Monday, June 29, 2015

Daily Crime Reports As On 29/06/2015 At 19:30 Hrs



ಕಳವು ಪ್ರಕರಣಗಳು

  • ಉಡುಪಿ: ಫಿರ್ಯಾದಿದಾರರಾದ ಶ್ರೀನಿವಾಸ ಭಟ್ (38) ತಂದೆ ಭಟ್ ಪಾಂಡುರಂಗ, ದೊಡ್ಡಣಗುಡ್ಡೆ ಇವರು ಉಡುಪಿ ಕಲ್ಸಂಕ ಎಂಬಲ್ಲಿ ಶ್ರೇಯಸ್ ಮೊಬೈಲ್ಸ್ ಎಂಬ ಮೊಬೈಲ್ ಫೋನ್ ಅಂಗಡಿ ಇಟ್ಟುಕೊಂಡಿದ್ದು ದಿನಾಂಕ 28-06-2015 ರಂದು ಮಧ್ಯಾಹ್ನ 13-30 ಗಂಟೆಗೆ ಅಂಗಡಿಗೆ ಬೀಗ ಹಾಕಿ ಹೋಗಿದ್ದು, ದಿನಾಂಕ 30-06-2015 ರಂದು ಬೆಳಿಗ್ಗೆ 09-00 ಗಂಟೆಗೆ ಬಂದಾಗ ಅಂಗಡಿಯು ಯಾರೋ ಕಳ್ಳರು ಅಂಗಡಿಯ ಬೀಗ ಮುರಿದು ಒಳಪ್ರವೇಶಿಸಿ 31 ಮೊಬೈಲ್ ಫೋನ್, 8 ಚಾರ್ಜರ್,  14 ಬ್ಯಾಟರಿ, 9 ಮೆಮೊರಿ ಕಾರ್ಡ್, 4 ಪೆನ್ ಡ್ರೈವ್ ಇವುಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ಸೊತ್ತುಗಳ ಒಟ್ಟು ಮೌಲ್ಯ ರೂ 2,32,700/- ಆಗಿರುತ್ತದೆ ಎಂಬುದಾಗಿ ಶ್ರೀನಿವಾಸ ಭಟ್ ರವರು ನೀಡಿದ ದೂರಿನಂತೆ  ಉಡುಪಿ ನಗರ  ಪೊಲೀಸ್‌ ಠಾಣಾ ಅಪರಾದ ಕ್ರಮಾಂಕ 156/2015 ಕಲಂ 454,457, 380 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
  • ಉಡುಪಿ: ಫಿರ್ಯಾದಿದಾರರಾದ ಸಂಪತ್ ಶೆಟ್ಟಿ, ಪ್ರಾಯ 33 ವರ್ಷ ತಂದೆ ರಾಜರಾಮ ಶೆಟ್ಟಿ , ವಾಸ ರಜತಾದ್ರಿ ಮನೆ , ರಟ್ಟಾಡಿ ಪೋಸ್ಟ್ , ಮತ್ತು ಗ್ರಾಮ ಕುಂದಾಪುರ ತಾಲೂಕು ಇವರು   ಶಿವಳ್ಳಿ ಗ್ರಾಮದ ಗುಂಡಿಬೈಲಿನಲ್ಲಿರುವ  ಶ್ರೀ ಕೃಷ್ಣಾನುಗೃಹ ಕಾಂಪ್ಲೆಕ್ಸ್ ನಲ್ಲಿ  ಜಲದುರ್ಗಿ ಸೇಲ್ಸ್ ಎಂಬ ಎಲೆಕ್ಟ್ರಿಕಲ್ಸ್ ವಸ್ತುಗಳ ಮಾರಾಟ ಮಳಿಗೆ ಹೊಂದಿದ್ದು ದಿನಾಂಕ 27-06-2015 ರಂದು ಸಂಜೆ 17-30 ಗಂಟೆಗೆ ಅಂಗಡಿಯಲ್ಲಿ ಕೆಲಸ ಮಾಡುವ ರೇಣುಕಾ ಎಂಬವರು  ಅಂಗಡಿಗೆ ಬೀಗ ಹಾಕಿಹೋಗಿದ್ದು , ದಿನಾಂಕ 28-06-2015 ರಂದು ಆದಿತ್ಯವಾರ ಅಂಗಡಿಗೆ ರಜೆ ಇದ್ದು, ದಿನಾಂಕ 29-06-2015 ರಂದು ಬೆಳಿಗ್ಗೆ  09-45 ಗಂಟೆಗೆ ರೇಣುಕಾ ಫೋನ್ ಮಾಡಿ ಅಂಗಡಿಯಲ್ಲಿ ಕಳ್ಳತನವಾಗಿದ್ದಾಗಿ  ತಿಳಿಸಿದ್ದು ಫಿರ್ಯಾದಿದಾರರು ಬಂದು ನೋಡಿದಾಗ ಅಂಗಡಿಗೆ ಹಾಕಿದ 2 ಬೀಗಗಳು  ಇದ್ದಿರುವುದಿಲ್ಲ. ಒಳಗೆ ಹೋಗಿ  ನೋಡಿದಾಗ  ಯಾರೋ ಕಳ್ಳರು ಅಂಗಡಿಗೆ ಹಾಕಿದ್ದ ಬೀಗ ಮುರಿದು  ರೂ 1,85,590/ ರೂ ಮೌಲ್ಯದ ಫ್ಯಾನ್ , ಮಿಕ್ಸಿ , ಬಲ್ಬ್  ಇಲೆಕ್ಟ್ರಾನಿಕ್  ವಸ್ತುಗಳನ್ನು  ಕಳವು ಮಾಡಿಕೊಂಡು ಹೋಗಿದ್ದಾಗಿರುತ್ತದೆ.ಎಂಬುದಾಗಿ ಸಂಪತ್ ಶೆಟ್ಟಿ ರವರು ನೀಡಿದ ದೂರಿನಂತೆ  ಉಡುಪಿ ನಗರ  ಪೊಲೀಸ್‌ ಠಾಣಾ ಅಪರಾದ ಕ್ರಮಾಂಕ  157/2015 ಕಲಂ 454,457, 380 ಐಪಿಸಿಯಂತೆ  ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅಪಘಾತ ಪ್ರಕರಣಗಳು

  • ಮಣಿಪಾಲ: ದಿನಾಂಕ 29/06/15 ರಂದು ಪಿರ್ಯಾದಿದಾರಾದ ಸುಧಾಕರ ನಾಯಕ್ (35)ತಂದೆ: ದಿ|| ಕೇಶವ ನಾಯಕ್ ವಾಸ; ಆಲಮಬಿ ಮನೆ, 80 ಬಡಗುಬೆಟ್ಟು, ಪರ್ಕಳ ರವರು ತನ್ನ ಮಿತ್ರ ನಿತೀಶ್ ರವರ ಮೋಟಾರ್ ಸೈಕಲ್ ನಂ ಕೆಎ 20 ಇಡಿ 8184 ನೇದರಲ್ಲಿ ಸಹ ಸವಾರನಾಗಿ ಕುಳಿತುಕೊಂಡು ಪೆರಂಪಳ್ಳಿ  ರಸ್ತೆ ಕಡೆಗೆ  ಹೋಗುತ್ತಿರುವಾಗ ಸಮಯ 10:15 ಗಂಟೆಗೆ ಪೆರಂಪಳ್ಳಿ ಭಾರತ್ ವಿಕಾಸ್ ಟ್ರಸ್ಟ್  ಬಳಿ ತಲುಪಿದಾಗ  ಎದುರಿನಿಂದ ಅಂಬಾಗಿಲು ಕಡೆಯಿಂದ ಮೋಟಾರ್ ಸೈಕಲ್ ಕೆಎ 19 ಕ್ಯೂ 3547 ನೇ ದನ್ನು ಅದರ ಸವಾರನು ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿ ತಿರಾ ಬಲಬದಿಗೆ ಬಂದು ಪಿರ್ಯಾಧಿದಾರಿದ್ದ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್  ಸೈಕಲ್ ಸಮೇತ ರಸ್ತೆಗೆ ಬಿದ್ದು ಪಿರ್ಯಾಧಿದಾರರ 2 ಕೈಗಳು ಜಖಂ ಆಗಿರುತ್ತದೆ.  ಪಿರ್ಯಾಧಿದಾರರನ್ನು ಚಿಕಿತ್ಸೆಯ ಬಗ್ಗೆ ಕೆಎಮ್.ಸಿ ಆಸ್ಪತ್ರೆಗೆ ದಾಖಲು ಮಾಡಿದ್ದಾಗಿದೆ ಎಂಬುದಾಗಿ ಸುಧಾಕರ ನಾಯಕ್ ರವರು ನೀಡಿದ ದೂರಿನಂತೆ  ಮಣಿಪಾಲ ಪೊಲೀಸ್‌ ಠಾಣಾ ಅಪರಾದ ಕ್ರಮಾಂಕ  128/15  ಕಲಂ : 279,337  ಐಪಿಸಿಯಂತೆ  ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
  • ಕಾರ್ಕಳ: ದಿನಾಂಕ 28.06.2015 ರಂದು ಸಂಜೆ ಸುಮಾರು 06:45 ಗಂಟೆಗೆ ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಪಡಾಯಿಗುಡ್ಡೆ ಎಂಬಲ್ಲಿ ಡಾಂಬರು ರಸ್ತೆಯ ಎಡಬದಿಯಲ್ಲಿ ಸಾಣೂರು ಕಡೆಯಿಂದ ಮುದ್ದಣ್ಣ ನಗರದ ಕಡೆಗೆ ನಡೆದುಕೊಂಡು ತೆರಳುತ್ತಿದ್ದ ಪಿರ್ಯಾದಿ ಸುದೀರ್, (24) , ತಂದೆ: ತಿಮ್ಮೋಜಿ ರಾವ್, ವಾಸ: ಮುದ್ದಣ್ಣ ನಗರ, ಸಾಣೂರು ಗ್ರಾಮ,ಕಾರ್ಕಳ ತಾಲೂಕು.  ಎಂಬವರಿಗೆ ಸಾಣೂರು ಕಡೆಯಿಂದ  ಕೆ. 20 ಈಎ 4693 ನೇ ಮೋಟಾರ್ ಸೈಕಲ್ ಸವಾರ  ಸುರೇಂದ್ರ ಎಂಬುವರು  ತನ್ನ ಮೋಟಾರ್ ಸೈಕಲನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಎಡಬದಿಗೆ  ಬಂದು ಪಾದಾಚಾರಿ ಸುದೀರ್ ಇವರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಬಲಕಾಲು ಮೂಳೆ ಮುರಿತದ ಗಾಯವುಂಟಾಗಿ ಚಿಕಿತ್ಸೆ ಬಗ್ಗೆ ಕಾರ್ಕಳ ಸ್ಪಂದನಾ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ ಎಂಬುದಾಗಿ ಸುದೀರ್‌ ರವರು ನೀಡಿದ ದೂರಿನಂತೆ  ಕಾರ್ಕಳ ನಗರ ಪೊಲೀಸ್‌ ಠಾಣಾ ಅಪರಾದ ಕ್ರಮಾಂಕ  92 /2015 ಕಲಂ 279, 338 ಐಪಿಸಿಯಂತೆ  ಪ್ರಕರಣ ದಾಖಲಿಸಿಕೊಳ್ಳಲಾಗಿದೆ

No comments: