Wednesday, May 06, 2015

Daily Crime Reports As on 06/05/2015 at 19:30 Hrs

ಅಪಘಾತ ಪ್ರಕರಣ
  • ಶಂಕರನಾರಾಯಣ : ದಿನಾಂಕ 05/05/2015 ರಂದು ಮಧ್ಯಾಹ್ನ 3.30ಗಂಟೆಗೆ ಕುಂದಾಪುರ ತಾಲೂಕು 74 ನೇ ಉಳ್ಳೂರು ಗ್ರಾಮದ ಕೋಟ್ರೇನ್ ಎಂಬಲ್ಲಿ ಪ್ರಭಾಕರ ನಾಯ್ಕ ಕೆಎ 20 ಇಹೆಚ್ 4430 ನೇ ಮೋಟಾರ್ ಸೈಕಲ್ ಸವಾರ ತನ್ನ ಬಾಬ್ತು ಮೋಟಾರು ಸೈಕಲ್ ನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಮೋಟಾರು ಸೈಕಲ್ ಸ್ಕಿಡ್ ಆಗಿ ಬಿದ್ದು ಅಪಘಾತ ಸಂಭವಿಸಿದ್ದು, ಈ ಅಪಘಾತದಿಂದ ಸದ್ರಿ ಮೋಟಾರು ಸೈಕಲ್ ನಲ್ಲಿ ಸಹಸವಾರನಾಗಿ ಕುಳಿತಿದ್ದ ಉದಯ ಪೂಜಾರಿ (30) ತಂದೆ: ಕುಷ್ಟ ಪೂಜಾರಿ ವಾಸ: ದೊಡ್ಡಹಕ್ಲು ಉಳ್ಳೂರು 74 ಗ್ರಾಮ ಇವರಿಗೆ ಬಲಕಾಲು ಮೋಟಾರು ಸೈಕಲ್‌ನ ಟಯರ್ ಅಡಿ ಸಿಲುಕಿ ರಕ್ತಗಾಯವಾಗಿರುತ್ತದೆ ಎಂಬುದಾಗಿ ಉದಯರವರು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 83/15 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕಳವು ಪ್ರಕರಣ
  • ಶಂಕರನಾರಾಯಣ : ದಿನಾಂಕ: 04/05/2015ರ ರಾತ್ರಿ 11.00 ಗಂಟೆಯಿಂದ ದಿನಾಂಕ: 05/05/2015 ರ ಬೆಳಿಗ್ಗೆ 4.30 ಗಂಟೆಯ ಮಧ್ಯಾವಧಿಯಲ್ಲಿ ಕುಂದಾಪುರ ತಾಲೂಕು ಹಿಲಿಯಾಣ ಗ್ರಾಮದ ಹಿಲಿಯಾಣಜೆಡ್ಡು ಎಂಬಲ್ಲಿರುವ ಸಂಜೀವಿ ಶೆಡ್ತಿ (46) ಗಂಡ: ರಾಜೀವ ಶೆಟ್ಟಿ ವಾಸ: ಹಿಲಿಯಾಣಜೆಡ್ಡು, ಹಿಲಿಯಾಣ ಗ್ರಾಮ ಕುಂದಾಪುರ ಇವರ ಮನೆಯ ದನದ ಕೊಟ್ಟಿಗೆಯ ಹೊರಗೆ ಕಟ್ಟಿರುವ ಇವರ ಬಾಬ್ತು ರೂ 27,000/- ಮೌಲ್ಯದ ಜೆರ್ಸಿ ದನವನ್ನು ಯಾರೋ ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂಬುದಾಗಿ ಸಂಜೀವಿ ಶೆಡ್ತಿಯವರು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 84/15 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: