Saturday, May 16, 2015

Daily Crime Reports As on 16/05/2015 at 07:00 Hrs


ಅಪಘಾತ ಪ್ರಕರಣ:
  • ಕಾರ್ಕಳ ನಗರ: ದಿನಾಂಕ 13/05/2015 ರಂದು 19:30 ಗಂಟೆಗೆ ಕಾರ್ಕಳ ತಾಲೂಕಿನ ನೀರೆ ಗ್ರಾಮದ ನೀರೆ ಜಡ್ಡು ಎಂಬಲ್ಲಿ ಕಾರ್ಕಳ-ಉಡುಪಿ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಗೂಡ್ಸ್ ಟೆಂಪೋ ನಂಬ್ರ KA18A7138 ನೇಯದರ ಚಾಲಕ ತನ್ನ ಬಾಬ್ತು ಗೂಡ್ಸ್ ಲಾರಿಯನ್ನು ಉಡುಪಿ ಕಡೆಯಿಂದ ಕಾರ್ಕಳ ಕಡೆಗೆ ಅತಿವೇಗ ಹಾಗೂ ನಿರ್ಲಕ್ಷತನದಿಂದ ರಸ್ತೆಯ ತೀರಾ ಬಲಬದಿಯಲ್ಲಿ ಚಲಾಯಿಸಿಕೊಂಡು ಬಂದು, ಕಾರ್ಕಳ ಕಡೆಯಿಂದ ಉಡುಪಿ ಕಡೆಗೆ ಸಂತೋಷ ಚುಣಕಿ, ಪ್ರಾಯ 32 ವರ್ಷ, ತಂದೆ: ರಾಮರೆಡ್ಡಿ, ವಾಸ: ಹಂಚಿನಾಳ, ಸವದತ್ತಿ ತಾಲೂಕು, ಬೆಳಗಾಂ ಜಿಲ್ಲೆ ಇವರು ಚಲಾಯಿಸಿಕೊಂಡು ಬರುತ್ತಿದ್ದ ಕಾರು ನಂಬ್ರ KA29M9101 ನೇಯದಕ್ಕೆ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಸಂತೋಷ ಚುಣಕಿ, ಅಕ್ಷಯ ಮತ್ತು ಅಶೋಕ ಎಂಬವರಿಗೆ ಸಾಮಾನ್ಯ ಸ್ವರೂಪದ ರಕ್ತಗಾಯ ಹಾಗೂ ಸುನಂದ ಎಂಬವರ ಕೆಳಗಿನ ಮತ್ತು ಮೇಲ್ದವಡೆಯ ಕೆಲ ಹಲ್ಲುಗಳು ಉದುರಿ ಹೋಗಿದ್ದು, ಎರಡೂ ವಾಹನಗಳು ಜಖಂಗೊಂಡಿರುತ್ತವೆ ಎಂಬುದಾಗಿ ಸಂತೋಷ ಚುಣಕಿಯವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 61/2015 ಕಲಂ 279, 337, 338 ಐಪಿಸಿಉಂತೆ ಪ್ರಕ ರಣ ದಾಖಲಿಸಿಕೊಳ್ಳಲಾಗಿದೆ.

No comments: