Sunday, June 21, 2015

Daily Crime Reports As on 21/06/2015 at 19:30 Hrs

ಅಪಘಾತ ಪ್ರಕರಣ
  • ಹೆಬ್ರಿ: ದಿನಾಂಕ 20-06-2015 ರಂದು ಪಿರ್ಯಾದಿದಾರರಾದ ಕೆ.ಎ.19.ಡಿ.679 ನೇ ಶ್ರೀ ನವದುರ್ಗ ಬಸ್ಸಿನ ನಿರ್ವಾಹಕರಾದ ಎನ್‌. ವಸಂತ  (41)  ತಂದೆ: ಜತ್ತಪ್ಪ ಗೌಡ ವಾಸ: ನಲಿಯಾರು ಮನೆ, ಮುರುಲ್ಯ ಅಂಚೆ ಮತ್ತು ಗ್ರಾಮ, ಸುಳ್ಯ ತಾಲೂಕು ರವರು ಮಂಗಳೂರಿನಿಂದ ಉಡುಪಿ ಮುಖೇನ ಶಿವಮೊಗ್ಗಕ್ಕೆ ಹೋಗುತ್ತಿರುವಾಗ ಸಮಯ ಸುಮಾರು ಸಂಜೆ 6:50 ಗಂಟೆಗೆ ಹೆಬ್ರಿ ಗ್ರಾಮದ, ಅಡಾಲ್‌ ಬೆಟ್ಟು ಎಂಬಲ್ಲಿಗೆ ತಲುಪುವಾಗ ಸೋಮೇಶ್ವರ ಕಡೆಯಿಂದ ಹೆಬ್ರಿ ಕಡೆಗೆ ಕೆ.ಎ.20.ಸಿ.4647 ನೇ ಈಚರ್‌ ವಾಹನವನ್ನು ಅದರ ಚಾಲಕ ಶ್ರೀಧರ್ ಎಂಬುವವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಬಲ ಬದಿಗೆ ಬಂದು ಪಿರ್ಯಾದಿದಾರರು ನಿರ್ವಾಹಕರಾಗಿದ್ದ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಸದ್ರಿ ಬಸ್ಸಿನ ಚಾಲಕ ಅರುಣ್‌ ಕುಮಾರ್‌ ಎಂಬುವವರು ಗಾಯಗೊಂಡು ಮಣಿಪಾಲ್‌ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ ಎಂಬುದಾಗಿ ಎನ್‌. ವಸಂತ  ರವರು ನೀಡಿದ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 69/2015 ಕಲಂ 279, 337 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

No comments: