Wednesday, May 27, 2015

Daily Crime Reported As On 27/05/2015 At 17:00 Hrs

ಅಸ್ವಾಭಾವಿಕ ಮರಣ ಪ್ರಕರಣ : 
  • ಕೋಟ : ಪ್ರಭಾ ಕಾಮತ್‌(33) ಗಂಡ: ಅನಂತ ಕೃಷ್ಣನ್ ಜಿ ವಾಸ: ಜನನಿ ಶಾಂಬವಿ ಶಾಲೆ ಎದುರುಗಡೆ  ಕೋಟ, ಕೋಟತಟ್ಟು ಗ್ರಾಮ, ಉಡುಪಿ ತಾಲೂಕು ಇವರ ಗಂಡನ ಅಕ್ಕ ಲತಾ ಕಾಮತ್‌ (40) ಎಂಬವರು ಅಂಗವೈಕಲ್ಯತೆಯನ್ನು ಹೊಂದಿದ್ದು ಸುಮಾರು ಒಂದು ತಿಂಗಳಿಂದ ಜ್ವರ, ಉಬ್ಬಸ, ಕೆಮ್ಮಿನಿಂದ ಬಳಲುತ್ತಿದ್ದು ಈ ಬಗ್ಗೆ ಚಿಕಿತ್ಸೆ ಕೊಡಿಸಿದ್ದರೂ ಕೂಡಾ ಗುಣಮುಖರಾಗದೇ ಇದ್ದು ಖಾಯಿಲೆ ಉಲ್ಬಣಗೊಂಡಿದ್ದರಿಂದ ನಿನ್ನೆ ದಿನ ದಿನಾಂಕ 26/05/2015 ರಂದು ರಾತ್ರಿ 8:00 ಗಂಟೆಗೆ ಹೆಚ್ಚಿನ ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವಾಗ ಪ್ರಜ್ಷಾಹೀನ ಸ್ಥಿತಿಯಲ್ಲಿದ್ದವರನ್ನು ರಾತ್ರಿ ಸುಮಾರು 8:45 ಗಂಟೆಗೆ ಉಡುಪಿ ಟಿಎಮ್‌ ಎ ಪೈ ಆಸ್ಪತ್ರೆಯ ವೈದ್ಯರ ಮುಂದೆ ಹಾಜರುಪಡಿಸಿದಾಗ ಪರೀಕ್ಷಿಸಿದ ವೈದ್ಯರು ಲತಾ ಕಾಮತ್‌ರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಎಂಬುದಾಗಿ ನೀಡಿದದ ದೂರಿನಂತೆ ಕೋಟ ಪೊಲೀಸ್‌ ಠಾಣಾ ಯುಡಿಆರ್‌ ಕ್ರಮಾಂಕ: 23/2015 ಕಲಂ: 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.  
ಅಪಘಾತ ಪ್ರಕರಣ : 
  • ಕೋಟ : ಪ್ರಶಾಂತ್ ಗಾಣಿಗ (23),ತಂದೆ;ನಾಗರಾಜ ಗಾಣಿಗ,ವಾಸ:ಗಣಪತಿ,ಮೊಗೆಬೆಟ್ಟು,ಬೇಳೂರು ಗ್ರಾಮ,ಕುಂದಾಪುರ ತಾಲೂಕು ಇವರು ದಿನಾಂಕ:27/05/2015 ರಂದು ಬೆಳಿಗ್ಗೆ 12:30 ಗಂಟೆಗೆ ಕೆದೂರಿನ ತನ್ನ ಸ್ನೇಹಿತನ ಮನೆಯಿಂದ ವಾಪಾಸು ಬೇಳೂರಿಗೆ ಹೋಗುವರೇ ಸುಭಾಷ್ ಎಂಬುವರ ಬಾಬ್ತು ಕೆ.ಎ:20 ಸಿ:9800 ನೇ ನಂಬ್ರದ ಆಟೋ ರಿಕ್ಷಾದಲ್ಲಿ ಹೋಗುವಾಗ ಕುಂದಾಪುರ ತಾಲೂಕು ಬೇಳೂರು ಗ್ರಾಮದ ದೇವಸ್ಥಾನ ಬೆಟ್ಟು ಎಂಬಲ್ಲಿರುವ ನಾಗದೇವರ ಕಟ್ಟೆ ಸಮೀಪ ತಲುಪುವಾಗ ಆಟೋ ರಿಕ್ಷಾವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಹತೋಟಿ ತಪ್ಪಿ ರಸ್ತೆಯ ಬದಿಯ ತೆಂಗಿನ ಮರಕ್ಕೆ ಢಿಕ್ಕಿ ಹೊಡೆಸಿದ ಪರಿಣಾಮ ಆಟೋ ರಿಕ್ಷಾ ಮಗುಚಿ ಬಿದ್ದು ಪ್ರಶಾಂತ್‌ ಗಾಣಿಗರ ಬಲ ಕಾಲು ಆಟೋ ರಿಕ್ಷಾದ ಅಡಿಗೆ ಸಿಲುಕಿ ಮೂಳೆ ಮುರಿತದ ರಕ್ತಗಾಯವಾಗಿ ಚಿಕಿತ್ಸೆ ಬಗ್ಗೆ ಕೋಟೇಶ್ವರ ಎನ್.ಆರ್ ಆಚಾರ್ಯ ಆಸ್ಪತ್ರೆಗೆ ದಾಖಲು ಗೊಂಡಿರುವುದಾಗಿದೆ ಎಂಬುದಾಗಿ ಪ್ರಶಾಂತ್‌ ಗಾಣಿಗರವರು ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ : 129/2015 ಕಲಂ:279,338 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: