Wednesday, May 06, 2015

Daily Crime Reported As On 06/05/2015 At 17:00 Hrsಗಂಡಸು ಕಾಣೆ ಪ್ರಕರಣ
  • ಕಾರ್ಕಳ ನಗರ : ಬೆಳುವಾಯಿ ಗ್ರಾಮದ ನಿವಾಸಿ, ಪಿರ್ಯಾದಿ ಜೋಸ್ಪಿನ್ ಮಿನೆಜಸ್, ಪ್ರಾಯ 65 ವರ್ಷ, ಗಂಡ: ಜಾಕೋಬ್ ಮಿನೆಜಸ್, ಬ್ಲೋಸಮ್ ಕಾಂಪ್ಲೆಕ್ಸ್, 2 ನೇ ಮಹಡಿ, ಬೆಳುವಾಯಿ ಗ್ರಾಮ, ಮಂಗಳೂರು ತಾಲೂಕು ಇವರ ಮಗ ಸುಮಾರು (44) ಸಿಲ್ವೆಸ್ಟರ್ ಮೆನೆಜಸ್ ಎಂಬವರು ಕಾರ್ಕಳದ ಜನಪ್ರಿಯ ಹೊಟೇಲಿನಲ್ಲಿ ಕೆಲಸ ಮಾಡಿಕೊಂಡಿದ್ದವರು, ದಿನಾಂಕ 06.04.2015 ರಂದು ಬೆಳಗ್ಗೆ 9:00 ಗಂಟೆಗೆ ಮನೆಗೆ ಬಂದು ಹೋದವರು ದಿನಾಂಕ 7.4.2015 ರಂದು ಬೆಳಗ್ಗಿನ ಸಮಯ ಅಮಲು ಪದಾರ್ಥ ಸೇವಿಸಿ ಜನಪ್ರಿಯ ಹೊಟೇಲಿನ ಹಿಂಬದಿಯಲ್ಲಿರುವ ಬಾವಿ ಕಟ್ಟೆಯ ಮೇಲೆ ಕುಳಿತಾಗ ಬಾವಿಗೆ ಬಿದ್ದಿದ್ದು, ನಂತರ ವಿಕ್ರಮ್ ಎಂಬವರು ಬಾವಿಯಿಂದ ಮೇಲಕ್ಕೆತ್ತಿದ ನಂತರ, ಸಿಲ್ವೆಸ್ಟರ್ ಮೆನೆಜಸ್‌‌ರವರು ಗಾಂಧಿ ಮೈದಾನದ ರಸ್ತೆಯ ಕಡೆಗೆ ನಡೆದುಕೊಂಡು ಹೋದವರು ಇದುವರೆಗೆ ವಾಪಾಸು ಮನೆಗೆ ಬಾರದೇ ಕಾಣೆಯಾಗಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 45/2015 ಕಲಂ ಗಂಡಸು ಕಾಣೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಅಪಘಾತ ಪ್ರಕರಣ:

  • ಬ್ರಹ್ಮಾವರ: ದಿನಾಂಕ 04/05/2015 ರಂದು ರಾತ್ರಿ ಸುಮಾರು 20:00 ಗಂಟೆಗೆ ಉಡುಪಿ ತಾಲೂಕು ಹೇರೂರು ಗ್ರಾಮದ ಹೇರೂರು ರಿಕ್ಷಾ ನಿಲ್ದಾಣದ ಹತ್ತಿರ ಪಿರ್ಯಾದಿ ಶಿವರಾಮ್ ಗಾಣಿಗ, (66), ತಂದೆ: ದಿ| ಗೋವಿಂದ ಗಾಣಿಗ ವಾಸ:  ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹತ್ತಿರ, 52ನೇ ಹೇರೂರು ಗ್ರಾಮ, ಉಡುಪಿ ತಾಲೂಕು ರವರು ರಸ್ತೆ ಬದಿಯಲ್ಲಿ  ನಿಂತುಕೊಂಡಿರುವುವಾಗ  ಆರೋಪಿತ ದಿಕ್ಷೀತ್, ತನ್ನ ಕೆಎ-20-ಡಬ್ಲೂ-5908 ನೇ ಮೋಟಾರು ಸೈಕಲ್ ನಲ್ಲಿ ಸಹಸವಾರರನ್ನು ಕುಳ್ಳಿರಿಸಿಕೊಂಡು ಉಡುಪಿ ಕಡೆಯಿಂದ ಬ್ರಹ್ಮಾವರ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ಎಡಬದಿಗೆ ಚಲಾಯಿಸಿ ರಸ್ತೆ ದಾಟಲು ನಿಂತಿದ್ದ ಪಿರ್ಯಾದಿದಾರರಾದ ಶಿವರಾಮ ಗಾಣಿಗರಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದದಾರರ ತಲೆಯ ಎಡಬದಿಗೆ, ಬಲಗೈಯ ಮುಂಗೈ ಗೆ ಮತ್ತು ಬಲಕಾಲಿಗೆ ರಕ್ತಗಾಯವಾಗಿದ್ದು ಸವಾರ ಮತ್ತು ಸಹಸವಾರರಿಬ್ಬರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು ಸವಾರ ದೀಕ್ಷತ್ ಎಂಬುವರ ಮುಖಕ್ಕೆ ರಕ್ತಗಾಯವಾಗಿದ್ದು ಸಹಸವಾರಿಗೆ ಸಣ್ಣ ಸಣ್ಣ ಗಾಯವಾಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಅಪರಾಧ ಕ್ರಮಾಂಕ 70/15 ಕಲಂ: 279, 338 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಅಸ್ವಾಭಾವಿ ಮರಣ ಪ್ರಕರಣ:

  • ಕೊಲ್ಲೂರು: ದಿನಾಂಕ:05.05.2015 ರಂದು  ಸಂಜೆ 05:30 ರಿಂದ 07:00  ಗಂಟೆಯ ನಡುವಣ ಅವಧಿಯಲ್ಲಿ ಕೊಲ್ಲೂರು ಠಾಣಾ ಸರಹದ್ದಿನ ಕೆರಾಡಿ ಗ್ರಾಮದ ಮೇಲ್ ಬಟ್ರಾಡಿ ಸರಕಾರಿ ಕಾಡಿನಲ್ಲಿ 32 ವರ್ಷ ಪ್ರಾಯದ ರಘುರಾಮ ಶಟ್ಟಿ ಎಂಬವರು ವಿಪರೀತ ಮದ್ಯಪಾನದ ಚಟ ಹೊಂದಿದ್ದು ಮಾನಸಿಕ ಖಿನ್ನತೆಯಿಂದ ಬಳಲಿ ಜೀವನದಲ್ಲಿ ಜಿಗುಪ್ಸೆ ಹೊಂದಿ ಗೇರು ಮರದ ಗೆಲ್ಲಿಗೆ ಲುಂಗಿಯಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವುದಾಗಿ  ಎನ್ನುವುದಾಗಿ ಶ್ರೀ ಮಹಾಬಲ ಶೆಟ್ಟಿ   (65) ತಂದೆ: ಗೋವಿಂದ ಶೆಟ್ಟಿ ವಾಸ: ಮೇಲ್ ಬಟ್ರಾಡಿಮನೆ ಕೆರಾಡಿ ಗ್ರಾಮ,  ಕುಂದಾಪುರ ತಾಲೂಕು ರವರು ಕೊಲ್ಲೂರು ಠಾಣೆಗೆ ದೂರು ನೀಡಿದ್ದು ಠಾಣಾ ಯುಡಿಆರ್‌ ನಂಬ್ರ 07/15 ಕಲಂ 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಜುಗಾರಿ ಪ್ರಕರಣ:
  • ಬ್ರಹ್ಮಾವರ: ದಿನಾಂಕ: 05/05/2015 ರಂದು 16:30 ಗಂಟೆಗೆ ಉಡುಪಿ ತಾಲೂಕು ವಾರಂಬಳ್ಳಿ ಗ್ರಾಮದ ಮದರ್ ಪ್ಯಾಲೇಸ್ ಹೋಟೆಲ್ ರೂಂ ನಂ: 214 ಕ್ಕೆ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಮೇರೆಗೆ ಶ್ರೀ ಟಿ.ಆರ್ ಜಯ್‌ಶಂಕರ್ ಪೊಲೀಸ್ ನಿರೀಕ್ಷಕರು, ಜಿಲ್ಲಾ ಅಪರಾಧ ಪತ್ತೆ ದಳ ಉಡುಪಿ ಇವರು ಸಿಬ್ಬಂದಿಯವರೊಂದಿಗೆ ಧಾಳಿ ನಡೆಸಿ ರೂಮಿನ ಒಳಗಡೆ ಹಣವನ್ನು ಪಣವಾಗಿಟ್ಟು ಅಂದರ್ ಬಾಹರ್ ಇಸ್ಪೀಟ್ ಆಟ ಆಡುತ್ತಿದ್ದ ಆಪಾದಿತರಾದ 1] ಸಂತೋಷ್, ತಂದೆ, ಶಿವರಾಮ್, ವಾಸ: ಪೇತ್ರಿ, ಮಡಿ, ಚೇರ್ಕಾಡಿ ಗ್ರಾಮ, ಉಡುಪಿ ತಾಲೂಕು2] ಹಿಲರಿ ಡಿ’ಸೋಜಾ ತಂದೆ: ಡೇನಿಸ್ ಡಿ’ಸೊಜಾ, ವಾಸ: ಪೇತ್ರಿ, ಮಡಿ, ಚೇರ್ಕಾಡಿ ಗ್ರಾಮ, ಉಡುಪಿ ತಾಲೂಕು 3] ರಾಜೇಶ್, ತಂದೆ, ಕೃಷ್ಣಪ್ಪ, ವಾಸ: ವಾಸ: ಪೇತ್ರಿ, ಚೇರ್ಕಾಡಿ ಗ್ರಾಮ, ಉಡುಪಿ ತಾಲೂಕು4] ಜಯಕರ ಶೆಟ್ಟಿ ತಂದೆ: ಅನಂದ ಶೆಟ್ಟಿ, ವಾಸ: ಪೇತ್ರಿ, ಚೇರ್ಕಾಡಿ ಗ್ರಾಮ, ಉಡುಪಿ ತಾಲೂಕು 5]ರೋಶನ್, ತಮದೆ, ಜಯವಿಠ್ಠಲ್ ವಾಸ: ಪೇತ್ರಿ, ಚೇರ್ಕಾಡಿ ಗ್ರಾಮ, ಉಡುಪಿ ತಾಲೂಕು6] ರವಿ ಶೆಟ್ಟಿ, ತಂದೆ: ಶಿವರಾಮ್ ಶೆಟ್ಟಿ ವಾಸ: ಪೇತ್ರಿ, ಮಡಿ, ಚೇರ್ಕಾಡಿ ಗ್ರಾಮ, ಉಡುಪಿ ತಾಲೂಕು ಇವರನ್ನು ದಸ್ತಗಿರಿ ಮಾಡಿ ಇಸ್ಪಿಟ್ ಆಟಕ್ಕೆ ಉಪಯೋಗಿಸಿದ 70040 ರೂ ನಗದು , 52 ಇಸ್ಪೀಟ್ ಎಲೆ,  ಮತ್ತು ಆಟಕ್ಕೆ ಬಳಸಿದ ಪ್ಲಾಸ್ಟಿಕ್ ಟೇಬಲ್ , 2 ಬೆಡ್ ಶೀಟ್ ಹಾಗೂ 6 ಕುರ್ಚಿಗಳನ್ನು ಸ್ವಾದೀನಪಡಿಸಿಕೊಂಡಿದ್ದಾಗಿದೆ. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ 71/15 ಕಲಂ: 79,80 ಕೆ.ಪಿ ಆ್ಯಕ್ಟ್ 1963 ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: