Friday, May 22, 2015

Daily Crimes Reported as On 22/05/2015 at 17:00 Hrs


ಅಪಘಾತ ಪ್ರಕರಣ
  • ಬ್ರಹ್ಮಾವರ:ದಿನಾಂಕ:20/05/2015 ರಂದು ರಾತ್ರಿ 10:30 ಗಂಟೆಗೆ ಉಡುಪಿ ತಾಲೂಕು, ವಾರಂಬಳ್ಳಿ ಗ್ರಾಮದ, ಧರ್ಮಾವರ ಪೂಜಾ ಹೋಟೆಲ್‌ನ ಎದುರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಪಿರ್ಯಾದಿದಾರರಾದ ಸಂತೋಷ (27), ತಂದೆ:ಕೃಷ್ಣಪ್ಪ, ವಾಸ:ಬೇಳೂರು ಜೆಡ್ಡು, ಹಂದಾಡಿ ಗ್ರಾಮ, ಉಡುಪಿ ತಾಲೂಕುರವರು ಕೆಎ 19 ಡಿ 3318 ನೇ ಆಟೋರಿಕ್ಷಾದಲ್ಲಿ ಬೇಳೂರುಜೆಡ್ಡು ಕಡೆಯಿಂದ ಬ್ರಹ್ಮಾವರ ಕಡೆಗೆ ಬರುತ್ತಿರುವಾಗ ಆರೋಪಿ ದೇವೆಂದ್ರ ತನ್ನ ಕೆಎ 31, 8460 ನೇ ಲಾರಿಯನ್ನು ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಢಿಕ್ಕಿ ಹೊಡೆದ ಪರಿಣಾಮ ಆಟೋರಿಕ್ಷಾದಲ್ಲಿದ್ದ ಸಂತೋಷರವರು ರಸ್ತೆಗೆ ಬಿದ್ದು, ಮುಖಕ್ಕೆ ಒಳಜಖಂ, ಬಲಕಾಲಿನ ತೊಡೆಗೆ ಮೂಳೆ ಮುರಿತದ ಗಾಯವಾಗಿರುತ್ತದೆ. ಗಾಯಾಳುವನ್ನು ಆದರ್ಶ ಆಸ್ಪತ್ರೆ ಉಡುಪಿಯಲ್ಲಿ ಒಳರೋಗಿಯಾಗಿ ದಾಖಲಿಸಲಾಗಿದೆ. ಈ ಬಗ್ಗೆ ಸಂತೋಷರವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣಾ ಅಪರಾಧ ಕ್ರಮಾಂಕ 94/15 ಕಲಂ:279, 338 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಶಂಕರನಾರಾಯಣ:ಪಿರ್ಯಾದಿದಾರರಾದ ಕಿಶೋರ ಶೆಟ್ಟಿ (26) ತಂದೆ:ಶಿವರಾಮ ಶೆಟ್ಟಿ ವಾಸ:ಹೆಬ್ಬಾಡಿ ಮುಲಿಮನೆ, ಕುಳುಂಜೆ ಗ್ರಾಮ, ಕುಂದಾಪುರ ತಾಲೂಕುರವರ ತಮ್ಮ ಕಿರಣ್ ಶೆಟ್ಟಿ (22) ಇವರು ದಿನಾಂಕ:21/05/15 ರಂದು 23:30 ಘಂಟೆಯಿಂದ 24:00 ಘಂಟೆಯ ಮಧ್ಯದ ಅವಧಿಯಲ್ಲಿ ಕುಂದಾಪುರ ತಾಲೂಕಿನ ಕುಳ್ಳುಂಜೆ ಗ್ರಾಮದ ಹೆಬ್ಬಾಡಿ ಮುಲ್ಲಿಮನೆ ಎಂಬಲ್ಲಿ ಯಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯ ಹತ್ತಿರದ ಗೇರು ಮರಕ್ಕೆ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ.ಈ ಬಗ್ಗೆ ಕಿಶೋರ ಶೆಟ್ಟಿರವರು ನೀಡಿದ ದೂರಿನಂತೆ ಶಂಕರನಾರಾಯಣ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 08/15 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮಟ್ಕಾ ಜುಗಾರಿ ಪ್ರಕರಣ
  • ಬ್ರಹ್ಮಾವರ:ದಿನಾಂಕ:22/05/2015 ರಂದು ಬ್ರಹ್ಮಾವರ ಪೊಲೀಸ್‌ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಅನಂತಪದ್ಮನಾಭ ಕೆ.ವಿ ರವರು ಠಾಣಾ ಸಿಬ್ಬಂದಿಯವರೊಂದಿಗೆ ಇಲಾಖಾ ಜೀಪ್‌ನಲ್ಲಿ ಬ್ರಹ್ಮಾವರ ಬಸ್ಸ್ ನಿಲ್ದಾಣದ ಬಳಿ ರೌಂಡ್ಸ್ ಕರ್ತವ್ಯದಲ್ಲಿರುವುವಾಗ ಉಡುಪಿ ತಾಲೂಕು ಉಪ್ಪೂರು ಗ್ರಾಮದ, ರಿಕ್ಷಾ ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಓರ್ವ ವ್ಯಕ್ತಿಯು ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಮಟ್ಕಾ ಜುಗಾರಿ ನಡೆಸುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ, ಮಟ್ಕಾ  ಜುಗಾರಿ ಆಟದ ಬಗ್ಗೆ ಹಣ ಸಂಗ್ರಹಿಸುತ್ತಿರುವ ಸುರೇಶ್ ಶೆಟ್ಟಿ(47), ತಂದೆ:ಶಂಕರ ಶೆಟ್ಟಿ, ವಾಸ:ಅಂಬಲಪಾಡಿ ದೇವಸ್ಥಾನದ ಹಿಂಬದಿ, ಅಂಬಲ್ಪಾಡಿ ಗ್ರಾಮ, ಉಡುಪಿ ತಾಲೂಕು ಎಂಬಾತನನ್ನು ವಶಕ್ಕೆ ಪಡೆದುಕೊಂಡು, ಮಟ್ಕಾ ಜುಗಾರಿ ಆಟಕ್ಕೆ ಬಳಸಿದ ಮಟ್ಕಾ ಚೀಟಿ-1, ಬಾಲ್ ಪೆನ್ 1 ಮತ್ತು ನಗದು ರೂಪಾಯಿ 650/- ನ್ನು ಪಂಚರ ಸಮಕ್ಷಮ ವಶಪಡಿಸಿಕೊಳ್ಳಲಾಗಿದೆ. ಆರೋಪಿತನು ತಾನು ಮಟ್ಕಾ ಜೂಜಾಟಕ್ಕೆ ನಡೆಸಿದ ಹಣವನ್ನು ಉಪ್ಪೂರಿನ ಕಮಾಲಾಕ್ಷ ಎಂಬವನಿಗೆ ನೀಡುವುದಾಗಿ ತಿಳಿಸಿರುತ್ತಾನೆ.ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 95/15 ಕಲಂ 78(i)(ಎ)(vi)  ಕೆ.ಪಿ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: