Friday, April 17, 2015

Daily Crimes Reported as On 17/04/2015 at 17:00 Hrs



ಮನುಷ್ಯ ಕಾಣೆ ಪ್ರಕರಣ

  • ಅಜೆಕಾರು: ಜಗನ್ನಾಥ ಹೆಗ್ಡೆ (63 ವರ್ಷ) ಎಂಬವರು ದಿನಾಂಕ: 13-04-2015  ರಂದು  ಕುಂಟಾಡಿ ಕಲ್ಯಾಕ್ಕೆ ಹೋಗಿಬರುತ್ತೇನೆ ಎಂದು ಹೋದವರು  ವಾಪಾಸು ಮನೆಗೆ ಬಾರದೇ ಇದ್ದು, ಸದ್ರಿಯವರ ಪತ್ತೆಯ ಬಗ್ಗೆ  ಸಂಬಂಧಿಕರ ಮನೆಗೆ ಹೋಗಿರುವ ಬಗ್ಗೆ ವಿಚಾರಿಸಿದಲ್ಲಿ ಈವರೆಗೂ ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಅಜೆಕಾರು ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ  15/15  ಕಲಂ ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಬೈಂದೂರು: ಗುರುಪ್ರಸಾದ 35 ವರ್ಷ ಎಂಬವರು ದಿನಾಂಕ 27-03-2015 ರಿಂದ ಕುಂದಾಪುರ ತಾಲೂಕು ಶೀರೂರು  ಗ್ರಾಮದ ಆಳಿವೆಗದ್ದೆ  ಎಂಬಲ್ಲಿನ ಗಣಪತಿ ದೇವಸ್ಥಾನದಲ್ಲಿ ಅರ್ಚಕರಾಗಿ  ಕೆಲಸ ಮಾಡುತ್ತಿದ್ದು, ದಿನಾಂಕ 04-04-2015  ರಂದು ಬೆಳಿಗ್ಗೆ 10 ಗಂಟೆಯ ವೇಳೆಗ  ಈತನು ತರಕಾರಿ ತರಲೆಂದು  ಶೀರೂರು ಅಳಿವೆಗದ್ದೆಯ ಗಣಪತಿ ದೇವಸ್ಥಾನದಿಂದ ಹೋದವರು  ವಾಪಾಸು ದೇವಸ್ಥಾನಕ್ಕೂ ಬಾರದೆಮನೆಗೂ ಬಾರದೆ ಕಾಣೆಯಾಗಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ: 87/15  ಕಲಂ: ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಹಲ್ಲೆ ಪ್ರಕರಣ

  • ಬೈಂದೂರು: ದಿನಾಂಕ 15-04-2015 ರಂದು ಸಂಜೆ 05:00ಗಂಟೆಯ ಸಮಯಕ್ಕೆ  ಪಿರ್ಯಾಧಿ ಶಂಕರ ದೇವಾಡಿಗ ಇವರು ತನ್ನ ಮನೆಯಿಂದ ಬೈಂದೂರಿಗೆ ಬರುತ್ತಾ ಕುಂದಾಪುರ ತಾಲೂಕು ಯಡ್ತರೆ ಗ್ರಾಮದ ಎಮ್‌ಡಿ ಕಮಿನಿಕೇಷನ್‌ ಮತ್ತು ಐಸ್‌ಕ್ರೀಂ ಪಾರ್ಲರ್‌ ಎದುರು ನಡೆದುಕೊಂಡು ಹೋಗುತ್ತಿರುವಾಗ ಆರೋಪಿ ಮಹಾಬಲ ಬಿ ದೇವಾಡಿಗನು ಸದ್ರಿ ಅಂಗಡಿಯ ಒಳಗಿಂದ ಹೊರಗೆ ಬಂದು ಹಾಗೂ ಉಳಿದ ಆರೋಪಿಗಳು ಕೆ.ಎ 20 ಡಿ 0881 ಪ್ಯಾಸೆಂಜರ್‌ ರಿಕ್ಷಾದಲ್ಲಿ ಬಂದು ರಿಕ್ಷಾದಿಂದ ಕೆಳಗಿಳಿದು ಎಲ್ಲಾ ಆರೋಪಿತರು ಅಕ್ರಮ ಕೂಟ ಸೇರಿಕೊಂಡು ಮಾರಕ ಆಯುಧಗಳನ್ನು ಹಿಡಿದುಕೊಂಡು ಪಿರ್ಯಾಧಿದಾರರನ್ನು ರಸ್ತೆಯಲ್ಲಿ ತಡೆದು ನಿಲ್ಲಿಸಿ ಆರೋಪಿ ಮಹಾಬಲ ದೇವಾಡಿಗನು ಪಿರ್ಯಾಧಿದಾರನ್ನು ಉದ್ದೇಶಿಸಿ  ಅವಾಚ್ಯವಾಗಿ ಬೈದು ತನ್ನ ಕೈಯಲ್ಲಿದ್ದ ಚೂರಿಯನ್ನು ತೋರಿಸಿ ಪಿರ್ಯಾಧಿದಾರರನ್ನು ಕೊಲ್ಲದೇ ಬಿಡುವುದಿಲ್ಲವೆಂದು ಜೀವ ಬೆದರಿಕೆ ಹಾಕಿರುವುದಾಗಿ  ಹಾಗೂ ಶೇಷಗಿರಿ ಕಬ್ಬಿಣದ ರಾಡ್‌ ಹಿಡಿದು, ಅಣ್ಣಪ್ಪ ಮತ್ತು ತಿಮ್ಮಪ್ಪ ಕಲ್ಲನ್ನು ಎತ್ತಿ ಹಿಡಿದು ಪಿರ್ಯಾಧಿದಾರರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿ ಕಲ್ಲನ್ನು ಪಿರ್ಯಾಧಿದಾರರ ಕಡೆ ಬಿಸಾಡಿದ್ದು ಪಿರ್ಯಾಧಿದಾರರು ತಪ್ಪಿಸಿಕೊಂಡಿರುವುದಾಗಿದೆ.  ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ: 86/15  ಕಲಂ 143, 147, 148, 341, 506, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಅಮಾಸೆಬೈಲು: ದಿನಾಂಕ 16/04/2015 ರಂದು ಸಂಜೆ 05.30 ಗಂಟೆಗೆ ಮಚ್ಚಟ್ಟು ತೊಂಬಟ್ಟು  ಭಟ್ರ ಪಾಲು  ಎಂಬಲ್ಲಿ  ಪಿರ್ಯಾದಿ ಗಣಪತಿ ಇವರಿಗೆ ಕ್ಷುಲಕ ಕಾರಣಗಳಿಗಾಗಿ ಪಿರ್ಯಾದಿದಾರ ಮನೆಯ ಬಳಿ ಅಪಾದಿತರಾದ 1.ಶೇಖರ ಪೂಜಾರಿ (45)  ತಂದೆ :  ಅಣ್ಣಯ್ಯ ಪೂಜಾರಿ 2.ಸಂತೋಷ ಪೂಜಾರಿ  (37)  ತಂದೆ ಸಣ್ಣ ಪೂಜಾರಿ 3.ಕೃಷ್ಣ ಪೂಜಾರಿ (50)  ತಂದೆ: ಪಿಣಿಯ ಪೂಜಾರಿ 4.  ಜಲಜ ಪೂಜಾರ್ತಿ  5.ರಾಗವೇಣಿ  ಗಂಡ :  ರಾಮ ಪೂಜಾರಿ 6.ಶ್ರೀಮತಿ  ಗಂಡ  : ಬಾಬು ಪೂಜಾರಿ 7.ವನಜ  ಪೂಜಾರ್ತಿ 8.ಸಣ್ಣಕ ಪೂಜಾರ್ತಿ (40) ಗಂಡ :  ದಿಬಸವ ಪೂಜಾರಿ  9.   ಕಮಲ ಪೂಜಾರ್ತಿ ಗಂಡ : ಶೇಖರ ಪೂಜಾರಿ  ಇವರುಗಳು ಸಮಾನ ಉದ್ದೇಶ ಹೊಂದಿ  ಪಿರ್ಯದಾದಿದಾರಿಗೆ ಮಾರಕ ವಸ್ತುಗಳಿಂದ ಹಲ್ಲೆ ಮಾಡಲು ಬಂದು ಅವಾಚ್ಯ ಶಬ್ದಗಳಿಂದ ಬೈದು  ಜೀವ  ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 86/15  ಕಲಂ 143, 147, 148, 341, 506, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
 ಅಪಘಾತ ಪ್ರಕರಣ 
  • ಉಡುಪಿ: ದಿನಾಂಕ 17/04/2015 ರಂದು ಪಿರ್ಯಾದಿ ಶೀನಾ ಇವರು ತನ್ನ ಗಂಡನೊಂದಿಗೆ  ಕೆಮ್ಮಣ್ಣಿನ ಅಂಚೆ ಕಛೇರಿಗೆ ಹೋಗಿ ವಾಪಾಸು ಮನೆಗೆ ಬರುವರೇ ಕೆಮ್ಮಣ್ಣು ಬಸ್ಸು ನಿಲ್ದಾಣದಲ್ಲಿ ಕೆಎ 20 ಬಿ 81 ನೇ ನಂಬ್ರದ ಪಿ,ಎಮ್‌,ಟಿ ಬಸ್ಸನ್ನು ಹತ್ತಿದ್ದು, ಬೆಳಿಗ್ಗೆ ಸುಮಾರು 10.50 ಗಂಟೆಗೆ ಬಸ್ಸು ಉಡುಪಿ ಸಿಟಿ ಬಸ್ಸು ನಿಲ್ದಾಣದ ಬಳಿ ಬಂದು  ನಿಲ್ಲಿಸಿದಾಗ, ಪಿರ್ಯಾದಿದಾರರು ಬಸ್ಸಿನಿಂದ ಇಳಿಯುವರೇ ಬಸ್ಸಿನ ಎದುರುಗಡೆಯ ಬಾಗಿಲಿನ ಬಳಿ ಬಂದು ಇಳಿಯುತ್ತಿದ್ದಂತೆ ಬಸ್ಸಿನ ಚಾಲಕನು ಯಾವುದೇ ಸೂಚನೆಯನ್ನು ನೀಡದೆ ಒಮ್ಮಲೇ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಹಿಂದಕ್ಕೆ ಚಲಾಯಿಸಿದ್ದು, ಪರಿಣಾಮ ಪಿರ್ಯಾದಿದಾರರು ಬಸ್ಸಿನಿಂದ ಕೆಳಗೆ ಬಿದ್ದು, ಗಾಯವಾಗಿದ್ದು,  ಈ ಅಪಘಾತಕ್ಕೆ ಕೆಎ 20 ಬಿ 81 ನೇ ನಂಬ್ರದ ಪಿ,ಎಮ್‌,ಟಿ ಬಸ್ಸಿನ ಚಾಲಕನ ಅತೀವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ  32/15  ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
ಅಸ್ವಾಭಾವಿಕ ಮರಣ ಪ್ರಕರಣ 
  • ಉಡುಪಿ: ಗಂಗಾಧರಯ್ಯ ಇತರರು ಪ್ರವಾಸದ ನಿಮಿತ್ತ 14/04/2015 ರಂದು ಹೊರಡು ಶಿವಮೊಗ್ಗದ ಇತರ ಸ್ಥಳಗಳಲ್ಲಿ ಪ್ರವಾಸ ಮಾಡಿ ದಿನಾಂಕ 16/04/2015 ರಂದು ರಾತ್ರಿ 7:30 ಗಂಟೆಗೆ ಉಡುಪಿ ಶ್ರೀಕೃಷ್ಣ ಮಠದ ಬಿರ್ಲಾ ವಸತಿ ಗೃಹದಲ್ಲಿ ಉಳಕೊಂಡು ದಿನಾಂಕ 17/04/2015 ರಂದು ಬೆಳಿಗ್ಗೆ ಎದ್ದು ಸ್ನಾನ ಮಾಡಿ ಶ್ರೀಕೃಷ್ಣನ ದೇವಸ್ಥಾನಕ್ಕೆಂದು 07:30 ಗಂಟೆಗೆ ಹೊರಟು ನಿಂತಾಗ ಗಂಗಾಧರಯ್ಯನವರು ಬಸ್ಸಿನಲ್ಲೆ ಕುಸಿದು ಬಿದ್ದಿದ್ದು ಕೂಡಲೇ ಅವರನ್ನು ಉಪಚರಿಸಿ ಚಿಕಿತ್ಸೆಯ ಬಗ್ಗೆ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಉಡುಪಿ  ನಗರ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 15/2015 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: