Monday, May 25, 2015

Daily Crime Reported As On 25/05/2015 At 17:00 Hrs

ಕಳವು ಪ್ರಕರಣ :
  • ಹೆಬ್ರಿ : ಸರೋಜ ಶೆಡ್ತಿ (47), ಗಂಡ: ಆನಂದ ಶೆಟ್ಟಿ, ವಾಸ: ಜೆಡ್ಡು ಬೈಲು, ಸಂತೆಕಟ್ಟೆ, 38ನೇ ಕಳ್ತೂರು ಗ್ರಾಮ ಎಂಬುವವರಿಗೆ 3 ದನಗಳು ಹಾಗೂ 2 ಕರುಗಳಿದ್ದು, ದಿನಾಂಕ 15-05-2015 ರಂದು ಬೆಳಿಗ್ಗೆ 5:30 ಗಂಟೆಗೆ ಸರೋಜ ಶೆಡ್ತಿಯವರು ಹಾಲು ಕರೆಯಲು ಹೋದ ಸಂದರ್ಭದಲ್ಲಿ ಹಟ್ಟಿಯಲ್ಲಿ ಕಟ್ಟಿದ 3 ದನಗಳು ಹಾಗೂ 2 ಕರುಗಳ ಪೈಕಿ 1 ದನವು ಕಟ್ಟಿದ ಸ್ಥಳದಲ್ಲಿ ಇಲ್ಲದೇ ಯಾರೋ ಕಳ್ಳರು ಮಾರಾಟ ಮಾಡುವುದಕ್ಕಾಗಿ ಕಳುವು ಮಾಡಿರುವುದಾಗಿಯೂ ಸದ್ರಿ ದನವನ್ನು ಪಾಂಡುಕಲ್ಲು ನಿವಾಸಿ ಉದಯ ಬಿನ್‌ ಶ್ರೀಮತಿ ಮಂಜಿ ಎಂಬುವವರು ಕಳುವು ಮಾಡಿರಬಹುದೆಂದು ಸಂಶಯವಿರುವುದಾಗಿ ನೀಡಿದ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ: 59/15 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಮಣಿಪಾಲ: ಯಾರೋ ಕಳ್ಳರು ದಿನಾಂಕ 24.05.15ರಂದು 08:00ಗಂಟೆಯಿಂದ 18:00ಗಂಟೆಯ ಮಧ್ಯಾವಧಿಯಲ್ಲಿ ಕೃಷ್ಣ ವೈ, ತಂದೆ: ವೈ ಸೂರ್ಯನಾರಯಣ ರಾವ್‌, ವಾಸ: ಕ್ವಾಟ್ರಾಸ್‌ ನಂ.104, ಕೆಎಮ್‌ಸಿ ಕ್ವಾಟ್ರಾಸ್‌, ಮಣಿಪಾಲ, ಉಡುಪಿ ಇವರ ಮನೆಯ ಎದುರಿನ ಬೀಗವನ್ನು ಮುರಿದು ಮನೆಯೊಳಗೆ ಪ್ರವೇಶಿಸಿ ಮನೆಯಲ್ಲಿಟ್ಟಿದ್ದ 9 ಗ್ರಾಂ ಮೌಲ್ಯದ ಚಿನ್ನಾಭರಣ ಹಾಗೂ 2000/-ರೂ ನಗದನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳವಾದ ಸ್ವತ್ತುಗಳ ಒಟ್ಟು ಮೌಲ್ಯ 32000/-ರೂ ಆಗಿರುತ್ತದೆ ಎಂಬುದಾಗಿ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್‌ ಠಾಣಾ 96/15 ಕಲಂ 454,380 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.    
ಮನುಷ್ಯ ಕಾಣೆ ಪ್ರಕರಣ :
   • ಬ್ರಹ್ಮಾವರ : ದಿನಾಂಕ: 23/05/2015 ರಂದು ಬೆಳಿಗ್ಗೆ ಸುಮಾರು 07:30 ಗಂಟೆಯ ಸಮಯಕ್ಕೆ ಪ್ರಶಾಂತ, (26) ತಂದೆ: ದಿ|| ಗೋವಿಂದ, ವಾಸ: ಬಾಳಿಗ ಆಸ್ಪತ್ರೆಯ ಸಮೀಪ, ಹಾರಾಡಿ ಗ್ರಾಮ, ಉಡುಪಿಯವರ ಮನೆಯಿಂದ ಅವರ ತಮ್ಮ ನಾಗರಾಜ (23 ವರ್ಷ) ಎಂಬವರು ಕೆಲಸಕ್ಕೆ ಹೋಗುವುದಾಗಿ ಮನೆಯಲ್ಲಿದ್ಸ ತಂಗಿ ಕಮಲಳಲ್ಲಿ ಹೇಳಿ ಹೋದವನು ಸಂಜೆ ಮನೆಗೆ ವಾಪಾಸ್ಸು ಬರದೇ ನಾಪತ್ತೆಯಾಗಿರುತ್ತಾರೆ ಎಂಬುದಾಗಿ ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆ ಅಪರಾಧ ಕ್ರಮಾಂಕ 97/15 ಕಲಂ ಹುಡುಗ ಕಾಣೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಬೆದರಿಕೆ ಪ್ರಕರಣ :
  • ಅಜೆಕಾರು : ಶಂಕರ  ಕುಮಾರ್‌ ಪ್ರಾಯ 33 ವರ್ಷ ವಾಸ: ಮಧುರಾ ಪಟ್ಟಣ, ಬಸದಿ ರಸ್ತೆ, ಕೈಕಂಬ, ಮರ್ಣೇ ಗ್ರಾಮ,ಕಾರ್ಕಳ ತಾಲೂಕು ಇವರು ದಿನಾಂಕ 24.05.15 ರಂದು ಮಧ್ಯಾಹ್ನ ಸುಮಾರು 03:00 ಗಂಟೆ ಸಮಯಕ್ಕೆ ಕಾರ್ಕಳ ತಾಲೂಕು ಮರ್ಣೇ ಗ್ರಾಮದ ಮಧುರಪಟ್ಟಣ ಬಸದಿ ರಸ್ತೆಯ ಬಳಿಯಿರುವ ತನ್ನ ದೊಡ್ಡಮ್ಮನ ಮನೆಗೆ ಹೋಗಿದ್ದು ತಮ್ಮ ದೊಡ್ಡಮ್ಮನ ಬಳಿ ಮುಂದೆ ಬರುವ ಗ್ರಾಮ ಪಂಚಾಯತ್‌ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿ ಹರೀಶ್‌ ಇವರಿಗೆ ಮತ ಹಾಕುವಂತೆ ಹೇಳಿದ್ದು ಆ ಸಮಯ ಅಲ್ಲಿಯೇ ಇದ್ದ ಶಂಕರ  ಕುಮಾರ್‌ ಇವರ ದೊಡ್ಡಮನ ಮಗಳ ಗಂಡನಾದ ರಾಜೇಶನು ಏಕಾಏಕಿಯಾಗಿ ಹಿಂದಿನಿಂದ ಬಂದು ಶಂಕರ್‌ ರವರಿಗೆ ರೀಪಿನಿಂದ ಹೊಡೆದು, ತುಟಿಗೆ ಕಚ್ಚಿ ಹಲ್ಲೆ ನೆಡೆಸಿ ಅವಾಚ್ಯ ಶಬ್ದಗಳಿಂದ ಬೈಯ್ದು, ಇನ್ನೊಮ್ಮೆ ಬಂದರೆ ಮತ್ತು ಪೊಲೀಸರಿಗೆ ದೂರು ಕೊಟ್ಟರೆ ಕೊಲ್ಲದೇ ಬಿಡುವುದಿಲ್ಲ ಎಂಬುದಾಗಿ ಕೊಲೆ ಬೆದರಿಕೆ ಹಾಕಿರುವುದಾಗಿದೆ ಎಂಬುದಾಗಿ ನೀಡಿದ ದೂರಿನಂತೆ ಅಜೆಕಾರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ : 24/2015 ಕಲಂ 324,504,506 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ :
  • ಬ್ರಹ್ಮಾವರ : ದಿನಾಂಕ: 24/05/2015 ರಂದು 16.30 ಗಂಟೆಯಿಂದ 17.30 ಗಂಟೆಯ ಮದ್ಯಾವಧಿಯಲ್ಲಿ ಉಡುಪಿ ತಾಲೂಕು ಆರೂರು ಗ್ರಾಮದ ರಂಜೆಬೈಲು ಕುಮಾರ ಶೆಟ್ಟಿಯವರ ಬಾಬ್ತು ಹಾಡಿಯಲ್ಲಿ ಮಾಧವ ನಾಯ್ಕ (60) ತಂದೆ: ದುಗ್ಗ ನಾಯ್ಕ ವಾಸ: ಅನುಗ್ರಹ ಕೀರ್ತಿ ನಗರ ಆರುರು ಗ್ರಾಮ ಉಡುಪಿ ತಾಲೂಕು ಇವರ  ಮಗನಾದ ಸುಮಾರು 24 ವರ್ಷ ಪ್ರಾಯದ ಸತೀಶ ನಾಯ್ಕ ಎಂಬವರು ಕೈ ಸಾಲ ಮಾಡಿದನ್ನು ತೀರಿಸಲಾಗದೆ ಮಾನಸಿಕ ಚಿಂತೆಯಿಂದ ಅಥವಾ ಬೇರೆ ಯಾವುದೇ ವೈಯಕ್ತಿಕ ಸಮಸ್ಯೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಗೇರು ಮರದ ಕೊಂಬೆಗೆ ಕೈಯಾಳ ಹಗ್ಗವನ್ನು ಕಟ್ಟಿಕೊಂಡು ಕುಗ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಎಂಬುದಾಗಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್‌ ಠಾಣಾ ಯುಡಿಆರ್‌ ಕ್ರಮಾಂಕ: 26/15 ಕಲಂ 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: