Monday, June 29, 2015

Daily Crime Reports As On 29/06/2015 At 17:00 Hrs

ಅಸ್ವಾಭಾವಿಕ ಮರಣ ಪ್ರಕರಣಗಳು
  • ಬೈಂದೂರು: ಪಿರ್ಯಾದಿದಾರರಾದ  ಶಾರದಾ @ ಸಾಧು (37) ಗಂಡ: ಮಂಜುನಾಥ ಪೂಜಾರಿ ಊದೂರು ಯಡ್ತರೆ ಗ್ರಾಮ, ಕುಂದಾಪುರ ತಾಲೂಕು ಇವರು ದಿನಾಂಕ 28/06/2015 ರಂದು, 01:30 ಗಂಟೆಯ ಸಮಯಕ್ಕೆ ಶಿರೂರಿನಲ್ಲಿರುವ ನವೋದಯ ಸಂಘದ ಮೀಟಿಂಗ್‌ಗೆ ಹೋಗುವಾಗ ಗಂಡನಾದ  ಮಂಜುನಾಥ ಪೂಜಾರಿ (48) ಎಂಬುವವರು ಮನೆಯಲ್ಲಿ ಇದ್ದರು, ಶಾರದಾ @ ಸಾಧುರವರು ಸಂಜೆ 04:30 ಗಂಟೆಗೆ ವಾಪಾಸು ಬಂದು ನೋಡಿದಾಗ ಮಂಜುನಾಥ ಪೂಜಾರಿಯವರು ಮನೆಯಲ್ಲಿ ಇಲ್ಲದೇ ಇದ್ದು ಅಕ್ಕಪಕ್ಕದಲ್ಲಿ ಹುಡುಕಾಡುತ್ತಿರುವಾಗ ದಿನಾಂಕ 29-06-2015 ರಂದು ಬೆಳಿಗ್ಗೆ 10:00 ಗಂಟೆಗೆ ಮಂಜುನಾಥ ಪೂಜಾರಿಯವರ ಮೃತ ಶರೀರವು ಅಯ್ಯಪ್ಪ ಆಶ್ರಮದ ಬಾವಿಯಲ್ಲಿ ಪತ್ತೆಯಾಗಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಯು.ಡಿ.ಆರ್‌ ನಂ 24/15 ಕಲಂ: 174  ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಹೆಬ್ರಿ: ಪಿರ್ಯಾದಿದಾರರಾದ ರಾಜೇಂದ್ರ (36), ತಂದೆ: ಶೀನ, ವಾಸ:- ಮಣ್ಣೂರು ತಿಮ್ಮನ ಮನೆ, ಕೋಡಿ ಗ್ರಾಮ, ಕುಂದಾಪುರ ತಾಲೂಕು ಇವರ ಬಾವ ನವೀನ್ (26) ರವರು ದಿನಾಂಕ 28/06/2015 ರಂದು ಸ್ನೇಹಿತರಾದ ಪ್ರವೀಣ್‌, ಕೃಷ್ಣ ಮತ್ತು ಗಿರೀಶ್ ಎಂಬುವವರೊಂದಿಗೆ ತಿರುಗಾಡುವ ಸಲುವಾಗಿ ಜೋಂಬ್ಲು ನದಿಯ ಬಳಿ ಬಂದಿದ್ದು, ಸಮಯ ಸುಮಾರು ಮಧ್ಯಾಹ್ನ 2:00 ಗಂಟೆಗೆ ರಾಜೇಂದ್ರರವರ ಬಾವ ನವೀನ್‌ ರವರು ಸ್ನಾನ ಮಾಡುವ ಸಲುವಾಗಿ ನೀರಿಗೆ ಇಳಿಯುವಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು  ಈಜು ಬಾರದೇ ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾರೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣಾ ಯು.ಡಿ.ಆರ್‌ ನಂ 22/15 ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

No comments: