Wednesday, May 27, 2015

Daily Crime Reported As On 27/05/2015 At 19:30 Hrs

ಅಪಘಾತ ಪ್ರಕರಣ:
  • ಹೆಬ್ರಿ : ರಾಘವೇಂದ್ರನಾಯ್ಕ್‌ (27), ತಂದೆ: ಮುಕುಂದ ನಾಯ್ಕ್, ವಾಸ: ಶ್ರೀ ರಾಮ ನಿಲಯ, ಮುದ್ರಾಡಿ ಗ್ರಾಮ, ಕಾರ್ಕಳ ಎಂಬುವವರು ದಿನಾಂಕ 26-05-2015 ರಂದು ಬೆಳಿಗ್ಗೆ ತನ್ನ ಬಾಬ್ತು ಕೆ.ಎ.20.ಸಿ 3100 ನೇ ಮಾರುತಿ ಸುಜುಕಿ ಇಕೋ ಕಾರಿನಲ್ಲಿ ಶಿವಪುರದ ದಿನೇಶ್‌ ಶೇರಿಗಾರ್ ಹಾಗೂ ಅವರ ಮನೆಯವರಾದ 3 ಜನ ಹೆಂಗಸರು ಮತ್ತು ಸಣ್ಣ ಮಕ್ಕಳನ್ನು ಕುಳ್ಳಿರಿಸಿಕೊಂಡು ಮಂದಾರ್ತಿ ದೇವಸ್ಥಾನಕ್ಕೆ ಹೋಗಿ ಸೇವೆ ಸಲ್ಲಿಸಿ ವಾಪಾಸು ಸದ್ರಿ ಕಾರಿನಲ್ಲಿ ಹೆಬ್ರಿ-ಕೆಳ ಪೇಟೆ ಮಾರ್ಗವಾಗಿ ಶಿವಪುರಕ್ಕೆ ಹೋಗುತ್ತಿರುವಾಗ ಸಮಯ ಸುಮಾರು ಸಂಜೆ 4:15 ಗಂಟೆಗೆ ಹೆಬ್ರಿ ಗ್ರಾಮದ ಎಸ್‌.ಆರ್‌ ಸ್ಕೂಲ್‌ ತಲುಪಾವಾಗ್ಯೆ ಉಡುಪಿ ಕಡೆಯಿಂದ ಹೆಬ್ರಿ ಕಡೆಗೆ ಕೆ.ಎ.20 ಬಿ 1900 ಟಾಟಾ 407ನೇ ವಾಹನವನ್ನು ಅದರ ಚಾಲಕ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಬಲ ಬದಿಗೆ ಬಂದು ಇವರು ಚಲಾಯಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ರಾಘವೇಂದ್ರ ಸಮೇತ ಕಾರಿನಲ್ಲಿದ್ದ ದಿನೇಶ್‌ ಶೇರಿಗಾರ್‌ ಹಾಗೂ 3 ಜನ ಹೆಂಗಸರು ಗಾಯಗೊಂಡು ಚಿಕಿತ್ಸೆ ಬಗ್ಗೆ ಮಣಿಪಾಲ್‌ ಕೆಎಂಸಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುವುದಾಗಿದೆ ಮತ್ತು ಅಪಘಾತ ಪಡಿಸಿದ ವಾಹನ ಚಾಲಕನು ಗಾಯಾಳುಗಳನ್ನು ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ಕೊಂಡು ಹೋಗದೇ ವಾಹನವನ್ನು ಅಲ್ಲಿಯೇ ಬಿಟ್ಟು ಹೋಗಿರುವುದಾಗಿದೆ ಎಂಬುದಾಗಿ ರಾಘವೇಂದ್ರ ನಾಯ್ಕ್‌ರವರು ನೀಡಿದ ದೂರಿನಂತೆ ಹೆಬ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 62 /15 ಕಲಂ : 279, 337 ಐ.ಪಿ.ಸಿ ಹಾಗೂ 134 (ಎ&ಬಿ) ಐ.ಎಂ.ವಿ ಕಾಯ್ದೆ ಯಂತೆ ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ.

No comments: