Friday, April 17, 2015

Daily Crime Reports As on 17/04/2015 at 19:30 Hrs


ಸರ ಅಪಹರಣಕ್ಕೆ ಪ್ರಯತ್ನ
  • ಉಡುಪಿ: ದಿನಾಂಕ 17/04/2015 ರಂದು ಮಧ್ಯಾಹ್ನ ಸಮಯ 3:50 ಗಂಟೆಗೆ ಪಿರ್ಯಾದಿದಾರರಾದ ಸುಮಂಗಲಾ (42), ಗಂಡ: ಮಾಧವ ನಾಯ್ಕ, ವಾಸ: ದೇವಸ್‌ಬೈಲು, ಹಿರೇಬೆಟ್ಟು ಗ್ರಾಮ, ಉಡುಪಿ ತಾಲೂಕು ಎಂಬವರು ತಾಲೂಕು ಕಛೇರಿಯಿಂದ ಬನ್ನಂಜೆ ಕಡೆಗೆ ನಡೆದುಕೊಂಡು ಬರುತ್ತಿದ್ದ ಸಮಯ ಪಿರ್ಯಾದಿದಾರರ ಹಿಂದಿನಿಂದ ಬಂದ ಅಪರಿಚಿತ ವ್ಯಕ್ತಿ ಪಿರ್ಯಾದಿದಾರರ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರಕ್ಕೆ ಕೈಹಾಕಿ ಕಿತ್ತುಕೊಳ್ಳುಲು ಪ್ರಯತ್ನಿಸಿ ಪಿರ್ಯಾದಿದಾರರು ಬೊಬ್ಬೆ ಹಾಕಿದಾಗ ಅಪರಿಚಿತ ವ್ಯಕ್ತಿ ಅಲ್ಲಿಂದ ಪರಾರಿಯಾಗಿರುತ್ತಾನೆ ಎಂಬುದಾಗಿ ಸುಮಂಗಲಾ ರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 89/2015 ಕಲಂ 393 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಅಪಘಾತ ಪ್ರಕರಣಗಳು
  • ಕುಂದಾಪುರ: ದಿನಾಂಕ 17/04/2015 ರಂದು ಸಮಯ ಸುಮಾರು ಮಧ್ಯಾಹ್ನ 02:40 ಗಂಟೆಗೆ ಭಗತ್ ಸಿಂಗ್ ರಸ್ತೆ ಕ್ರಾಸ್ ಬಳಿ ರಾ.ಹೆ 66 ರಸ್ತೆಯಲ್ಲಿ ಆಪಾದಿತ ಆಖಿಲ್ ಎಂಬವರು ಶ್ರವಣ್ ಎಂಬವರನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡು  KA-19 V-7942  ನೇ ಬೈಕ್ ನ್ನು ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ  ಅತೀ ವೇಗ  ಹಾಗೂ  ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು, ರಸ್ತೆ ದಾಟುತ್ತಿದ್ದ ರವಿ ದೇವಾಡಿಗ ಎಂಬವರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಹತೋಟಿ ತಪ್ಪಿ ಅವರಿಗೆ ತಾಗಿಸಿ ವಾಹನ ಸಮೇತ ರಸ್ತೆಗೆ ಬಿದ್ದು ರವಿ ದೇವಾಡಿಗರವರ  ಬಲ ಕೈಗೆ ತರಚಿದ ಗಾಯ, ಆಖಿಲ್ ರವರಿಗೆ ಬೆನ್ನಿಗೆ ತರಚಿದ ಗಾಯ ಹಾಗೂ ಒಳ ಜಖಂ ಮತ್ತು ಶ್ರವಣ್ ಎಂಬವರು ಮೈಕೈಗೆ ತರಚಿದ ಗಾಯಗೊಂಡು ಚಿನ್ಮಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಆಖಿಲ್ ಹಾಗೂ  ಶ್ರವಣ್ ಎಂಬವರು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ರವಿ ದೇವಾಡಿಗ ಎಂಬವರು ಚಿನ್ಮಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ. ಈ ಬಗ್ಗೆ ಶಶಾಂಕ್ (17) ತಂದೆ ವಿಜಯ ವಾಸ:  101 ಬಿ ಬ್ಲಾಕ್ , ಜ್ಞಾನೇಶ್ವರಿ ಅಪಾರ್ಟ್ ಮೆಂಟ್ ವಿಟಿ ರಸ್ತೆ, ಮಂಗಳೂರು ರವರು ನೀಡಿದ ದೂರಿನಂತೆ ಕುಂದಾಪುರ  ಸಂಚಾರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 41/2015 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ದಿನಾಂಕ: 15.04.2015 ರಂದು ಪಿರ್ಯಾದಿದಾರರಾದ ಕೆ ವಿಜಯನ್ (42) ತಂದೆ; ಎಂ ಕೃಷ್ಣನ್ ವಾಸ: ಪಿ ವೆಂಕಟಪುರಂ ಗ್ರಾಮ ಮತ್ತು ಅಂಚೆ ಗೊಡಿಯಾತ್ತಮ್ ತಾಲೂಕು ವೆಲ್ಳುರು ಜಿಲ್ಲೆ ರವರು ಸಹ ಚಾಲಕನಾಗಿ ಹೊಗಿದ್ದ ಕೆ ಎ. 07-6129 ನೆ ಲಾರಿಯ ಚಾಲಕನಾದ ವೆಂಕಟೇಶನ್ ಎಂಬವರು ಕುದುರೆ ಮುಖ ಬಜಗೋಳಿ ರಾಷ್ಟೀಯ ಹೆದ್ದಾರಿ 13 ರಲ್ಲಿ ಲಾರಿಯನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಮಾಳಾ ಘಾಟನ ನಡುಹಳ್ಳ ಸೇತುವೆ ಸಮೀಪ ಬೆಳಗ್ಗೆ 11:15 ಗಂಟೆಯ ಸಮಯಕ್ಕೆ ಲಾರಿಯು ಚಾಲಕನ ನಿಯಂತ್ರನ ತಪ್ಪಿ ರಸ್ತೆಯ ಎಡಬದಿಯ ಧರೆಗೆ ತಾಗಿ ನಂತರ ರಸ್ತೆಯ ಬಲ ಬದಿಯ ತಡೆ ಗೋಡೆಗೆ ಢಿಕ್ಕಿ ಹೊಡೆದು ಲಾರಿಯು ಜಖಂ ಗೊಂಡಿರುವುದಾಗಿದೆ ಎಂಬುದಾಗಿ ಕೆ ವಿಜಯನ್ ರವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 60/2015 ಕಲಂ 279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಮಟ್ಕಾ ದಾಳಿ ಪ್ರಕರಣ
  • ಕುಂದಾಪುರ: ದಿನಾಂಕ 17.04.2015 ರಂದು 15:00 ಗಂಟೆಗೆ ಶ್ರೀ ಎಂ. ಮಂಜುನಾಥ ಶೆಟ್ಟಿ, ಡಿವೈಎಸ್‌ಪಿ, ಕುಂದಾಪುರ ಉಪ ವಿಭಾಗ ರವರು ಸಿಬ್ಬಂದಿಗಳೊಂದಿಗೆ ಕುಂದಾಪುರ ತಾಲೂಕು ವಡೇರಹೋಬಳಿ ಗ್ರಾಮದ ಶಾಸ್ತ್ರಿ ಪಾರ್ಕ್‌ನ ವೈಶಾಲಿ ಬೇಕರಿ ಎದುರು ಓರ್ವ ವ್ಯಕ್ತಿ ಸಾರ್ವಜನಿಕರಲ್ಲಿ 1 ರೂ ಗೆ 70 ರೂಪಾಯಿ ಕೊಡುವುದಾಗಿ ಹೇಳಿಕೊಂಡು ಸಾರ್ವಜನಿಕರಿಂದ ಹಣವನ್ನು ಪಣವಾಗಿ ಸ್ವೀಕರಿಸಿ ಮಟ್ಕಾ-ಜುಗಾರಿ ಆಟ ನಡೆಸುತ್ತಿದ್ದುದನ್ನು ಖಚಿತಪಡಿಸಿಕೊಂಡು 15:10 ಗಂಟೆಗೆ ದಾಳಿ ನಡೆಸಿ, ಆರೋಪಿ ಸುರೇಶ್‌ ದೇವಾಡಿಗ (42) ತಂದೆ: ದಿ. ನಾರಾಯಣ ದೇವಾಡಿಗ ವಾಸ: ಸೌಕೂರು, ಗುಲ್ವಾಡಿ ಅಂಚೆ, ಕುಂದಾಪುರ ತಾಲೂಕು ಎಂಬಾತನನ್ನು ದಸ್ತಗಿರಿ ಮಾಡಿ ಆರೋಪಿಯು ಮಟ್ಕಾ-ಜುಗಾರಿ ಆಟಕ್ಕೆ ಉಪಯೋಗಿಸಿದ ನಗದು ರೂಪಾಯಿ 990/- ಹಾಗೂ ಇತರ ಪರಿಕರಗಳನ್ನು ಸ್ವಾಧೀನಪಡಿಸಿಕೊಂಡಿದ್ದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 112/2015 ಕಲಂ 78(i) (iii)  ಕರ್ನಾಟಕ ಪೊಲೀಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: