Tuesday, May 19, 2015

Daily Crime Reports As on 19/05/2015 at 07:00 Hrs

ಅಪಘಾತ ಪ್ರಕರಣ
  • ಉಡುಪಿ:  ಪಿರ್ಯಾದಿ ಕೆ.ಬಾಲಚಂದ್ರ ರವರು ದಿನಾಂಕ; 17/05/2015 ರಂದು ರಾತ್ರಿ 10:30 ಗಂಟೆ ವೇಳೆಯಲ್ಲಿ ಮನೆಯಲ್ಲಿರುವಾಗ್ಗೆ ಮನೆಯ ಹೊರಗಡೆ ಅಂದರೆ ಉಡುಪಿ ಪುತ್ತೂರು ಮಾಸ್ತಿಕಟ್ಟೆ ದೇವಸ್ಥಾನದ ಹತ್ತಿರ ಒಂದು ಶಬ್ದ ಕೇಳಿಸಿದ್ದು ಹೊರಗೆ ಬಂದು ನೋಡಲಾಗಿ ಎರಡು, ಮೂರು ಜನ ಸೇರಿದ್ದು ಪಿರ್ಯಾದುದಾರರು ಹೋಗಿ ನೋಡಲಾಗಿ ಯಾರೋ ಅಪರಿಚಿತ ವ್ಯಕ್ತಿಯೊಬ್ಬನಿಗೆ ಯಾವುದೋ ಅಪರಿಚಿತ ವಾಹನವೊಂದು ಡಿಕ್ಕಿಹೊಡೆದು ನಿಲ್ಲಿಸದೇ ಹೋಗಿದ್ದು, ಅಪಘಾತಕ್ಕೊಳಗಾದ ಆ ಅಪರಿಚಿತ ವ್ಯಕ್ತಿ ರಸ್ತೆಗೆ ಬಿದ್ದು ತೀವ್ರವಾಗಿ ಗಾಯಗೊಂಡು ಮಾತನಾಡುತ್ತಿರಲಿಲ್ಲ, ಕೂಡಲೇ ಪಿರ್ಯಾದುದಾರರು ಮತ್ತು ಅಲ್ಲಿ ಸೇರಿದವರು 108 ವಾಹನದಲ್ಲಿ ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 48/2015 ಕಲಂ. 279, 338 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಬೈಂದೂರು: ದಿನಾಂಕ: 17/05/2015 ರಂದು  ಫಿರ್ಯಾದಿ ಸಂದೇಶ್‌ ಹೆಚ್‌ ಇವರ ತಾಯಿಗೆ ಅನಾರೋಗ್ಯವಿದ್ದು ಅವರನ್ನು ವೈಧ್ಯರಲ್ಲಿ ತೋರಿಸುವರೇ ಉಪ್ಪುಂದಕ್ಕೆ ಹೋದ ಸಮಯದಲ್ಲಿ ಫಿರ್ಯಾದಿದಾರರ ಅಕ್ಕ ಆಶಾ ಒಬ್ಬರೇ ಮನೆಯಲ್ಲಿದ್ದು ಫಿರ್ಯಾದಿದಾರರು ವಾಪಾಸ್ಸು ಮನೆಗೆ ಬಂದು ನೋಡುವಾಗ ಅವರ ಅಕ್ಕ ಮನೆಯಲ್ಲಿಲ್ಲದೇ ಹುಡುಕಾಡಿದಾಗ ಫಿರ್ಯಾದಿದಾರರ ಮನೆಯ ಬಾವಿಯಲ್ಲಿ ಆಶಾಳ ಮೃತ ಶರೀರವು ತೇಲುತ್ತಿದ್ದು ಕೂಡಲೇ ಮೇಲಕ್ಕೆತ್ತಿ ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ವೈದ್ಯರಲ್ಲಿ ತೋರಿಸಿದಾಗ ಆಶಾಳು ಮೃತ ಪಟ್ಟಿರುವುದು ಖಚಿತಪಡಿಸಿರುವುದಾಗಿದೆ.ಫಿರ್ಯಾದಿದಾರರ ಅಕ್ಕ ಆಶಾಳು ಸುಮಾರು 15 ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು ಈ ಬಗ್ಗೆ ಔಷದ ಮಾಡಿದರೂ ಗುಣಮುಖವಾಗದ ಕಾರಣ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ: 17/05/2015ರಂದು ರಾತ್ರಿ 08:0 ಗಂಟೆಗೆ ಮೊದಲು ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣಾ ಯುಡಿಆರ್‌ ಕ್ರಮಾಂಕ : 17/15 ಕಲಂ. 174 ಸಿಆರ್‌ಪಿಸಿಯಂತೆ ಪ್ರಕರಣ  ದಾಖಲಿಸಿಕೊಳ್ಳಲಾಗಿದೆ.        
ಜುಗಾರಿ ಪ್ರಕರಣ
  • ಬೈಂದೂರು: ದಿನಾಂಕ 18-05-2015  ರಂದು ಸಂಜೆ 4 ಗಂಟೆ ವೇಳೆಗೆ ಸಂತೋಷ ಎ ಕಾಯ್ಕಿಣಿ ಪೊಲೀಸ್‌ ಉಪನಿರೀಕ್ಷಕರು ಬೈಂದೂರು ಪೊಲೀಸ್‌ ಠಾಣೆ  ಇವರಿಗೆ ಕಾಲ್ತೋಡು ಗ್ರಾಮದ  ಗುಂಡು ಓಣ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ  ಹಣವನ್ನು ಪಣವಾಗಿಟ್ಟು  ಕೋಳಿ ಅಂಕ ಆಡುತ್ತಿದ್ದಾರೆಂದು ಖಚಿತ ಮಾಹಿತಿ  ಬಂದ ಮೇರೆಗೆ  ಸಿಬ್ಬಂದಿಯವರನ್ನು ಹಾಗೂ ಪಂಚರನ್ನು ಕರೆದುಕೊಂಡು  ಕುಂದಾಪುರ ತಾಲೂಕು ಕಾಲ್ತೋಡು ಗ್ರಾಮದ  ಗುಂಡು ಓಣ ಎಂಬಲ್ಲಿಗೆ ತಲುಪಿ ನೋಡಲಾಗಿ ಅಲ್ಲಿ ಸೇರಿದ ಸಾರ್ವಜನಿಕರು ಸಾರ್ವಜನಿಕ ಸ್ಥಳದಲ್ಲಿ  ಕೋಳಿಗಳ ಕಾಲುಗಳಿಗೆ  ಹರಿತವಾದ ಕೋಳಿ ಕತ್ತಿಯನ್ನು ಕಟ್ಟಿ  ಕೋಳಿಗಳಿಗೆ ಹಿಂಸೆ  ನೀಡಿ ಹಣವನ್ನು ಪಣವಾಗಿ  ಕಟ್ಟಿ  ಕೋಳಿ ಅಂಕ  ನಡೆಸುತ್ತಿದ್ದುದನ್ನು ಖಚಿತ ಪಡಿಸಿಕೊಂಡು ಸಂಜೆ 5 ಗಂಟೆಗೆ  ಸದ್ರಿ ಸ್ಥಳಕ್ಕೆ ಧಾಳಿ ನಡೆಸಿ ಕೋಳಿ ಅಂಕ ನಡೆಸುತ್ತಿದ್ದ 1)  ರತ್ನಾಕರ ಶೆಟ್ಟಿ ಪ್ರಯ 48 ತಂದೆ: ಮಂಜಯ್ಯ ಶೆಟ್ಟಿ ಯರುಕೋಣೆ, ಆಳಗದ್ದೆ, ರಾಗಿಹಕ್ಲು, ಹೇರೂರು ಗ್ರಾಮ  2)  ಚಂದ್ರ ಪ್ರಾಯ 53  ತಂದೆ: ಮಂಜು ಪೂಜಾರಿ ವಾಸ: ನಾರ್ಕಳ್ಳಿ, ಆಲೂರು  ಗ್ರಾಮ & ಅಂಚೆ,3) ಸಂತೋಷ ಪೂಜಾರಿ  ಪ್ರಾಯ 30 ತಂದೆ: ನಾರಾಯಣ ವಾಸ ಮಣ ಮನೆ, ಕಾಲ್ತೋಡು ಗ್ರಾಮ  4) ಸಂದೀಪ ಪೂಜಾರಿ (26) ತಂದೆ: ನಾರಾಯಣ  ಮಣ ಮನೆ ಕಾಲ್ತೋಡು ಗ್ರಾಮ, ಕುಂದಾಪುರ 5) ನಾರಾಯಣ ಪೂಜಾರಿ ಪ್ರಾಯ 60 ತಂದೆ:ದಿ. ಮಂಜ ಪೂಜಾರಿ  ಮಣ ಮನೆ ಕಾಲ್ತೋಡು ಗ್ರಾಮ, ಕುಂದಾಪುರ 6)  ನರಸಿಂಹ ಪ್ರಾಯ 35 ವರ್ಷ ತಂದೆ: ಹೆರಿಯ ನಾಯ್ಕ, ಅತ್ತಿಹೊಳೆ, ಕಾಲ್ತೋಡು ಅಂಚೆ& ಗ್ರಾಮ ಕುಂದಾಪುರ 7) ಹೆರಿಯ ಪ್ರಾಯ 51 ತಂದೆ: ನಾಗ ಪೂಜಾರಿ ವಾಸ: ನಾಟಿ ಮನೆ ಕೊನಲು, ರಾಗಿಹಕ್ಲು, ಹೇರೂರು ಗ್ರಾಮ ಕುಂದಾಪುರ ತಾಲೂಕು ಇವರನ್ನು ಹಾಗೂ ಕೋಳಿ ಅಂಕಕ್ಕೆ ಬಳಸಿದ 2 ಹರಿತವಾದ ಕೋಳಿ ಕತ್ತಿಯನ್ನು, 7 ಕೋಳಿಗಳನ್ನು ಮತ್ತು ನಗದು 1,500/- ರೂಪಾಯಿಯನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣಾ ಅಪರಾಧ ಕ್ರಮಾಂಕ : 135/15  ಕಲಂ 87, 93 ಕೆ.ಪಿ ಕಾಯಿದೆಯಂತೆ ಪ್ರಕರಣ  ದಾಖಲಿಸಿಕೊಳ್ಳಲಾಗಿದೆ.        
ಇತರೇ ಪ್ರಕರಣ
  • ಬ್ರಹ್ಮಾವರ:  ಉಡುಪಿ ತಾಲೂಕು, ಚೇರ್ಕಾಡಿ ಗ್ರಾಮ, ಪ್ರಗತಿ ನಗರ ನಿವಾಸಿಯಾದ ಪಿರ್ಯಾದಿ ಲಕ್ಷ್ಮೀ ಪರವ ರವರಿಗೆ  ಸುಮಾರು 13 ವರ್ಷಗಳಿಂದ ಗಂಡನಾದ ಆರೋಪಿ ಗುಂಡು ಪರವ ಪ್ರತಿ ದಿನ ಕುಡಿದು ಬಂದು ದೈಹಿಕ ಹಲ್ಲೆ ನಡೆಸುವುದು ವರದಕ್ಷಿಣೆ ತಾ ಎಂದು ಬೆದರಿಸುವುದು ಅಲ್ಲದೇ ದಿನಾಂಕ: 15-05-2015 ರಂದು ಬೇರೊಂದು ಹುಡುಗಿ ಜ್ಯೋತಿ ಎಂಬುವಳೊಂದಿಗೆ ಕೊಲ್ಲೂರಿನಲ್ಲಿ ಮದುವೆಯಾಗಲು ನಿರ್ಧರಿಸಿದ್ದು ಈ ಬಗ್ಗೆ ಪ್ರಶ್ನಿಸಿದಾಗ ಅವಳನ್ನೆ ಮದುವೆಯಾಗುತ್ತೇನೆ ಎಂದಿದ್ದು, ಹಾಗೂ ಆರೋಪಿ ಜ್ಯೋತಿಯು ಕೂಡ ನಿನ್ನ ಗಂಡನನ್ನು ಬಿಡುವುದಿಲ್ಲ, ನೀನು ಹಠ ಮಾಡಿದರೆ ನಿನ್ನನ್ನು ಕೊಲೆ ಮಾಡಿ ಮುಗಿಸಿಯಾದರೂ ನಾನು ಗುಂಡನನ್ನು ಮದುವೆಯಾಗುತ್ತೇನೆಂದು ಬೆದರಿಕೆ ಹಾಕಿರುತ್ತಾರೆ ಎಂಬಿತ್ಯಾದಿ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ : 85/15 ಕಲಂ :498ಎ, 506 ಜೊತೆಗೆ 34 ಐ.ಪಿ.ಸಿ. ಮತ್ತು4 ಡಿಪಿ ಆಕ್ಟ್ ನಂತೆ ಪ್ರಕರಣ  ದಾಖಲಿಸಿಕೊಳ್ಳಲಾಗಿದೆ.

No comments: