Monday, May 25, 2015

PRESS NOTE

ಉಡುಪಿ ಡಿಸಿಐಬಿ ಪೊಲೀಸರ ಕಾರ್ಯಾಚರಣೆ
ಒಬ್ಬನ  ಬಂಧನ  2,96,200 ಬ್ರೆಜಿಲ್ ಕರೆನ್ಸಿ ಕ್ರುಸಾಡೊ (ಭಾರತ ದೇಶದ ಮೌಲ್ಯ ಅಂದಾಜು 59,24,000/- ರೂಪಾಯಿ) ವಶ


 ದಿನಾಂಕ 25/05/15 ರಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಕೆ ಅಣ್ಣಾಮಲೈ ರವರ ನಿರ್ದೇಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಸಂತೋಷ ಕುಮಾರ್ ಹಾಗೂ ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಕೆ.ಎಂ ಚಂದ್ರಶೇಖರ್‌ರವರ ಮಾರ್ಗದರ್ಶನದಲ್ಲಿ ಉಡುಪಿ ಡಿಸಿಐಬಿ ಇನ್ಸ್ ಪೆಕ್ಟರ್ ಟಿ.ಆರ್ ಜೈಶಂಕರ್ ರವರು ಖಚಿತ ಮಾಹಿತಿಯ ಮೇರೆಗೆ 1989ನೇ ಇಸವಿಯಲ್ಲಿ ಚಲಾವಣೆ ನಿಲ್ಲಿಸಿರುವ ಬ್ರೆಜಿಲ್ ದೇಶದ ಕರೆನ್ಸಿ ಕ್ರುಸಾಡೊ BANCO CENTRAL DO BRASIL ಎಂದು ಬರೆದಿರುವ 500 ಮುಖಬೆಲೆಯ 574 ನೋಟುಗಳು ಹಾಗೂ 100 ಮುಖಬೆಲೆಯ 92 ನೋಟುಗಳು ಒಟ್ಟು 2,96,200 ಬ್ರೆಜಿಲ್ ಕರೆನ್ಸಿ ಕ್ರುಸಾಡೊ (ಭಾರತ ದೇಶದ ಮೌಲ್ಯ ಅಂದಾಜು 59,24,000/- ರೂಪಾಯಿ) ಗಳನ್ನು, ಪ್ರಸ್ತುತ ಈ ಕರೆನ್ಸಿಗಳು ಚಲಾವಣೆಯಲ್ಲಿ ಇಲ್ಲದೇ ಇದ್ದರೂ, ಚಲಾವಣೆಯಲ್ಲಿರುವ ಕರೆನ್ಸಿ ಎಂದು ಹೇಳಿ ಸಾರ್ವಜನಿಕರಿಗೆ ಮಾರಾಟ ಮಾಡಿ ವಂಚಿಸುತ್ತಿದ್ದ ಆರೋಪಿ ಇಮ್ರಾನ್ ಪ್ರಾಯ: 24 ವರ್ಷ, ತಂದೆ:  ಹಮ್ಮದ್ ಕುಂಞ ವಾಸ: ಮನೆ ನಂ.5/83, ರಿಯಾಜ್ ಮಂಜಿಲ್, ಹಂಡೇಲ್ ಹೌಸ್, ಸಂಪಿಗೆ ಪೋಸ್ಟ್, ಪುತ್ತಿಗೆ ಗ್ರಾಮ, ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆ ಎಂಬವನನ್ನು ದಸ್ತಗಿರಿ ಮಾಡಿ ವಿದೇಶಿ ಕರೆನ್ಸಿಗಳನ್ನು ಸ್ವಾಧೀನಪಡಿಸಿಕೊಂಡು ಆರೋಪಿಯನ್ನು ಸ್ವತ್ತುಗಳೊಂದಿಗೆ ಉಡುಪಿ ನಗರ ಠಾಣೆಗೆ ಹಸ್ತಾಂತರಿಸಿದ್ದು ಆರೋಪಿತರ ವಿರುದ್ದ ಪ್ರಕರಣ ದಾಖಲಾಗಿರುತ್ತದೆ. ಈ ಕಾರ್ಯಾಚರಣೆಯಲ್ಲಿ ಸಿಬ್ಬಂದಿಯವರಾದ ರವಿಚಂದ್ರ, ಸಂತೋಷ ಪುತ್ತೂರು, ಚಂದ್ರ ಶೆಟ್ಟಿ, ಸಂತೋಷ ಕುಂದರ್, ಸುರೇಶ, ರಾಮು ಹೆಗ್ಡೆ,  ರಾಘವೇಂದ್ರ ಉಪ್ಪುಂದ, ಪ್ರವೀಣ ಮತ್ತು ವಾಹನ ಚಾಲಕ ಚಂದ್ರಶೇಖರರವರು ಪಾಲ್ಗೊಂಡಿರುತ್ತಾರೆ.
------------------------------------------------------------------------------------------------------------

ಉಡುಪಿ ಸಂಚಾರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 48/2015 ಕಲಂ. 279, 338 ಪರಿವರ್ತಿತ 304(ಎ) ಐಪಿಸಿ & 
134(ಎ)(ಬಿ) ಐ.ಎಮ್.ವಿ ಕಾಯ್ದೆ

ದಿನಾಂಕ 17/05/2015 ರಂದು ರಾತ್ರಿ ಸುಮಾರು 10.30 ಗಂಟೆಯ ಸಮಯಕ್ಕೆ ಉಡುಪಿ ಕುಂದಾಪುರ ರಾ.ಹೆ.66 ರಲ್ಲಿ ಉಡುಪಿ ಕಲ್ಯಾಣಪುರ ಸಂತೆಕಟ್ಟೆಯ ಮಾಸ್ತಿಕಟ್ಟೆಯ ಮುಂಬಾಗ ಅಪರಿಚಿತ ವ್ಯಕ್ತಿಯೊಬ್ಬನು ರಾ.ಹೆ.66ನ್ನು ದಾಟುತ್ತಿರುವ ಸಮಯದಲ್ಲಿ ಕೆಎ-20 ಸಿ-9120ನೇ ಆಟೋ ರಿಕ್ಷಾ ಚಾಲಕನು ಡಿಕ್ಕಿ ಹೊಡೆದು ಪರಾರಿಯಾಗಿದ್ದು ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಸ್ವರೂಪದ ಗಾಯಗೊಂಡಿರುವ ಅಪರಿಚಿತ ವ್ಯಕ್ತಿಯನ್ನು ಅದೇ ದಿನ ರಾತ್ರಿ ಉಡುಪಿ ಜಿಲ್ಲಾ ಸರಕಾರಿ ಅಸ್ಪತ್ರೆಗೆ ದಾಖಲಿಸಿದಲ್ಲಿ ವೈದ್ಯರು ನೀಡಿರುವ ಚಿಕಿತ್ಸೆಗೆ ಸ್ಪಂದಿಸದೇ ದಿನಾಂಕ 20/05/2015 ರಂದು ರಾತ್ರಿ 7.10 ಗಂಟೆಗೆ ಉಡುಪಿ ಜಿಲ್ಲಾ ಸರಕಾರಿ ಅಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾರೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣೆಯಲ್ಲಿ ಅ.ಕ್ರ. 48/2015 ಕಲಂ.279,338 ಐಪಿಸಿ ಪರಿವರ್ತಿತ 304(ಎ) & 134(ಎ)(ಬಿ) ಐ.ಎಮ್.ವಿ ಕಾಯ್ದೆಯಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.
ಪ್ರಕರಣದಲ್ಲಿ ಅಪಘಾತಕ್ಕಿಡಾಗಿ ಮೃತ ಪಟ್ಟಿರುವ ಅಪರಿಚಿತ ವ್ಯಕ್ತಿಯ ಚಹರೆ ಈ ಕೆಳಗಿನಂತಿದೆ.
ಹೆಸರು :  ಅಪರಿಚಿತ ವ್ಯಕ್ತಿ
ಪ್ರಾಯ : 45 ರಿಂದ 50 ವರ್ಷ ,ಸಾದಾರಣ ಬಡಕಲು ಶರೀರ
ಎತ್ತರ : 5.6 ಇಂಚು
ಚಹರೆ : ಕುರುಚಲು ಗಡ್ಡ, ಸಪೂರ ಮೀಸೆ, ಸಾದಾರಣ ಬಡಕಲು ಶರೀರ

ಮೇಲಿನ ಚಹರೆ ಹಾಗೂ ಭಾವಚಿತ್ರದಲ್ಲಿರುವ ಅಪರಿಚಿತ ವ್ಯಕ್ತಿಯ ವಾರಿಸುದಾರರ ಬಗ್ಗೆ ಮಾಹಿತಿ ಸಿಕ್ಕಿದಲ್ಲಿ ರಕ್ತ ಸಂಬಂಧಿಕರು ಯಾರಾದರೂ ಇದ್ದಲ್ಲಿ ಕೂಡಲೇ ಪೊಲೀಸ್‌ ವೃತ್ತ ನಿರೀಕ್ಷಕಕರ ಮೊಬೈಲ್ ಸಂಖ್ಯೆ 9480805430 ಅಥವ ಉಡುಪಿ ಸಂಚಾರ ಪೊಲೀಸ್‌ ಠಾಣೆಯ ಸಂಖ್ಯೆ 0820-2521332 ಗೆ ಅಥವಾ ಉಡುಪಿ ಕಂಟ್ರೋಲ್ ರೂಮ್ ಸಂಖ್ಯೆ 0820-2526444ಗೆ ಮಾಹಿತಿ ನೀಡುವಂತೆ ಕೋರಲಾಗಿದೆ.

No comments: