Thursday, May 07, 2015

Daily Crime Reports As on 07/05/2015 at 07:00 Hrs

ಅಸ್ವಾಭಾವಿಕ ಮರಣ ಪ್ರಕರಣ:
  • ಮಣಿಪಾಲ:ಪಿರ್ಯಾದಿ ಸಿದ್ಧಪ್ಪ ಗದಿಗಪ್ಪ ಹಡಪದ (30), ತಂದೆ: ಗದಿಗಪ್ಪ, ವಾಸ: ಚಿಕ್ಕಮೂಲಂಗಿ, ರಾಮದುರ್ಗಾ ತಾಲೂಕು, ಬೆಳಗಾವಿ ಜಿಲ್ಲೆ. ಇವರ ಅಳಿಯ ಮಲ್ಲಿಕಾರ್ಜುನ (27) ಎಂಬವನು ಪ್ರಗತಿ ನಗರ ಎಂಬಲ್ಲಿ ತನ್ನ ತಂದೆ, ತಾಯಿ ಮತ್ತು ಹೆಂಡತಿಯೊಂದಿಗೆ ವಾಸವಾಗಿದ್ದವನು ಇತ್ತೀಚಿಗೆ ತಂದೆ, ತಾಯಿ ಮತ್ತು ಹೆಂಡತಿಯೊಂದಿಗೆ ಊರಿಗೆ ಹೋದವನು ವಾಪಾಸು ಎರಡು ದಿನಗಳ ಹಿಂದೆ ಒಬ್ಬನೆ ಪ್ರಗತಿ ನಗರಕ್ಕೆ ಬಂದು ಕೂಲಿ ಕೆಲಸ ಮಾಡಿಕೊಂಡು ಇದ್ದವನು ದಿನಾಂಕ 05.05.2015 ರಂದು ರಾತ್ರಿ ಸಮಯ 9:00 ಗಂಟೆಯಿಂದ ಬೆಳಿಗ್ಗೆ 7:00 ಗಂಟೆಯ ನಡುವಿನ ಅವಧಿಯಲ್ಲಿ ತನ್ನ ಯಾವುದೋ ವೈಯುಕ್ತಿಕ ಕಾರಣಗಳಿಂದ ಮನೆಯ ಒಳಗಡೆ ತಗಡು ಶೀಟಿನ ಮಾಡಿನ ಮರದ ಅಡ್ಡಕ್ಕೆ ಹುರಿ ಹಗ್ಗವನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಯುಡಿಆರ್ ನಂಬ್ರ 18/2015 ಕಲಂ 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಇತರ ಪ್ರಕರಣ:
  • ಮಣಿಪಾಲ: ಫಿರ್ಯಾದಿ: ಶ್ರೀಮತಿ ಮೆಟಿಲ್ಡಾ ಹಿಲ್ಡಾ ಡಿ’ಸೋಜ. ಗಂಡ: ಅಲ್ಫೋನ್ಸ್‌‌ ಡಿ’ಸೋಜ, ವಾಸ: ಚರ್ಚ್‌ ರಸ್ತೆ, ಪೆರಂಪಳ್ಳಿ, ಶಿವಳ್ಳಿ ಗ್ರಾಮ, ಉಡುಪಿ ತಾಲೂಕು. ಇವರು ಇಸ್ರೇಲ್‌ ದೇಶದಲ್ಲಿ ಕೆಲಸ ಮಾಡಿಕೊಂಡಿದ್ದವರು ಫೇಸ್ ಬುಕ್ ನಲ್ಲಿ ಟೈಲರ್ ಮೈಕ್ ಎಂಬವರ ಪರಿಚಯ ಆಗಿ ರಾಯಲ್ ಎಕ್ಸ್‌‌‌ಪ್ರೆಸ್ ಸರ್ವೀಸ್‌ ಎಂಬ ಕಂಪೆನಿಯಿಂದ ಕ್ರಿಸ್‌ಮಸ್ ಗಿಪ್ಡ್‌ ಕಳುಹಿಸಿದ್ದು, ಅದರ ಎಲ್ಲಾ ಚಾರ್ಜನ್ನು ಅವರೇ ಕಟ್ಟಿರುವುದಾಗಿ ಫೇಸ್ ಬುಕ್ ನಲ್ಲಿ ಮೆಸೇಜ್ ಮಾಡಿ ತಿಳಿಸಿದ್ದು, ಹಾಗೂ ಪೋನ್ ನಂಬ್ರ 00447937452474 ಎಂಬುದಾಗಿ ನಂಬ್ರವನ್ನು ನೀಡಿ ನಿಮ್ಮ ಪಾರ್ಸೆಲ್‌ ಕಸ್ಟಮ್‌ನಲ್ಲಿ ಹೋಲ್ಡ್‌ ಮಾಡಿದ್ದಾರೆ ಅದನ್ನು ಕ್ಲಿಯರೆನ್ಸ್ ಮಾಡಲು ರೂ. 900 ಡಾಲರ್ ಹಣವನ್ನು ಕಳುಹಿಸಬೇಕಾಗಿ ರಾಯಲ್ ಎಕ್ಸ್‌‌‌ಪ್ರೆಸ್ ಸರ್ವೀಸ್ ನಿಂದ ಮೇಲ್ ಹಾಗೂ ಪೋನ್ ಮಾಡಿ ತಿಳಿಸಿದ್ದು, ಫಿರ್ಯಾದಿ ಮನಿಗ್ರಾಮ (GMT) 900 ಡಾಲರನ್ನು ಇಸ್ರೇಲ್‌ ನಿಂದ ಮನಿಗ್ರಾಮ್ ಮಾಡಿ ನಂತರ ಅದೇ ಕಂಪೆನಿಯಿಂದ ಇನ್ನೂ ಹಣ ಬೇಕೆಂದು ಕೇಳಿದಾದ 2,800 ಡಾಲರ್ ಮತ್ತು ಇನ್ನೊಮ್ಮೆ 3,700 ಡಾಲರನ್ನು Nelly Wayne ಎಂಬವರ ಹೆಸರಿಗೆ ಮೊದಲಿನಿಂದ ಟ್ರಾನ್ಸ್‌ ‌‌‌ಫರ್ ಮಾಡಿದ್ದು, ನಂತರ ಭಾರತಕ್ಕೆ ಬಂದ ಬಳಿಕ ಪುನಃ ಹಣ ಕೊಡಬೇಕೆಂದು ಬೇಡಿಕೆ ಇಟ್ಟಾಗ ರೂ. 1,40,000/- ಹಣವನ್ನು ಅದೇ ಕಂಪೆನಿಯ ಏಜೆಂಟ್ ಅಗಸ್ಟಿನ್ ಡೀನ್ ಎಂಬವರ ಅಕೌಂಟಿಗೆ ಹಣವನ್ನು ಕಟ್ಟಿದ್ದು, ಅಲ್ಲದೆ ನಂತರದ ದಿನಗಳಲ್ಲಿಯೂ ಒಟ್ಟು 46 ಲಕ್ಷ ಹಣವನ್ನು ಅದೇ ಕಂಪೆನಿಯ ಅಕೌಂಟಿಗೆ ಮನಿ ಟ್ರಾನ್ಸ್‌‌‌ಫರ್‌‌ ಮಾಡಿದ್ದು, ಫಿರ್ಯಾಧಿಗೆ ಮೋಸ ಮಾಡುವ ಉದ್ಧೇಶದಿಂದ ಗಿಪ್ಟ್‌ ಪಾರ್ಸೆಲನ್ನು ಕಳುಹಿಸಿ ಅಂತರ್ ಜಾಲದಲ್ಲಿ ಹಣವನ್ನು ಮೋಸದಿಂದ ಲಪಟಾಯಿಸಿರುವುದಾಗಿದೆ. ಈ ಬಗ್ಗೆ ಮಣಿಪಾಲ ಠಾಣಾ ಅಪರಾಧ ಕ್ರಮಾಂಕ  70/2015 ಕಲಂ 66(A)66(D)66(C) Information Technology Act 2008 ಹಾಗೂ 420 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಮಟ್ಕಾ ಜುಗಾರಿ ಪ್ರಕರಣ :
  • ಕೋಟ: ದಿನಾಂಕ 06/05/2015 ರಂದು 18:45 ಘಂಟೆಗೆ ಠಾಣಾ ವ್ಯಾಪ್ತಿಯ ಐರೋಡಿ ಗ್ರಾಮದ ಸುಷ್ಮಾ ವೈನ್ ಶಾಪ್ ಬಳಿ ಇರುವ ಮೀನು ಮಾರ್ಕೆಟ್ ಬಳಿ ಓರ್ವ ವ್ಯಕ್ತಿಯು ಅಕ್ರಮವಾಗಿ ಸಾರ್ವಜನಿಕರನ್ನು ಸೇರಿಸಿಕೊಂಡು ಹಣವನ್ನು ಪಣವಾಗಿ ಸ್ವೀಕರಿಸಿ ಮಟ್ಕಾ ನಂಬ್ರವನ್ನು ಪ್ರತಿಯಾಗಿ ಬರೆದುಕೊಟ್ಟು ಮಟ್ಕಾ ಜುಗಾರಿ ಆಡುತ್ತಿರುವುದಾಗಿ ಖಚಿತ ವರ್ತಮಾನದ ಮೇರೆಗೆ 1 ರೂಪಾಯಿಗೆ 70 ರೂಪಾಯಿ ಎಂಬುದಾಗಿ ಹೇಳಿ ಸಾರ್ವಜನಿಕರಿಂದ ಹಣವನ್ನು ಪಣವಾಗಿ ಸಂಗ್ರಹಿಸಿ ಮಟ್ಕಾ ಚೀಟಿ ಬರೆದು ಕೊಡುತ್ತಿರುವುದನ್ನು ಖಚಿತ ಪಡಿಸಿಕೊಂಡು 19:00 ಗಂಟೆಗೆ ದಾಳಿ ನಡೆಸಿದಾಗ ಆರೋಪಿತನನ್ನು ಹಿಡಿದು ಅವರಲ್ಲಿ ಹೆಸರು ವಿಳಾಸ ಕೇಳಲಾಗಿ ವಿಶ್ವನಾಥ ,ಪ್ರಾಯ: 50 ವರ್ಷ, ತಂದೆ: ದಿ;ತಿಮ್ಮಪ್ಪ ಶೆಟ್ಟಿ  ವಾಸ: ಹಾಡಿಮನೆ,  ಮಣೂರು  ಗ್ರಾಮ, ಉಡುಪಿ  ತಾಲೂಕು ಎಂಬುದಾಗಿ ತಿಳಿಸಿದ್ದು, ತನ್ನ ಸ್ವಂತ ಲಾಭಕ್ಕಾಗಿ ಮಟ್ಕಾ-ಜುಗಾರಿ ನಡೆಸುತ್ತಿರುವುದಾಗಿ ತಿಳಿಸಿದ್ದು,ತನ್ನ ಸ್ವಂತ ಲಾಭಕ್ಕಾಗಿ ಮಟ್ಕಾ-ಜುಗಾರಿ ನಡೆಸುತ್ತಿರುವುದಾಗಿ ತಿಳಿಸಿದ್ದು, ಸದ್ರಿಯವರನ್ನು ಜಪ್ತಿ ಮಾಡಲಾಗಿ ಮಟ್ಕಾ ಬರೆದ ಚೀಟಿ-1, ಬಾಲ್ ಪೆನ್ನು -1  ಹಾಗೂ ನಗದು ರೂಪಾಯಿ  320 /-  ದೊರೆತಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 92/2015 ಕಲಂ:78 (1)(111) ಕೆ.ಪಿ. ಆಕ್ಟ್ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಗಂಡಸು ಕಾಣೆ:
  • ಕೋಟ: ದಿನಾಂಕ:03-05-2015 ರಂದು ಮಧ್ಯಾಹ್ನ 12.00 ಗಂಟೆ ಸಮಯಕ್ಕೆ ಪಿರ್ಯಾದಿ ಕೇಶವ ಪೈ(64)ತಂದೆ: ದಿ:ಕೃಷ್ಣರಾಯ ಪೈ, ವಾಸ: ನೀರಾಡಿ ಜಡ್ಡು, ಪಾಂಡೇಶ್ವರ ಗ್ರಾಮ, ಸಾಸ್ತಾನ ಅಂಚೆ, ಉಡುಪಿ ತಾಲೂಕು. ಇವರ ಮಗನಾದ ವಿನಾಯಕ ಪೈ(22) ಎಂಬುವನು ಸಾಸ್ತಾನ ಪೇಟೆಗೆ ಹೋಗಿ ಬರುವುದಾಗಿ ಹೇಳಿ ಮನೆಯಲ್ಲಿದ್ದ ರೂ.1000/- ವನ್ನು ತೆಗೆದುಕೊಂಡು ಹೋದವನು ಇಲ್ಲಿಯವರೆಗೂ ಮನೆಗೆ ಬಾರದೇ ಕಾಣೆಯಾಗಿದ್ದು, ನೆರೆಕರೆಯವರಲ್ಲಿ ಹಾಗೂ ಸಂಬಂಧಿಕರಲ್ಲಿ ವಿಚಾರಿಸಿದಲ್ಲಿಯೂ ಪತ್ತೆಯಾಗಿರುವುದಿಲ್ಲ . ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 91/2015 ಕಲಂ: ಗಂಡಸು ಕಾಣೆ  ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: