Friday, May 15, 2015

Daily Crime Reports As on 15/05/2015 at 19:30 Hrsಅಪಘಾತ ಪ್ರಕರಣ

  • ಕಾರ್ಕಳ: ದಿನಾಂಕ 13/05/2015 ರಂದು 19:30 ಗಂಟೆಗೆ ಕಾರ್ಕಳ ತಾಲೂಕಿನ ನೀರೆ ಗ್ರಾಮದ ನೀರೆ ಜಡ್ಡು ಎಂಬಲ್ಲಿ ಕಾರ್ಕಳ-ಉಡುಪಿ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಗೂಡ್ಸ್ ಟೆಂಪೋ ನಂಬ್ರ KA 18A 7138 ನೇಯದರ ಚಾಲಕ ತನ್ನ ಗೂಡ್ಸ್ ಲಾರಿಯನ್ನು ಉಡುಪಿ ಕಡೆಯಿಂದ ಕಾರ್ಕಳ ಕಡೆಗೆ ಅತೀ ವೇಗ ಹಾಗೂ ನಿರ್ಲಕ್ಷತನದಿಂದ ರಸ್ತೆಯ ತೀರಾ ಬಲಬದಿಯಲ್ಲಿ ಚಲಾಯಿಸಿಕೊಂಡು ಬಂದು, ಕಾರ್ಕಳ ಕಡೆಯಿಂದ ಉಡುಪಿ ಕಡೆಗೆ ಪಿರ್ಯಾದಿದಾರರಾದ ಸಂತೋಷ ಚುಣಕಿ (32) ತಂದೆ ರಾಮರೆಡ್ಡಿ, ವಾಸ ಹಂಚಿನಾಳ, ಸವದತ್ತಿ ತಾಲೂಕು, ಬೆಳಗಾಂ ಜಿಲ್ಲೆ ರವರು ಚಲಾಯಿಸಿಕೊಂಡು ಬರುತ್ತಿದ್ದ ಕಾರು ನಂಬ್ರ KA 29M 9101 ನೇಯದಕ್ಕೆ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಪಿರ್ಯಾದುದಾರರಿಗೆ, ಅಕ್ಷಯ, ಅಶೋಕ ಮತ್ತು ಸುನಂದ ಎಂಬವರಿಗೆ ರಕ್ತಗಾಯವಾಗಿರುತ್ತದೆ, ಎರಡೂ ವಾಹನಗಳು ಜಖಂಗೊಂಡಿರುತ್ತವೆ ಎಂಬುದಾಗಿ ಸಂತೋಷ ಚುಣಕಿ ರವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 61/15 ಕಲಂ 279, 337, 338 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಲಾಗಿದೆ.No comments: