Thursday, June 25, 2015

Daily Crime Reports As On 25/06/2015 At 17:00 Hrs


ಅಸ್ವಾಭಾವಿಕ ಮರಣ ಪ್ರಕರಣ

  • ಬ್ರಹ್ಮಾವರ:  ದಿನಾಂಕ: 08/06/2015 ರಂದು ರಾತ್ರಿ ಸುಮಾರು 10:00 ಗಂಟೆಯ ಸಮಯಕ್ಕೆ ಉಡುಪಿ ತಾಲೂಕು, ಚಾಂತಾರು ಗ್ರಾಮದ, ಬ್ರಹ್ಮಾವರದಲ್ಲಿರುವ ಓಂ ಡೋರ್ಸ್ & ಬೋರ್ಡ್ಸ್, ಪ್ರಭಾತ್ ಸಾಮಿಲ್‌ ಕಂಪೌಂಡ್‌  ನಲ್ಲಿ ವಾಸ ಇರುವ ರಾಹುಲ್ ಎಂಬವರ ಹೆಂಡತಿ ಮಿಲ್ಲಾ, ಪ್ರಾಯ 18 ವರ್ಷ ಎಂಬವರು ಸೀಮೆಎಣ್ಣೆ ದೀಪ ತೆಗೆದುಕೊಂಡು ಹೋಗುವಾಗ ಆಕಸ್ಮಾತ್ ದೀಪ ಆಕೆ ತೊಟ್ಟಿದ್ದ ಬಟ್ಟೆಗೆ ತಾಗಿ ಸುಟ್ಟ ಗಾಯಗೊಂಡವಳನ್ನು ಮಹೇಶ್ ಆಸ್ಪತ್ರೆ ಬ್ರಹ್ಮಾವರ ಮತ್ತು ಕೆಎಮ್‌ಸಿ ಆಸ್ಪತ್ರೆ ಮಣಿಪಾಲಕ್ಕೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್‌ಲಾಕ್ ಅಸ್ಪತ್ರೆಗೆ ದಾಖಲಿಸಿದ್ದು. ವೆನ್‌ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 25/06/2015 ರಂದು 00:05 ಗಂಟೆಗೆ ರಾತ್ರಿ ವೇಳೆ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಠಾಣಾ ಅಸ್ವಾಭಾವಿಕ ಮರಣ ಪ್ರಕರಣ ಕ್ರಮಾಂಕ 32/15 ಕಲಂ:174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: