Tuesday, May 19, 2015

Daily Crime Reports As on 19/05/2015 at 19:30 Hrsಅಪಘಾತ ಪ್ರಕರಣ

  • ಗಂಗೊಳ್ಳಿ: ದಿನಾಂಕ 19-05-2014 ರಂದು ಬೆಳ್ಳಗ್ಗೆ 07:00 ಗಂಟೆಗೆ ಪಿರ್ಯದಿದಾರರಾದ ವಿಕ್ರಂ ಕುಮಾರ್ ನಾವುಂದ ರವರ ಮೀನು ಲಾರಿ ನಂಬ್ರ ಕೆ.ಎ. 20 ಡಿ. 317ನ್ನು ಲಾರಿ ಚಾಲಕ ಮಹಮ್ಮದ್ ಆಸೀಫ್ ಎಂಬವರು ಮೀನು ತುಂಬಿಸಿ ಕೊಂಡು ಚೈನೈಗೆ ಹೋಗುತ್ತಿರುವಾಗ ತ್ರಾಸಿ ಗ್ರಾಮದ ರಾ.ಹೆ. 66 ಸೀಲ್ಯಾಂಡ್ ಬಳಿ ಬರುತ್ತಿರುವಾಗ ಲಾರಿ ಚಾಲಕ ಅತೀ ವೇಗ  ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಕಾರಣ ಲಾರಿಯು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬಲಭಾಗಕ್ಕೆ ಚಲಿಸಿ ರಸ್ತೆಯ ಬಲಭಾಗದಲ್ಲಿ  12 ಅಡಿ ಅಳದಲ್ಲಿರುವ ತೆಂಗಿನ ತೋಟಕ್ಕೆ ತಲೆ ಕೆಳಗಾಗಿ ಬಿದ್ದ ಪರಿಣಾಮ ಲಾರಿಯಲ್ಲಿದ್ದವರಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ಲಾರಿಯು ಉತ್ತರಕ್ಕೆ ಮುಖ ಮಾಡಿ 4 ಚಕ್ರಗಳು ಮೇಲಾಗಿ ಬಿದ್ದಿದ್ದು ಲಾರಿಯ ಎದುರುಗಡೆ ಕ್ಯಾಬಿನ್,  ಲಾರಿಯ ಹಿಂಭಾಗದ ಮೀನು ಶೇಖರಿಸುವ ಕಂಟೈನರ್ ಬಾಡಿ ಹಾಗೂ ಇತರೇ ಭಾಗಗಳು ಜಖಂ ಗೊಂಡಿರುತ್ತದೆ ಎಂಬುದಾಗಿ  ವಿಕ್ರಂ ಕುಮಾರ್ ನಾವುಂದರವರು ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 70/2015 ಕಲಂ 279 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣಗಳು

  • ಹಿರಿಯಡ್ಕ: ಪಿರ್ಯಾದಿದಾರರಾದ ಸುರೇಶ ಆಚಾರ್ಯ ಪ್ರಾಯ 59 ವರ್ಷ ತಂದೆ: ನಾರಾಯಣ ಆಚಾರ್ಯ, ವಾಸ: ದೇವಿಕೃಪಾ, ಗಣಪತಿ ದೇವಸ್ಥಾನದ ಬಳಿ ಉದ್ಯಾವರ, ಉಡುಪಿ ತಾಲೂಕು ಎಂಬವರ ಹತ್ತಿರದ ಸಂಬಂದಿ  ಚಂದ್ರಕಾಂತ ಆಚಾರ್ಯ ಪ್ರಾಯ: 37 ವರ್ಷ ಎಂಬವರು ದಿನಾಂಕ: 18/5/2015 ರಂದು ಬೆಳಿಗ್ಗೆ 11.00 ಗಂಟೆಗೆ ಉಡುಪಿ ತಾಲೂಕಿನ ಬೊಮ್ಮಾರಬೆಟ್ಟು ಗ್ರಾಮದ ಪಂಚನಬೆಟ್ಟು ವಿನ ತನ್ನ ಮನೆ ಹತ್ತಿರದ ಮರದಿಂದ ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದು ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 19/5/2015 ರಂದು ಬೆಳಿಗ್ಗೆ 7:00 ಗಂಟೆಗೆ ಮೃತಪಟ್ಟಿರುವುದಾಗಿದೆ ಎಂಬುದಾಗಿ ಸುರೇಶ ಆಚಾರ್ಯ ರವರು ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 10/15 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

  • ಉಡುಪಿ: ದಿನಾಂಕ 12/05/2015 ರಂದು ಸಂಜೆ 17:30 ಗಂಟೆಗೆ ಶೇಖರ (48) ಭಟ್ರ ಹೌಸ್‌‌ ಕೊರಂಗ್ರಪಾಡಿ ಉಡುಪಿ ತಾಲೂಕು ರವರು ತನ್ನ ಸ್ವಂತ ಉಪಯೋಗಕ್ಕೋಸ್ಕರ ಅವರ ಬಾಡಿಗೆ ಮನೆಯ ಹಿಂಬದಿಯಿರುವ ತೆಂಗಿನ ಮರದಿಂದ ತೆಂಗಿನ ಕಾಯಿ ತೆಗೆಯಲು ಮರ ಹತ್ತಿದ್ದು ತೆಂಗಿನ ಕಾಯಿ ತೆಗೆಯುವ ಸಮಯ ತೆಂಗಿನ ಮರದಿಂದ ಅಕಸ್ಮಿಕವಾಗಿ ತೆಂಗಿನ ಮರದ ಹೆಡೆಯೊಂದಿಗೆ ಕೆಳಗೆ ಬಿದ್ದವರನ್ನು ಚಿಕಿತ್ಸೆಯ ಬಗ್ಗೆ ಕೆಎಂಸಿ ಆಸ್ಪತ್ರೆಗೆ ದಾಖಲು ಮಾಡಿದ್ದು ದಿನಾಂಕ: 19/05/2015 ರಂದು ಬೆಳಿಗ್ಗೆ ಸಮಯ 10:15 ಗಂಟೆಗೆ ಚಿಕಿತ್ಸೆಗೆ ಸ್ಪಂದಿಸದೇ ಮೃತ ಪಟ್ಟಿರುತ್ತಾರೆ ಎಂಬುದಾಗಿ ಲೋಕೇಶ್‌ (30) ತಂದ  ರಮೇಶ್‌ ಸನಿಲ್‌‌ ವಾಸ: ಸೈಟ್‌ ನಂ 314 5ನೇ ವಿಭಾಗ ಕೃಷ್ಣಾಪುರ ಕಾಟಿಪಳ್ಳ  ರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 24/15 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

No comments: