Thursday, June 25, 2015

Daily Crime Reports As On 25/06/2015 At 07:00 Hrs

ಕಳವು ಪ್ರಕರಣ
  • ಮಣಿಪಾಲ: ದಿನಾಂಕ:19-06-2015 ರಿಂದ ದಿ.24-06-2015ರ ಬೆಳಿಗ್ಗೆ 07-30 ಗಂಟೆಯ ನಡುವೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಲಕ್ಷ್ಮೀಂದ್ರ ನಗರ 5ನೇ ತಿರುವಿನಲ್ಲಿರುವ ಕಿಶೋರ್‌ ಬಗಲೋಡಿ(54), ತಂದೆ: ಬಿ.ಆರ್‌ ಬಗಲೋಡಿ ರವರ  ಮನೆಯ ಕಿಟಕಿಯ ಸರಳುಗಳನ್ನು ಯಾರೋ ಕಳ್ಳರು ಮುರಿದು ಒಳನುಗ್ಗಿ ಮನೆಯಲ್ಲಿದ್ದ 4 ಗ್ರಾಂ ತೂಕದ ಕಿವಿ ರಿಂಗ್‌ ಮತ್ತು ಬೆಳ್ಳಿಯ ಲೋಟ, ಮೆಡಲ್‌ ಹಾಗೂ ತಟ್ಟೆ ಇತ್ಯಾದಿ ಸುಮಾರು 400 ಗ್ರಾಮದ ತೂಕದ ಒಡವೆಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಸ್ವತ್ತಿನ ಒಟ್ಟು ಅಂದಾಜು ಮೌಲ್ಯ 22,000/- ರೂ ಆಗಿರುತದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 120/2015, ಕಲಂ: 454, 457, 380 ಐಪಿಸಿ ಯಂತೆ ಪ್ರಕರಣ  ದಾಖಲಾಗಿರುತ್ತದೆ.
ಅಪಘಾತ ಪ್ರಕರಣ
  • ಮಣಿಪಾಲ: ದಿನಾಂಕ 24.06.15ರಂದು ಪಿರ್ಯಾದಿ ಪ್ರಭಾಕರ ಆಚಾರ್ಯ, ತಂದೆ: ಕೃಷ್ಣ ಯ್ಯ ಆಚಾರ್ಯ, ವಾಸ: ಗುಂಡಿಬೈಲು, ಕುಂಜಿಬೆಟ್ಟು ಅಂಚೆ, ಉಡುಪಿ ರವರ  ಮಕ್ಕಳಾದ ಶಿವರಾಜ್‌ ಮತ್ತು ರಾಘವೇಂದ್ರರವರು ಕೆಎ 20 ಬಿ 4125ನೇ ಒಮಿನಿ ಕಾರಿನಲ್ಲಿ ಮೂಡುಬೆಳ್ಳೆಯಿಂದ ರಾಘವೇಂದ್ರನು ಕಾರನ್ನು ಚಲಾಯಿಸುತ್ತಾ ಬರುತ್ತಾ ಪಡುಅಲೆವೂರು ಶಾಲೆ ಬಳಿ ಬರುತ್ತಿರುವಾಗ ಸಂಜೆ ಸುಮಾರು 4:00ಗಂಟೆಗೆ ಟಿಪ್ಪರ್‌ ಲಾರಿ ಕೆಎ 21 ಎ 2352 ಚಾಲಕನು ತಾನು ಚಲಾಯಿಸಿಕೊಂಡು ಬಂದ ಟಿಪ್ಪರ್‌ನ್ನು ನಿರ್ಲಕ್ಷ್ಯ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪ್ರಭಾಕರ ಆಚಾರ್ಯ ಮಗ ರಾಘವೇಂದ್ರ ಚಲಾಯಿಸಿಕೊಂಡು ಬರುತ್ತಿದ್ದ ಒಮಿನಿಗೆ ಢಿಕ್ಕಿ ಹೊಡೆದನು ಪರಿಣಾಮ ಶಿವರಾಜನಿಗೆ ತಲೆಗೆ, ಕಾಲಿಗೆ ಕೈಗೆ ರಕ್ತಗಾಯವಾಗಿದ್ದು, ರಾಘವೇಂದ್ರನಿಗೆ ತಲೆ ಮತ್ತು  ಹಣೆಗೆ, ಕಾಲಿಗೆ ಕೈಗೆ ಮೂಳೆ  ಮುರಿತದ ಗಾಯವಾಗಿರುತ್ತದೆ. ಪ್ರಭಾಕರ ಆಚಾರ್ಯ ಮಕ್ಕಳಾದ ಶಿವರಾಜ ಹಾಗೂ ರಾಘವೇಂದ್ರರವರನ್ನು ಅಲ್ಲಿ ಸೇರಿದವರು ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆಎಮ್‌ಸಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ,  ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 121/15 ಕಲಂ 279, 338 ಐಪಿಸಿ & ಕಲಂ 134(ಎ)(ಬಿ) ಐಎಮ್‌ವಿ ಕಾಯಿದೆಯಂತೆ ಪ್ರಕರಣ  ದಾಖಲಾಗಿರುತ್ತದೆ.
  • ಕುಂದಾಪುರ:  ದಿನಾಂಕ 24/06/2015 ರಂದು ಸಮಯ ಸುಮಾರು ಮಧ್ಯಾಹ್ನ  2:55 ಗಂಟೆಗೆ ಕುಂದಾಪುರ ತಾಲೂಕು  ಬೀಜಾಡಿ  ಗ್ರಾಮದ ಬೀಜಾಡಿ ವೈ ಜಂಕ್ಷನ್  ಬಳಿ  ಪಶ್ಚಿಮ ಬದಿಯ ರಾಷ್ತ್ರೀಯ  ಹೆದ್ದಾರಿಯ  66 ರಸ್ತೆಯಲ್ಲಿ ಆಪಾದಿತ ಜೋಸೆಫ್  ಡಿಸೋಜಾ ಎಂಬವರು MH-01-BS-0067ನೇ ಬಸ್‌‌  ನ್ನು ಉಡುಪಿ ಕಡೆಯಿಂದ ಕುಂದಾಪುರ  ಕಡೆಗೆ ಅತೀವೇಗ  ಹಾಗೂ  ಅಜಾಗರುಕತೆಯಿಂದ ಚಾಲನೆ  ಮಾಡಿಕೊಂಡು ಬಂದು,  ಪಿರ್ಯಾದಿ ಕರುಣಾಕರ  (40)   ತಂದೆ ವೆಂಕಟ ಹೆಗ್ಗರ್ ಬೈಲು, ವಕ್ವಾಡಿ ಗ್ರಾಮ  ಕುಂದಾಪುರ  ತಾಲೂಕು ರವರು    ಪೂರ್ವ ಬದಿಯ  ರಾಷ್ತ್ರೀಯ  ಹೆದ್ದಾರಿಯ ರಸ್ತೆಯಿಂದ ಪಶ್ಚಿಮ ಬದಿಯ ರಾಷ್ತ್ರೀಯ  ಹೆದ್ದಾರಿಯಗೆ ತಿರುಗಿಸಿಕೊಂಡು  ಕುಂದಾಪುರ  ಕಡೆಗೆ  ಸವಾರಿ ಮಾಡಿಕೊಂಡು ಹೋಗುತ್ತಿದ್ದ  KA 20 EG 8361ನೇ ಬೈಕನ   ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಕರುಣಾಕರ ಇವರು   ಗಾಯಗೊಂಡು ಕೊಟೇಶ್ವರ ಎನ್‌.ಆರ್ ಆಚಾರ್ಯ  ಆಸ್ಪತ್ರೆಯಲ್ಲಿ  ಚಿಕಿತ್ಸೆ  ಬಗ್ಗೆ ದಾಖಲಾಗಿರುತ್ತಾರೆ,  ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 71/2015  ಕಲಂ 279 , 337 ಐಪಿಸಿಯಂತೆ ಪ್ರಕರಣ  ದಾಖಲಾಗಿರುತ್ತದೆ.
ಹಲ್ಲೆ ಪ್ರಕರಣ
  • ಮಣಿಪಾಲ: ಪಿರ್ಯಾದಿ ಶೇಖರ ಹಾವಂಜೆ(41), ತಂದೆ: ದಿ. ದಾಸು, ವಾಸ: 5 ಸೆಂಟ್ಸ್ ಕಾಲೋನಿ, ಹಾವಂಜೆ ಗ್ರಾಮ, ಉಡುಪಿ     ದಿನಾಂಕ 23.06.15 ರಂದು ಜಿಲ್ಲಾಧಿಕಾರಿಯವರ ಕಚೇರಿಯ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಆಯೋಜಿಸಿದ್ದ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಆಯೋಗದ ಸಭೆಯಲ್ಲಿ ಭಾಗವಹಿಸಿ ವಾಪಸ್ಸು ವಿಶ್ವನಾಥ ಮತ್ತು ಸುರೇಂದ್ರರವರೊಂದಿಗೆ ಬರುತ್ತಿರವಾಗ ಮಧ್ಯಾಹ್ನ ಸುಮಾರು 12:30 ಗಂಟೆಯಿಂದ 12:45ಗಂಟೆಯ ಅವಧಿಯಲ್ಲಿ ಮುಖ್ಯ ಗೇಟಿನ ವಾಹನ ಪಾರ್ಕಿಂಗ್ ಬಳಿ ವಾಹನ ತರಲು ಹೋಗುತ್ತಿದ್ದಾಗ ಅಪಾದಿತನಾದ ರಮೇಶ ಕೋಟ್ಯಾನ್‌ ಎಂಬವನು ಶೇಖರ ಹಾವಂಜೆ ರವರ ಹಿಂದೆ ಬಂದು ಒಮ್ಮೆಲೆ ಕುತ್ತಿಗೆ ಹಿಡಿದು ‘ಅವಾಚ್ಯ ಸಬ್ಧಗಳಿಂದ ಬೈದು ಕೈಯಿಂದ ತಲೆಗೆ ಕುತ್ತಿಗೆಗೆ ಹೊಡೆದನು. ಅಷ್ಟರಲ್ಲಿ ಸುರೇಶ ಪೆರಂಪಳ್ಳಿ ಶೇಖರ ಹಾವಂಜೆ ರವರ  ಬಳಿ ಬಂದು ಎರಡು ಕೈಗಳನ್ನು ಹಿಡಿದಿದ್ದು, ಅದೇ ವೇಳೆ ಕೃಷ್ಣ ಬಜೆ ರವರ  ಕುತ್ತಿಗೆಯನ್ನು ಬಗ್ಗಿಸಿ ಬೆನ್ನಿಗೆ ಕೈಯಿಂದ ಗುದ್ದಿದನು. ಅವರೊಂದಿಗೆ ಇದ್ದ ಇತರ ಮೂರು ಜನರು ಕೂಡ ಹೊಡೆದಿರುತ್ತಾರೆ. ಅವತ್ತು ಕರಾವಳಿ ಬೈಪಾಸ್‌ನಲ್ಲಿ ಬಿಟ್ಟದ್ದು ನಮ್ಮ ತಪ್ಪು ಇವತ್ತು ಮಾತ್ರ ಬಿಡುವುದಿಲ್ಲ ಎಂದು ಹೇಳಿದರು. ಆಗ ಸುರೇಂದ್ರ ಬಂದು ಬಿಡಿಸಿದಾಗ ಅವನಿಗೂ ಕೈಯಿಂದ ಹೊಡೆದಿರುತ್ತಾರೆ. ಬಳಿಕ ಶೇಖರ ಹಾವಂಜೆ ಉಡುಪಿ ಸರಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆಯ ಬಗ್ಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 122/15 ಕಲಂ 143,147, 341,504,506, 323 ಜೊತೆಗೆ 149 ಐಪಿಸಿಯಂತೆ  ಪ್ರಕರಣ  ದಾಖಲಾಗಿರುತ್ತದೆ.

No comments: