Wednesday, June 24, 2015

Daily Crime Reports As On 24/06/2015 AT 17:00 Hrs

ಅಪಘಾತ ಪ್ರಕರಣ
  • ಉಡುಪಿ:ಪಿರ್ಯಾದಿದಾರರಾದ ಸೊಮಪ್ಪ ಪೂಜಾರಿ (68) ತಂದೆ:ದಿವಂಗತ ತಮ್ಮಯ್ಯ ಪೂಜಾರಿ, ಕಂಬ್ಲಕಟ್ಟೆ ಮನೆ ಕೊಡವೂರು, ಉಡುಪಿರವರು ದಿನಾಂಕ:16/06/2015 ರಂದು ರಾತ್ರಿ ಕೆಲಸ ಮುಗಿಸಿ ಆದಿ ಉಡುಪಿ ಜಂಕ್ಷನ್ ಕಡೆಯಿಂದ ಕೊಡವೂರು ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಸುಮಾರು 10:45 ಗಂಟೆಗೆ ಆದಿ ಉಡುಪಿ ಎ.ಪಿ.ಎಂ.ಸಿ ಬಳಿ ತಲುಪುವಷ್ಟರಲ್ಲಿ ಕೆಎ 20 ವಿ 0073 ನೇ ಮೋಟಾರ್ ಸೈಕಲ್ ಸವಾರ ಮೋಹನ ಎಂಬವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸೊಮಪ್ಪ ಪೂಜಾರಿ ಇವರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದಿದ್ದು ತಲೆಯ ಹಿಂಬಾಗ ಮತ್ತು ಬಲರಟ್ಟೆಗೆ ಹಾಗೂ ಬಲಕಾಲು ಜಖಂ ಆಗಿದ್ದು, ಮೋಟಾರ್ ಸೈಕಲ್ ಸವಾರನು ವಾಹನ ನಿಲ್ಲಿಸದೇ ಪರಾರಿಯಾಗಿರುತ್ತಾರೆ, ಸೊಮಪ್ಪ ಪೂಜಾರಿರವರ ಮಗ ವಿಶ್ವನಾಥನ ಸಹಾಯದಿಂದ ಸೊಮಪ್ಪ ಪೂಜಾರಿರವರು ಉಡುಪಿ ಹೈಟೆಕ್ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದು ಮನೆಗೆ ಹೋಗಿದ್ದು, ನಂತರ ಡಿಕ್ಕಿ ಹೊಡೆದು ವಾಹನ ನಿಲ್ಲಿಸದೇ ಹೋದ ಮೋಹನನ ಸಹೋದರ ಮಣಿಕಂಠರವರು ಆಸ್ಪತ್ರೆಯ ವೆಚ್ಚವನ್ನು ಭರಿಸುವುದಾಗಿ ಒಪ್ಪಿಕೊಂಡ ಮೇರೆಗೆ ದೂರು ದಾಖಲಿಸದೇ ಇದ್ದು, ದಿನಾಂಕ:19/06/2015 ರಂದು ತಲೆ ಮತ್ತು ಕಾಲಿನ ನೋವು ಉಲ್ಬಣಿಸಿದ್ದು ಚಿಕಿತ್ಸೆ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ದಾಖಲಾಗಿ, ಮೋಟಾರ್ ಸೈಕಲ್ ಸವಾರ ಮೋಹನನನ್ನು ಸಂಪರ್ಕಸಿದಾಗ, ಅವನು ಯಾವುದೇ ಆಸ್ಪತ್ರೆ ವೆಚ್ಚವನ್ನು ಭರಿಸಲು ನಿರಾಕರಿಸಿರುತ್ತಾನೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 70/2015/279, 337 ಐಪಿಸಿ 134 (ಎ & ಬಿ) ಐಎಂವಿ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ವಂಚನೆ ಪ್ರಕರಣ
  • ಶಿರ್ವಾ:ಪಿರ್ಯಾದಿದಾರರಾದ ನಿರ್ಮಲ ಶೆಟ್ಟಿ ಗಂಡ:ಸಂತೊಷ ಶೆಟ್ಟಿ, ವಾಸ:ಬಮ್ಹಗಿರಿ, ನಿಟ್ಟೆ, ಕಾರ್ಕಳರವರು ಮತ್ತು ಆರೋಪಿತ ಸಂತೋಷ ಶೆಟ್ಟಿ ಇವರುಗಳು ಗಂಡ-ಹೆಂಡತಿಯಾಗಿದ್ದು, ಕಳೆದ 5-6 ವರ್ಷಗಳಿಂದ ಇವರೊಳಗೆ ಭಿನ್ನಾಭಿಪ್ರಾಯ ಉಂಟಾಗಿ ಬೇರೆ ಬೇರೆಯಾಗಿ ಜೀವನ ನಡೆಸುತ್ತಿದ್ದು, ಇವರಿಬ್ಬರ ಹೆಸರಿನಲ್ಲಿ ಪೆರ್ನಾಲ್ ಕಾರ್ಪೊರೇಷನ್ ಬ್ಯಾಂಕ್‌ನಲ್ಲಿ ಎರಡು ಜಂಟಿ ಖಾತೆಯಿದ್ದು (ಫಿಕ್ಸೆಡ್ ಡೆಪಾಸಿಟ್) ಇದನ್ನು ಆರೋಪಿತ ಸಂತೋಷ ಶೆಟ್ಟಿಯು ನಿರ್ಮಲ ಶೆಟ್ಟಿರವರಿಗೆ ಮೋಸ ಮಾಡುವ ಉದ್ದೇಶದಿಂದ, ಫಿಕ್ಸೆಡ್ ಬಾಂಡ್‌ಗೆ 2005 ನೇ ಸಾಲಿನಲ್ಲಿ ಬಾಂಡ್‌ನ ವಾಯಿದೆ ಮುಗಿದ ಬಳಿಕ ಆರೋಪಿತನು ಪಿರ್ಯಾದಿದಾರರ ಸಹಿಯನ್ನು ಪೋರ್ಜರಿ ಮಾಡಿ, ಎರಡು ಫಿಕ್ಸಿಡ್ ಡೆಪಾಸಿಟ್‌ನಲ್ಲಿದ್ದ  ಮತ್ತು ಎಸ್.ಬಿ  ಖಾತೆಯಲ್ಲಿದ್ದ ಒಟ್ಟು 1,25,000/-ರೂಪಾಯಿ ಹಣವನ್ನು ಸ್ವಂತಕ್ಕೆ ಉಪಯೋಗ ಮಾಡಿಕೊಂಡಿರುತ್ತಾನೆ.ಈ ಬಗ್ಗೆ ಶಿರ್ವಾ ಠಾಣಾ ಅಪರಾಧ ಕ್ರಮಾಂಕ 52/2015  ಕಲಂ:471,468,465,420 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕಳವು ಪ್ರಕರಣ
  • ಮಣಿಪಾಲ:ದಿನಾಂಕ: 24-06-2015 ರಂದು 13:05 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ  ವಿನ್ನಿಶಿಯಾ ದಕಾರ್, ನಂಬ್ರ: MAHE0011351, ಮಣಿಪಾಲ ಯುನಿವರ್ಸಿಟಿಯ ಸ್ಕೂಲ್‌ ಆಫ್‌ ಆಲೈಡ್‌ ಹೆಲ್ತ್‌ ಸೈನ್ಸ್‌ ನ ರೂಮ್‌ ನಂಬ್ರ 38 ನೇದರಲ್ಲಿ ತನ್ನ ಲ್ಯಾಪ್‌‌ಟಾಪ್ ಹಾಗೂ ಮೊಬೈಲ್‌ ಪೋನನ್ನು ಇರಿಸಿ ಕೈತೊಳೆಯಲು ಹೋಗಿ ವಾಪಾಸು ಬಂದು ನೋಡುವಾಗ ಯಾರೋ ಕಳ್ಳರು ಲ್ಯಾಪ್‌‌ಟಾಪ್ ಹಾಗೂ ಮೊಬೈಲ್‌ ಪೋನನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ,  ಕಳವಾದ ಸ್ವತ್ತಿನ ಅಂದಾಜು ಮೌಲ್ಯ 42,000/- ರೂಪಾಯಿ ಆಗಬಹದು.ಈ ಬಗ್ಗೆ ಮಣಿಪಾಲ ಠಾಣಾ ಅಪರಾಧ ಕ್ರಮಾಂಕ 119/2015 ಕಲಂ:380 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: