Monday, June 22, 2015

Daily Crime Reports As On 22/06/2015 At 07:00 Hrs


ಅಪಘಾತ ಪ್ರಕರಣ

  • ಕೋಟಾ: ಪಿರ್ಯಾದಿ ಮಹೇಶ(19),ತಂದೆ:ಜಯರಾಮ,ವಾಸ:ಕುದ್ರೆಕಟ್ಟೆ, ಶಿರಿಯಾರ  ಗ್ರಾಮ, ಉಡುಪಿ ತಾಲೂಕು ಇವರು  ದಿನಾಂಕ:21/06/2015 ರಂದು ಬೆಳಿಗ್ಗೆ 11:30 ಗಂಟೆಯ ಸಮಯಕ್ಕೆ ಉಡುಪಿ ತಾಲೂಕು ಶಿರಿಯಾರ ಗ್ರಾಮದ ಕಳ್ಳಾಡಿ ಬಸ್ ನಿಲ್ದಾಣದ ಬಳಿ ನಿಂತು ಕೊಂಡಿರುವಾಗ ಸಾಯಿಬ್ರಕಟ್ಟೆ ಕಡೆಯಿಂದ ಅಕ್ಷಯ ಎಂಬುವರು ಆತನ  ಕೆ.ಎ:14 ಕ್ಯೂ:3832ನೇ ನಂಬ್ರದ ಮೋಟಾರ್ ಸೈಕಲ್‌ನ್ನು ಶಿರಿಯಾರ ಕಡೆಗೆ  ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಕೊಂಡು ಮುಂದೆ ಹೋಗುತ್ತಿದ್ದ ಕಾರನ್ನು ಓವರ್ ಟೇಕ್ ಮಾಡುವ ಭರದಲ್ಲಿ ಶಿರಿಯಾರ ಕಡೆಯಿಂದ ಸಾಯಿಬ್ರಕಟ್ಟೆ ಕಡೆಗೆ ಮಂಜುನಾಥ ಎಂಬುವರು ಚಲಾಯಿಸಿಕೊಂಡು ಬರುತ್ತಿದ್ದ ಕೆ.ಎ:20 ಆರ್:6220ನೇ ನಂಬ್ರದ ಮೋಟಾರ್ ಸೈಕಲ್‌ಗೆ ಢಿಕ್ಕಿ ಹೊಡೆದ ಪರಿಣಾಮ  ಮಂಜುನಾಥರವರು ಮೋಟಾರ್ ಸೈಕಲ್ ಸಮೇತ ನೆಲಕ್ಕೆ ಬಿದ್ದ ಪರಿಣಾಮ  ತಲೆಗೆ ತೀವ್ರ ಸ್ವರೂಪದ ರಕ್ತಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಬ್ರಹ್ಮಾವರ ಮಹೇಶ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬಳಿಕ ಹೆಚ್ಚಿನ ಚಿಕಿತ್ಸೆ ಬಗ್ಗೆ  ಮಣಿಪಾಲ ಕೆ.ಎಂ.ಸಿ ಆಸ್ಪತ್ರೆ   ದಾಖಲು ಮಾಡಿರುವುದಾಗಿದೆ ಈ  ಬಗ್ಗೆ ಕೋಟಾ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ :147/2015 ಕಲಂ:279, 338 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.   

ಜುಗಾರಿ ಪ್ರಕರಣ

  • ಉಡುಪಿ: ದಿನಾಂಕ: 21.06.2015 ರಂದು ಸಂಜೆ ಸಮಯ ಗಿರೀಶ್ ಕುಮಾರ್ ಎಸ್‌ ಪಿಎಸ್‌ಐ ಉಡುಪಿ ನಗರ ಪೊಲೀಸ್ ಠಾಣೆ ಇವರು  ಠಾಣಾ ಸರಹದ್ದಿನಲ್ಲಿ ರೌಂಡ್ಸ್‌ ಕರ್ತವ್ಯದಲ್ಲಿದ್ದು, ಸಂಜೆ 18.00 ಗಂಟೆಗೆ ಎಂ.ಜಿ.ಎಂ. ಜಂಕ್ಷನ್‌ ಬಳಿ ಇರುವಾಗ ಉಡುಪಿ ತಾಲೂಕು 76 ಬಡಗುಬೆಟ್ಟು ಗ್ರಾಮದ ಬೀಡಿನಗುಡ್ಡೆ ಮೈದಾನ ಬಳಿ ಸಾರ್ವಜನಿಕ ಸ್ಥಳದಲ್ಲಿ ಕೆಲವು ವ್ಯಕ್ತಿಗಳು ಅಂದರ್‌ ಬಾಹರ್‌ ಇಸ್ಪೀಟು ಜುಗಾರಿ ಆಟ ಆಡುತ್ತಿದ್ದಾರೆ ಎಂಬ ಮಾಹಿತಿ ದೊರೆತಿದ್ದು, ಅದರಂತೆ ಸಿಬ್ಬಂದಿಗಳೊಂದಿಗೆ ಠಾಣೆಯಿಂದ ಹೋಗಿ ದೂರದಲ್ಲಿ ಮರೆಯಲ್ಲಿ ನಿಂತು ನೋಡಲಾಗಿ ಉಡುಪಿ ತಾಲೂಕು 76 ಬಡಗುಬೆಟ್ಟು ಗ್ರಾಮದ ಬೀಡಿನಗುಡ್ಡೆಯ ಬಯಲು ರಂಗ ಮಂಟಪದ ಎದುರುಗಡೆ ಇರುವ ಮೈದಾನದಲ್ಲಿ ಸುಮಾರು ಜನರು ವೃತ್ತಾಕಾರದಲ್ಲಿ ಕುಳಿತಿದ್ದು ಅವರ ನಡುವಿನಲ್ಲಿ ಒಂದು ಪೇಪರ್‌ ಶೀಟ್ ಹಾಸಿದ್ದು, ಅದರ ಮೇಲೆ ಒಬ್ಬನು ಇಸ್ಪೀಟ್ ಎಲೆಯನ್ನು ಹಾಕುತ್ತಾ ಕೆಲವರು ಅಂದರ್, ಇನ್ನು ಕೆಲವರು ಬಾಹರ್ ಎಂದೂ ಹೇಳುತ್ತಾ 10, 20, 50, 100, 500, 1000 ರ ನೋಟುಗಳನ್ನು ಪೇಪರ್‌ ಶೀಟಿನ ಮೇಲೆ ಹಾಕುತ್ತಿದ್ದುದನ್ನು ನೋಡಿ ಇವರು ಕಾನೂನು ಬಾಹಿರವಾಗಿ ಹಣವನ್ನು ಪಣವನ್ನಾಗಿಟ್ಟುಕೊಂಡು ಇಸ್ಪೀಟ್ ಜುಗಾರಿ ಆಟ ಆಡುತ್ತಿರುವುದನ್ನು ಖಚಿತಪಡಿಸಿಕೊಂಡು 18.30 ಗಂಟೆಗೆ ದಾಳಿ ನಡೆಸಿ ಅವರನ್ನು ವಶಕ್ಕೆ ತೆಗೆದುಕೊಂಡು ಇಸ್ಪೀಟು ಎಲೆಯನ್ನು ಹಾಕುತ್ತಿದ್ದ ವ್ಯಕ್ತಿಯ ಹೆಸರು ಕೇಳಲಾಗಿ 1) ವಿರೇಶ್‌ (42), ಎಂಬುದಾಗಿಯೂ, ಹಣವನ್ನು ಪಣವಾಗಿ ಕಟ್ಟುತ್ತಿದ್ದ ವ್ಯಕ್ತಿಗಳ ಹೆಸರು ಕೇಳಲಾಗಿ 2) ಸಾಬು (35), 3) ಶಂಕರ್‌ (33), 4) ಗಣೇಶ್‌ (20), 5) ಪರುಶುರಾಮ (35)6) ಬಸವರಾಜ (36), 7) ಶಿವಪ್ಪ, (28)8) ಧನರಾಜ್‌ (29)9) ಮಂಜುನಾಥ (18), 10) ಶಶಿ (20), 11) ಮಂಜುನಾಥ (19), 12) ಪರುಶುರಾಮ (25), 13) ಹನುಮಂತ (21), 14) ರುದ್ರಮುನಿ (24), 15) ಹನುಮಂತ (23), 16) ಸುರೇಶ್‌ ರಾಥೋಡ್‌ (26), 17) ಮಂಜುನಾಥ ರಾಥೋಡ್‌ ಎಂಬುದಾಗಿ ತಿಳಿಸಿರುತ್ತಾರೆ. ಸದ್ರಿಯವರು ಈ ಸ್ಥಳದಲ್ಲಿ ಕುಳಿತು ಹಣವನ್ನು ಪಣವಾಗಿಟ್ಟುಕೊಂಡು ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಟ ಆಡುತ್ತಿರುವುದಾಗಿ ತಮ್ಮ ತಪ್ಪನ್ನು ಒಪ್ಪಿಕೊಂಡಿರುತ್ತಾರೆ. ಸದ್ರಿ ಸ್ಥಳದಲ್ಲಿ ಕಾನೂನು ಬಾಹಿರವಾಗಿ ಹಣವನ್ನು ಪಣವನ್ನಾಗಿಟ್ಟುಕೊಂಡು ಇಸ್ಪೀಟ್ ಜುಗಾರಿ ಆಟ ಆಡುತ್ತಿರುವ ಅಪರಾಧದ ಬಗ್ಗೆ ತಪ್ಪಿತವನ್ನು ತಿಳಿಯಪಡಿಸಿ ಆರೋಪಿಗಳ ವಶದಲ್ಲಿದ್ದ ಜುಗಾರಿ ಆಟಕ್ಕೆ ಬಳಸಿದ ನಗದು ಒಟ್ಟು ರೂ. 18,800/-, ಇಸ್ಪೀಟ್ ಎಲೆಗಳು-52, ಜುಗಾರಿ ಆಡಲು ಉಪಯೋಗಿಸಿದ ಪೇಪರ್‌ ಶೀಟ್‌ ಮತ್ತು ಒಟ್ಟು 11 ಮೊಬೈಲ್‌ಗಳನ್ನು ಸ್ವಾಧೀನಪಡಿಸಿಕೊಂಡು ಆರೋಪಿಗಳನ್ನು ದಸ್ತಗಿರಿ ಮಾಡಿ ಉಡುಪಿನಗರ ಠಾಣಾ ಅಪರಾಧ ಕ್ರಮಾಂಕ : 152/2015 ಕಲಂ 87 ಕೆಪಿ ಆಕ್ಟ್ ನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.   

 ಅಸ್ವಾಭಾವಿಕ ಮರಣ ಪ್ರಕರಣ:

  • ಶಿರ್ವಾ:  ಉಮೇಶ್ ಪೂಜಾರಿ ಪ್ರಾಯ 37 ವರ್ಷ,   ತಂದೆ: ದಿ.ಸಾಧು ಪೂಜಾರಿ,ವಾಸ: ಸುನೀತ ನಿವಾಸ ಮಟ್ಟಾರು ಅಂಚೆ ಶಿರ್ವ ಗ್ರಾಮ.ಉಡುಪಿ ಜಿಲ್ಲೆ  .ಇವರು ನೀಡಿದ ದೂರಿನಂತೆ   ದಿನಾಂಕ 20/06/2015 ರಂದು ಉಮೇಶ ಪೂಜಾರಿರವರ  ಅಣ್ಣ ರವೀಂದ್ರ ಪೂಜಾರಿ ರವರು ಮನೆಯಿಂದ ಹೋದವರು, ವಾಪಾಸು ಮನೆಗೆ ಬಾರದೆ ಇದ್ದು, ಇವರನ್ನು ಹುಡುಕಲಾಗಿ 02:00 ಗಂಟೆಯ ಸಮಯಕ್ಕೆ ನೆರೆಮನೆಯವರಾದ ಕಿಟ್ಟಿ ಎಂಬುವರು  ರವೀಂದ್ರ ಪೂಜಾರಿಯವರು ಹಾಡಿಯಲ್ಲಿ ಆಲಾದ ಮರಕ್ಕೆ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ, ಎಂಬ ವಿಚಾರವನ್ನು  ನೆರೆಮನೆಯ ಶಂಕರ್ ಶೆಟ್ಟಿ ಎಂಬುವರ  ಮೂಲಕ ತಿಳಿಸಿರುತ್ತಾರೆ ನೋಡಿದಾಗ ಉಮೇಶ ಪೂಜಾರಿರವರ  ಅಣ್ಣ ರವೀಂದ್ರ ಪೂಜಾರಿ ಆಗಿರುತ್ತಾನೆ, ರವೀಂದ್ರ ಪೂಜಾರಿ ಇವರಿಗೆಿಪರಿತ ಕುಡಿತದ ಚಟವಿದ್ದು ಬಾಳಿಗಾ ಆಸ್ಪತ್ರೆಯಲ್ಲಿ  ಚಿಕಿತ್ಸೆಯ ಬಗ್ಗೆ  ದಾಖಲು ಮಾಡಿದ್ದು ನಿನ್ನೆಯಿಂದ ಮಾನಸಿಕ ಅಸ್ವಸ್ಥನಂತೆ ವರ್ತಿಸುತಿದ್ದನು. ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ, ಈ ಬಗ್ಗೆ ಉಮೇಶ್‌ ಪೂಜಾರಿಯವರು ನೀಡಿದ ದೂರಿನಂತೆ ಶಿರ್ವಾ ಪೋಲಿಸ್‌ ಠಾಣಾ ಯು.ಡಿ.ಅರ್  ನಂಬ್ರ: 11/2015 ಕಲಂ: 174 ಸಿ.ಆರ್‌.ಪಿ.ಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: