Tuesday, April 21, 2015

PRESS NOTE


ಕೊಲೆ ಆರೋಪಿ ಬಂಧನ
  • ಮಲ್ಪೆ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 57/2015,ಕಲಂ:302  ಐಪಿಸಿ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿರುವ ಆರೋಪಿ ಉಮೇಶ ಆಚಾರ್ಯ (28),ತಂದೆ:ದಿವಂಗತ ಮಾಧವ ಆಚಾರ್ಯ,ವಾಸ:ಕಂಬ್ಲಕಟ್ಟ,ಸಾಯಿಬಾಬಾ ಮಂದಿರದ ಬಳಿ, ಕೊಡವೂರು ಗ್ರಾಮ ಮತ್ತು ಅಂಚೆ,ಉಡುಪಿ ತಾಲೂಕು ಮತ್ತು ಜಿಲ್ಲೆ ಎಂಬಾತನ ಪತ್ತೆಕಾರ್ಯದ ಬಗ್ಗೆ ಕಾರ್ಯಚರಣೆ ನಡೆಸಿದ್ದು, ದಿನಾಂಕ:21/04/2015 ರಂದು ಸದ್ರಿ ಕೊಲೆ ಆರೋಪಿಯನ್ನು ಪತ್ತೆ ಹಚ್ಚಿ ದಸ್ತಗಿರಿಮಾಡಲಾಗಿದೆ. ಸದ್ರಿ ಕಾರ್ಯಾಚರಣೆಯನ್ನು  ಉಡುಪಿ ಜಿಲ್ಲಾ  ಪೊಲೀಸು ಅಧೀಕ್ಷಕರಾದ  ಶ್ರೀ  ಅಣ್ಣಾಮಲೈ ಕೆ. ಐಪಿಎಸ್  ಮತ್ತು  ಹೆಚ್ಚುವರಿ ಪೊಲೀಸು ಅಧೀಕ್ಷಕರಾದ  ಶ್ರೀಸಂತೋಷ್ ಕುಮಾರ್ ಹಾಗೂ ಪೊಲೀಸು ಉಪಾಧೀಕ್ಷಕರು ಉಡುಪಿ ಉಪ ವಿಭಾಗ ಶ್ರೀ ಚಂದ್ರಶೇಖರ್ ಕೆ.ಎಂ ರವರ ಮಾರ್ಗದರ್ಶನದಲ್ಲಿ,  ಉಡುಪಿ ಪೊಲೀಸು ವೃತ್ತ ನಿರೀಕ್ಷಕರಾದ  ಶ್ರೀ ಶ್ರೀಕಾಂತ್ ಕೆ. ರವರ ನೇತೃತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ,  ಎಎಸ್ ಐ ವೆಂಕಟೇಶ್ ಮಲ್ಪೆ ಠಾಣೆ, ಎಎಸ್‌ಐ ಶ್ರೀಮತಿ ಶೋಭಾ ಮಣಿಪಾಲ ಠಾಣೆ ಹಾಗೂ ಸಿಬ್ಬಂದಿಗಳಾದ ಯೋಗೀಶ್, ಮೋಹನ ಕೋತ್ವಾಲ್, ಸುಧಾಕರ, ಉಮೇಶ್  ಮೂಲ್ಯ, ಶಂಕರ, ಪ್ರಸನ್ನ ಸಾಲ್ಯಾನ್‌ ಹಾಗೂ ಚಾಲಕ ಮಹಾಬಲೇಶ್ವರರವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

No comments: