Monday, May 25, 2015

Daily Crimes Reported as On 25/05/2015 at 07:00 Hrs

ಅಪಘಾತ ಪ್ರಕರಣ :
  • ಕಾರ್ಕಳ ಗ್ರಾಮಾಂತರ : ದಿನಾಂಕ:24/05/2015 ರಂದು ಬೆಳಿಗ್ಗೆ 10:30 ಗಂಟೆ ಸಮಯಕ್ಕೆ ಕುಮಾರಿ ಪ್ರತೀಕ್ಷಾ ಪ್ರಾಯ: 17 ವರ್ಷ ತಂದೆ: ಚಂದ್ರೇಶ ಪೂಜಾರಿ ವಾಸ: ಕುಸುಮಾ ನಿಲಯ, ಹಾಳೆಕಟ್ಟೆ, ಕಲ್ಯಾ ಅಂಚೆಮತ್ತು ಗ್ರಾಮ ಕಾರ್ಕಳ ತಾಲೂಕು ಇವರು ತನ್ನ ಬಾಬ್ತು ಸುಜುಕಿ ಸ್ಕೂಟಿ ನಂಬ್ರ ಕೆಎ-20-ಎಹೆಚ್-9746ನೇಯದರಲ್ಲಿ ಹೃತಿಕ್‌ ಮತ್ತು ಶಾಶ್ವತ್ ಎಂಬವರನ್ನು ಕುಳ್ಳಿರಿಸಿಕೊಂಡು ಹಾಳೆಕಟ್ಟೆ ಕಡೆಯಿಂದ ಹಾಳೆಕಟ್ಟೆ ಶಾಲೆಯ ಬಳಿ ಹೋಗುವರೇ ಕಾರ್ಕಳ-ಹೆದ್ದಾರಿ ರಾಜ್ಯ ಹೆದ್ದಾರಿಯ ರಸ್ತೆಯನ್ನು ದಾಟುತ್ತಿರುವಾಗ ಕಲ್ಯಾ ಗ್ರಾಮದ ಹಾಳೆಕಟ್ಟೆ ಶ್ರೀ ದೇವಿ ಪ್ರಸಾದ್ ಹೋಟೆಲ್ ನ ಎದುರುಗಡೆ ತಲುಪುವಾಗ ಕಾರ್ಕಳ ಕಡೆಯಿಂದ ಬೆಳ್ಮಣ್ ಕಡೆಗೆ ಬರುತ್ತಿದ್ದ ಕೆಎ 20-ಝಡ್ 0957ನೇ ನಂಬ್ರದ ಕಾರಿನ ಚಾಲಕ ತನ್ನ ಬಾಬ್ತು ಕಾರನ್ನು ಅತೀ ವೇಗ ಹಾಗೂ ಅಜಗಾರೂಕತೆಯಿಂದ ಚಲಾಯಿಸಿಕೊಂಡು ಬಂದು ಪ್ರತಿಕ್ಷಾರ ಕೆ.ಎ-20-ಎಹೆಚ್-9746ನೇ ಸ್ಕೂಟಿಯ ಎಡಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪ್ರತೀಕ್ಷಾರಿಗೆ ಸಾದಾ ಸ್ವರೂಪದ ಹಾಗೂ ಸ್ಕೂಟಿಯ ಹಿಂದುಗಡೆ ಕುಳಿತ ಹೃತಿಕ್‌ ಮತ್ತು ಶಾಶ್ವತ್ ರವರಿಗೆ ಮೂಳೆ ಮುರಿತದ ಗಾಯವಾಗಿದ್ದು ಈ ಅಪಘಾತಕ್ಕೆ ಕೆಎ 20-ಝಡ್ 0957ನೇ ನಂಬ್ರದ ಕಾರಿನ ಚಾಲಕನ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯೆ ಕಾರಣವಾಗಿರುತ್ತದೆ ಎಂಬುದಾಗಿ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 89/2015 ಕಲಂ. 279 337, 338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
  • ಹೆಬ್ರಿ : ರಮೇಶ್(33), ತಂದೆ: ವೇರಪ್ಪ, ವಾಸ: ಹಳೆ ಮುಂಡ್ಲಿ, ಎನ್‌.ಟಿ ರಸ್ತೆ, ಶಿವಮೊಗ್ಗ ಜಿಲ್ಲೆರವರು ದಿನಾಂಕ 24-05-2015ರಂದು ಕೆಎ 20 ಡಿ-1412ನೇ ಹನುಮಾನ್‌ ಬಸ್ಸನ್ನು ಚಲಾಯಿಸಿಕೊಂಡು ಶಿವಮೊಗ್ಗದಿಂದ ಉಡುಪಿ ಕಡೆಗೆ ಹೊರಟು ಸಮಯ ಸುಮಾರು ಬೆಳಿಗ್ಗೆ 8:10 ಗಂಟೆಗೆ ನಾಡ್ಪಾಲು ಗ್ರಾಮದ ಸೀತಾನದಿ ಕೈಕಂಬ ಜಂಕ್ಷನ್‌ ಬಳಿ ತಲುಪುವಾಗ್ಯೆ ಮುದ್ರಾಡಿ ಕಡೆಯಿಂದ ಕೆಎ 51 ಎಮ್‌ 8605ನೇ ಮಾರುತಿ ವ್ಯಾಗನಾರ್‌ ಕಾರನ್ನು ಅದರ ಚಾಲಕ ಮೋಹನ ಎಂಬುವವರು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಒಮ್ಮೆಲೆ ಬಲಕ್ಕೆ ಆಗುಂಬೆ ಕಡೆಗೆ ಹೋಗುವ ರಸ್ತೆಗೆ ತಿರುಗಿಸಿ ರಮೇಶ್ ಚಲಾಯಿಸಿತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಚಾಲಕನ ಸಮೇತ 3 ಜನರು ಗಾಯಗೊಂಡಿರುತ್ತಾರೆ ಎಂಬುದಾಗಿ ನೀಡಿದ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 59 /15 ಕಲಂ: 227, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಗಂಗೊಳ್ಳಿ : ದಿನಾಂಕ 24/05/2015 ರಂದು ಮೊಹಮ್ಮದ್‌ ಇರ್ಫಾನ್‌ (20), ತಂದೆ: ರಾಜಾ ಸಾಹೆಬ್‌ಭಾಗಲ ಕೋಟ್‌, ಉಸ್ಮಾನ್‌ ನಗರ , ಒಂದನೇ ಕ್ರಾಸ್‌, ಗುಲ್ಮಿ ರೋಡ್‌,  ಭಟ್ಕಳ ರವರು ಕೆಎ-47-ಕೆ-9723 ನೇ ಮೋಟಾರು ಸೈಕಲ್‌ ಲಿನಲ್ಲಿ ಸಹ ಸವಾರರಾಗಿ ಮೊಹಮ್ಮದ್‌ ಗೌಸ್‌ ರವರನ್ನು ಕುಳ್ಳಿರಿಸಿಕೊಂಡು ಭಟ್ಕಳದಿಂದ ಕುಂದಾಪುರ ಕಡೆಗೆ ರಾಹೆ-66 ರಲ್ಲಿ ಬರುತ್ತಿರುವಾಗ ಬೆಳಿಗ್ಗೆ 05.10 ಗಂಟೆಗೆ ಮರವಂತೆ ಗ್ರಾಮದ ನಾವುಂದ ಮಸೀದಿ ಬಳಿಯ ಬಂದರ್‌ ಅಡ್ಡ ರಸ್ತೆ ಬಳಿ ತಲುಪಿದಾಗ ಹಿಂದಿನಿಂದ ಯಾವುದೋ ವಾಹನವು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಒಂದು ವಾಹನವನ್ನು ಓವರ್‌ಟೇಕ್‌ ಮಾಡುವ ಭರದಲ್ಲಿ ಮೊಹಮ್ಮದ್‌ ಇರ್ಫಾನ್‌ರ ಮೋಟಾರು ಸೈಕಲ್ಲಿಗೆ ಡಿಕ್ಕಿ ಹೊಡೆದಿದ್ದು. ಇದರ ಪರಿಣಾಮ ಮೋಟಾರು ಸೈಕಲಿನಲ್ಲಿದ್ದ ಮೊಹಮ್ಮದ್‌ ಇರ್ಫಾನ್‌ ಹಾಗೂ ಸಹ ಸವಾರ ಮೊಹಮ್ಮದ್‌ ಗೌಸ್‌ ರವರು ರಸ್ತೆಗೆ ಬಿದ್ದು ತೀವೃ ಸ್ವರೂಪದ ರಕ್ತ ಗಾಯಗೊಂಡು ಚಿಕಿತ್ಸೆ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಡಿಕ್ಕಿ ಹೊಡೆದ ಅಪರಿಚಿತ ವಾಹವನವನ್ನು ಅದರ ಚಾಲಕನು ನಿಲ್ಲಿಸದೆ ಪರಾರಿಯಾಗಿರುತ್ತಾನೆ ಎಂಬುದಾಗಿ ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 77/2015, ಕಲಂ. 279, 338 ಐಪಿಸಿ & 134 (ಎ) (ಬಿ) ಐಎಮ್‌ವಿ ಕಾಯಿದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಕೋಟ : ಮಹಮ್ಮದ್ ರಜಾಫ್ (45), ತಂದೆ:ದಿ,ಉಮ್ಮಂಜೆ, ವಾಸ:ತಸರಿನ್ ಮಂಜಿಲ್,ಎಂ.ಜಿ ಕಾಲೋನಿ, ಮಧುವನ, ವಡ್ಡರ್ಸೆ ಗ್ರಾಮ,ಉಡುಪಿ ತಾಲೂಕು ಇವರು ದಿನಾಂಕ:24/05/2015 ರಂದು ಮಧ್ಯಾಹ್ನ 12:30 ಗಂಟೆಗೆ  ಅವರ ಬಾಬ್ತು ಕೆ,ಎ:20 ಡಿ:6742 ನೇ ನಂಬ್ರದ ಕಾರನ್ನು  ಬ್ರಹ್ಮಾವರ ಕಡೆಯಿಂದ ಬನ್ನಾಡಿಗೆ ಕಡೆಗೆ ರಾ.ಹೆ-66 ರಲ್ಲಿ ಚಲಾಯಿಸಿ ಕೊಂಡು ಬರುವಾಗ ಉಡುಪಿ ತಾಲೂಕು ಐರೋಡಿ ಗ್ರಾಮದ ಟೆಲಿಪೋನ್ ಎಕ್ಸ್‌ ಚೇಂಜ್ ಬಳಿ ತಲುವಾಗ ಕೆ.ಎ:21 ಬಿ:5177 ನೇ ನಂಬ್ರದ ಟ್ಯಾಂಕರ್ ಲಾರಿ ಚಾಲಕನು ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಕೊಂಡು ಬಂದು ರಸ್ತೆಯ ಬಲಭಾಗಕ್ಕೆ ಚಲಾಯಿಸಿ ಕೊಂಡು ಬಂದು  ಮಹಮ್ಮದ್ ರಜಾಫ್ ರ ಬಾಬ್ತು ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಕಾರಿನ ಮುಂಭಾಗ ಜಖಂಗೊಂಡಿರುತ್ತದೆ, ಅಪಘಾತದ ಪರಿಣಾಮ ಮಹಮ್ಮದ್ ರಜಾಫ್ ರ ಹೊಟ್ಟೆಯ ಕೆಳಭಾಗ, ಬಲಬದಿಯ ಮೊಣಗಂಟಿನ ಕೆಳಗೆ ಹಾಗೂ ಎಡ ಬದಿಯ ಕೈಗೆ, ಎಡ ಬದಿಯ ಕಾಲಿಗೆ ತರಚಿದ ಗಾಯ ಹಾಗೂ ಒಳ ಜಖಂ ಉಂಟಾಗಿದ್ದು ಚಿಕಿತ್ಸೆ ಬಗ್ಗೆ ಬ್ರಹ್ಮಾವರ ಮಹೇಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ ಎಂಬುದಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 128/2015 ಕಲಂ:279,337 ಐಪಿಸಿ ಕಾಯಿದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಉಡುಪಿ ಸಂಚಾರ : ಸತೀಶ್ ನಾಯಕ್(37)ತಂದೆ:ದಿ,ರಾಮಚಂದ್ರ ನಾಯಕ್ ವಾಸ:ಜಂಗಮರಬೆಟ್ಟು ಮೂಡುತೋನ್ಸೆ ಗ್ರಾಮ ಕಲ್ಯಾಣಪುರ ಉಡುಪಿ ಇವರು ದಿನಾಂಕ 24/05/2015 ರಂದು ಸಂಜೆ 4.15 ಗಂಟೆ ಸಮಯಕ್ಕೆ ಸಂತೆಕಟ್ಟೆ ರೋಬೋಸಾಪ್ಟ್ ಬಳಿ ಇದ್ದಾಗ ಕಲ್ಯಾಣಪುರ ಸಂತೆಕಟ್ಟೆ ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಒಂದು ಮೋಟಾರ್ ಬೈಕ್‌ಗೆ ಅದರ ಹಿಂದಿನಿಂದ ಇನ್ನೊಂದು ಬೈಕ್ ನ ಸವಾರನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ಇಬ್ಬರು ರಸ್ತೆಗೆ ಬಿದ್ದಿದ್ದು, ಕೂಡಲೇ ಅಲ್ಲಯೇ ಇದ್ದ ಸತೀಶ್ ನಾಯಕ್ ರು ಮತ್ತು ಅಲ್ಲಿ ಸೇರಿದವರು ಹಾಗೂ ಡಿಕ್ಕಿ ಹೊಡೆದ ಬೈಕ್ ಸವಾರ ಸೇರಿಕೊಂಡು ಬಿದ್ದವರನ್ನು ಉಪಚರಿಸಿ ನೋಡಲಾಗಿ ರಸ್ತೆಗೆ ಬಿದ್ದವರು ಸತೀಶ್ ನಾಯಕ್ ರ ಅಣ್ಣ ರಾಜೇಶ್ ಮತ್ತು ಅತ್ತಿಗೆ ಗೀತಾ ಆಗಿರುತ್ತಾರೆ. ಈ ಅಪಘಾತದಿಂದಾಗಿ ರಾಜೇಶ್‌ನಿಗೆ ಬಲಕಾಲಿನ ಕೋಲು ಕಾಲಿಗೆ ಮತ್ತು ಪಾದದ  ಬಳಿ ಮೂಳೆಮುರಿತದ ಒಳಜಖಂ ಆಗಿರುತ್ತದೆ. ಅತ್ತಿಗೆ ಗೀತಾಳ ತಲೆಗೆ ಮತ್ತು ಎಡಕೈಗೆ ಒಳ ಜಖಂ ಆಗಿರುತ್ತದೆ. ರಾಜೇಶ್ ಸವಾರಿ ಮಡುತ್ತಿದ್ದ ಬೈಕ್ ಕೆಎ-20 ಎಲ್-4191ಜಖಂ ಆಗಿರುತ್ತದೆ. ಸದ್ರಿ ಬೈಕ್‌ಗೆ ಡಿಕ್ಕಿಹೊಡೆದ ನಂಬ್ರ ನೋಡಲಾಗಿ ಕೆಎ-20 ಇಜೆ-0585 ಆಗಿರುತ್ತದೆ. ಸದ್ರಿ ಬೈಕ್‌ಗೆ ಡಿಕ್ಕಿಹೊಡೆದ ಚಾಲಕನ ಹೆಸರು ಕೇಳಲಾಗಿ ಪಿಮೇಂಟ್ ಸ್ಟೇಫನ್ ಎಂದು ತಿಳಿಸಿರುತ್ತಾರೆ. ನಂತರ ಗಾಯಗೊಂಡವರನ್ನು ಆದರ್ಶ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ಕರೆದುಕೊಂಡು ಬಂದಿದ್ದು, ಪರಿಕ್ಷೀಸಿದ ವೈದ್ಯರು ಒಳ ರೋಗಿಯಾಗಿ ದಾಖಲಿಸಿರುತ್ತಾರೆ. ಸದ್ರಿ ಅಪಘಾತಕ್ಕೆ ಕೆಎ-20 ಇಜೆ-0585 ನೇ ಬೈಕ್ ಸವಾರನ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿದ್ದು, ಸದ್ರಿ ಚಾಲಕನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೋಳ್ಳಬೇಕಾಗಿ ಕೋರಿಕೆ ಎಂಬುದಾಗಿ ನೀಡಿದ ದೂರಿನಂತೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 53/2015 ಕಲಂ. 279, 337, 338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
  • ಕಾರ್ಕಳ ನಗರ : ದಿನಾಂಕ: 23.05.2015 ರಂದು  ಸಂಜೆ 7:45 ಗಂಟೆಗೆ ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಮುರತ್ತಂಗಡಿಯ ಶಬರಿ ನಿವಾಸ ಎಂಬಲ್ಲಿ ರಾಘವೇಂದ್ರ ಸಮಗಾರ ಪ್ರಾಯ: 41 ವರ್ಷ ತಂದೆ: ಸದಾನಂದ ಸಮಗಾರ ವಾಸ; ಶಬರಿ ಕೃಪಾ, ಮುರತ್ತಂಗಡಿ ಸಾಣುರು ಗ್ರಾಮ, ಕಾರ್ಕಳ ಇವರ ಮನೆಗೆ ಆರೋಪಿ ರವಿ ಎಂಬುವವರು ತನ್ನ ಬಾಬ್ತು  KA-20 MA 444  ನೇ ಮಾರುತಿ-800 ಕಾರಿನಲ್ಲಿ ಬಂದು ಮನೆಯೋಳಗೆ ಆಕ್ರಮ ಪ್ರವೇಶ ಮಾಡಿ,  ಕೈಯಿಂದ ಪಿರ್ಯಾದಿದಾರರ ತಲೆಗೆ ಹೊಡೆದು ದೂಡಿದ ಹಾಕಿದ ಪರಿಣಾಮ ರಾಘವೇಂದ್ರ ಸಮಗಾರರ ತಲೆ ಟಿ.ವಿ ಸ್ಟಾಂಡ್ ಗೆ ತಾಗಿ ತಲೆಯ ಹಿಂಬದಿ ಸಾದಾರಣ ಸ್ವರೂಪದ ರಕ್ತಗಾಯವಾಗಿದ್ದು, ಬಳಿಕ ಆರೋಪಿ ರವಿಯು ರಾಘವೇಂದ್ರ ರರನ್ನು ಉದ್ದೇಶಿಸಿ   ಆವಾಚ್ಯ ಶದ್ದಗಳಿಂದ ಬೈದ್ದು, ಪೊಲೀಸರಿಗೆ ದೂರು ನೀಡಿದರೆ ನಿನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುತ್ತಾರೆ ಎಂಬುದಾಗಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 80/2015 ಕಲಂ 341,323, 504,506 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: