Sunday, June 21, 2015

Daily Crime Reports as On 21/06/2015 at 17:00 Hrs


ಅಪಘಾತ ಪ್ರಕರಣಗಳು
  • ಕಾಪು:ದಿನಾಂಕ:20/06/2015 ರಂದು ಪಿರ್ಯಾದಿದಾರರಾದ ಮೆಹರೂಫ್ (23) ತಂದೆ:ಅಬ್ದುಲ್ ರೆಹಮಾನ್ ವಾಸ:ಬದ್ರಿಯಾ ನಗರ ಹೌಸ್, ಕುಂಬ್ಳೆ ಕಾಸರಗೋಡುರವರು ತನ್ನ ಕಾರು ನಂಬ್ರ ಕೆಎಲ್ 14 ಎನ್ 5743 ನೇದರಲ್ಲಿ ಉಡುಪಿಯಿಂದ ಮಂಗಳೂರು ಕಡೆಗೆ ಹೋಗುತ್ತಾ ಸಂಜೆ ಸುಮಾರು 6:30 ಗಂಟೆಗೆ ಕಾಪು ಪಡುಗ್ರಾಮದ ರಾಜೀವ ಭವನದ ಎದುರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ತಲುಪುವಾಗ ಆರೋಪಿ ಕೆ.ಎ 04 ಸಿ 1656 ನೇ ಲಾರಿ ಚಾಲಕನು ಲಾರಿಯನ್ನು ಅತೀವೇಗ ಹಾಗೂ ಅಜಾಗರೂಕತೆಯಂದ ಚಲಾಯಿಸಿಕೊಂಡು ಬಂದು ಒಮ್ಮೇಲೆ ಬಲಬದಿಗೆ ತಿರುಗಿಸಿದ ಪರಿಣಾಮ ಮೆಹರೂಫ್‌ರವರ ಕಾರಿಗೆ ಡಿಕ್ಕಿ ಹೊಡೆದು, ಲಾರಿಯನ್ನು ನಿಲ್ಲಿಸದೇ ಪರಾರಿಯಾಗಿರುತ್ತಾನೆ. ಈ ಅಪಘಾತದ ಪರಿಣಾಮ ಮೆಹರೂಫ್‌ರವರ ಕಾರು ಜಖಂಗೊಂಡಿದ್ದಾಗಿದೆ.ಈ ಬಗ್ಗೆ ಕಾಪು ಠಾಣಾ ಅಪರಾಧ ಕ್ರಮಾಂಕ 126/2015 ಕಲಂ 279 ಐ.ಪಿ.ಸಿ ಮತ್ತು ಕಲಂ 134 (ಎ)(ಬಿ) ಐ.ಎಮ್.ವಿ ಆಕ್ಟ್‌ನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಉಡುಪಿ ಸಂಚಾರ:ಪಿರ್ಯಾದಿದಾರರಾದ ಅಶೋಕ್ ಕುಮಾರ (35) ತಂದೆ:ರಘುರಾಮ್ ವಾಸ:ಶ್ರೀಸಿದ್ದಿ, ವಿಶಾಲ ನಗರ ಗೋಪಾಲಪುರ, ಸಂತೆಕಟ್ಟೆ, ಉಡುಪಿರವರು ದಿನಾಂಕ:20/06/2015 ರಂದು ಬೆಳಿಗ್ಗೆ 07:30 ಗಂಟೆಗೆ ಆಶೀರ್ವಾದ ನಿಲ್ದಾಣದ  ಬಳಿ ನಿಂತುಕೊಂಡಿರುವಾಗ ಸಂತೆಕಟ್ಟೆ ಕಡೆಯಿಂದ ಆಶೀರ್ವಾದ ನಿಲ್ದಾಣದ ಕಡೆಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಬರುತ್ತಿದ್ದ  ವಿಮಲ ಎಂಬವರಿಗೆ ಕೆಎ 20 ಕ್ಯೂ 1032 ನೆ ಮೋಟಾರ್ ಸೈಕಲ್ ಸವಾರ ರಿಚರ್ಡ್ ಡಿಸೋಜಾರವರು ಮೋಟಾರ್‌ ಸೈಕಲನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲಾಯಿಸಿಕೊಂಡು ಬಂದು, ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ವಿಮಲರವರು ರಸ್ತೆಗೆ ಬಿದ್ದು ಗಾಯಗೊಂಡಿದ್ದು ಅವರನ್ನು ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ.ಈ ಬಗ್ಗೆ ಉಡುಪಿ ಸಂಚಾರ ಠಾಣಾ ಅಪರಾಧ ಕ್ರಮಾಂಕ 67/2015 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: