Friday, June 26, 2015

Daily Crime Reports As On 26/06/2015 At 07:00 Hrsಅಪಘಾತ ಪ್ರಕರಣ

  • ಪಡುಬಿದ್ರಿ: ದಿನಾಂಕ  25.06.2015 ರಂದು 17:45 ಗಂಟೆಗೆ ಎರ್ಮಾಳ್ ತೆಂಕ ಗ್ರಾಮದ ಎರ್ಮಾಳ್ ನಾರಂತಾಯ ಗುಡಿಯ ಹತ್ತಿರ  ಗಣೇಶ್ ಪ್ರಭು ರವರ ಮನೆಯ ಬಳಿ ರಾಷ್ಟ್ರೀಯ ಹೆದ್ದಾರಿ  66 ರಲ್ಲಿ ಕೆಎ 20 ಡಿ 0388 ನೇ ಬಸ್ಸನ್ನು ಅದರ ಚಾಲಕ ಹರೀಶ್ ರವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ರಸ್ತೆಯ ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಚಲಿಸಿ ಡಿವೈಡರ್ ನ  ಮೇಲೆ ಬಸ್ಸು ಅಡ್ಡ ಬಿದ್ದು ಬಸ್ಸಿನ ಚಾಲಕ ಹಾಗೂ ಬಸ್ಸಿನ ಕೆಲವು ಪ್ರಯಾಣಿಕರಿಗೆ ಸಣ್ಣ ಪುಟ್ಟ ರಕ್ತ ಗಾಯವಾಗಿದ್ದು, ಅಲ್ಲಿ ಸೇರಿದ ಜನರು ಚಿಕಿತ್ಸೆಯ ಬಗ್ಗೆ ಪಡುಬಿದ್ರಿ ಕಡೆಗೆ ಕರೆದುಕೊಂಡು ಹೋಗಿರುತ್ತಾರೆ.ಈ  ಬಗ್ಗೆ ಪಡುಬಿದ್ರಿ  ಪೋಲಿಸ್ ಠಾಣೆ ಅಪರಾಧ ಕ್ರಮಾಂಕ 88/15 ಕಲಂ. 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ

ಹಲ್ಲೆ ಪ್ರಕರಣ .

  • ಮಣಿಪಾಲ: ರಮೇಶ ಕೋಟ್ಯಾನ್‌ ತಂದೆ:ರಾಮ, ವಾಸ:ವಿಷ್ಣುಮೂರ್ತಿನಗರ, ಕೆಳಾರ್ಕಳಬೆಟ್ಟು ಗ್ರಾಮ & ಅಂಚೆ, ಉಡುಪಿ ತಾಲೂಕು ರವರು ದಿನಾಂಕ 23.06.15ರಂದು ಮಧ್ಯಾಹ್ನ 12:30ಗಂಟೆಗೆ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ದಲಿತರ ಕುಂದು ಕೊರತೆ ಸಭೆ ಮುಗಿಸಿ ಹೊರಗೆ ಬರುವಾಗ ಶೇಖರ ಹಾವಂಜೆ ಮತ್ತು ಸುರೇಂದ್ರ ಹಾವಂಜೆ  ಹಾಗೂ ಇನ್ನೂ ನಾಲ್ಕು ಜನ ರಮೇಶ ಕೋಟ್ಯಾನ್‌ ರವರನ್ನು ಉದ್ದೇಶಿಸಿ ನೀನು ಪರಿಶಿಷ್ಟ ಜಾತಿ ಅಲ್ಲ ನಿನಗೆ ಜಿಲ್ಲಾಧಿಕಾರಿ ಸಭೆಯಲ್ಲಿ ಮಾತಾನಾಡಲು ಯಾವ ಹಕ್ಕು ಇದೆ. ನಿನಗೆ ಒಂದು ಸಲ ಕಂಪ್ಲೆಂಟ್ ಕೊಟ್ಟಿದೆ ಎಂದು ಅಸಭ್ಯ ರೀತಿಯಲ್ಲಿ ಬೈದು  ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ರಮೇಶ್ ಕೋಟ್ಯಾನ್ ರವರ ದೂರಿನಂತೆ ಮಣಿಪಾಲ ಠಾಣೆ ಅಪರಾಧ ಕ್ರಮಾಂಕ 124/15 ಕಲಂ 323,504,506 ಜೊತೆಗೆ 34 ಐಪಿಸಿ ರಂತೆ ಪ್ರಕ ರಣ ದಾಖಲಾಗಿರುತ್ತ ದೆ .

ಇತರೇ ಪ್ರಕರಣ

  • ಮಣಿಪಾಲ: ದಿನಾಂಕ 25/6/2015ರಂದು  ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ  ಎಸ್.ವಿ  ಗಿರೀಶ್  ರವರು ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ  15-30 ಗಂಟೆಗೆ ಸಿಕ್ಕಿದ ಖಚಿತ ಮಾಹಿತಿಯಂತೆ ಮಣಿಪಾಲ ರಾಯಲ್ ಅಂಬೆಸಿ ಹೊಸ ಕಟ್ಟಡದ ಕೆಳಗಡೆ ಇರುವ  ಒಂದು ವಾಸದ ಮನೆಯಲ್ಲಿ ಅನೈತಿಕ ವ್ಯವಹಾರ ನಡೆಯುತ್ತಿರುವುದಾಗಿ ಸಿಕ್ಕಿದ ಮಾಹಿತಿಯಂತೆ ಠಾಣಾ ಸಿಬ್ಬಂದಿಯವರೊಂದಿಗೆ 15-55 ಗಂಟೆ ಸುಮಾರಿಗೆ ಸ್ಥಳಕ್ಕೆ ತಲುಪಿ ವಾಸದ ಮನೆಯನ್ನು ಪತ್ತೆ ಮಾಡಿ, ಶೋಧನಾ ವಾರಂಟನ್ನು ಪಡೆದುಕೊಂಡು ಪಂಚಾಯತುದಾರರನ್ನು ಬರ ಮಾಡಿಸಿಕೊಂಡು ಸದ್ರಿ ಮನೆಗೆ 16-45 ಗಂಟೆಗೆ ದಾಳಿ ನಡೆಸಿ ಅನೈತಿಕ ವ್ಯವಹಾರಕ್ಕೆ ಕರೆದುಕೊಂಡು ಬಂದಿದ್ದ  ಮಹಿಳೆಯರನ್ನು ವಶಕ್ಕೆ ಪಡೆದು, ಈ ಮಹಿಳೆಯರನ್ನು ಅನೈತಿಕ ವ್ಯವಹಾರಕ್ಕೆ ಬಳಸಿಕೊಂಡ ಅಪಾದಿತ 1.ಪ್ರದೀಪ್ ಭಂಡಾರಿ ಪ್ರಾಯ 35 ವರ್ಷ  ತಂದೆ: ವಿಠಲ ಭಂಡಾರಿ ವಾಸ: ಕಂಡಂಗೋಡು, ಕರ್ಜೆ,ಪೇತ್ರಿ ಹೊಸೂರು ಗ್ರಾಮ  ಉಡುಪಿ ತಾಲೂಕು, 2. ಅಬ್ದುಲ್ ಸಲಾಮ್ ಪ್ರಾಯ 38 ವರ್ಷ ತಂದೆ ಅಬುಬಕ್ಕರ್ ವಾಸ: ಕಟ್ಟಿಂಗೇರಿ ಹೌಸ್ ಪಣಿಯೂರು ಉಚ್ಚಿಲ ಗ್ರಾಮ, 3.ಶಶಿಕಲ @ ಪ್ರೀತಿ ಪ್ರಾಯ 23 ವರ್ಷ  ಗಂಡ: ಮಹೇಶ ಪೂಜಾರಿ ವಾಸ: ಜೆಡ್ಡು ಬಸ್ಸ್ ಸ್ಟ್ಯಾಂಡ್ ಬಳಿ ಮನೆ ಪೇತ್ರಿ, 4. ವೆಂಕಟೇಶ ಕಾಮತ್ ಪ್ರಾಯ 39 ವರ್ಷ ತಂದೆ: ಶಂಕರ ಕಾಮತ್ ವಾಸ: ಲಕ್ಷ್ಮೀನಗರ 6ನೇ ಅಡ್ಡರಸ್ತೆ ಕೊಡವೂರು ಉಡುಪಿ ತಾಲೂಕು, 5. ಹೇಮಚಂದ್ರ ಎಲ್, ಕರ್ಕೇರ ಪ್ರಾಯ 40 ವರ್ಷ ತಂದೆ ಲೋಕಯ್ಯ ಕರ್ಕೇರ ವಾಸ: ನರ್ಸಿ ಬಾಯಿ ಹೌಸ್ ಉಚ್ಚಿಲ ಪಡು ಉಚ್ಚಿಲ ಗ್ರಾಮ ಉಡುಪಿ ಇವರನ್ನು ದಸ್ತಗಿರಿ ಮಾಡಿ  ಅನೈತಿಕ ವ್ಯವಹಾರಕ್ಕಾಗಿ ಪಡೆದುಕೊಂಡಿರುವ ನಗದು ಒಟ್ಟು  88,380/- ಹಾಗೂ ಮೊಬೈಲ್ ಫೋನುಗಳು -9  ಮತ್ತು ಅನೈತಿಕ ವ್ಯವಹಾರಕ್ಕೆ  ಮಹಿಳೆಯರನ್ನು ಸಾಗಾಟ ಮಾಡುತ್ತಿದ್ದೆನ್ನಲಾದ ಕಾರು ಕೆ.ಎ.20. ಪಿ. 7857 ಹಾಗೂ ಮೋಟಾರು ಸೈಕಲು ಕೆ.ಎ.20 .ಆರ್. 6213 ನ್ನು  ವಶಪಡಿಸಿಕೊಂಡಿದ್ದು, ಈ ಬಗ್ಗೆ  ಮಣಿಪಾಲ ಠಾಣೆ ಅಪರಾಧ ಕ್ರಮಾಂಕ 123/15 ಕಲಂ  370(3) ಐಪಿಸಿ ಮತ್ತು ಕಲಂ 3,4,5A, 5C, 6 ITP ಕಾಯಿದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: