Wednesday, May 06, 2015

Daily Crime Reports As on 06/05/2015 at 07:00 Hrs

ಅಪಘಾತ ಪ್ರಕರಣ :
  • ಉಡುಪಿ ಸಂಚಾರ : ದಿನಾಂಕ 05.05.2015 ರಂದು ಸಮಯ ಸುಮಾರು 13:00 ಗಂಟೆ ಸಮಯಕ್ಕೆ ಭರತ್ ತಿಂಗಳಾಯ (35)ತಂದೆ:ಲಕ್ಷ್ಮಣ್ ಕೋಟ್ಯಾನ್ ವಾಸ: ಮೂಡಬೆಟ್ಟು ಮನೆ ಬಳ್ಳಂಪಳ್ಳಿ ಗ್ರಾಮ ಮತ್ತು ಅಂಚೆ ಉಡುಪಿ ಇವರ ಸಂಭಂದಿ ಸಂದೀಪ್ ಎಂಬವರು ತಮ್ಮ ಮೋಟಾರ್ ಸೈಕಲ್ ನಂಬ್ರ ಕೆಎ 20. ಇಸಿ 6903 ನೇಯದರಲ್ಲಿ ಸಂತೆಕಟ್ಟೆ ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಾ ಅದರ ಮುಂದಿನಿಂದ ಹೋಗುತಿದ್ದ ಮೋಟಾರ್‌ ಸೈಕಲ್‌ ನಂಬ್ರ ಕೆಎ 20 6990ನೇದರ ಚಾಲಕ ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸುತ್ತಾ ಅಂಬಾಗಿಲು ಜಂಕ್ಷನ್ ಬಳಿ ಒಮ್ಮಲೇ ಯಾವುದೇ ಸೂಚನೆಯನ್ನು ನೀಡದೇ ಬಲಕ್ಕೆ ತಿರುಗಿಸಿದ ಪರಿಣಾಮ ಸಂದೀಪನು ಚಲಾಯಿಸುತಿದ್ದ ಕೆಎ 20 ಇಸಿ 6903 ನಂಬ್ರದ ಬೈಕ್‌ಗೆ ಡಿಕ್ಕಿ ಹೊಡೆದು ಎರಡೂ ಬೈಕ್ ಹಾಗೂ ಅದರ ಸವಾರರು ರಸ್ತೆಗೆ ಬಿದ್ದು, ಸಂದೀಪನಿಗೆ ತಲಗೆ ಭುಜಕ್ಕೆ ಒಳ ಜಖಂ ಆಗಿರುತ್ತದೆ. ಸದ್ರಿ ಅಪಘಾತಕ್ಕೆ ಕೆಎ-20 ಎಸ್ -6990ನೇ ಬೈಕ್ ಸವಾರನ ಅತೀವೇಗ ಹಾಗೂ ಅಜಾಗರೂಕತೆಯೇ ಕಾರಣವಾಗಿರುತ್ತದೆ ಎಂಬುದಾಗಿ ಭರತ್‌ ನೀಡಿದ ದೂರಿನಂತೆ ಉಡುಪಿ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ: 39/2015 ಕಲಂ. 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಉಡುಪಿ ಸಂಚಾರ:ಶೇಖರ್ (53) ತಂದೆ:ದಿ.ಮುತ್ತು ಗೌಂಡರ್ ವಾಸ: ಮನೆ ನಂ.2-2-44 ಬಿ4, ಶೀರಿಬೀಡು, ಉಡುಪಿರವರು ದಿನಾಂಕ:05/05/2015 ರಂದು ನಿಟ್ಟೂರು ವೈಭವ್ ಮೋಟಾರ್ಸ್ ಬಳಿ ಸಮಯ ಸುಮಾರು ಸಂಜೆ 07:45 ಗಂಟೆಗೆ ತನ್ನ ಭಾವನವರಾದ ನಟೇಶ್ (47) ರವರೊಂದಿಗೆ ರಸ್ತೆ ಬದಿಯಲ್ಲಿ ಬಸ್ಸಿಗಾಗಿ ಕಾಯುತ್ತಾ ನಿಂತುಕೊಂಡಿರುವಾಗ ಸಂತೆಕಟ್ಟೆ ಕಡೆಯಿಂದ ಉಡುಪಿ ಕಡೆಗೆ ರಾ.ಹೆ-66 ರಲ್ಲಿ ಒಬ್ಬ ಕಾರು ಚಾಲಕ ತನ್ನ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಎಡಬದಿಗೆ ಬಂದು ರಸ್ತೆ ಪಕ್ಕದಲ್ಲಿ ನಿಂತಿದ್ದ ಶೇಖರ್ ರವರ ಭಾವ ನಟೇಶ್‌ನಿಗೆ ಡಿಕ್ಕಿ ಹೊಡೆದು ಕಾರನ್ನು ನಿಲ್ಲಿಸದೇ ಹೋಗಿದ್ದು, ನಟೇಶ್‌ನಿಗೆ ತಲೆ ಮತ್ತು ಕಾಲಿಗೆ ತೀವ್ರ ತರಹದ ರಕ್ತಗಾಯವಾಗಿದ್ದು, ನಂತರ ಒಂದು ಆಟೋರಿಕ್ಷಾದಲ್ಲಿ ಚಿಕಿತ್ಸೆ ಬಗ್ಗೆ ಉಡುಪಿ ಹೈಟೆಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ, ಸದ್ರಿ ಅಪಘಾತಕ್ಕೆ ಕಾರಣನಾದ ಅಪರಿಚಿತ ಕಾರನ್ನು ಮತ್ತು ಅದರ ಚಾಲಕನನ್ನು ಪತ್ತೆ ಹಚ್ಚಿ ಅವನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬುದಾಗಿ ಶೇಖರ್ ನೀಡಿದ ದೂರಿನಂತೆ ಉಡುಪಿ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ: 40/2015 ಕಲಂ. 279, 337 ಐಪಿಸಿ ಹಾಗೂ 134(ಎ),(ಬಿ) ಐಎಮ್‌ವಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ :
  • ಬೈಂದೂರು : ಕೆ.ಎಲ್ ನಾಗರಾಜ ನಾಯರಿ ತಂದೆ: ದಿ| ಲಕ್ಷ್ಮಣ ನಾಯರಿ ವಾಸ: ಅಂಗಡಿಯಾರ ಮನೆ ನಾವುಂದ  ಗ್ರಾಮ ಕುಂದಾಪುರ ತಾಲೂಕು ಇವರ ಮಗಳು ಸುಮಲತಾ ಪ್ರಾಯ: 27 ವರ್ಷ ಎಂಬುವವಳು ಕುಂದಾಪುರದಲ್ಲಿ ಕೆಎಸ್‌ಅರ್‌ಟಿಸಿಯಲ್ಲಿ ಕೆಲಸ ಮಾಡಿಕೊಂಡಿದ್ದು, ದಿನಾಲು ಮನೆಯಿಂದ ಕುಂದಾಪುರಕ್ಕೆ ಹೋಗಿ ಸಂಜೆ ಕೆಲಸ ಮುಗಿಸಿ ಮನೆಗೆ ಬರುವುದಾಗಿರತ್ತದೆ. ಎಂದಿನಂತೆ ಈ ದಿನ ದಿನಾಂಕ 05/05/2015 ರಂದು ಬೆಳಿಗ್ಗೆ 07:15 ಗಂಟೆಗೆ ಮನೆಯಿಂದ ಕೆಲಸಕ್ಕೆ ಹೋದವಳು ಕುಂದಾಪುರ ತಾಲೂಕು ನಾವುಂದ ಗ್ರಾಮದ ಕೂಟಾಡಿ ಬಳಿ ರೈಲ್ವೇ ಟ್ರ್ಯಾಕನ್ನು ದಾಟುತ್ತಿರುವಾಗ ಆಕಸ್ಮಿಕವಾಗಿ ರೈಲ್ವೇ ಹಳಿಗೆ ಆಕೆಯ ಕಾಲು ಸಿಕ್ಕಿಹಾಕಿಕೊಂಡು ಆಗ ಉಡುಪಿ ಕಡೆಯಿಂದ ಕಾರವಾರ ಕಡೆಗೆ ಬರುತ್ತಿದ್ದ ರೈಲಿಗೆ ಸಿಕ್ಕಿಹಾಕಿಕೊಂಡು ಮೃತ ಪಟ್ಟಿರುತ್ತಾಳೆ. ಈ ಬಗ್ಗೆ ಕೆ.ಎಲ್ ನಾಗರಾಜ ನಾಯರಿರವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್‌ ಠಾಣಾ ಯುಡಿಆರ್‌ ಕ್ರಮಾಂಕ : 15/2015 ಕಲಂ: 174 ಸಿಅರ್‌ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: