Tuesday, April 21, 2015

Daily Crimes Reported as On 21/04/2015 at 17:00 Hrs


ಮನುಷ್ಯ ಕಾಣೆ ಪ್ರಕರಣ
  • ಕುಂದಾಪುರ:ಪಿರ್ಯಾದಿದಾರರಾದ ಸುರೇಂದ್ರ ಪೂಜಾರಿ (41) ತಂದೆ:ವೆಂಕ ಪೂಜಾರಿ ವಾಸ:ಲಿಂಗಿಮನೆ, ಹರೆಗೋಡು, ಕಟ್‌ಬೆಲ್ತೂರು  ಗ್ರಾಮ, ಕುಂದಾಪುರ ತಾಲೂಕುರವರ ತಮ್ಮ ಸಂತೋಷ ಪೂಜಾರಿ (30) ಎಂಬವರು ಸುಮಾರು 7 ವರ್ಷಗಳಿಂದ ತಲ್ಲೂರು ಪ್ರವಾಸಿ ಬಾರ್‌ & ರೆಸ್ಟೋರೆಂಟ್‌ನಲ್ಲಿ ವೈಟರ್‌ ಆಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ:27/03/2015 ರಂದು ಬೆಳಿಗ್ಗೆ 09:00 ಗಂಟೆಗೆ ಆತನು ಕೆಲಸ ಮಾಡುವ ಬಾರ್‌ನಿಂದ ಹೋದವನು ಈವರೆಗೆ ಮನೆಗೆ ವಾಪಾಸು ಬಾರದೆ ಕಾಣೆಯಾಗಿದ್ದು, ಸುರೇಂದ್ರ ಪೂಜಾರಿರವರು ಕಾಣೆಯಾದವರನ್ನು ಕುಂದಾಪುರ, ತಲ್ಲೂರು, ಹೆಮ್ಮಾಡಿ ಪರಿಸರದಲ್ಲಿ ಹಾಗೂ ಸಂಬಂಧಿಕರಲ್ಲಿ ಮತ್ತು ಸ್ನೇಹಿತರಲ್ಲಿ ವಿಚಾರಿಸಿ ಎಲ್ಲಾ ಕಡೆ ಹುಡುಕಾಡಿದ್ದು, ಈವರೆಗೆ ಪತ್ತೆಯಾಗದೆ ಇರುವುದಾಗಿದೆ ಎಂಬುದಾಗಿ ನೀಡಿದ ದೂರಿನಂತೆ ಕುಂದಾಪುರ ಠಾಣಾ ಅಪರಾಧ ಕ್ರಮಾಂಕ 117/2015, ಕಲಂ:ಮನುಷ್ಯ ಕಾಣೆ ಎಂಬುದಾಗಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇತರ ಪ್ರಕರಣ 
  • ಹೆಬ್ರಿ:ಪಿರ್ಯಾದಿದಾರರಾದ ಮಹಾಬಲ ಶೆಟ್ಟಿ (40), ತಂದೆ:ರಘುರಾಮ ಶೆಟ್ಟಿ ವಾಸ:ಹೊಸಮದಗ ಚಾರ ಗ್ರಾಮ, ಕಾರ್ಕಳ ತಾಲೂಕುರವರ ಹೆಂಡತಿ ಪೂರ್ಣಿಮಾ (32) ಎಂಬವರು ಹೆಬ್ರಿ ಕೆಳ ಪೇಟೆಯಲ್ಲಿ ಬ್ಯೂಟಿ ಪಾರ್ಲರ್ ನಡೆಸಿಕೊಂಡಿದ್ದು, ಪೂರ್ಣಿಮಾರವರು ಧರ್ಮಸ್ಥಳ ಸಂಘದಿಂದ ಸಾಲ ಪಡೆದು ಹಾಗೂ ತನ್ನ ಸಂಬಂಧಿಕರ ಚಿನ್ನವನ್ನು ಬೇರೆ-ಬೇರೆ ಕಡೆ ಅಡವಿಟ್ಟು ಹಣ ಪಡೆದು ತನ್ನ ಬ್ಯೂಟಿ ಪಾರ್ಲರ್ ಪಕ್ಕದಲ್ಲಿರುವ ಹಣ್ಣಿನ ಅಂಗಡಿಯ ಕಿರಣ್‌ ಎಂಬಾತನಿಗೆ ನೀಡಿದ್ದು, ಈ ಬಗ್ಗೆ ಧರ್ಮಸ್ಥಳ ಸಂಘದಿಂದ ಸಾಲ ಮರು ಪಾವತಿ ಮಾಡುವಂತೆ ನೊಟೀಸ್‌ ಬಂದಿರುವುದಲ್ಲದೇ, ಅಡವಿಟ್ಟ ಚಿನ್ನವನ್ನು ಕೊಡುವಂತೆ ಪೂರ್ಣಿಮಾರವರ ಸಂಬಂಧಿಕರಿಂದಲೂ ಒತ್ತಡ ಬಂದಿದ್ದು, ಕಿರಣ್‌ ರವರಲ್ಲಿ ಹಣ ವಾಪಾಸು ಕೊಡುವಂತೆ ಕೇಳಿದಾಗ ಆತನು ಹಣವನ್ನು ಹಿಂದಿರುಗಿಸುವುದಾಗಿ ಹೇಳಿ ವಾಪಾಸು ನೀಡದೇ ಸತಾಯಿಸುತ್ತಿದ್ದುದರಿಂದ ಮನ ನೊಂದ ಪೂರ್ಣಿಮಾರವರು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ:20/04/2015 ರಂದು ರಾತ್ರಿ ಸುಮಾರು 20:00 ಗಂಟೆಯಿಂದ 22:45 ಗಂಟೆಯ ಮಧ್ಯಾವಧಿಯಲ್ಲಿ ಮಹಾಬಲ ಶೆಟ್ಟಿರವರ ಮನೆಯ ಹಾಲಿನ ಮೇಲ್ಭಾಗದ ಲೋಹದ ಜಂತಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಮಹಾಬಲ ಶೆಟ್ಟಿರವರು ನೀಡಿದ ದೂರಿನಂತೆ ಹೆಬ್ರಿ ಠಾಣಾ ಅಪರಾಧ ಕ್ರಮಾಂಕ 25/15 ಕಲಂ:306 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: