Friday, April 17, 2015

PRESS NOTEಅಂತರ್ ಜಿಲ್ಲಾ ದೇವಸ್ಥಾನ ಕಳ್ಳನ ಬಂಧನ    


          ದಿನಾಂಕ 17-04-2015  ರಂದು ಉಡುಪಿ ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ ಶ್ರೀ ಕೆ ಅಣ್ಣಾಮಲೈ ಐಪಿಎಸ್ ರವರ ನಿರ್ದೇಶನದಂತೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಸಂತೋಷ ಕುಮಾರ್ ಹಾಗೂ ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಚಂದ್ರಶೇಖರ್ ಕೆ.ಎಮ್ ರವರ ಮಾರ್ಗದರ್ಶನದಲ್ಲಿ ಕಾರ್ಕಳ ಪೊಲೀಸ್ ಉಪ ವಿಭಾಗದ ಉಪಾಧೀಕ್ಷಕರಾದ ಶ್ರೀ ವಿನಯ ಎಸ್ ನಾಯಕ್  ಕಾರ್ಕಳ ಪೊಲೀಸ್ ವೃತ್ತ ನಿರೀಕ್ಷಕರಾದ ಜಿ.ಎಂ. ನಾಯ್ಕರ್ ರವರ ಸಹಕಾರದಲ್ಲಿ  ಉಡುಪಿ ಜಿಲ್ಲಾ ಅಪರಾಧ ಗುಪ್ತವಾರ್ತಾ ವಿಭಾಗದ ಎ.ಎಸ್.ಐ. ರೋಸಾರಿಯೋ ಡಿಸೋಜಾ  ರವರು  ಕಾರ್ಕಳ ಪೊಲೀಸ್ ಠಾಣಾ ವ್ಯಾಪ್ತಿಯ ಕಳವು  ಪ್ರಕರಣದ ಆರೋಪಿ ನಾಗರಾಜ ತಂದೆ ಹನುಮಂತಪ್ಪ ವಾಸ  ಗಂಟಿನಕೊಪ್ಪ ಗ್ರಾಮ  ಬಟ್ಟೆಮಲ್ಲಪ್ಪ ಸಾಗರ   ತಾಲೂಕು ಶಿವಮೊಗ್ಗ ಜಿಲ್ಲೆ. ಹಾಲಿ ವಾಸ: ಕೇರಾಫ್ ಜಯಂತಿ ವಾಸ ಗಿರಿಜಾ ನಿವಾಸ  ಸುಂಟಿಕೊಪ್ಪ ಸಾಣೂರು ಗ್ರಾಮ ಕಾರ್ಕಳ  ತಾಲೂಕು ಎಂಬವನನ್ನು  ಈ ದಿನ ಕಾರ್ಕಳ ಪುಲ್ಕೇರಿ ಜಂಕ್ಷನ್ ಬಳಿ  ದಸ್ತಗಿರಿ  ಮಾಡಿ ವಿಚಾರಿಸಿದಾಗ ಈತನು ಮೂಡಬಿದ್ರೆಯ ಪೇಪರ್ ಮಿಲ್ ಬಳಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮೂಲ್ಕಿ ಠಾಣಾ ವ್ಯಾಪ್ತಿಯ ಕಿನ್ನಿಗೋಳಿ ಮಹಾಮ್ಮಾಯಿ ದೇವಸ್ಥಾನ ಕಾರ್ಕಳ ಬಸ್ಸು ನಿಲ್ದಾಣದ ಬಳಿಯ ಅಯ್ಯಪ್ಪ ದೇವಸ್ಥಾನ, ಪುಲ್ಕೇರಿಯ ರಕ್ತೇಶ್ವರಿ ದೇವಸ್ಥಾನ ಕಾರ್ಕಳ ಮೀಯಾರು ಗಣಪತಿ ದೇವಸ್ಥಾನ ಹಾಗೂ ಬಿದ್ಕಲ್ ಕಟ್ಟೆ ಬಳಿಯ ನಾಗನ ಕಟ್ಟೆಯ ಪೂಜಾ ಸಾಮಾಗ್ರಿಗಳಾದ ಆರತಿ ತಟ್ಟೆ, ಕಾಲುದೀಪ, ಘಂಟೆಗಳು, ಕಲಶ ತಂಬಿಗೆ ಹಾಗೂ ನೈವೇದ್ಯದ ಸಾಮಾನುಗಳನ್ನು ಕಳ್ಳತನ ಮಾಡಿದ್ದನ್ನು ಪತ್ತೆಹಚ್ಚಿರುತ್ತಾರೆ. ಆರೋಪಿಯು ಕಳ್ಳತನಕ್ಕೆ ಮಂಗಳೂರಿನ ಪರಿಚಯಸ್ಥರಿಂದ ಮಾರುತಿ ಓಮ್ನಿ  ಕಾರನ್ನು ಬಾಡಿಗೆಗೆ ತೆಗೆದುಕೊಂಡು ಮಾಡುತ್ತಿದ್ದು ಇನ್ನು  ಕೆಲವು ದೇವಸ್ಥಾನಕ್ಕೆ ಕಳ್ಳತನಕ್ಕೆ  ಹೊಂಚು ಹಾಕಿದ್ದು  ನಾಯಿ ಬೊಬ್ಬೆ ಹಾಕಿದ್ದ ಶಬ್ದಕ್ಕೆ ವಾಪಾಸ್ಸು ತೆರಳಿರುತ್ತಾನೆ. ಎಂಬ ಮಾಹಿತಿ ವಿಚಾರಣೆ ಸಮಯದಲ್ಲಿ ತಿಳಿಸಿದ್ದು ಆರೋಪಿತನಿಂದ ಒಟ್ಟು 2 ಲಕ್ಷದ 50 ಸಾವಿರ ರೂ  ಮೌಲ್ಯದ ಕಾರು ಪೂಜಾ ಸಾಮಾಗ್ರಿ ಗಳನ್ನು ಸ್ವಾಧೀನಪಡಿಸಿಕೊಂಡಿದ್ದು ಮುಂದಿನ ಕ್ರಮದ ಬಗ್ಗೆ ಕಾರ್ಕಳ ನಗರ ಠಾಣೆಗೆ ಹಸ್ತಾಂತರಿಸಿದ್ದಾಗಿದೆ.    

      ಈ ಕಾರ್ಯಾಚರಣೆಯಲ್ಲಿ ಸಿಬ್ಬಂದಿಯವರಾದ ಸುರೇಶ, ಚಂದ್ರ ಶೆಟ್ಟಿ, ಸಂತೋಷ್, ಸಂತೋಷ ಕುಂದರ್, ರಾಮು ಹೆಗ್ಡೆ, ಪ್ರವೀಣ, ರಾಘವೇಂದ್ರ ಉಪ್ಪುಂದ,  ಥೋಮ್ಸನ್ ಕಾರ್ಕಳ ನಗರ ಠಾಣೆಯ  ಶಿವಾನಂದ, ಸಂಜಯ್ ಶೆಟ್ಟಿ  ಪಾಲ್ಗೊಂಡಿರುತ್ತಾರೆ.

No comments: