Thursday, June 04, 2015

Daily Crime Reports As on 04/06/2015 at 19:30 Hrsಅಪಘಾತ ಪ್ರಕರಣಗಳು  

  • ಅಮಾಸೆಬೈಲು: ದಿನಾಂಕ ೦4/06/15 ರಂದು ಪಿರ್ಯಾದಿದಾರರಾದ ಚೆನ್ನಬಸಪ್ಪ (43) ತಂದೆ ಬೂದ್ಯಪ್ಪ ಎ ಕೆ ವಾಸ ಮಂಚಿಕೊಪ್ಪ ಶಿಕಾರಿಪುರ ತಾಲೂಕು ಶಿವಮೊಗ್ಗ ಜಿಲ್ಲೆ ರವರು ಶಿರಾಳಾ ಕೊಪ್ಪದಿಂದ ತಮ್ಮ ನಂಬ್ರ MH 09 L 1440 ನೇ ನಂಬ್ರದ ಲಾರಿಯಲ್ಲಿ ಭತ್ತದ ಚೀಲವನ್ನು ತುಂಬಿಸಿಕೊಂಡು ಮಾಸ್ತಿಕಟ್ಟೆ ಯಲ್ಲಿ ಬಾಳೆಬರೆ ಘಾಟಿಯಲ್ಲಿ ಬರುತ್ತಿರುವಾಗ 10:೦೦ ಗಂಟೆಯ ಸಮಯಕ್ಕೆ ಘಾಟಿಯ 2ನೇ ತಿರುವಿನಲ್ಲಿ ಹಿಂದಿನಿಂದ KA 20 B 3340 ನೇ ಟ್ಯಾಂಕರಿನ ಚಾಲಕನು ರಸ್ತೆಯ ತಿರುವಿನಲ್ಲಿ ವೇಗವಾಗಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಲಾರಿಗೆ ಡಿಕ್ಕಿ ಹೊಡೆದಾಗ ಪಿರ್ಯಾದಿದಾರರ ಲಾರಿಯ ಹಿಂದಿನ ಭಾಗ ಮತ್ತು ಚಸ್ಸಿ ಬೆಂಡಾಗಿರುತ್ತದೆ ಎಂಬುದಾಗಿ  ಚೆನ್ನಬಸಪ್ಪ ರವರು ನೀಡಿದ ದೂರಿನಂತೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ  32/2015 ಕಲಂ 279 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ. 
  • ಕುಂದಾಪುರ: ದಿನಾಂಕ 04/06/2015 ರಂದು ಸಮಯ ಮಧ್ಯಾಹ್ನ 2:15 ಗಂಟೆಗೆ ಕುಂದಾಪುರ ತಾಲೂಕು  ವಡೇರಹೋಬಳಿ ಗ್ರಾಮದ ಶಾಸ್ತ್ರಿ ಸರ್ಕಲ್ ಬಳಿಯ ಹಿರಿಯಣ್ಣ ರವರ ತರಕಾರಿ ಅಂಗಡಿಯ ಎದುರಿನ ರಾ.ಹೆ 66  ರಸ್ತೆಯಲ್ಲಿ, ಆಪಾದಿತ KA19-AA-8967ನೇ ಟಿಪ್ಪರ್ ಲಾರಿಯ ಚಾಲಕ ಟಿಪ್ಪರ್ ಲಾರಿಯನ್ನು ತಲ್ಲೂರು ಕಡೆಯಿಂದ  ಕೊಟೇಶ್ವರ ಕಡೆಗೆ ಅತೀವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಅದೇ ದಿಕ್ಕಿನಲ್ಲಿ ಅಂದರೆ ಕೊಟೇಶ್ವರ ಕಡೆಗೆ ನರಸಿಂಹ ಐತಾಳ (45) ದಾಸ್‌ಬೈಲು, ಬಂಟ್ವಾಳ ರವರು ರಾ.ಹೆ ರಸ್ತೆಯ ಎಡಬದಿಯಲ್ಲಿ ಸವಾರಿ  ಮಾಡಿಕೊಂಡು ಹೊಗುತ್ತಿದ್ದ KA 20-U-2232 ನೇ ಸ್ಕೂಟರ್ ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ನರಸಿಂಹ ಐತಾಳ ರವರು ಸ್ಕೂಟರ್ ಸಮೇತ ರಸ್ತೆಯ ಬಲಕ್ಕೆ ಬಿದ್ದಾಗ ಟಿಪ್ಪರ್ ಲಾರಿಯ ಚಕ್ರ ನರಸಿಂಹ ಐತಾಳ ರವರ ಹೊಟ್ಟೆ, ತೊಡೆಯ ಮೇಲೆ ಹಾದು ಹೋಗಿ ನರಸಿಂಹ ಐತಾಳ ರವರ ಹೊಟ್ಟೆ, ತೊಡೆಗೆ ಹಾಗೂ ತಲೆಗೆ ರಕ್ತಗಾಯ ಹಾಗೂ ಒಳ ಜಖಂ ಆಗಿ ಪ್ರಜ್ಞೆ ಕಳೆದುಕೊಂಡವರನ್ನು ಚಿಕಿತ್ಸೆ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಮೃತಪಟ್ಟಿರುವುದಾಗಿದೆ ಎಂಬುದಾಗಿ ನಾಗರಾಜ್  ಭಟ್ (51) ತಂದೆ ಶಂಕರನಾರಾಯಣ  ಭಟ್  ವಾಸ:  ಮಂಡಾಡಿ ಭಟ್ರಮನೆ, ಕಮಲಶಿಲೆ ಗ್ರಾಮ  ಕುಂದಾಪುರ  ತಾಲೂಕು ರವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ  ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ  64/2015 ಕಲಂ 279, 304 (ಎ) ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.

ಮನುಷ್ಯ ಕಾಣೆ ಪ್ರಕರಣ

  • ಕೊಲ್ಲೂರು: ದಿನಾಂಕ 27.05.15 ರಂದು ಬೆಳಿಗ್ಗೆ 10;00 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಜ್ಯೋತಿ (29) ಗಂಡ: ಮಂಜುನಾಥ ಶೆಟ್ಟಿ ವಾಸ:ಕುರ್ನಗೋಳಿ ನಡುಮನೆ ಚಿತ್ತೂರು ಗ್ರಾಮ ಕುಂದಾಪುರ ತಾಲೂಕು ಎಂಬವರ ತಂದೆಯವರಾದ ರಘುರಾಮ ಶೆಟ್ಟಿ (55) ಕುರ್ನಗೋಳಿ ನಡುಮನೆ ಚಿತ್ತೂರು ಗ್ರಾಮ ಕುಂದಾಪುರ ತಾಲೂಕು ಎಂಬವರು ತನ್ನ ಮಗಳ ಮದುವೆ ಬಗ್ಗೆ ನೇರಳಕಟ್ಟೆಯ ಕೆಂಜೂರಿನಲ್ಲಿರುವ ತನ್ನ ಎರಡನೇ ಹೆಂಡತಿಗೆ ಹೇಳಿಕೆ ನೀಡಲು ಹಾಗೂ ಎರಡನೇ ಹೆಂಡತಿಯಿಂದ ಪಡೆದ 2 ಚಿನ್ನದ ಬಳೆಗಳನ್ನು ವಾಪಾಸ್ಸು ನೀಡಲು ತನ್ನ ಜಾಗ ಮಾರಾಟ ಮಾಡಿದ ಹಣದಲ್ಲಿ 2 ಲಕ್ಷ ರೂ. ನಗದು ಹಾಗೂ ಎರಡು ಚಿನ್ನದ ಬಳೆಗಳನ್ನು ಹಿಡಿದುಕೊಂಡು ಹೋದವರು ಈತನಕ ಮನೆಗೆ ವಾಪಾಸ್ಸು ಬಾರದೇ ಕಾಣೆಯಾಗಿರುತ್ತಾರೆ ಎಂಬುದಾಗಿ ಶ್ರೀಮತಿ ಜ್ಯೋತಿ ರವರು ನೀಡಿದ ದೂರಿನಂತೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ  78/2015 ಕಲಂ ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕೊಲ್ಲೂರು: ದಿನಾಂಕ 04/06/2015 ರಂದು ಬೆಳಿಗ್ಗೆ 07:30 ಗಂಟೆಯಿಂದ 08:00 ಗಂಟೆಯ ನಡುವೆ ಪಿರ್ಯಾದಿದಾರರಾದ ಶ್ರೀಮತಿ ಯಶೋದ (37) ಗಂಡ: ಕುಮಾರ ಆಚಾರ್ಯ ವಾಸ: ನೈಲಾಡಿಮಕ್ಕಿ ಜನತಾ ಕಾಲೋನಿ ಈಡೂರು ಕುಂಜ್ಞಾಡಿ ಗ್ರಾಮ ಕುಂದಾಪುರ ತಾಲೂಕು ಎಂಬವರ ಮನೆಯ ಪಕ್ಕದ ಈಡೂರು ಕುಂಜ್ಞಾಡಿ ಗ್ರಾಮದ ನೈಲಾಡಿ ಮಕ್ಕಿಯ ಜನತಾ ಕಾಲೋನಿಯ ಬೋಗಿ ಮರದ ಹಾಡಿಯಲ್ಲಿ ನೇರಳೆ ಮರಕ್ಕೆ ಕಪ್ಪು ಬಣ್ಣದ ಶಾಲನ್ನು ಕುತ್ತಿಗೆಗೆ ನೇಣು ಹಾಕಿಕೊಂಡು ಶ್ರೀಮತಿ ಧರ್ಮಾವತಿ @ ಅನಿತಾ ಪ್ರಾಯ 24 ವರ್ಷ ಗಂಡ: ಶ್ರೀಧರ ವಾಸ: ನೈಲಾಡಿಮಕ್ಕಿ ಜನತಾ ಕಾಲೋನಿ ಈಡೂರು ಕುಂಜ್ಞಾಡಿ ಗ್ರಾಮ, ಕುಂದಾಪುರ ತಾಲೂಕು ಎಂಬವಳು ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತಳ ಮರಣಕ್ಕೆ ಸರಿಯಾದ ಕಾರಣತಿಳಿದಿರುವುದಿಲ್ಲ ಎಂಬುದಾಗಿ ಶ್ರೀಮತಿ ಯಶೋದ ರವರು ನೀಡಿದ ದೂರಿನಂತೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 8/2015 ಕಲಂ 174 (ಸಿ) ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

No comments: