Friday, June 05, 2015

Daily Crimes Reported as On 05/06/2015 at 07:00 Hrs

ಅಪಘಾತ ಪ್ರಕರಣ :
  • ಪಡುಬಿದ್ರಿ: ದಿನಾಂಕ.04.06.2015 ರಂದು 16:00 ಗಂಟೆಗೆ  ತೆಂಕ ಎರ್ಮಾಳ್ ಗ್ರಾಮದ ನಾರಳ್ತಾಯ ಗುಡಿಯ ಬಳಿ ರಾ.ಹೆ 66 ರಲ್ಲಿ ಮಹೇಶ ಯಮುನಪ್ಪ  (27), ತಂದೆ: ಯಮುನಪ್ಪ ವಾಸ: ಮುತ್ತಲಿಗೆರೆ ಗ್ರಾಮ, ಬಾದಾಮಿ ತಾಲೂಕು, ಬಾಗಲಕೋಟೆ ಜಿಲ್ಲೆ ಇವರು ಕೆಎ-19-ಎಎ-4870 ನೇ ಕಂಟೈನರ್ ಲಾರಿಯನ್ನು ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಚಲಾಯಿಸಿ ಕೊಂಡು ಹೋಗುತ್ತಿರುವಾಗ,  ಲಾರಿಯ ಹಿಂಬದಿಯಿಂದ ಕೆಎ-20-ಬಿ-6232ನೇ ಬಸ್ ಚಾಲಕ ಬಸ್ಸನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  ಲಾರಿಯ ಹಿಂದುಗಡೆ ಎಡಭಾಗಕ್ಕೆ ಢಿಕ್ಕಿ ಹೊಡೆದ ಪರಿಣಾಮ ಬಸ್ಸಿನ ಚಾಲಕನಿಗೆ ಬಲ ಕಾಲಿಗೆ ಹಾಗೂ ಇತರೇ ಕಡೆಗೆ ಗಾಯವಾಗಿದ್ದು, ಬಸ್ಸಿನಲ್ಲಿ  ಪ್ರಯಾಣಿಸುತ್ತಿದ್ದ 3 ಜನರಿಗೆ ರಕ್ತಗಾಯವಾಗಿರುತ್ತದೆ ಮತ್ತು ಚಿಕಿತ್ಸೆಯ ಬಗ್ಗೆ ಉಡುಪಿ ಕಡೆಗೆ ಕರೆದು ಕೊಂಡು ಹೋಗಿರುತ್ತಾರೆ ಎಂಬುದಾಗಿ ಮಹೇಶ್‌ ರವರು ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ:  80/15 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
ಅಸ್ವಾಭಾವಿಕ ಮರಣ ಪ್ರಕರಣ : 
  • ಪಡುಬಿದ್ರಿ : ದಿನಾಂಕ 03/06/2015 ರಂದು 21;30 ಗಂಟೆಯಿಂದ 04/06/2015 05;30 ಗಂಟೆಯ ಮಧ್ಯೆ ಧನಂಜಯ ಆರ್ ಸುವರ್ಣ , 42 ವರ್ಷ,ತಂದೆ:- ರಾಘು ಎಸ್ ಸಾಲಿಯಾನ್  , ರಾಘು ಸಾಲಿಯಾನ್  ನಿಲಯ, ಕಾಡಿಪಟ್ಣ,  ಪಡುಬಿದ್ರಿ ಅಂಚೆ, , ನಡ್ಸಾಲು ಗ್ರಾಮ ಇವರ ತಮ್ಮನಾದ ಗಣೇಶ್ ಸುವರ್ಣ ಪ್ರಾಯ 35  ವರ್ಷ ರವರು ಶರಾಬು ಕುಡಿಯುವ ಅಭ್ಯಾಸವಿದ್ದು ಇದರಿಂದ ಮನನೊಂದು ನಡ್ಸಾಲು ಗ್ರಾಮದ ಕಾಡಿಪಟ್ಣ ಎಂಬಲ್ಲಿರುವ ಮನೆಯ ಅಡುಗೆ ಕೋಣೆಯ ಜಂತಿಗೆ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎಂಬುದಾಗಿನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್‌ ಠಾಣಾ ಯುಡಿಆರ್‌ ಕ್ರಮಾಂಕ :  15/15 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: