Friday, May 22, 2015

Daily Crimes Reported as On 22/05/2015 at 19:30 Hrs


ಅಪಘಾತ ಪ್ರಕರಣಗಳು
  • ಕುಂದಾಪುರ ಸಂಚಾರ:ದಿನಾಂಕ:22/05/2015 ರಂದು ಬೆಳಿಗ್ಗೆ 9:30 ಗಂಟೆಗೆ ಕುಂದಾಪುರ ತಾಲೂಕು ವಡೇರಹೋಬಳಿ ಗ್ರಾಮದ ಬಸ್ರೂರು ಮೂರು ಕೈ  ಜಂಕ್ಷನ್  ಬಳಿ, ರಸ್ತೆಯಲ್ಲಿ ಆಪಾದಿತ KA 14 B 0462 ನೇ ಲಾರಿ ಚಾಲಕ ಬಸ್ರೂರು ಕಡೆಯಿಂದ ಲಾರಿಯನ್ನು ಚಲಾಯಿಸಿಕೊಂಡು ಬಂದು ನಿಲ್ಲಿಸಿಕೊಂಡಿದ್ದ  ತನ್ನ ಲಾರಿಯನ್ನು  ಒಮ್ಮಲೇ ಅತೀವೇಗ ಹಾಗೂ ಅಜಾಗರೂಕತೆಯಿಂದ ಯಾವುದೇ ಸೂಚನೆ ನೀಡದೇ ರಸ್ತೆಯ ಎಡಕ್ಕೆ ಅಂದರೆ ಉಡುಪಿ ಕಡೆಗೆ ಚಲಾಯಿಸಿ  ಲಾರಿಯ ಎಡಬದಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66 ರಸ್ತೆ ದಾಟಲು ಜೋಸ್ನ ಡಿಸೋಜಾ ಎಂಬವರು ನಿಲ್ಲಿಸಿಕೊಂಡಿದ್ದ KA 20 EH 7723ನೇ ಸ್ಕೂಟರ್ಗೆ ಢಿಕ್ಕಿ ಹೊಡೆದ ಪರಿಣಾಮ ಜೋಸ್ನ ಡಿಸೋಜಾ ರಸ್ತೆಗೆ ಬಿದ್ದಾಗ ಅವರ ಬಲ ತೊಡೆಗೆ, ಸೊಂಟದ ಮೇಲೆ ಲಾರಿಯ ಚಕ್ರ ಹಾದು ಹೋಗಿ ಅವಳ ಬಲ ತೊಡೆಗೆ, ಸೊಂಟಕ್ಕೆ ರಕ್ತಗಾಯ ಹಾಗೂ  ಒಳ ಜಖಂ ಉಂಟಾಗಿ  ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲದ ಕೆ.ಎಂ.ಸಿ  ಆಸ್ಪತ್ರೆಗೆ ಹೋಗಿರುತ್ತಾರೆ. ಬಗ್ಗೆ ಜೋಸೆಫ್ ಡಿ'ಸೋಜಾ (62) ತಂದೆ:ಮಾರ್ಷಲ್  ಡಿಸೋಜಾ, ವಾಸ:ಸೈಂಟ್ ಪಿಯೂಸ್  ರ್ಚ್‌, ಹಂಗಳೂರು  ಗ್ರಾಮ, ಕುಂದಾಪುರ ತಾಲೂಕುರವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಠಾಣಾ ಅಪರಾಧ ಕ್ರಮಾಂಕ 57/2015 ಕಲಂ:279, 338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಕುಂದಾಪುರ ಸಂಚಾರ:ದಿನಾಂಕ:22/05/2015 ರಂದು ಬೆಳಿಗ್ಗೆ 08:45 ಗಂಟೆಗೆ ಕುಂದಾಪುರ ತಾಲೂಕು ಉಪ್ಪಿನಕುದ್ರು ಗ್ರಾಮದ ಚಿಕ್ಕು ಮನೆಯ ಬಳಿ   ರಸ್ತೆಯಲ್ಲಿ ಆಪಾದಿತ ಸುಧೀರ ಎಂಬವರು ನೊಂದಣಿ ನಂಬ್ರ ಇಲ್ಲದ ಬೈನ್ನು ಉಪ್ಪಿನಕುದ್ರು ಕಡೆಯಿಂದ  ತಲ್ಲೂರು  ಕಡೆಗೆ ಅತೀವೇಗ  ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಉಪ್ಪಿನಕುದ್ರು ಕಡೆಯಿಂದ  ತಲ್ಲೂರು  ಕಡೆಗೆ ಮಣ್ಣಿನ ರಸ್ತೆಯಲ್ಲಿ ನಡೆದುಕೊಂಡು  ಹೋಗುತ್ತಿದ್ದ ಪಿರ್ಯಾದಿದಾರರಾದ ಸುಜಾತ (24) ತಂದೆ:ಬಾಬು ಮೊಗವೀರ ವಾಸ:ಅಂಗಡಿಬೆಟ್ಟು, ಉಪ್ಪಿನಕುದ್ರು ಗ್ರಾಮ, ಕುಂದಾಪುರರವರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಸುಜಾತರವರು  ರಸ್ತೆಯಲ್ಲಿ  ಬಿದ್ದು ಗಾಯಗೊಂಡು ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುತ್ತಾರೆ.ಈ ಬಗ್ಗೆ ಸುಜಾತರವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಠಾಣಾ ಅಪರಾಧ ಕ್ರಮಾಂಕ 58/2015 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.