕೊಂಡು 17:30 ಗಂಟೆಗೆ ದಾಳಿ ನೆಡೆಸಿ ಮಟ್ಕಾ ಜುಗಾರಿ ಆಟ ನೆಡೆಸುತ್ತಿದ್ದ  ಜನಾರ್ಧನ ನಾಯಕ್ (50)ತಂದೆ:ಮಹಾದೇವ,ವಾಸ:ಹುಣ್ಸೆಮಕ್ಕಿ,ಜಪ್ತಿ ಗ್ರಾಮ,ಕುಂದಾಪುರ ತಾಲೂಕು ಎಂಬವರನ್ನು  ದಸ್ತಗಿರಿ ಮಾಡಿ ಮಟ್ಕಾ ಜುಗಾರಿ ಆಟಕ್ಕೆ ಬಳಸುತ್ತಿದ್ದ ಮಟ್ಕಾ ಚೀಟಿ -1,ಬಾಲ್ ಪೆನ್ನು -1 ನಗದು ರೂ-750/- ಹಾಗೂ ನೋಕಿಯಾ ಮೊಬೈಲ್ ಪೋನ್ ಸ್ವಾಧೀನ ಪಡಿಸಿಕೊಂಡಿರುವುದಾಗಿದೆ.ಈ ಬಗ್ಗೆ ಕೋಟ ಠಾಣೆ ಅಪರಾಧ ಕ್ರಮಾಂಕ 156/2015 ಕಲಂ:78(1),(3) ಕರ್ನಾಟಕ ಪೊಲೀಸ್  ಕಾಯ್ದೆ    ಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕೋಟ: ದಿನಾಂಕ:29/06/2015  ರಂದು 19:45 ಬಸಪ್ಪ ಎ.ಇ  ಪಿ.ಎಸ್.ಐ ಕೋಟ ಠಾಣೆ ರವರು  ಸಿಬ್ಬಂದಿಯವರೊಂದಿಗೆ ಠಾಣಾ ಸರಹದ್ದಿನ ಕೋಟ ಮೂರು ಕೈ ಬಳಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಸಾಲಿಗ್ರಾಮ ಡಿವೈನ್ ಪಾರ್ಕ್ ಬಳಿ  ಶ್ರೀ ಮಾರುತಿ ಕ್ಯಾಂಡಿ ಮೆಂಟ್ಸ್ ಅಂಗಡಿ ಬಳಿ ಓರ್ವ ವ್ಯಕ್ತಿಯು ಕಾನೂನು ಬಾಹಿರವಾಗಿ  ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಡುತ್ತಿರುವುದಾಗಿ ದೊರೆತ ಖಚಿತ ವರ್ತಮಾನದಂತೆ  ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ  ಮಟ್ಕಾ ಜುಗಾರಿ ಆಟ ನೆಡೆಸುತ್ತಿದುದ್ದನ್ನು ಖಚಿತ ಪಡಿಸಿಕೊಂಡು 20:15 ಗಂಟೆಗೆ ದಾಳಿ ನೆಡೆಸಿ ಮಟ್ಕಾ ಜುಗಾರಿ ಆಟ ನೆಡೆಸುತ್ತಿದ್ದ  ನಾರಾಯಣ ಪೂಜಾರಿ(38),ತಂದೆ:ಬಚ್ಚ ಪೂಜಾರಿ ,ವಾಸ:ಸಾಲಿಗ್ರಾಮ ಕಾರ್ಕಡ ಗ್ರಾಮ,ಉಡುಪಿ ತಾಲೂಕು ಎಂಬವರನ್ನು  ದಸ್ತಗಿರಿ ಮಾಡಿ ಮಟ್ಕಾ ಜುಗಾರಿ ಆಟಕ್ಕೆ ಬಳಸುತ್ತಿದ್ದ ಮಟ್ಕಾ ಚೀಟಿ -1,ಬಾಲ್ ಪೆನ್ನು -1 ನಗದು ರೂ 1310/-ನ್ನು ಸ್ವಾಧೀನ ಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕೋಟ ಠಾಣೆ ಅಪರಾಧ ಕ್ರಮಾಂಕ 157/2015 ಕಲಂ:78(1),(3) ಕರ್ನಾಟಕ ಪೊಲೀಸ್  ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.       .

No comments: