Wednesday, June 24, 2015

Daily Crime Reports As on 24/06/2015 at 19:30 Hrs



ಅಪಘಾತ ಪ್ರಕರಣಗಳು  

  • ಹಿರಿಯಡ್ಕ: ದಿನಾಂಕ 24/06/2015 ರಂದು ಮಧ್ಯಾಹ್ನ ಸುಮಾರು 13:30 ಗಂಟೆಗೆ ಪಿಯಾದಿದಾರರಾದ ಕೆ.ಎ. ಉಮೇಶ್‌ ಶೇಟ್‌ (44) ತಂದೆ: ದಿ. ಪ್ರಭಾಕರ ಶೇಟ್‌ ವಾಸ: ವಿಮಲೇಶ್ವರಿ ನಿಲಯ, ತಿಲಕ್‌ ರೆಸಿಡೆನ್ಸಿ, ಕೊಪ್ಪ  ಶಿವಮೊಗ್ಗ ಜಿಲ್ಲೆರವರು ನಂಬ್ರ ಕೆಎ 20 ಎಮ್‌ 9588 ನೇ ಇನ್ನೋವ ಕಾರಿನಲ್ಲಿ ಉಡುಪಿಯಿಂದ ವಾಪಸ್ಸು ಕೊಪ್ಪ ಕಡೆಗೆ ತನ್ನ ಅಣ್ಣ ಕೃಷ್ಣಾನಂದ ಶೇಟ್‌ ರವರೊಂದಿಗೆ ಪ್ರಯಾಣಿಸುತ್ತಿದ್ದಾಗ ಪೆರ್ಡೂರು ಗ್ರಾಮದ ರಾಮ ಮಂದಿರದ ಬಳಿ  ತಲುಪುವಾಗ ಅವರ ಎದುರುಗಡೆಯಿಂದ ಅಂದರೆ ಹೆಬ್ರಿ ಕಡೆಯಿಂದ ಉಡುಪಿ ಕಡೆಗೆ ಬರುತ್ತಿದ್ದ ಕೆಎ 20 ಬಿ 9616 ನೇ ಟಾಟಾ 909 ನೇದರ ಚಾಲಕ ರಾಘವೇಂದ್ರ ರವರು ಅತೀ ವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿಕೊಂಡು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನಗಳು ಜಖಂಗೊಂಡಿದ್ದು, ಯಾರಿಗೂ ಪೆಟ್ಟಾಗಿರುವುದಿಲ್ಲ. ಈ ಬಗ್ಗೆ  ಕೆ.ಎ. ಉಮೇಶ್‌ ಶೇಟ್‌ ರವರು ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 68/2015 ಕಲಂ 279 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

  • ಗಂಗೊಳ್ಳಿ: ದಿನಾಂಕ 23/06/2015 ರಂದು ರವಿ ಎಂಬವರು ತನ್ನ ಸ್ನೇಹಿತ ಮಂಜುನಾಥ ಎಂಬವರನ್ನು ತನ್ನ ಕೆಎ-20-ಡಬ್ಲ್ಯು- 8107 ನೇ ಮೋಟಾರು ಸೈಕಲಿನಲ್ಲಿ  ಸಹ ಸವಾರನನ್ನಾಗಿ ಕುಳ್ಳಿರಿಸಿಕೊಂಡು ತ್ರಾಸಿಯಿಂದ ತಲ್ಲೂರಿಗೆ  ರಾಹೆ-66 ರಲ್ಲಿ ಬರುತ್ತಿರುವಾಗ ಸಂಜೆ 03-30 ಗಂಟೆಗೆ ಹೊಸಾಡು ಗ್ರಾಮದ ಹೊಸಾಡು ಎಂಬಲ್ಲಿ ಮೋಟಾರು ಸೈಕಲನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಹೊಂಡ ತಪ್ಪಿಸುವ ಭರದಲ್ಲಿ ಮೋಟಾರು ಸೈಕಲ್  ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಪರಿಣಾಮ ಮೋಟಾರು ಸೈಕಲ್ ಸಹ ಸವಾರ ಮಂಜುನಾಥ ರವರಿಗೆ  ಕೈಗೆ, ಕಾಲಿಗೆ  ತಲೆಗೆ ರಕ್ತಗಾಯ ಉಂಟಾಗಿ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು, ಮೋಟಾರು ಸೈಕಲ್ ಸವಾರ  ರವಿ ರವರಿಗೆ ಮೈ ಕೈ ಗೆ ತರಚಿದ ಗಾಯ ಉಂಟಾಗಿರುತ್ತದೆ ಎಂಬುದಾಗಿ ಪ್ರಕಾಶ (29)ತಂದೆ: ಬಸವ ವಾಸ ಕೋಟೆ ಬಾಗಿಲು, ತಲ್ಲೂರು ಅಂಚೆ ಮತ್ತು ಗ್ರಾಮ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ.ರವರು ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 89/2015 ಕಲಂ 279, 337 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಕಳವು ಪ್ರಕರಣ

  • ಕೋಟಾ: ದಿನಾಂಕ 23/06/2015 ರ ರಾತ್ರಿ ಯಾರೋ ಕಳ್ಳರು ಕುಂದಾಪುರ ತಾಲೂಕು ತೆಕ್ಕಟ್ಟೆ ಗ್ರಾಮದ ಕೆದೂರು ಕ್ರಾಸ್‌ನಲ್ಲಿರುವ ಶ್ರೀ ಮಹಾದೇವಿ ಜನರಲ್ ಸ್ಟೋರ್ಸ್‌ ಅಂಗಡಿಯ ಮಾಡಿನ ಹಂಚನ್ನು ತೆಗೆದು ಒಳ ಪ್ರವೇಶಿಸಿ  ಅಂಗಡಿಯ ಒಳಗೆ ಇಟ್ಟಿರುವ ರೂಪಾಯಿ 15,000/- ನಗದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಪ್ರವೀಣ ಕುಮಾರ್ ಶೆಟ್ಟಿ (38) ಬಿನ್ ನಾಗಯ್ಯ ಶೆಟ್ಟಿ, ಶ್ರೀ ಮೂಕಾಂಬಿಕಾ ನಿಲಯ, ಜಪ್ತಿರವರು ನೀಡಿದ ದೂರಿನಂತೆ ಕೋಟಾ ಠಾಣೆಯಲ್ಲಿ ಅಪರಾಧ ಕ್ರಮಾಂಕ 149/2015 ಕಲಂ 457,380 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: