Thursday, June 25, 2015

Daily Crime Reports As On 25/06/2015 At 19:30 Hrs


ಮಟ್ಕಾ ಜುಗಾರಿ ಪ್ರಕರಣ
  • ಕಾರ್ಕಳ ನಗರ:ದಿನಾಂಕ:25/06/2015 ರಂದು 11:15 ಗಂಟೆಗೆ ಕಾರ್ಕಳ ಕಸಬ ಗ್ರಾಮದ ಮಾರ್ಕೆಟ್ ರಸ್ತೆಯಲ್ಲಿರುವ ಪುರಸಭಾ ಮಾರ್ಕೆಟ್ ಕಟ್ಟಡದ ಬಳಿಯಲ್ಲಿ ತನ್ನ ಸ್ವಂತ ಲಾಭಕ್ಕಾಗಿ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸಿ ಅಂಕಿಗಳನ್ನು ಬರೆದು ಮಟ್ಕಾ ಜುಗಾರಿ ಆಟ ಆಡುತ್ತಿದ್ದ ಪಾದಿತ ವಿಷ್ಣು ದೇವಾಡಿಗ (54), ತಂದೆ:ದಿವಂಗತ ಸೇಸು ದೇವಾಡಿಗ, ವಾಸ:ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ, ಪೆರ್ವಾಜೆ, ಕಸಬ ಗ್ರಾಮ, ಕಾರ್ಕಳ ತಾಲೂಕು ಎಂಬಾತನನ್ನು ಪಿರ್ಯಾದಿದಾರರಾದ ಇಮ್ರಾನ್, ಪಿ.ಎಸ್ಐ, ಕಾರ್ಕಳ ನಗರ ಪೊಲೀಸ್ ಠಾಣೆರವರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿ ಮಟ್ಕಾ ಜುಗಾರಿ ಆಟಕ್ಕಾಗಿ ಉಪಯೋಗಿಸಿದ ಮಟ್ಕಾ ಅಂಕಿಗಳನ್ನು ಬರೆದಿರುವ ಚೀಟಿ – 1, ನಗದು 2,640/- ರೂಪಾಯಿ, ಬಾಲ್ ಪೆನ್-1 ಹಾಗೂ ಏರ್‌ಟೆಲ್‌ ಸಿಮ್‌ ಅಳವಡಿಸಿರುವ ನೀಲಿ ಬಣ್ಣದ ನೋಕಿಯಾ ಮೊಬೈಲ್‌ ಫೋನ್‌-1 ಅನ್ನು ಸ್ವಾಧೀನಪಡಿಸಿ, ಪಾದಿತನನ್ನು ದಸ್ತಗಿರಿ ಮಾಡಿದ್ದಾಗಿದೆ. ಆಪಾದಿತನು ಮಟ್ಕಾ ಜುಗಾರಿ ಆಟದಿಂದ ಸಂಗ್ರಹಿಸಿದ ಹಣವನ್ನು ಉಡುಪಿಯ ಪ್ರಮೋದ್ ಎಂಬಾತನಿಗೆ ನೀಡುತ್ತಿದ್ದುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಠಾಣಾ ಅಪರಾಧ ಕ್ರಮಾಂಕ 90/2015 ಕಲಂ 78 (i) (iii) ಕರ್ನಾಟಕಪೊಲೀಸ್ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: