Tuesday, May 19, 2015

Daily Crime Reports As on 19/05/2015 at 17:00 Hrs


ಅಪಘಾತ ಪ್ರಕರಣಗಳು
  • ಬ್ರಹ್ಮಾವರ:ದಿನಾಂಕ:18/05/2015 ರಂದು 19:30 ಗಂಟೆಗೆ ಉಡುಪಿ ತಾಲೂಕು, ವಾರಂಬಳ್ಳಿ ಗ್ರಾಮದ ಧರ್ಮಾವರಂ ಆಡಿಟೋರಿಯಮ್ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಆರೋಪಿ  ಚಾಲಕ ಮಡಿವಾಳಪ್ಪ ತನ್ನ ಟಿಪ್ಪರ್ ಲಾರಿ ಕೆಎ 24 7239 ನೇದನ್ನು ಸಾಸ್ತಾನ ಕಡೆಯಿಂದ ಬ್ರಹ್ಮಾವರ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ಅಂದರೆ ಸಾಸ್ತಾನ ಕಡೆಯಿಂದ ಬ್ರಹ್ಮಾವರ ಕಡೆಗೆ ಹೋಗುತ್ತಿದ್ದ ದ್ವಿಚಕ್ರ ವಾಹನ ನಂಬ್ರ ಕೆಎ 20 ಇಡಿ 8138 ನೇದಕ್ಕೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ವಸಂತ ಶೆಟ್ಟಿ ಎಂಬವರು ವಾಹನ ಸಮೇತ ರಸ್ತೆಗೆ ಬಿದ್ದು, ತೀವ್ರ ಗಾಯಗೊಂಡು, ಚಿಕಿತ್ಸೆಗಾಗಿ ಮೊದಲು ಬ್ರಹ್ಮಾವರ ಮಹೇಶ್ ಆಸ್ಪತ್ರೆಗೆ ಕೊಂಡು ಹೋಗಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆ.ಎಮ್‌.ಸಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆಯಲ್ಲಿರುತ್ತಾ 22:45 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ವಸಂತ ಶೆಟ್ಟಿರವರು ಮೃತ ಪಟ್ಟಿರುತ್ತಾರೆ.ಈ ಬಗ್ಗೆ ರಾಜೇಶ್ ಶೆಟ್ಟಿ (45), ತಂದೆ:ದಿವಂಗತ ರಘುರಾಮ ಶೆಟ್ಟಿ, ವಾಸ:ಮಾಂಗಲ್ಯ, ಬಿರ್ತಿ, ಬ್ರಹ್ಮಾವರ ಅಂಚೆ, ವಾರಂಬಳ್ಳಿ ಗ್ರಾಮರವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣಾ ಅಪರಾಧ ಕ್ರಮಾಂಕ 86/2015 ಕಲಂ 279, 304(ಎ) ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಕಾಪು:ದಿನಾಂಕ:18/05/2015 ರಂದು ಸಂಜೆ 18:45 ಗಂಟೆಗೆ ಪಿರ್ಯಾದಿದಾರರಾದ ದೇವಪ್ಪ (30) ತಂದೆ:ದಿವಂಗತ ಶಿವಪ್ಪ, ವಾಸ:ಹುಲಿಕೇರಿ, ಬಾದಾಮಿ ತಾಲೂಕು, ಬಾಗಲಕೋಟೆ ಜಿಲ್ಲೆರವರು ತಮ್ಮ ಊರಿನ ನಾಗರಾಜ್‌ (23) ಎಂಬವರೊಂದಿಗೆ ಕೊಪ್ಪಲಂಗಡಿಯಲ್ಲಿ ಕೆಲಸ ಮುಗಿಸಿ ಕಾಪುಗೆ ಹೋಗುವರೆ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ ರೋಡ್‌ ಬಂದಾಗಿದ್ದು  ಉಡುಪಿಯಿಂದ ಮಂಗಳೂರು ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮಲ್ಲಾರು ಗ್ರಾಮದ ಕೊಪ್ಪಲಂಗಡಿ ಉಮೇಶ್‌ ಕಾಮತ್‌ರ ಮನೆಯ ಎದುರು ರಸ್ತೆಯ ಪಶ್ಚಿಮ ಬದಿಯಲ್ಲಿ ನಿಂತು ಬಸ್ಸಿಗಾಗಿ ಕಾಯುತ್ತಿರುವಾಗ ಕೆ.ಎ 19 ಸಿ 5786ನೇ ಲಾರಿ ಚಾಲಕ ಸೈಪುಲ್ಲಾ ಸೈಯದ್‌ ಅಹಮ್ಮದ್‌ನು ಲಾರಿಯನ್ನು ಅತಿವೇಗವಾಗಿ ಅಡ್ಡಾದಿಡ್ಡಿಯಾಗಿ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಬಸ್ಸಿಗಾಗಿ ಕಾಯುತ್ತಿದ್ದ ನಾಗರಾಜ್‌ನಿಗೆ ಢಿಕ್ಕಿ ಹೊಡೆದ ಪರಿಣಾಮ ನಾಗರಾಜನು ಕೆಳಗೆ ಬಿದ್ದು ಆತನ ತಲೆಗೆ ಮುಖಕ್ಕೆ ಹಾಗೂ ಕೈಗೆ ರಕ್ತಗಾಯವಾಗಿದ್ದು ಆತನನ್ನು ಕೂಡಲೇ 108 ಅಂಬ್ಯುಲೆನ್ಸ್‌ ನಲ್ಲಿ ಉಡುಪಿ ಆದರ್ಶ ಆಸ್ಪತ್ರೆಗೆ ಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದ್ದು ಚಿಕಿತ್ಸೆಯಲ್ಲಿರುವಾಗ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 21:55 ಗಂಟೆಗೆ ಮೃತಪಟ್ಟಿರುವುದಾಗಿದೆ.ಈ ಬಗ್ಗೆ ದೇವಪ್ಪರವರು ನೀಡಿದ ದೂರಿನಂತೆ ಕಾಪು ಠಾಣಾ ಅಪರಾಧ ಕ್ರಮಾಂಕ 103/2015 ಕಲಂ 279, 304(ಎ) ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಉಡುಪಿ ಸಂಚಾರ:ಪಿರ್ಯಾದಿದಾರರಾದ ಶಶಿಧರ್ ಸಾಲಿಯಾನ್ (34) ತಂದೆ:ತನ್ಯ ತಿಂಗಳಾಯ, ವಾಸ:ಸುಪ್ರಬಾತ್ ಕಾನಂಗಿ, ಕೊಡವೂರು,ಉಡುಪಿರವರು ಈ ದಿನ ದಿನಾಂಕ:19/05/2015 ರಂದು ತನ್ನ ಸ್ನೇಹಿತರಾದ ಪ್ರದೀಪ್‌ರವರನ್ನು ಸಹಸವಾರರನ್ನಾಗಿ ಕುಳ್ಳರಿಸಿಕೊಂಡು ತನ್ನ ಮೋಟಾರ್ ಸೈಕಲ್‌ನಲ್ಲಿ ಉಡುಪಿಯಿಂದ ಕಟಪಾಡಿಗೆ ಹೋಗುವರೇ ಉಡುಪಿ ಬಿಗ್ ಬಜಾರ್ ಬಳಿ ತಲುಪುವಾಗ ಬೆಳಿಗ್ಗೆ ಸುಮಾರು 09:30 ಗಂಟೆಗೆ ಕೆಎ 20 6514 ನೇ ಟೆಂಪೊ ಚಾಲಕ ರಾಮಚಂದ್ರ ಪ್ರಭು ಎಂಬವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಸಿಯಾರಾಮ್ ಅಂಗಡಿಯ ಎದುರು ರಸ್ತೆಯ ತೀರಾ ಎಡಬದಿಗೆ ಬಂದು ಶಶಿಧರ್ ಸಾಲಿಯಾನ್‌ರವರ ಮುಂದುಗಡೆಯಿಂದ ಹೋಗುತ್ತಿದ್ದ ಕೆಎ 20 ಕ್ಯೂ 6544 ನೇ ಮೋಟಾರ್ ಸೈಕಲ್‌ಗೆ ಅದರ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಸದ್ರಿ ಮೋಟಾರ್ ಸೈಕಲ್ ಸವಾರ ಸತೀಶನು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಹಣೆ ಮತ್ತು ಎದೆ ಹಾಗೂ ಕೈ ಕಾಲುಗಳಿಗೆ ರಕ್ತಗಾಯಗಳಾಗಿರುತ್ತವೆ. ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಸದ್ರಿ ಅಪಘಾತಕ್ಕೆ ಕೆಎ 20 6514 ನೇ ಟೆಂಪೊ ಚಾಲಕ ರಾಮಚಂದ್ರ ಪ್ರಭು ಎಂಬವರ ಅತೀವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿದೆ. ಈ ಬಗ್ಗೆ ಶಶಿಧರ್ ಸಾಲಿಯಾನ್‌ರವರು ನೀಡಿದ ದೂರಿನಂತೆ ಉಡುಪಿ ಸಂಚಾರ ಠಾಣಾ ಅಪರಾಧ ಕ್ರಮಾಂಕ 49/2015 ಕಲಂ:279,337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಜೀವ ಬೆದರಿಕೆ ಪ್ರಕರಣ
  • ಹಿರಿಯಡ್ಕ:ದಿನಾಂಕ:16/05/15 ರಂದು ಮಧ್ಯಾಹ್ನ 1:30 ಗಂಟೆಗೆ ಉಡುಪಿ ತಾಲೂಕಿನ ಪೆರ್ಡೂರು ಗ್ರಾಮದ ಪೆರ್ಡೂರು ಪ್ರೌಢ ಶಾಲೆ ಬಳಿ ಆರೋಪಿ ಶೈಲೇಶ್ ಪಿರ್ಯಾದಿದಾರರಾದ ಶ್ರೀ ದಿನೇಶ ಪೂಜಾರಿ (49) ತಂದೆ:ಹೆಂಕುರ ಪೂಜಾರಿ, ವಾಸ:ಗರಡಿಮನೆ, ಅಲಂಗಾರು, ಪೆರ್ಡೂರು ಗ್ರಾಮ, ಉಡುಪಿ ತಾಲೂಕು & ಜಿಲ್ಲೆರವರ ಪತ್ನಿಯನ್ನು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ನಿಲ್ಲಿಸಿದ್ದಕ್ಕೆ ಪ್ರತಿವಾದಿ ಅವಾಚ್ಯ ಶಬ್ದಗಳಿಂದ ಬೈದು ಪ್ರಾಣ ಬೆದರಿಕೆಯೊಡ್ಡಿರುತ್ತಾನೆ.ಈ ಬಗ್ಗೆ ಶ್ರೀ ದಿನೇಶ ಪೂಜಾರಿರವರು ನೀಡಿದ ದೂರಿನಂತೆ ಹಿರಿಯಡ್ಕ ಠಾಣಾ ಅಪರಾಧ ಕ್ರಮಾಂಕ 52/2015 ಕಲಂ 504, 506 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇಸ್ಪಿಟ್‌ ಜುಗಾರಿ ಪ್ರಕರಣ
  • ಬೈಂದೂರು:ದಿನಾಂಕ:18/05/2015 ರಂದು ರಾತ್ರಿ 08:45 ಗಂಟೆಗೆ ಪಿರ್ಯಾದಿದಾರರಾದ ಸಂತೋಷ ಎ ಕಾಯ್ಕಿಣಿ, ಪೊಲೀಸ್‌ ಉಪನಿರೀಕ್ಷಕರು, ಬೈಂದೂರು ಪೊಲೀಸ್‌ ಠಾಣೆರವರಿಗೆ ಕುಂದಾಪುರ ತಾಲೂಕು ನಾವುಂದ ಗ್ರಾಮದ ವಿನಾಯಕ ಹೋಟೆಲ್ ಬಳಿಯಲ್ಲಿ ಸಾರ್ವಜನಿಕ ಕಾಲು ದಾರಿಯಲ್ಲಿ  ಕೆಲವರು ಹಣವನ್ನು ಪಣವಾಗಿಟ್ಟು ಇಸ್ಪೀಟು ಎಲೆಗಳಿಂದ ಜುಗಾರಿ ಆಟವಾಡುತ್ತಿದ್ದಾರೆಂದು ಬಾತ್ಮಿದಾರರೊಬ್ಬರು ನೀಡಿದ ಖಚಿತ ಮಾಹಿತಿ ಮೇರೆಗೆ, ಪೊಲೀಸ್‌ ಉಪನಿರೀಕ್ಷಕರು ಸಿಬ್ಬಂದಿಯವರೊಂದಿಗೆ ಹಾಗೂ ಪಂಚರೊಂದಿಗೆ ಇಲಾಖಾ ಜೀಪಿನಲ್ಲಿ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಿ, ಹಣವನ್ನು ಪಣವಾಗಿ ಇಟ್ಟು ಇಸ್ಪೀಟ್‌ ಜುಗಾರಿ ಆಟವಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು 21:45  ಗಂಟೆಗೆ ದಾಳಿ ನಡೆಸಿದಾಗ 3 ಜನ ಓಡಿ ಹೋಗಿದ್ದು ಆರೋಪಿ ರವೀಂದ್ರ ಮೊಗವೀರ (38) ತಂದೆ:ಮಂಜುನಾಥ ವಾಸ:ಹೆರಿಕೇರಿ, ಅಂಕೋಲಿ ಮನೆ, ರಾಗಿಹಕ್ಲು, ಹೇರೂರು ಗ್ರಾಮ, ಕುಂದಾಪುರ ತಾಲೂಕು ಎಂಬವನನ್ನು ವಶಕ್ಕೆ ಪಡೆದು ಸ್ಥಳದಲ್ಲಿ ದೊರೆತ ಹಳೆಯ ದಿನಪತ್ರಿಕೆ-1, ಡೈಮಂಡ್‌, ಆಟಿನ್‌, ಇಸ್ಪೀಟ್, ಕಾಳವಾರ್ ಚಿತ್ರಗಳಿರುವ 52 ಇಸ್ಪೀಟ್ ಎಲೆಗಳು, ನಗದು ರೂಪಾಯಿ 500/-, ಮೇಣದಬತ್ತಿ-1, ಆರೋಪಿತರು ಪರಾರಿಯಾಗುವ ಸಮಯದಲ್ಲಿ ಸ್ಥಳದಲ್ಲಿ ಬಿಟ್ಟು ಹೋದ  ಕೆಎ 20 ಇಎ 5986 ಪಲ್ಸರ್ ಮೋಟಾರ್ ಸೈಕಲ್-1 ಹಾಗೂ ಕೆಎ 20 ಇಇ 9508 ನೇ ಮೋಟಾರ್ ಸೈಕಲನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ.ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 136/2015 ಕಲಂ 87 ಕೆ.ಪಿ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.    
ಮಟ್ಕಾ ಜುಗಾರಿ ಪ್ರಕರಣ
  • ಶಿರ್ವಾ:ಪಿರ್ಯಾದಿದಾರರಾದ ಟಿ.ಆರ್.ಜೈಶಂಕರ್, ಪೊಲೀಸ್ ನಿರೀಕ್ಷಕರು, ಡಿ.ಸಿ.ಐ.ಬಿ ಉಡುಪಿರವರಿಗೆ ದಿನಾಂಕ:18/05/2015 ರಂದು ಸಮಯ 15:45 ಗಂಟೆಗೆ ಬಂದ ಮಾಹಿತಿಯಂತೆ ಪೊಲೀಸ್ ನಿರೀಕ್ಷಕರು, ಸಿಬ್ಬಂದಿ ಹಾಗೂ ಪೊಲೀಸ್‌ ಉಪನಿರೀಕ್ಷಕರು ಶಿರ್ವ ಪೊಲೀಸ್‌ ಠಾಣೆ ಇವರ ಜೊತೆಯಲ್ಲಿ ಶಿರ್ವಾ ಬಸ್ ನಿಲ್ದಾಣದ ಬಳಿ ಬಂದು ಪಂಚಾಯತ್‌ದಾರರ ಸಮಕ್ಷಮ ಶಿರ್ವಾ ಜಂಕ್ಷನ್ ತಲುಪಿ ವೆಂಕಟೇಶ್ವರ ಕೃಪಾ ಸ್ವೀಟ್ಸ್ ಅಂಗಡಿ ಬಳಿಯ ಓಣಿಯಲ್ಲಿ 1 ರೂಪಾಯಿಗೆ 70 ರೂಪಾಯಿ ಕೊಡುತ್ತೇವೆ ಎಂದು ಹೇಳುತ್ತಾ ಜನರನ್ನು ಸೇರಿಸಿಕೊಂಡು ಹಣ ಪಡೆದು ಚೀಟಿ ಬರೆದು ಕೊಡುತ್ತಿದ್ದ ಆಪಾದಿತರುಗಳನ್ನು ವಶಕ್ಕೆ ತೆಗೆದುಕೊಂಡು ಹಣವನ್ನು ಸಂಗ್ರಹಿಸಿ ಅಕ್ರಮವಾಗಿ ಮಟ್ಕಾ ಜುಗಾರಿ ಆಟ ನಡೆಸಿ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದ 1)ಶರತ್ ಶೆಟ್ಟಿ ತಂದೆ:ಜಯಕರ ಶೆಟ್ಟಿ ವಾಸ: ಕಪ್ಪೆಟ್ಟು ಮನೆ ಅಂಬಲ ಪಾಡಿ ಉಡುಪಿ 2)ರೂಡಾಲ್ಫ್ ಅರೋಜಾ ತಂದೆ:ಪೀಟರ್ ಅರೋಜಾ, ಕಡವಿನ ಬಾಗಿಲು ಮನೆ, ಉದ್ಯಾವರ ಉಡುಪಿ ಇವರನ್ನು ವಶಕ್ಕೆ ಪಡೆದುಕೊಂಡು, ಅವರ ವಶದಲ್ಲಿದ್ದ ರೂಪಾಯಿ 18,025/- ನಗದು, ಮಟ್ಕಾ ಬರೆದ ಚೀಟಿ- 2 ಮತ್ತು ಬಾಲ್ ಪೆನ್‌-2 ನ್ನು ಸ್ವಾಧೀನ ಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಶಿರ್ವಾ ಠಾಣಾ ಅಪರಾಧ ಕ್ರಮಾಂಕ 36/2015 ಕಲಂ:420 ಐಪಿಸಿ ಹಾಗೂ 78 (iii) ಕೆ.ಪಿ  ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಗಂಡಸು ಕಾಣೆ ಪ್ರಕರಣ
  • ಕಾರ್ಕಳ ನಗರ:ಪಿರ್ಯಾದಿದಾರರಾದ ಶ್ರೀಮತಿ ಕೌಶಲ್ಯ (34), ಗಂಡ:ದಿಲೀಪ್, ವಾಸ:ಮುರತ್ತಂಗಡಿ ಮನೆ, ಸಾಣೂರು ಗ್ರಾಮ, ಕಾರ್ಕಳರವರ ಗಂಡ ದಿಲೀಪ್ (36) ಎಂಬವರು ದಿನಾಂಕ:31/12/2014 ರಂದು ಬೆಳಿಗ್ಗೆ 8:00 ಗಂಟೆಗೆ ಕಾರ್ಕಳ ತಾಲೂಕು ಸಾಣೂರು ಗ್ರಾಮದ ಮುರತ್ತಂಗಡಿ ಎಂಬಲ್ಲಿ ವಾಸ್ತವ್ಯದ ಮನೆಯಿಂದ ಉಡುಪಿ ನಗರಕ್ಕೆ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋಗಿದ್ದು, ಅದೇ ದಿನ ರಾತ್ರಿ 8:00 ಗಂಟೆಗೆ ತನ್ನ ಮೊಬೈಲ್ ನಂಬ್ರದಿಂದ ಶ್ರೀಮತಿ ಕೌಶಲ್ಯರವರಿಗೆ ಪೋನ್ ಮಾಡಿ ತಾನು ಕೆಲಸಕ್ಕೆ ದೂರ ಹೋಗುವುದಾಗಿ ಹೇಳಿ ಪೋನ್ ಸಂಪರ್ಕ ಕಡಿತ ಮಾಡಿದ್ದು, ಈವರೆಗೂ ಮನೆಗೂ ಬಾರದೇ ಎಲ್ಲಿಯೋ ಕಾಣೆಯಾಗಿರುತ್ತಾರೆ ಹಾಗೂ ದಿಲೀಪ್ ರವರ ಮೊಬೈಲ್ ಫೋನ್ ಸ್ವಿಚ್ಡ್ ಆಫ್ ಆಗಿರುತ್ತದೆ. ಈ ಬಗ್ಗೆ ಶ್ರೀಮತಿ ಕೌಶಲ್ಯರವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣಾ ಅಪರಾಧ ಕ್ರಮಾಂಕ 05/2015 ಕಲಂ:ಗಂಡಸು ಕಾಣೆ ಎಂಬುದಾಗಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕಾಣೆಯಾದವರ ಚಹರೆ:ಸದೃಡ ಮೈಕಟ್ಟು, ಕಪ್ಪು ಮೈಬಣ್ಣ ಇದ್ದು, ಬಿಳಿ ಬಣ್ಣದ ಷರ್ಟ್, ಕಪ್ಪು ಬಣ್ಣದ ಫ್ಯಾಂಟ್ ಧರಿಸಿರುತ್ತಾರೆ, ಕನ್ನಡ, ಹಿಂದಿ, ಮಲಯಾಳಂ, ತುಳು ಭಾಷೆ ಮಾತನಾಡುತ್ತಾರೆ.

No comments: