Saturday, May 16, 2015

Daily Crime Reports As On 16/05/2015 At 17:00 Hrs


ಅಪಘಾತ ಪ್ರಕರಣ
  • ಹೆಬ್ರಿ : ಪಿರ್ಯಾದಿ ಹರ್ಷದ್‌(22) ಎಂಬುವವರು ದಿನಾಂಕ 15-05-2015 ರಂದು ಕೆ.ಎ.20.ಇ.ಇ.6481 ನೇ ಮೋಟಾರ್‌ ಸೈಕಲಿನಲ್ಲಿ ನಿತಿನ್‌ ಎಂಬುವವರನ್ನು ಕುಳ್ಳಿರಿಸಿಕೊಂಡು ಹೆಬ್ರಿ ಕಡೆಗೆ ಹೋಗುತ್ತಿರುವಾಗ ಸಮಯ ಸುಮಾರು 9:00 ಗಂಟೆಗೆ ಮುದ್ರಾಡಿ ಗ್ರಾಮದ ಕೆಳಕಿಲ ಎಂಬಲ್ಲಿಗೆ ತಲುಪುವಾಗ್ಯೆ ಇವರ ಮುಂದುಗಡೆಯಿಂದ ಹೋಗುತ್ತಿದ್ದ ಕೆ.ಎ.20.ಸಿ.3287 ನೇ ಆಟೋರಿಕ್ಷಾವನ್ನು ಅದರ ಚಾಲಕ ಪ್ರಶಾಂತ ಎಂಬುವವರು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಒಮ್ಮೆಲೆ ಬಲ ಬದಿಗೆ ತಿರುಗಿಸಿ ಪಿರ್ಯಾದಿದಾರರ ಮೋಟಾರ್ ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಹಾಗೂ ಸಹ ಸವಾರರು ಮೋಟಾರ್‌ ಸೈಕಲ್‌ ಸಮೇತ ರಸ್ತೆಗೆ ಬಿದ್ದು, ರಕ್ತ ಗಾಯಗೊಂಡು ಕಾರ್ಕಳದ ಸ್ಪಂದನ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಹರ್ಷದ್‌ (22), ತಂದೆ:- ಮೊಹಮ್ಮದ್‌ ಭಾವ ವಾಸ:- ನಿಯಾಜ್‌ ಮಂಜಿಲ್, ದೆಪ್ಪುತ್ತೆ ರೋಡ್‌, ಐದು ಸೆನ್ಸ್‌, ಅಜೆಕಾರು, ಮರ್ಣೆ ಗ್ರಾಮ, ಕಾರ್ಕಳ ತಾಲೂಕು. ರವರು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 46 /15 ಕಲಂ: 279, 337, 338 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣಗಳು:
  •  ಕುಂದಾಪುರ: ದಿನಾಂಕ 24/04/2015 ರಂದು ಪಿರ್ಯಾದಿ ಭರತ್ ನಾಯಕ್ (27) ತಂಧೆ: ವಿಠಲ್ ನಾಯಕ್ ವಾಸ: ರಾಮ ಮಂದಿರದ ಹಿಂಭದಿ ಕಸಬಾ ಕುಂದಾಪುರ  ಇವರ ಮನೆಗೆ ಕಡೂರು ವಾಸಿ ಸುಮಾರು (35 )ಪ್ರಾಯದ ಮೃತ ತಿಮ್ಮಯ್ಯ ಎಂಬವರು ಬಾಡಿಗೆಗೆ ರೂಮು ಕೇಳಿ ಬಂದು ಬಾಡಿಗೆ ಪಡೆದಿದ್ದು ರೂಮಿನಲ್ಲಿ ಒಬ್ಬರೇ ಇರುತ್ತಿದ್ದು ಬೆಳಿಗ್ಗೆ ಹೋದವರು ರಾತ್ರಿ ಬರುತ್ತಿದ್ದು ನಿನ್ನೆ ದಿನಾಂಕ 15/05/2015 ರಂದು ರಾತ್ರಿ  ಸುಮಾರು 9.00 ಗಂಟೆಗೆ ತಿಮ್ಮಯ್ಯವನವರು ರೂಮಿಗೆ ಬಂದಿದ್ದು ಈ ದಿನ ಬೆಳೀಗ್ಗೆ 08.00 ಗಂಟೆಗೆ ಪಿರ್ಯಾಧಿದಾರರ ತಂದೆ ಹೋಗಿ ನೋಡಿದಾಗ ತಿಮ್ಮಯ್ಯನವರು ಪಕ್ಕಾಸಿಗೆ ನೈಲಾನ್ ಹಗ್ಗದಿಂದ ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಭರತ್‌ ನಾಯಕ್‌ ರವರು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 19/2015 ಕಲಂ: 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

No comments: