Thursday, June 04, 2015

Daily Crimes Reported as On 04/06/2015 at 17:00 Hrs



ಮನುಷ್ಯ ಕಾಣೆ ಪ್ರಕರಣ

  • ಮಣಿಪಾಲ: ಪಿರ್ಯಾದಿ ಚೇತನ್ ಕುಮಾರ್‌ ಇವರು ತನ್ನ ತಂದೆ ರಾಜು ಎಮ್‌ ಬಿ ಮೂದನೂರು (52) ಚೆನ್ನಗಿರಿ ತಾ, ದಾವಣೆಗೆರೆ ಜಿಲ್ಲೆ ರವರನ್ನು ದಿನಾಂಕ 01.06.15ರಂದು ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆಎಮ್‌ಸಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆಯಲ್ಲಿದ್ದವರು ದಿನಾಂಕ 02.06.15ರಂದು ರಾತ್ರಿ 9:30ಗಂಟೆಗೆ ಊಟ ಮಾಡಲು ಹೋದವರು ವಾಪಸ್ಸು ಆಸ್ಪತ್ರೆಗೆ ಬಂದಿರುವುದಿಲ್ಲ. ರಾಜು ಎಮ್‌ ಬಿ ಮೂದನೂರುರವರನ್ನು ಎಲ್ಲಾ ಕಡೆಗಳಲ್ಲಿ ಹುಡುಕಾಡಿದರೂ ಪತ್ತೆಯಾಗದೆ ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 103/15 ಕಲಂ ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಅಪಘಾತ ಪ್ರಕರಣ

  • ಉಡುಪಿ: ಪಿರ್ಯಾದು ಅನಂತರಾಜ್ ಇವರು ಕೆಎ-20 ಪಿ-2550ನೇ ಕಾರಿನಲ್ಲಿ ದಿನಾಂಕ: 04/06/2015 ರಂದು ಬೆಳಿಗ್ಗೆ ಸಮಯ ಸುಮಾರು 09:30 ಗಂಟೆಗೆ ಅಂಬಾಗಿಲು ಕಡೆಯಿಂದ ಉಡುಪಿಯ ಕಡೆಗೆ ಹೊರಟಿದ್ದು ಕರಾವಳಿ ಜಂಕ್ಷನ ಬಳಿ ತಲುಪಿ ಸಿಗ್ನಲ್‌ನಲ್ಲಿ ನಿಲ್ಲಿಸಿದ ಸಮಯದಲ್ಲಿ ಕೆಎ-20 ಪಿ-8950 ನೇ ಕಾರಿನ ಚಾಲಕ ಹರ್ಷ ಶೆಟ್ಟಿ ರವರು ತನ್ನ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಎರಡೂ ಕಾರುಗಳು ಜಖಂಗೊಂಡಿರುವುದಾಗಿದೆ.   ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 61/2015 ಕಲಂ: 279 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಹಲ್ಲೆ ಪ್ರಕರಣ

  • ಬ್ರಹ್ಮಾವರ:  ದಿನಾಂಕ: 04/06/2015 ರಂದು ಬೆಳಿಗ್ಗೆ 08:00 ಗಂಟೆಯ ಸಮಯಕ್ಕೆ ಉಡುಪಿ ತಾಲೂಕು, ಉಪ್ಪೂರು ಗ್ರಾಮದ, ಕುದ್ರುಬೆಟ್ಟು ಎಂಬಲ್ಲಿ ಕೆಲಸ ಮಾಡಿಕೊಂಡು ದಕ್ಕೆಯ ಬಳಿ ಶೆಡ್‌ನಲ್ಲಿ ವಾಸಮಾಡಿಕೊಂಡಿದ್ದ ಜೀವಿತ್, ಸನೋಜ್ ಮತ್ತು ಪಿರ್ಯಾದಿ ನವರಂಗಿ ಇವರಿಗೆ ಆರೋಪಿ1] ದಿನೇಶ 2] ಆನಂದ 3] ನವೀನ 4] ಕೃಷ್ಣ ಇವರುಗಳು ಅಕ್ರಮವಾಗಿ ಶೆಡ್‌ನೊಳಗೆ ಪ್ರವೇಶಿಸಿ ಕೈಯಲ್ಲಿ ಕಬ್ಬಿಣದ ರಾಡ್‌ಗಳನ್ನು ಹಿಡಿದುಕೊಂಡು ರಾಡ್‌ಗಳಿಂದ ಪಿರ್ಯಾದಿದಾರರಿಗೆ, ಜೀವಿತ್ ಮತ್ತು ಸನೋಜ್‌ ರವರಿಗೆ ಸಿಕ್ಕ ಸಿಕ್ಕಲ್ಲಿ ಹೊಡೆದ ಪರಿಣಾಮ ಪಿರ್ಯಾದಿದಾರರ ಬಲಕೈಗೆ , ಜೀವಿತ್‌ನ ಎಡಭುಜಕ್ಕೆ , ಮೂಳೆಗಂಟಿಗೆ, ಮತ್ತು ಸನೋಜ್‌ ರವರ ಬಲಕಾಲಿಗೆ ಜಖಂ ಆಗಿರುತ್ತದೆ,  ಆರೋಪಿಗಳು ಹೋಗುವಾಗ ಇನ್ನೂ ಇಲ್ಲೆ ಇದ್ದರೆ  ನಿಮ್ಮನ್ನು ಕೊಂದು ಬಿಡುತ್ತೇವೆ ಎಂದು ಜೀವ ಬೆದರಿಕೆ ಹಾಕಿರುತ್ತಾರೆ.  ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 108/15 ಕಲಂ : 447, 448, 324, 506 ಜೊತೆಗೆ 34  ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಕಳವು ಪ್ರಕರಣ

  • ಉಡುಪಿ: ದಿನಾಂಕ 02/06/2015 ರಂದು ರಾತ್ರಿ 22:30 ಗಂಟೆಗೆ ಪಿರ್ಯಾದಿ ಡಾ. ಎಂ ಬಿ ಶಿವಕುಮಾರ್ ಇವರ ಹಿತಾಯು ಆಯುರ್ವೇದ ಮತ್ತು ಯೋಗ ಸೆಂಟರ್ ಗೆ  ರೋಗದ ಚಿಕಿತ್ಸೆಗಾಗಿ  ಕಜಕಿಸ್ತಾನದ ಪ್ರಜೆಗಳಾದ ASSEL AITZHANOVA AND SVETLANA DEMBITSKAYA ಎಂಬ ಮಹಿಳೆಯರು  ಬಂದಿದ್ದು ಸದ್ರಿಯವರು ಚಿಕಿತ್ಸೆಗೆ ಮತ್ತು  ಪ್ರಯಾಣದ ಖರ್ಚಿಗಾಗಿ 1000 ಯೂರೋ( 70,000 ಸಾವಿರ ರೂಪಾಯಿ) ಮತ್ತು 1400 ಅಮೆರಿಕನ್ ಡಾಲರ್(86,000 ಸಾವಿರ ರೂಪಾಯಿ) ತಂದಿದ್ದು ದಿನಾಂಕ 03/06/2015 ರಂದು ಸಮಯ ಸುಮಾರು 02:00 ಗಂಟೆಯಿಂದ 03:00 ಗಂಟೆಯ ಮಧ್ಯದ ಅವಧಿಯಲ್ಲಿ ಕಜಕಿಸ್ತಾನದ ಪ್ರಜೆಗಳು ತಂದಿದ್ದ  ಹಣವನ್ನು ಯಾರೋ ಕಳ್ಳರು ಕಳವು ಮಾಡಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 140/2015 ಕಲಂ 380 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: