Friday, May 22, 2015

Daily Crime Reports As on 22/05/2015 at 07:00 Hrs

ಮಟ್ಕಾ ಜುಗಾರಿ ಪ್ರಕರಣ :
  • ಕಾಪು : ದಿನಾಂಕ 21-05-2015 ರಂದು 17:00 ಗಂಟೆಗೆ ಜಗದೀಶ್ ರೆಡ್ಡಿ ಪಿ.ಎಸ್. ಐ ಕಾಪು ಪೊಲೀಸ್ ಠಾಣೆ ಇವರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಯೆಣಗುಡ್ಡೆ ಗ್ರಾಮದ ಹಳೆ ಮೀನು ಮಾರ್ಕೆಟ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟ ಆಡುತ್ತಿದ್ದಲ್ಲಿಗೆ ಸಿಬ್ಬಂದಿಯವರೊಂದಿಗೆ 17:15 ಗಂಟೆಗೆ ದಾಳಿ ನಡೆಸಿ, ಮಟ್ಕಾ ಜುಗಾರಿ ಆಟ ಆಡುತ್ತಿದ್ದ ಕಿರಣ್ ಕುಮಾರ್ (28) ತಂದೆ: ಅಣ್ಣಪ್ಪ ಶೇರೆಗಾರ್ ವಾಸ: ಜೆ.ಎನ್. ನಗರ, 4 ನೇ ಕ್ರಾಸ್ ಕಟಪಾಡಿ ಯೆಣಗುಡ್ಡೆ ಗ್ರಾಮ ಉಡುಪಿ ಇವರನ್ನು ವಶಕ್ಕೆ ಪಡೆದು ಆಟಕ್ಕೆ ಬಳಸಿದ ನಗದು ರೂಪಾಯಿ 770/-, ಮಟ್ಕಾ ಚೀಟಿ-1, ಮತ್ತು ಬಾಲ್ ಪೆನ್ನು-1, ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣಾ ಅಪರಾಧ ಕ್ರಮಾಂಕ :  107/2015 ಕಲಂ 78 (1) (111) ಕೆ.ಪಿ.ಆಕ್ಟ್ ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
  • ಕಾಪು: ದಿನಾಂಕ 21-05-2015ರಂದು 18:30 ಗಂಟೆಗೆ ಸುನಿಲ್ ವೈ ನಾಯಕ್ ಸಿ.ಪಿ.ಐ. ಕಾಪು ವೃತ್ತ ಇವರಿಗೆ ದೊರೆತ ಖಚಿತ ಮಾಹಿತಿಯಂತೆ ಜಗದೀಶ್ ರೆಡ್ಡಿ ಪಿ.ಎಸ್. ಐ ಕಾಪು ಪೊಲೀಸ್ ಠಾಣೆ ರವರು ಕಾಪು ಪಡು ಗ್ರಾಮದ ಪ್ರೀತಿ ವೈನ್ಸ್ ಹಿಂಭಾಗ, ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟ ಆಡುತ್ತಿದ್ದಲ್ಲಿಗೆ ಸಿಬ್ಬಂದಿಯವರೊಂದಿಗೆ 18:45 ಗಂಟೆಗೆ ದಾಳಿ ನಡೆಸಿ, ಮಟ್ಕಾ ಜುಗಾರಿ ಆಟ ಆಡುತ್ತಿದ್ದ ಆರೋಪಿಗಳಾದ 1) ಪರಸಪ್ಪ (50)  ತಂದೆ ರಾಮಣ್ಣ  ವಾಸ: ಕಮಲಾನ್ ದಂಡತೀರ್ಥ ಶಾಲೆಯ ಬಳಿ, ಉಳಿಯಾರಗೋಳಿ ಗ್ರಾಮ ಉಡುಪಿ, 2) ಮುತುನ್ ಸಾಬ್ (45) ತಂದೆ: ಉಮಾನ್ ಸಾಬ್ ವಾಸ: ಕೊಪ್ಪಲಂಗಡಿ ಮಲ್ಲಾರು ಗ್ರಾಮ, ಉಡುಪಿ, 3) ವಿಶ್ವನಾಥ (32) ತಂದೆ: ಗೋಪಾಲ ವಾಸ: ಎರ್ಮಳು ಪಡು ಗ್ರಾಮ, ಉಡುಪಿ, 4) ಶಂಕರ (44) ತಂದೆ ಸಹದೇವ ವಾಸ: ಕೊಪ್ಪಲಂಗಡಿ, ಮಲ್ಲಾರು ಗ್ರಾಮ, 5) ಬಾಲು (58) ತಂದೆ: ಭೀಮಪ್ಪ ವಾಸ: ಬಾಗಲ್‌ಕೋಟೆ, ಬಾದಾಮಿ ಜಿಲ್ಲೆ, 6) ಕೀರ್ತನ್ (29) ತಂದೆ: ಶಾಂತ ಸುವರ್ಣ ವಾಸ: ಕಾಪು ಪಡು ಗ್ರಾಮ, ಉಡುಪಿ, 7) ಪ್ರಭಾಕರ (40) ತಂದೆ: ಕಾಳು ಶೇರೆಗಾರ ವಾಸ: ಕಲ್ಯಾ ಕಾಪು ಪಡು ಉಡುಪಿ, 8) ರಾಜು (45) ತಂದೆ: ಮರ್ಧನ್ ವಾಸ: ಕಲ್ಯಾ ಕಾಪು ಪಡು ಗ್ರಾಮ ಉಡುಪಿ, 9) ವಿನೋದ್ (58) ತಂದೆ: ಹೂವಪ್ಪ ವಾಸ: ಮುಳೂರು ಗ್ರಾಮ ಉಡುಪಿ, 10) ಸುನಿಲ್ (37) ತಂದೆ: ಕೃಷ್ಣ ಕರ್ಕೆರಾ ವಾಸ ಮುಳೂರು ಗ್ರಾಮ ಉಡುಪಿ, 11) ನರಸಪ್ಪ (30) ತಂದೆ: ಹನುಮಂತ ವಾಸ: ಜಾಲಿಹಳ್ಳಿ ಕ್ರಾಸ್ ಬೆಂಗಳೂರು, 12) ರಾಮಣ್ಣ (58) ತಂದೆ: ಮಲ್ಲಪ್ಪ ವಾಸ: ಕೊಪ್ಪಲ ಜಿಲ್ಲೆ, 13) ಮಾಧವ (67) ತಂದೆ: ಶ್ರೀನಿವಾಸ ರಾವ್ ವಾಸ: ನಂಬ್ರ 3-18 ದುರ್ಗಾ ಡಿಸ್ಟಲರಿ ಹತ್ತಿರ, ಕಾಪು ಪಡು ಗ್ರಾಮ ಉಡುಪಿ, 14) ಹಬಿಬುಲ್ಲಾ (39) ತಂದೆ: ಅಹಮ್ಮದ್ ವಾಸ: ನಂಬ್ರ 3-156 ನೀರಿನ ಟ್ಯಾಂಕ್ ಹತ್ತಿರ ಪಕ್ಕೀರನಕಟ್ಟೆ ಮಲ್ಲಾರು ಗ್ರಾಮ, 15) ಜಯಂತ (40) ತಂದೆ: ಪೊಂಕ್ರ ಮೇಸ್ತ್ರಿ ವಾಸ: ದರ್ಕಾಸ್ ಹೌಸ್ ಮಲ್ಲಾರು ಗ್ರಾಮ ಉಡುಪಿ ತಾಲೂಕು, 16) ಬೋಮಣ್ಣ (35) ತಂದೆ: ಶಂಬಣ್ಣ ವಾಸ: ಕೊಂಬುಗುಡ್ಡೆ ಮಲ್ಲಾರು ಗ್ರಾಮ ಉಡುಪಿ, 17) ಶಾಂತಪ್ಪ ಪಕ್ಕೀರಪ್ಪ (65) ತಂದೆ: ಪಕ್ಕಿರಪ್ಪ ವಾಸ: ವಿದ್ಯಾನಿಕೇತನ ಶಾಳೆಯ ಹಿಂಭಾಗ ಕಾಪು ಪಡು ಗ್ರಾಮ ಉಡುಪಿ, 18) ಸದಾನಂದ (55) ತಂದೆ: ವಾಸು ವಾಸ: ಚಂದ್ರನಗರ ಪಾದೂರು ಗ್ರಾಮ ಉಡುಪಿ ತಾಲೂಕು ಇವರುಗಳನ್ನು ವಶಕ್ಕೆ ಪಡೆದು ಆಟಕ್ಕೆ ಬಳಸಿದ ನಗದು ರೂಪಾಯಿ 5085/- ಮಟ್ಕಾ ಚೀಟಿ-1, ಮತ್ತು ಬಾಲ್ ಪೆನ್ನು-1, ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣಾ ಅಪರಾಧ ಕ್ರಮಾಂಕ :  108/2015 ಕಲಂ 78 (1) (111) ಕೆ.ಪಿ.ಆಕ್ಟ್ ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಗಂಗೊಳ್ಳಿ : ದಿನಾಂಕ 21/05/2015 ರಂದು ಗಂಗೊಳ್ಳಿ ಪೊಲೀಸ್‌ ಠಾಣೆಯ ಪಿಎಸ್‌ಐ ಸುಬ್ಬಣ್ಣ ಬಿ‌ ರವರು ರೌಂಡ್ಸ್‌ ಕರ್ತವ್ಯದಲ್ಲಿ ಇರುವಾಗ ಗಂಗೊಳ್ಳಿ ಗ್ರಾಮದ ಗಂಗೊಳ್ಳಿ ರಥ ಬೀದಿಯಲ್ಲಿ ಮಟ್ಕಾ ಜುಗಾರಿ ಆಟ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದಂತೆ ಸದ್ರಿ ಸ್ಥಳಕ್ಕೆ ಹೋಗಿ ಪಂಚರನ್ನು ಬರಮಾಡಿಕೊಂಡು ಮುಟ್ಕಾ ನಂಬ್ರ ಬರೆಯುವುದನ್ನು ನೋಡಿ ಖಚಿತಪಡಿಸಿಕೊಂಡು 19.00 ಗಂಟೆಗೆ  ದಾಳಿ ಮಾಡಿ ಆಪಾದಿತ ಶ್ರೀನಿವಾಸ ದೇವಾಡಿಗ ಪ್ರಾಯ 55 ವರ್ಷ ತಂದೆ ದಿ. ಮಂಜ ದೇವಾಡಿಗ ವಾಸ ರಥಬೀದಿ ಗಂಗೊಳ್ಳಿ, ಗಂಗೊಳ್ಳಿ ಗ್ರಾಮ ಕುಂದಾಪುರ ಇವನನ್ನು ದಸ್ತಗಿರಿ ಮಾಡಲಾಗಿರುತ್ತದೆ. ಮಟ್ಕ ಜುಗಾರಿ ಆಟದಿಂದ ಸಂಗ್ರಹಿಸಿದ ಹಣ ಒಟ್ಟು 1130/- ರೂ ನಗದು, ಮಟ್ಕಾ ಚೀಟಿ ಹಾಗೂ ಬಾಲ್‌ ಬೆನ್‌ನ್ನು ಮಹಜರು ಮೂಲಕ ಸ್ವಾಧೀನಪಡಿಕೊಂಡಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣಾ  ಅ.ಕ್ರ 75/2015 ಕಲಂ 78 (1) (111) ಕೆ.ಪಿ.ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.
ಕಳವು ಪ್ರಕರಣ
  • ಮಣಿಪಾಲ : ಶ್ರೇಸ್ತಾ ಪ್ರಾಮಾಣಿಕ್ ರವರು ಮಣಿಪಾಲ ಶಾರದಾ ಹಾಸ್ಟೇಲಿನ ರೂಮ್ ನಂಬ್ರ 239ನೇದರಲ್ಲಿ ವಾಸವಾಗಿದ್ದು, ತನಗೆ ಮಣಿಪಾಲ ಯುನಿವರ್ಸಿಟಿ ವತಿಯಿಂದ ವಿದ್ಯಾಭ್ಯಾಸದ ಬಗ್ಗೆ ನೀಡಲಾದ ಹೆಚ್.ಪಿ ಕಂಪೆನಿಯ ಲ್ಯಾಪ್ ಟ್ಯಾಪನ್ನು ತನ್ನ ಸ್ನೇಹಿತೆಯಾದ ರಿಚ್ ಷಾ ಎಂಬವಳ ಶಾರಾದಾ ಹಾಸ್ಟೇಲಿನ ರೂಮ್ ನಂಬ್ರ 336ನೇ ದರಲ್ಲಿ ಇಟ್ಟಿದ್ದು, ಮಧ್ಯಾಹ್ನ 12:45 ಗಂಟೆಗೆ ರಿಚ್ ಷಾಳು ಊಟ ಮಾಡುವರೇ ರೂಮಿನಿಂದ ಹೊರಗೆ ಹೋಗಿದ್ದು, ಸುಮಾರು 1:30ರ ವೇಳೆಗೆ ರೂಮಿಗೆ ವಾಪಾಸು ಬಂದು ನೋಡುವಾಗ ರೂಮಿನಲ್ಲಿಟ್ಟಿದ್ದ ಲ್ಯಾಪ್ ಟ್ಯಾಪ್ ಕಾಣೆಯಾಗಿರುತ್ತದೆ ಎಂದು ತಿಳಿಸಿದ್ದು, ಸದ್ರಿ ಲ್ಯಾಪ್ ಟ್ಯಾಪನ್ನು ಯಾರೋ ಕಳ್ಳರು ಕಳವು  ಮಾಡಿಕೊಂಡು ಹೋಗಿದ್ದು, ಅದರ ಅಂದಾಜು ಮೌಲ್ಯ ಸುಮಾರು 20,000/- ಆಗಬಹುದು ಎಂಬುದಾಗಿ ನೀಡಲಾದ ದೂರಿನಂತೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 91/15 ಕಲಂ 454,380 ಐಪಿಸಿಯಂತೆ ಪ್ರಕ ರಣ ದಾಖಲಾಗಿರುತ್ತದೆ.

No comments: